ಟೆಹ್ರಾನ್, ಮಾ. ೧: ೧೯೮೯ರಿಂದ ಇರಾನ್ ಅನ್ನು ಆಳುತ್ತಿದ್ದ ೮೬ ವರ್ಷದ ಇರಾನ್‌ನ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ಅವರು ಶನಿವಾರ ರಾತ್ರಿ ನಡೆದ ಅಮೆರಿಕ-ಇಸ್ರೇಲ್‌ನ ಬೃಹತ್ ಮಿಲಿಟರಿ ದಾಳಿಯಲ್ಲಿ ಹತರಾಗಿದ್ದಾರೆ. ಈ ಕಾರ್ಯಾಚರಣೆಯು ಮಿಲಿಟರಿ ನೆಲೆಗಳು, ಸರ್ಕಾರಿ ಕೇಂದ್ರಗಳು ಮತ್ತು ರಕ್ಷಣಾ ಸಚಿವ ಅಮೀರ್ ನಾಸರ್ಜಾದೆ ಹಾಗೂ ಕಮಾಂಡರ್-ಇನ್-ಚೀಫ್ ಮೊಹಮ್ಮದ್ ಪಾಕ್‌ಪೋರ್ ಅವರಿಗೆ ಸಂಬAಧಿಸಿದ ಸ್ಥಳಗಳು ಸೇರಿದಂತೆ ಹಿರಿಯ ನಾಯಕತ್ವದ ತಾಣಗಳನ್ನು ಗುರಿಯಾಗಿಸಿಕೊಂಡಿತ್ತು. ಇಸ್ರೇಲಿ ಸೇನೆಯು ಸುಮಾರು ೩೦ ಕ್ಷಿಪಣಿಗಳನ್ನು ಹಾರಿಸಿದ್ದು, ದಾಳಿಯಲ್ಲಿ ಖಮೇನಿ, ಅವರ ಮಗಳು, ಅಳಿಯ ಮತ್ತು ಮೊಮ್ಮಗಳು ಮೃತಪಟ್ಟಿದ್ದಾರೆಂದು ಇರಾನಿನ ಮಾಧ್ಯಮಗಳು ದೃಢಪಡಿಸಿವೆ. ಖಮೇನಿ ಅವರ ನಿವಾಸದ ಮೇಲೆ ಅಮೆರಿಕ ಮತ್ತು ಇಸ್ರೇಲಿ ಪಡೆಗಳು ಸುಧಾರಿತ ಕ್ಷಿಪಣಿಗಳನ್ನು ಉಡಾಯಿಸಿವೆ ಎಂದು ವರದಿಯಾಗಿದೆ. ಅವರ ಮನೆಯನ್ನು ಗುರಿಯಾಗಿಸಿಕೊಂಡು ನಡೆಸಿದ ಸರಣಿ ಬಾಂಬ್ ದಾಳಿಯಲ್ಲಿ ಖಮೇನಿ ಸಾವಿಗೀಡಾಗಿದ್ದಾರೆ ಎಂದು ಇಸ್ರೇಲ್‌ನ ಸರ್ಕಾರಿ ಮಾಧ್ಯಮ ಚಾನೆಲ್-೧೨ ವರದಿ ಮಾಡಿದೆ. ದಾಳಿ ನಡೆದ ಕೆಲವೇ ಗಂಟೆಗಳಲ್ಲಿ ಖಮೇನಿ ಮೃತದೇಹವನ್ನು ಅವರ ಮನೆಯ ಅವಶೇಷಗಳ ಅಡಿಯಲ್ಲಿ ವಶಕ್ಕೆ ಪಡೆಯಲಾಗಿದೆ. ಖಮೇನಿ ದೇಹವನ್ನು ವಶಕ್ಕೆ ಪಡೆದು, ಅದರ ಫೋಟೋ ಸಾಕ್ಷಿಯನ್ನು ಅಮೇರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ಗೆ ಕಳುಹಿಸಿಕೊಡಲಾಗಿದೆ ಎಂದು ಇಸ್ರೇಲಿ ಮಾಧ್ಯಮಗಳು ವರದಿ ಮಾಡಿವೆ.
ಇದೀಗ ಹಿರಿಯ ಧರ್ಮಗುರು ಅಯತೊಲ್ಲಾ ಅಲಿರೆಝಾ ಅರಾಫಿ ಅವರನ್ನು ಇರಾನ್‌ನ ಹಂಗಾಮಿ ಸರ್ವೋಚ್ಚ ನಾಯಕರಾಗಿ ಆಯ್ಕೆ ಮಾಡಲಾಗಿದೆ ಎಂದು ಘೋಷಿಸಲಾಗಿದೆ.
