ಕಣಿವೆ, ಮಾ. ೧: ಜನರ ಹಸಿವು ನೀಗಿಸುವ ಅನ್ನದಾತ ಶಾಂತಿ, ನೆಮ್ಮದಿಯಿಂದ ಬದುಕಬೇಕು. ಸಂತೋಷದಿAದ ಕೃಷಿಯಲ್ಲಿ ತೊಡಗುವ ಮೂಲಕ ಸ್ವಾವಲಂಬಿಯಾಗಿ ಬದುಕಬೇಕೆಂಬುದು ಸರ್ಕಾರದ ಆಶಯವಾಗಿದೆ ಎಂದು ಶಾಸಕ ಡಾ.ಮಂತರಗೌಡ ಹೇಳಿದರು.
ರೂ. ೧೨೫ ಕೋಟಿ ವೆಚ್ಚದಲ್ಲಿ ಹಾರಂಗಿ ಮುಖ್ಯನಾಲೆ ಹಾಗೂ ಉಪಕಾಲುವೆಗಳ ಅಭಿವೃದ್ಧಿ ಕಾಮಗಾರಿಗಳಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದ ಅವರು, ರೈತರ ಅನೇಕ ದಶಕಗಳ ಕನಸಾದ ಹಾರಂಗಿಯ ಮುಖ್ಯ ನಾಲೆಗಳು, ಉಪಕಾಲುವೆಗಳು ಹಾಗೂ ತೂಬುಗಳ ಆಧುನೀಕರಣ ಕಾಮಗಾರಿ ನನಸಾಗುತ್ತಿದೆ. ಗುತ್ತಿಗೆದಾರರು ಹಾಗೂ ಇಲಾಖೆಯ ಅಧಿಕಾರಿಗಳು ಕಾಮಗಾರಿಯ ಗುಣಮಟ್ಟ ಕಾಯ್ದುಕೊಳ್ಳಬೇಕಿದೆ ಎಂದು ಸೂಚಿಸಿದರು..
೭೨.೨೫ ಕೋಟಿ ವೆಚ್ಚದಲ್ಲಿ ಹಾರಂಗಿ ಎಡದಂಡೆ ನಾಲೆಯ ಮುಖ್ಯ ನಾಲಾ ಸರಪಳಿ ೬.೮೭೫ ರಿಂದ ೧೪.೭೫೦ ಕಿಮೀವರೆಗಿನ ಕಾಮಗಾರಿ, ೫೦ ಕೋಟಿ ರೂ. ವೆಚ್ಚದಲ್ಲಿ ಎಡದಂಡೆ ಕಾಲುವೆಯ ಒಂದರಿAದ ೧೮ನೇ ತೂಬಿನವರೆಗೂ ಇರುವ ಉಪಕಾಲುವೆಗಳ ಕಾಂಕ್ರೀಟೀಕರಣ ಕಾಮಗಾರಿ ರೈತರಿಗೆ ಅನುಕೂಲವಾಗಲಿದ್ದು, ರೈತರ ಜಮೀನಿಗೆ ನೀರು ಸರಾಗವಾಗಿ ಹರಿಯುವಂತೆ ಮಾಡುವ ಉದ್ದೇಶ ಹೊಂದÀಲಾಗಿದೆ ಎಂದು ಶಾಸಕರು ಹೇಳಿದರು. ಕುಶಾಲನಗರ ತಾಲೂಕು ಗ್ಯಾರಂಟಿ ಯೋಜನೆಗಳ ಸಮಿತಿ ಅಧ್ಯಕ್ಷ ವಿ.ಪಿ.ಶಶಿಧರ್ ಮಾತನಾಡಿ, ರಾಜ್ಯ ಸರ್ಕಾರ ಜನಪರ ಆಡಳಿತ ನಡೆಸುತ್ತಿದ್ದು ಜನತೆಗೆ ಘೋಷಣೆ ಮಾಡಿರುವ ಗ್ಯಾರಂಟಿಗಳ ಜೊತೆಗೆ ರೈತ ಕಲ್ಯಾಣಕ್ಕೆ ಪೂರಕವಾದ ಕಾಲುವೆಗಳ ಆಧುನೀಕರಣ ಕಾಮಗಾರಿಗೆ ನೂರಾರು ಕೋಟಿ ರೂಗಳ ಅನುದಾನ ತಂದಿರುವ ಶಾಸಕ ಡಾ.ಮಂತರಗೌಡ ಕ್ಷೇತ್ರದ ಜನತೆಯ ಪಾಲಿಗೆ ಭಗೀರಥ ಎಂದು ಬಣ್ಣಿಸಿದರು.
