ನಾಪೋಕ್ಲು, ಫೆ. ೨೮: ಹಿಂದೂ ಸಂಗಮ ಕಾರ್ಯಕ್ರಮದ ಪ್ರಚಾರಾರ್ಥವಾಗಿ ವಾಹನದಲ್ಲಿ ಭಗವಾಧ್ವಜ ಅಳವಡಿಸಿದ್ದಕ್ಕೆ ತಗಾದೆ ತೆಗೆದು ಹಿಂದೂ ಕಾರ್ಯಕರ್ತನ ಮೇಲೆ ನಿನ್ನೆ ದಿನ ನಾಪೋಕ್ಲುವಿನಲ್ಲಿ ನಡೆದಿದ್ದ ಹಲ್ಲೆ ಪ್ರಕರಣಕ್ಕೆ ಸಂಬAಧಿಸಿದAತೆ ಒಟ್ಟು ನಾಲ್ವರು ಆರೋಪಿಗಳನ್ನು ಪೊಲೀಸಲು ಬಂಧಿಸಿದ್ದು, ಆರೋಪಿಗಳನ್ನು ೧೪ ದಿನಗಳ ಕಾಲ ವೀರಾಜಪೇಟೆಯ ಪ್ರಧಾನ ಸಿವಿಲ್ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ.
ನಾಪೋಕ್ಲುವಿನ ಕಾರೆಕಾಡು ನಿವಾಸಿ ಹಂಸ ಎಂಬುವರ ಪುತ್ರ ಪಿ.ಹೆಚ್. ಸುಹೈಲ್ (೨೪), ಬೇತು ಗ್ರಾಮದ ಇಸ್ಮಾಯಿಲ್ ಎಂಬವರ ಪುತ್ರ ಕೆ.ಇ. ಸಿದ್ದೀಕ್ (೨೦), ಇಂದಿರಾ ನಗರದ ಮೊಹಮ್ಮದ್ ಎಂಬುವರ ಪುತ್ರ ಪಿ.ಎಂ. ನಾಫಿ (೧೯) ಹಾಗೂ ಅಬ್ದುಲ್ ರೆಹಮಾನ್ ಎಂಬವರ ಪುತ್ರ ಪಿ.ಎ. ರಾಶೀದ್ ಅಲಿಯಾಸ್ ಅಚ್ಚಿ (೩೦) ಇವರುಗಳೇ ಬಂಧಿತ ಆರೋಪಿಗಳಾಗಿದ್ದಾರೆ. ಇಂದು ಪೊಲೀಸ್ ವರಿಷ್ಠಾಧಿಕಾರಿ ಆರ್.ಎನ್. ಬಿಂದುಮಣಿ ಅವರು ನಾಪೋಕ್ಲುವಿಗೆ ಭೇಟಿ ನೀಡಿ ಪರಿಶೀಲಿಸಿದರು. ಬಳಿಕ ನಾಪೋಕ್ಲು ಠಾಣೆಯಲ್ಲಿ ಮಾಹಿತಿ ನೀಡಿದ ಅವರು ನಿನ್ನೆಯ ಘಟನೆಗೆ ಸಂಬAಧಿಸಿದAತೆ ನಾಲ್ವರು ಆರೋಪಿಗಳನ್ನು ಬಂಧಿಸಲಾಗಿದೆ. ಜಿಲ್ಲೆಯಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಎಚ್ಚರ ವಹಿಸಲಾಗಿದೆ. ಕಾನೂನು ವ್ಯವಸ್ಥೆಗೆ ಧಕ್ಕೆ ತರುವವರ ವಿರುದ್ಧ ಪೊಲೀಸ್ ಇಲಾಖೆ ಕಠಿಣ ಕ್ರಮ ಕೈಗೊಳ್ಳುತ್ತದೆ ಎಂದು ಹೇಳಿದರು.