ಹತ್ಯೆಯಾದ ಖಮೇನಿ ಜಾಗಕ್ಕೆ ಸರ್ವೋಚ್ಚ ನಾಯಕರಾಗಿ ನೇಮಕಗೊಂಡ ಅರಾಫಿ, ಅಧ್ಯಕ್ಷ ಮಸೂದ್ ಪೆಜೆಶ್ಕಿಯನ್ ಮತ್ತು ಮುಖ್ಯ ನ್ಯಾಯಮೂರ್ತಿ ಘೋಲಂ-ಹೊಸೇನ್ ಮೊಹ್ಸೇನಿ-ಎಜೆಈ ಅವರೊಂದಿಗೆ ಜಂಟಿಯಾಗಿ ೪ಐದನೇ ಪುಟಕ್ಕೆ
ದೇಶವನ್ನು ಮುನ್ನಡೆಸಲಿದ್ದಾರೆ.
ಖಮೇನಿಯವರ ಸಾವಿನ ಸುದ್ದಿ ತಿಳಿದಾಗಿನಿಂದ, ಇರಾನ್‌ನ ಅಧಿಕೃತ ಸುದ್ದಿ ವಾಹಿನಿ ಐಎಸ್ ಎನ್ ಎ ಸುದ್ದಿ ಸಂಸ್ಥೆ ಭಾರವಾದ ಹೃದಯದಿಂದ ಸುದ್ದಿಯನ್ನು ಪ್ರಸಾರ ಮಾಡುತ್ತಿದೆ. ನಿರೂಪಕ ಜೋರಾಗಿ ಅಳುತ್ತಲೇ ಸುದ್ದಿ ಬಿತ್ತರಿಸುತ್ತಿದ್ದುದು ಕಂಡು ಬಂದಿತು. ಟಿವಿ ಪರದೆಯ ಮೇಲ್ಭಾಗದಲ್ಲಿ ಕಪ್ಪು ಬ್ಯಾನರ್ ಪ್ರದರ್ಶಿಸಲಾಗುತ್ತದೆ ಮತ್ತು ಖಮೇನಿಯವರ ಭಾವಚಿತ್ರಗಳ ಹಿನ್ನೆಲೆಯಲ್ಲಿ ಕುರಾನ್ ಪಠಿಸಲಾಗುತ್ತದೆ. ಖಮೇನಿಯವರ ನಿಧನದಿಂದ ಇರಾನಿನ ಜನರು ಶೋಕ ಸಾಗರದಲ್ಲಿ ಮುಳುಗಿದ್ದಾರೆ ಎಂದು ವರದಿ ಮಾಡಲಾಗುತ್ತಿದೆ.
ಖಮೇನಿ ಅವರ ನಿಧನವನ್ನು ಇರಾನ್ ಅಧಿಕೃತವಾಗಿ ಘೋಷಿಸಿದೆ. ಅಲ್ಲದೆ, ೪೦ ದಿನಗಳ ಶೋಕಾಚರಣೆಯನ್ನು ಸಹ ಘೋಷಣೆ ಮಾಡಿದೆ. ಮತ್ತೊಂದೆಡೆ, ಇರಾನ್‌ನ ಸರ್ವೋಚ್ಚ ನಾಯಕ ಖಮೇನಿ ಸಾವಿಗೀಡಾಗಿದ್ದಕ್ಕೆ ಇರಾನ್‌ನಲ್ಲಿ ಅನೇಕ ನಾಗರಿಕರು ದೊಡ್ಡ ಪ್ರಮಾಣದಲ್ಲಿ ಸಂಭ್ರಮಿಸುತ್ತಿದ್ದಾರೆ. ಇರಾನ್‌ನ ಹಲವಾರು ನಗರಗಳಲ್ಲಿ ಅನೇಕ ಮಹಿಳೆಯರೂ ಸೇರಿದಂತೆ ಜನರು ಹರ್ಷೋದ್ಗಾರದಿಂದ ಶಿಳ್ಳೆ ಹೊಡೆಯುತ್ತಾ ಸಂಭ್ರಮಾಚರಿಸುತ್ತಿರುವ ಫೋಟೋ ಮತ್ತು ವಿಡಿಯೋಗಳನ್ನು ಅಂತರರಾಷ್ಟಿçÃಯ ಮಾಧ್ಯಮಗಳಲ್ಲಿ ಪ್ರಸಾರ ಮಾಡಲಾಗಿದೆ. ಇರಾನ್‌ನ ಉಪನಗರ ಬೀಸಾತ್ ಟೌನ್‌ನಲ್ಲಿ ಜನರು ಸಂಭ್ರಮಿಸಿದ್ದಾರೆ. ಇದಕ್ಕೆ ಸಂಬAಧಿಸಿದ ವಿಡಿಯೋವನ್ನು ಫಾಕ್ಸ್ ನ್ಯೂಸ್ ಪೋಸ್ಟ್ ಮಾಡಿದೆ.