ಕಳೆದ ೨೦ ವರ್ಷಗಳಲ್ಲಿ ಕ್ಷೇತ್ರದಲ್ಲಿ ಆಗದೇ ಇರುವ ಜನ ಕಲ್ಯಾಣ ಕಾಮಗಾರಿಗಳು ಇದೀಗ ನಡೆಯುತ್ತಿರುವುದು ಸಂತಸದ ಬೆಳವಣಿಗೆ ಎಂದರು.
ಕೆಪಿಸಿಸಿ ವಕ್ತಾರ ಎಂ.ಲಕ್ಷö್ಮಣ್ ಮಾತನಾಡಿ, ಶಾಸಕರು ಜನಪರ ಕೆಲಸಗಳ ಮೂಲಕ ಸರ್ವಾಂಗೀಣ ಅಭಿವೃದ್ಧಿ ಕ್ಷೇತ್ರವನ್ನಾಗಿಸುವ ಗುರಿಯನ್ನು ಇಟ್ಟುಕೊಂಡಿದ್ದಾರೆ ಎಂದರು.
ಕುಶಾಲನಗರ ತಹಶೀಲ್ದಾರ್ ಕಿರಣ್ ಗೌರಯ್ಯ, ಜಲಮಂಡಳಿ ಮಾಜಿ ಅಧ್ಯಕ್ಷೆ ಕೆ.ಪಿ.ಚಂದ್ರಕಲಾ, ಅಕ್ರಮ ಸಕ್ರಮ ಸಮಿತಿ ತಾಲೂಕು ಅಧ್ಯಕ್ಷ ಗೋವಿಂದಪ್ಪ. ಕೂಡಿಗೆ ಡಯಟ್ ಪ್ರಾಂಶುಪಾಲ ರಾಮಚಂದ್ರರಾಜೇ ಅರಸು, ತೊರೆನೂರು ನೀರು ಬಳಕೆದಾರರ ಸಂಘದ ಅಧ್ಯಕ್ಷ ಟಿ.ಕೆ.ಪಾಂಡುರAಗ, ಕಾರ್ಯದರ್ಶಿ ಟಿ.ಜಿ.ಲೋಕೇಶ್, ಪ್ರಮುಖರಾದ ಕೆ.ಎಸ್.ಕೃಷ್ಣೇಗೌಡ, ಶ್ರೀಕಾಂತ್, ಹೆಬ್ಬಾಲೆ ನಟೇಶ್ ಗೌಡ, ಸಿದ್ದಲಿಂಗಪುರದ ರವಿಕುಮಾರ್, ಟಿ.ಬಿ.ಜಗದೀಶ್, ಹುದುಗೂರು ಉಮಾಮಹೇಶ್ವರ ದೇವಾಲಯ ಸಮಿತಿ ಅಧ್ಯಕ್ಷ ಚಾಮಿ, ರೈತ ಮುಖಂಡ ಐಮುಡಿಯಂಡ ಗಣೇಶ್, ಗ್ರಾಪಂ ಮಾಜಿ ಅಧ್ಯಕ್ಷೆ ಪ್ರೇಮಲೀಲಾ, ಶೋಭಾ ಪುಟ್ಟಪ್ಪ, ಮಂಜುನಾಥ, ನೀರಾವರಿ ನಿಗಮದ ಅಧೀಕ್ಷಕ ಅಭಿಯಂತರ ಸತೀಶ, ಕಾರ್ಯಪಾಲಕ ಅಭಿಯಂತರ ಪುಟ್ಟಸ್ವಾಮಿ, ಸಹಾಯಕ ಅಭಿಯಂತರರಾದ ಕಿರಣ್, ಸೌಮ್ಯ ಮೊದಲಾದವರಿದ್ದರು.