ಹತ್ಯೆಗೊಳಗಾದ ಪ್ರಮುಖರು
ಇಸ್ರೇಲ್-ಅಮೇರಿಕಾ ಜಂಟಿ ದಾಳಿಯಲ್ಲಿ ಇರಾನ್ ನಾಯಕ ಅಯತೊಲ್ಲ ಖಮೇನಿ ಸೇರಿದಂತೆ, ಇರಾನ್ ಭದ್ರತಾ ಸಲಹೆಗಾರ ಅಲಿ ಶಮ್ಕನಿ, ಇರಾನ್ ಸೇನೆಯ ಪ್ರಮುಖ ಘಟಕವಾಗಿರುವ ಇಸ್ಲಾಮಿಕ್ ರಿವಲ್ಯೂಷನರಿ ಗಾರ್ಡ್ ಕಾರ್ಪ್ಸ್ನ ಕಮಾಂಡರ್ ಮಹಮದ್ ಪಕ್ ಪೂರ್, ೪೦ ವರ್ಷಗಳಿಂದ ಮಿಲಿಟರಿ ಬ್ಯೂರೋ ಮುಖ್ಯಸ್ಥನಾಗಿದ್ದ ಮಹಮದ್ ಶಿರಜಿ, ಹಿರಿಯ ಇಂಟಲಿಜೆನ್ಸ್ ಅಧಿಕಾರಿ ಸಾಲ್ಹಾ ಅಸದಿ, ಭದ್ರತಾ ಸಚಿವ ಅಜೀಜ್ ನಸಿರ್ಸದೇಹ್ ಸೇರಿದಂತೆ ಇತರ ಪ್ರಮುಖರು ಹತರಾಗಿದ್ದಾರೆ.
ಟ್ರಂಪ್ ಅವರು ಈ ಸೈನಿಕ ಕಾರ್ಯಾಚರಣೆಯ ಉದ್ದೇಶ ಟೆಹ್ರಾನ್ ಸರ್ಕಾರವನ್ನು ಉರುಳಿಸುವುದಾಗಿದೆ ಎಂದು ಸೂಚಿಸಿದ್ದಾರೆ. ಆದರೆ, ದಕ್ಷಿಣ ಇರಾನ್‌ನ ಒಂದು ಬಾಲಕಿಯರ ಪ್ರಾಥಮಿಕ ಶಾಲೆಯ ಮೇಲೆ ನಡೆದ ದಾಳಿಯಲ್ಲಿ ೧೪೮ ವಿದ್ಯಾರ್ಥಿನಿಯರು ಮೃತಪಟ್ಟಿದ್ದಾರೆ ಎಂದು ಸರ್ಕಾರದ ಮಾಧ್ಯಮಗಳು ವರದಿ ಮಾಡಿವೆ.
ಟ್ರಂಪ್ ಸಂದೇಶ
ಅಮೇರಿಕಾ ಅಧ್ಯಕ್ಷ ಡೊನಾಲ್ಡ್ ಜೆ. ಟ್ರಂಪ್ ತನ್ನ ಸಂದೇಶದಲ್ಲಿ “ಇತಿಹಾಸದ ಅತ್ಯಂತ ದುಷ್ಟ ಜನರಲ್ಲಿ ಒಬ್ಬರಾದ ಖಮೇನಿ ನಿಧನರಾಗಿದ್ದಾರೆ. ಇದು ಇರಾನ್ ಜನರಿಗೆ ಮಾತ್ರವಲ್ಲ, ಎಲ್ಲಾ ಮಹಾನ್ ಅಮೆರಿಕನ್ನರಿಗೆ ಮತ್ತು ಖಮೇನಿ ಮತ್ತು ಅವರ ರಕ್ತಪಿಪಾಸು ಥಗ್ಸ್ ಗುಂಪಿನಿAದ ಕೊಲ್ಲಲ್ಪಟ್ಟ ಅಥವಾ ಅಂಗವಿಕಲಗೊಳಿಸಲ್ಪಟ್ಟ ಪ್ರಪಂಚದಾದ್ಯAತದ ಅನೇಕ ದೇಶಗಳ ಜನರಿಗೆ ನ್ಯಾಯ ದೊರಕಿಸಿದೆ. ಅವರು ನಮ್ಮ ಗುಪ್ತಚರ ಮತ್ತು ಅತ್ಯಾಧುನಿಕ ಟ್ರ‍್ಯಾಕಿಂಗ್ ವ್ಯವಸ್ಥೆಗಳನ್ನು ತಪ್ಪಿಸಲು ಸಾಧ್ಯವಾಗಲಿಲ್ಲ ಮತ್ತು ಇಸ್ರೇಲ್‌ನೊಂದಿಗೆ ನಿಕಟವಾಗಿ ಕೆಲಸ ಮಾಡುತ್ತಿದ್ದಾಗ, ಅವರು ಅಥವಾ ಅವರೊಂದಿಗೆ ಕೊಲ್ಲಲ್ಪಟ್ಟ ಇತರ ನಾಯಕರು ಅದರ ಮಾಹಿತಿ ಪಡೆಯಲು ಸಾಧ್ಯವಾಗುತ್ತಿರಲಿಲ್ಲ. ಇರಾನಿನ ಜನರು ತಮ್ಮ ದೇಶವನ್ನು ಮರಳಿ ಪಡೆಯಲು ಇದು ಏಕೈಕ ದೊಡ್ಡ ಅವಕಾಶವಾಗಿದೆ. ಅವರ ಮಿಲಿಟರಿ ಮತ್ತು ಇತರ ಭದ್ರತಾ ಮತ್ತು ಪೊಲೀಸ್ ಪಡೆಗಳು ಇನ್ನು ಮುಂದೆ ಹೋರಾಡಲು ಬಯಸುವುದಿಲ್ಲ ಮತ್ತು ನಮ್ಮಿಂದ ವಿನಾಯಿತಿಯನ್ನು ಹುಡುಕುತ್ತಿವೆ .ಇರಾನಿನ ದೇಶಪ್ರೇಮಿಗಳೊಂದಿಗೆ ಶಾಂತಿಯುತವಾಗಿ ವಿಲೀನಗೊಳ್ಳುತ್ತಾರೆ ಮತ್ತು ದೇಶವನ್ನು ಅದು ಅರ್ಹವಾದ ಶ್ರೇಷ್ಠತೆಗೆ ಮರಳಿ ತರಲು ಒಂದು ಘಟಕವಾಗಿ ಒಟ್ಟಾಗಿ ಕೆಲಸ ಮಾಡುತ್ತಾರೆ. ಆ ಪ್ರಕ್ರಿಯೆಯು ಶೀಘ್ರದಲ್ಲೇ ಪ್ರಾರಂಭವಾಗಬೇಕು,” ಎಂದಿದ್ದಾರೆ.
ಅಲಿ ಹೊಸೆನಿ ಖಮೇನಿ ಯಾರು?
ಖಮೇನಿ ಇರಾನ್ ಸರ್ವಾಧಿಕಾರಿಯಾಗಿ ಎಲ್ಲ ಹಿಡಿತವನ್ನೂ ತನ್ನ ಬಳಿಯೇ ಇಟ್ಟುಕೊಂಡಿದ್ದರು. ೧೯೩೯ರಲ್ಲಿ ಇರಾನ್‌ನ ಮಶ್ಹದ್ ನಗರದಲ್ಲಿ ಜನಿಸಿದ ಖಮೇನಿ, ಸ್ಥಳೀಯ ಧಾರ್ಮಿಕ ನಾಯಕ ಜವಾದ್ ಖಮೇನಿಯ ೨ನೇ ಪುತ್ರ ಎಂಬುದು ಗಮನಾರ್ಹ. ಆರ್ಥಿಕವಾಗಿ ಸ್ಥಿತಿವಂತ ಕುಟುಂಬ ಆಗಿದ್ದ ಖಮೇನಿ ಕುಟುಂಬ ಮಗನಿಗೆ ಧಾರ್ಮಿಕ ಜೀವನ ಶೈಲಿ ಕಲಿಸಿತ್ತು. ಬಾಲ್ಯದಲ್ಲಿಯೇ ಕುರಾನ್ ಓದುವುದನ್ನು ಕಲಿತ ಖಮೇನಿ ಬಳಿಕ ಮಶ್ಹದ್‌ನಲ್ಲಿ ಧಾರ್ಮಿಕ ಶಿಕ್ಷಣ ನೀಡುವ ಸೆಮಿನರಿ ಶಾಲೆಯಲ್ಲಿ ವಿದ್ಯಾಭ್ಯಾಸ ಆರಂಭಿಸಿ ತನ್ನ ೧೮ನೇ ವಯಸ್ಸಿನಲ್ಲಿ, ಶಿಯಾ ಇಸ್ಲಾಮಿಕ್ ಕಾನೂನುಶಾಸ್ತ್ರ ಅಧ್ಯಯನಕ್ಕಾಗಿ ನಜಫ್ ನಗರಕ್ಕೆ ವಲಸೆ ಹೋಗಬೇಕಾಯಿತು. ಹೀಗೆ ಇರಾಕ್‌ನಲ್ಲಿ ಶಿಕ್ಷಣ ಪಡೆದು, ಇರಾನ್‌ಗೆ ಮರಳಿದ ನಂತರ ಖಮೇನಿಗೆ ಹೊಸ ಬದುಕು ಸಿಕ್ಕಿತ್ತು.
ಪ್ರತೀಕಾರ ಸಿದ್ಧತೆ
ಇನ್ನು ಇರಾನ್ ಮೇಲಿನ ದಾಳಿಯನ್ನು ಖಂಡಿಸಿರುವ ಇರಾನ್ ಸಂಸತ್ತಿನ ಸ್ಪೀಕರ್ ಮೊಹಮ್ಮದ್ ಬಘರ್ ಗಲಿಬಾಫ್, 'ಅಮೆರಿಕ, ಇಸ್ರೇಲ್ 'ನಮ್ಮ ಕೆಂಪು ರೇಖೆಗಳನ್ನು ದಾಟಿವೆ. ಅವು ಅದರ ಪರಿಣಾಮಗಳನ್ನು ಅನುಭವಿಸುತ್ತವೆ ಎಂದು ಹೇಳಿದ್ದಾರೆ.
ಅಮೆರಿಕ ಮತ್ತು ಇಸ್ರೇಲಿ ನಾಯಕರನ್ನು "ಕೊಳಕು ಅಪರಾಧಿಗಳು" ಎಂದು ಬಣ್ಣಿಸಿದ್ದಾರೆ. ಅವರು ತಮ್ಮ ದೇಶದ ಮೇಲಿನ ದಾಳಿಗೆ "ವಿನಾಶಕಾರಿ ಹೊಡೆತಗಳನ್ನು" ಎದುರಿಸಬೇಕಾಗುತ್ತದೆ. "ನಾವು ಈ ಕ್ಷಣಗಳಿಗೆ ನಮ್ಮನ್ನು ಸಿದ್ಧಪಡಿಸಿಕೊಂಡಿದ್ದೇವೆ. ಎಲ್ಲಾ ಸನ್ನಿವೇಶಗಳನ್ನು ಪರಿಗಣಿಸಿದ್ದೇವೆ" ಎಂದು ಮೊಹಮ್ಮದ್ ಬಘರ್ ಗಲಿಬಾಫ್ ರಾಜ್ಯ ಟಿವಿಯಲ್ಲಿ ಪ್ರಸಾರವಾದ ವೀಡಿಯೊದಲ್ಲಿ ಹೇಳಿದ್ದಾರೆ.
ಇದೇ ವೇಳೆ ಇರಾಕ್‌ನಲ್ಲಿ ಖಮೇನಿ ಹತ್ಯೆ ಖಂಡಿಸಿ ಲಕ್ಷಾಂತರ ಜನ ಬೀದಿಗಿಳಿದು ಘೋಷಣೆ ಕೂಗುತ್ತಿದ್ದಾರೆ. ಅಯತೊಲ್ಲಾ ಅಲಿ ಖಮೇನಿ ಅವರಿಗೆ ಗೌರವ ಸಲ್ಲಿಸಲು ಸಾವಿರಾರು ಶೋಕತಪ್ತರು ಇಸ್ಫಹಾನ್‌ನಲ್ಲಿ ಸೇರಿದ್ದಾರೆ ಎಂದು ಅಲ್ ಜಜೀರಾ ವರದಿ ಮಾಡಿದೆ.
ಇಸ್ರೇಲ್ ಹಾಗೂ ಅಮೆರಿಕದ ನೆಲೆಗಳನ್ನು ಹೊಂದಿರುವ ರಾಷ್ಟçಗಳ ಮೇಲೆ ಇರಾನ್ ಪ್ರತೀಕಾರದ ದಾಳಿ ನಡೆಸುತ್ತಿದ್ದು, ಇದರ ನಡುವೆಯೇ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕೂಡ ಇರಾನ್ ದಾಳಿಗೆ ಹೊಸ ಬಗೆಯ ದಾಳಿ ಎಚ್ಚರಿಕೆ ನೀಡಿದ್ದಾರೆ.
ಇರಾನ್ ದಾಳಿಯಲ್ಲಿ ಸಾವು
ಇಸ್ರೇಲ್ - ಅಮೇರಿಕಾ ದಾಳಿಗೆ ಪ್ರತೀಕಾರವಾಗಿ ಇರಾನ್ ನಡೆಸಿದ ಕ್ಷೀಪಣಿ ದಾಳಿಗಳಲ್ಲಿ ಹಲವರು ಸಾವಿಗೀಡಾಗಿದ್ದಾರೆ. ಇಸ್ರೇಲ್‌ನಲ್ಲಿ ೯ ಮಂದಿ ಹತ್ಯೆಗೀಡಾಗಿದ್ದು, ೨೦ ಮಂದಿಗೆ ತೀವ್ರ ಗಾಯಗಳಾಗಿವೆ. ಸಮರ ರಂಗದಲ್ಲಿದ್ದ ಮೂವರು ಅಮೇರಿಕದ ಯೋಧರು ಸಾವಿಗೀಡಾಗಿದ್ದು, ಐವರು ಗಾಯಗೊಂಡಿದ್ದಾರೆ. ಕುವೈತ್ ಮೇಲಿನ ಇರಾನ್ ದಾಳಿಯಲ್ಲಿ ಓರ್ವ ಸಾವಿಗೀಡಾಗಿದ್ದು, ಮೂವರು ಗಾಯಗೊಂಡಿದ್ದಾರೆ. ಯುಎಇ ಮೇಲೆ ನಡೆದ ದಾಳಿಲ್ಲಿ ಮೂವರು ಹತ್ಯೆಗೀಡಾಗಿದ್ದಾರೆ ಎಂದು ತಿಳಿದು ಬಂದಿದೆ.
ಖAಡನೆ- ಕನ್ನಡಿಗರ ರಕ್ಷಣೆ
ಇರಾನ್‌ನ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ಅವರ ಹತ್ಯೆಯನ್ನು ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಭಾನುವಾರ ಖಂಡಿಸಿದ್ದಾರೆ. ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೂ ಖಂಡಿಸಿದ್ದಾರೆ. ಯುದ್ಧ ಪೀಡಿತ ದೇಶಗಳಲ್ಲಿ ವಾಸಿಸುತ್ತಿರುವ ಕನ್ನಡಿಗರ ಸುರಕ್ಷತೆಯ ಬಗ್ಗೆ ಮುಖ್ಯ ಕಾರ್ಯದರ್ಶಿ, ಸ್ಥಾನಿಕ ಆಯುಕ್ತರೊಂದಿಗೆ ಚರ್ಚಿಸಲಾಗಿದೆ. ದುಬೈ ವಿಮಾನ ನಿಲ್ದಾಣ ಬಂದ್ ಮಾಡಲಾಗಿದ್ದು, ಅದನ್ನು ತೆರೆದ ಮೇಲೆ ಅವರನ್ನು ಭಾರತಕ್ಕೆ ಸುರಕ್ಷಿತವಾಗಿ ಕರೆ ತರಲು ವ್ಯವಸ್ಥೆ ಮಾಡಲಾಗುವುದು. ವಿಧಾನ ಪರಿಷತ್ ಸದಸ್ಯ ಭೋಜೇಗೌಡರು ದುಬೈನಲ್ಲಿದ್ದು, ಅವರೊಂದಿಗೆ ದೂರವಾಣಿ ಮೂಲಕ ಮಾತನಾಡಿದ್ದೇನೆ ಎಂದು ಮುಖ್ಯಮಂತ್ರಿ ಹೇಳಿದರು. ಅರಬ್ ದೇಶಗಳಲ್ಲಿ ಸಿಲುಕಿರುವ ಬಳ್ಳಾರಿಯ ೩೦ ಜನರನ್ನು ವಾಪಸ್ಸು ಕರೆತರಲಾಗುವುದು ಎಂದು ಹೇಳಿದರಲ್ಲದೆ, ದುಬೈನಲ್ಲಿರುವ ಭಾರತೀಯರು ಸುರಕ್ಷಿತವಾಗಿದ್ದಾರೆ ಎಂದರು.
ಇರಾನ್‌ನ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ಹತ್ಯೆ ಸುದ್ದಿ ತಿಳಿಯುತ್ತಿದ್ದಂತೆ, ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ತಾಲೂಕಿನ ಅಲೀಪುರ ಸ್ತಬ್ಧಗೊಂಡಿದೆ. ತಮ್ಮ ಧಾರ್ಮಿಕ ನಾಯಕನ ಸಾವಿನಿಂದ ಕಂಗಾಲಾಗಿರುವ ಸ್ಥಳೀಯ ಶಿಯಾ ಮುಸ್ಲಿಮರು ಸ್ವಯಂಪ್ರೇರಿತರಾಗಿ ಅಂಗಡಿ-ಮುAಗಟ್ಟುಗಳನ್ನು ಮುಚ್ಚಿ ಅಘೋಷಿತ ಬಂದ್ ಆಚರಿಸುತ್ತಿದ್ದಾರೆ. ಬೆಂಗಳೂರಿನಲ್ಲಿಯೂ ಶಿಯಾ ಮುಸ್ಲಿಮರು ಶಾಸಕ ಹ್ಯಾರಿಸ್ ನೇತೃತ್ವದಲ್ಲಿ ಸಂತಾಪ ಸೂಚಕ ಮೆರವಣಿಗೆ ನಡೆಸಿದರು.
ಸಂಕಷ್ಟದಲ್ಲಿ ಸಿಲುಕಿರುವ ಭಾರತೀಯರು
ಈ ನಡುವೆ ಇರಾನ್ ನ ಪ್ರತೀಕಾರ ಧಾಳಿಯಲ್ಲಿ ಸಿಲುಕಿರುವ ೬ ರಾಷ್ಟçಗಳಲ್ಲಿ ಅನೇಕ ಭಾರತೀಯರು ಸಂಕಷ್ಟಕ್ಕೆ ಸಿಲುಕಿದ್ದಾರೆ. ನಿನ್ನೆ ರಾತ್ರಿ ದುಬೈ ವಿಮಾನ ನಿಲ್ದಾಣದ ಮೇಲೂ ಇರಾನ್‌ನ ಕ್ಷಿಪಣಿ ದಾಳಿ ನಡೆದಿದ್ದು ಅನೇಕ ಭಾರತೀಯರು ಪ್ರಯಾಣ ಮಾಡಲಾಗದೆ ಸಂಕಷ್ಟಕ್ಕೆ ಸಿಲುಕಿಕೊಂಡಿದ್ದಾರೆ. ಬ್ಯಾಡ್ಮಿಂಟನ್ ತಾರೆ ಪಿ.ವಿ ಸಿಂಧು ಅವರು ದುಬೈ ವಿಮಾನ ನಿಲ್ದಾಣದಲ್ಲಿ ಸಿಲುಕಿದ್ದಾರೆ. ದುಬೈ ವಿಮಾನ ನಿಲ್ದಾಣದ ಕಾರ್ಯಾಚರಣೆಗಳನ್ನು ಸ್ಥಗಿತಗೊಳಿಸಿರುವುದರಿಂದ ಸ್ಟಾರ್ ಶಟ್ಲರ್ ಆಲ್ ಇಂಗ್ಲೆAಡ್ ಓಪನ್‌ಗಾಗಿ ಬರ್ಮಿಂಗ್ ಹ್ಯಾಮ್‌ಗೆ ಪ್ರಯಾಣಿಸುತ್ತಿದ್ದ ಅವರು ಸಂಕಷ್ಟಕ್ಕೆ ಸಿಲುಕಿದ್ದಾರೆ. ವಿಮಾನ ನಿಲ್ದಾಣದ ಸಮೀಪದಲ್ಲೇ ಕ್ಷಿಪಣಿಗಳು ಸ್ಫೋಟಗೊಳ್ಳುತ್ತಿರುವ ಬಗ್ಗೆ ಅವರು ಮಾಹಿತಿ ಹಂಚಿಕೊAಡಿದ್ದಾರೆ. ವಿಮಾನ ನಿಲ್ದಾಣದ ಅಧಿಕಾರಿಗಳು ಹೆಚ್ಚು ಸುರಕ್ಷಿತ ಪ್ರದೇಶಕ್ಕೆ ಸ್ಥಳಾಂತರಿಸಿದ್ದಾರೆ ಎಂದು ಅವರು ಹೇಳಿದ್ದಾರೆ. ಅರಬ್ ರಾಷ್ಟ್ರಗಳಲ್ಲಿ ತೆಲುಗು ನಟ ವಿಷ್ಣು ಮಂಚು ಅವರು ಸಹ ಸಂಕಷ್ಟಕ್ಕೆ ಸಿಲುಕಿದ್ದಾರೆ. ಭಾರೀ ಕ್ಷಿಪಣಿಗಳ ಹಾರಾಟವನ್ನು ಅವರು ಹಂಚಿಕೊAಡಿದ್ದಾರೆ. ನಾವಿರುವ ಮನೆಯ ಮೇಲೆಯೇ ಕ್ಷಿಪಣಿಗಳು ಬೀಳುವಂತಹ ಪರಿಸ್ಥಿತಿ ಇದೆ ಎಂದಿದ್ದಾರೆ.
ವಿಮಾನ ಕಾರ್ಯಾಚರಣೆಗಳನ್ನು ರದ್ದುಗೊಳಿಸಿದ ನಂತರ ಜನ್ನತ್ ನಟಿ ಸೋನಾಲ್ ಚೌಹಾಣ್ ಅವರು ಸಹ ದುಬೈ ವಿಮಾನ ನಿಲ್ದಾಣದಲ್ಲಿ ಸಿಲುಕಿಕೊಂಡಿದ್ದಾರೆ. ಸುರಕ್ಷಿತವಾಗಿ ಮನೆಗೆ ಮರಳಲು ಮಾರ್ಗದರ್ಶನ ಮತ್ತು ಬೆಂಬಲಕ್ಕಾಗಿ ಅವರು ಪ್ರಧಾನಿ ನರೇಂದ್ರ ಮೋದಿ ಮತ್ತು ವಿದೇಶಾಂಗ ಸಚಿವಾಲಯಕ್ಕೆ ಮನವಿ ಮಾಡಿದ್ದಾರೆ. ಇಸ್ರೇಲ್-ಇರಾನ್ ನಡುವೆ ಯುದ್ಧ ನಡೆಯುತ್ತಿದೆ. ಈ ನಡುವೆ ಇರಾನ್ ದುಬೈನ ಹಲವೆಡೆ ದಾಳಿ ನಡೆಸುತ್ತಿದ್ದು, ಈ ಯುದ್ಧ ಭೂಮಿಯಲ್ಲಿ ಬಳ್ಳಾರಿ ಶಾಸಕ ಭರತ್ ರೆಡ್ಡಿ, ಡ್ರೋನ್ ಪ್ರತಾಪ್ ಸೇರಿ ೧೫೦ಕ್ಕೂ ಹೆಚ್ಚು ಕನ್ನಡಿಗರು ಸಿಲುಕಿದ್ದಾರೆ ಎನ್ನುವ ಮಾಹಿತಿ ಇದೆ. ಚಿಕ್ಕಬಳ್ಳಾಪುರ ಮೂಲದ ವಿದ್ಯಾರ್ಥಿಗಳು ದುಬೈನಲ್ಲಿ ಸಿಲುಕಿದ್ದಾರೆ. ಸದ್ಯ ಶಾಸಕ ರೆಡ್ಡಿ ಹೋಟೆಲ್‌ವೊಂದರಲ್ಲಿ ಸುರಕ್ಷಿತರಾಗಿದ್ದಾರೆ. ಹಲವರು ವಿಮಾನ ನಿಲ್ದಾಣದಲ್ಲಿ ಸಿಲುಕಿಕೊಂಡಿದ್ದು, ಎಲ್ಲ ಕನ್ನಡಿಗರನ್ನು ಸುರಕ್ಷಿತವಾಗಿ ಕರೆತರಲು ಎಲ್ಲಾ ಪ್ರಯತ್ನಗಳು ನಡೆಯುತ್ತಿದೆ ಎಂದು ಕರ್ನಾಟಕದ ಗೃಹ ಸಚಿವ ಡಾ. ಪರಮೇಶ್ವರ್ ತಿಳಿಸಿದ್ದಾರೆ. ದೋಹಾ, ದುಬೈ, ಕುವೈತ್ ಸೇರಿದಂತೆ ಅನೇಕ ಕಡೆಗಳಲ್ಲಿ ನಮ್ಮ ಕನ್ನಡಿಗರು ಕೆಲಸಕ್ಕೆ ಹೋಗಿದ್ದಾರೆ. ಯುದ್ಧದ ವೇಳೆ ಅವರೀಗ ಅಲ್ಲಿ ಸಿಲುಕಿದ್ದಾರೆ ಎಂದು ಮಾಜಿ ಸಿಎಂ ಮತ್ತು ಸಂಸದ ಬಸವರಾಜ ಬೊಮ್ಮಾಯಿ ತಿಳಿಸಿದ್ದು ಕೇಂದ್ರ ಸರಕಾರ- ಮತ್ತು ರಾಜ್ಯ ಸರಕಾರಗಳ ಜಂಟಿ ಪ್ರಯತ್ನದಿಂದ ರಕ್ಷಣೆ ಸಾಧ್ಯ ಎಂದು ತಿಳಿಸಿದ್ದಾರೆ.
ಕರಾಚಿಯಲ್ಲಿ ಉದ್ವಿಗ್ನ ಸ್ಥಿತಿ
ಈ ನಡುವೆ ಪಾಕಿಸ್ತಾನದ ಕರಾಚಿಯಲ್ಲಿರುವ ಅಮೆರಿಕ ರಾಯಭಾರಿ ಕಚೇರಿಯತ್ತ ನುಗ್ಗಿದ ಸಾವಿರಾರು ಪ್ರತಿಭಟನಾಕಾರರು ಕಲ್ಲು ತೂರಾಟ ನಡೆಸಿದ್ದಾರೆ. ಅಲ್ಲದೆ, ಕಚೇರಿಯ ಆವರಣಕ್ಕೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪ್ರತಿಭಟನಾಕಾರರ ಅಟ್ಟಹಾಸಕ್ಕೆ ರಾಯಭಾರಿ ಕಚೇರಿಯ ಕಿಟಕಿ ಗಾಜುಗಳು ಪುಡಿಪುಡಿಯಾಗಿದ್ದು, ಒಳಗಿದ್ದ ಪೀಠೋಪಕರಣಗಳನ್ನು ಸಂಪೂರ್ಣವಾಗಿ ಧ್ವಂಸಗೊಳಿಸಲಾಗಿದೆ.
ಈ ಸಂದರ್ಭ ಪರಿಸ್ಥಿತಿಯನ್ನು ನಿಯಂತ್ರಣಗೊಳಿಸಲು ಪೊಲೀಸರು ಅಶ್ರುವಾಯು ಪ್ರಯೋಗಿಸಿ ಹತೋಟಿ ತರಲು ಪ್ರಯತ್ನಿಸಿದಾಗ ಸುಮಾರು ೧೦ ಮಂದಿ ಸಾವಿಗೀಡಾಗಿದ್ದು, ೩೧ ಮಂದಿ ಗಾಯಗೊಂಡಿದ್ದಾರೆ.
ಯುದ್ಧ ಪರಿಸ್ಥಿತಿ ಎರಡೂ ಕಡೆ ಮುಂದುವರಿದಿದ್ದು ಸದ್ಯಕ್ಕೆ ವಿರಾಮ ಹೇಳುವ- ಮಧ್ಯಸ್ಥಿಕೆ ವಹಿಸುವವರು ಕಂಡು ಬರದಿದ್ದು ಮತ್ತೂ ಬಿಗಡಾಯಿಸುವ ಸಾಧ್ಯತೆ ಗೋಚರವಾಗಿದೆ.