ಶುಕ್ರವಾರ ಸಂಜೆ ೪ ಗಂಟೆ ವೇಳೆಗೆ ನಾಪೋಕ್ಲುವಿನ ಪೊನ್ನಾಡ್ ಸೂಪರ್ ಮಾರ್ಕೆಟ್ ಎದುರು ಸಾಮಗ್ರಿ ಖರೀದಿಸಲೆಂದು ದೊಡ್ಡಪುಲಿಕೋಟು ಗ್ರಾಮದ ಅಪ್ಪಚ್ಚಿರ ಗೌತಮ್ ಅವರು ಭಗವಾಧ್ವಜ ಕಟ್ಟಿದ್ದ ತಮ್ಮ ಪಿಕಪ್ ವಾಹನದಲ್ಲಿ ಬಂದಿದ್ದು, ಈ ವೇಳೆ ಲವ ನಾಣಯ್ಯ ಎಂಬವರು ಸಿಕ್ಕಿ ಧ್ವಜ ಕಟ್ಟಿದ್ದ ಕುರಿತು ಮಾತನಾಡುವಾಗ ಬಲ್ಲಮಾವಟಿಯಲ್ಲಿ ತಾ. ೨೮ ರಂದು ಆಯೋಜನೆಗೊಂಡಿದ್ದ ಹಿಂದೂ ಸಂಗಮದ ೪ಐದನೇ ಪುಟಕ್ಕೆ (ಮೊದಲ ಪುಟದಿಂದ) ಕುರಿತು ಪ್ರಚಾರಕ್ಕೆ ಬಂದಿರುವುದಾಗಿ ಗೌತಮ್ ತಿಳಿಸಿದ್ದಾರೆ.
ಇದನ್ನು ಕಂಡ ಪಕ್ಕದ ಅಂಗಡಿಯಲ್ಲಿದ್ದ ಸುಹೈಲ್ ಎಂಬಾತ ಕಬ್ಬಿಣದ ರಾಡ್‌ನಿಂದ, ಸಿದ್ಧೀಕ್ ಎಂಬಾತ ಬೇಸ್‌ಬಾಲ್ ಬ್ಯಾಟ್‌ನಿಂದ ಗೌತಮ್ ಮೇಲೆ ಹಲ್ಲೆ ಮಾಡಿದ್ದಾರೆ. ಇವರೊಂದಿಗೆ ನಾಫಿಯೂ ಹಲ್ಲೆಯಲ್ಲಿ ಭಾಗಿಯಾಗಿದ್ದು, ರಾಶೀದ್ ಸಹಕರಿಸಿದ್ದ ಎಂದು ಕರವಂಡ ಲವ ನಾಣಯ್ಯ ದೂರು ನೀಡಿದ್ದರು. ಈ ಸಂಬAಧ ನಾಪೋಕ್ಲು ಠಾಣೆಯಲ್ಲಿ ಎಫ್.ಐ.ಆರ್. ದಾಖಲಾಗಿತ್ತು. ಘಟನೆ ನಂತರ ಜನರು ಸೇರುತ್ತಿದಂತೆ ಕೆಂಪು ಬಣ್ಣದ ಅಲ್ಟೋ ಕಾರಿನಲ್ಲಿ ಆರೋಪಿಗಳು ಪರಾರಿಯಾಗಿದ್ದರು.
ಘಟನೆಯ ಕುರಿತು ವಿಷಯ ತಿಳಿಯುತ್ತಿದ್ದಂತೆ ಹಿಂದೂ ಪರ ಸಂಘಟನೆ ಹಾಗೂ ಬಿಜೆಪಿ ಪ್ರಮುಖರು ಸ್ಥಳಕ್ಕೆ ಆಗಮಿಸಿ ರಸ್ತೆ ತಡೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹಿಸಿದ್ದರು.
ವೀರಾಜಪೇಟೆ ಡಿವೈಎಸ್‌ಪಿ ಮಹೇಶ್ ಕುಮಾರ್, ಸೋಮವಾರಪೇಟೆ ಡಿವೈಎಸ್‌ಪಿ ಚಂದ್ರಶೇಖರ್, ವೃತ್ತ ನಿರೀಕ್ಷಕ ಅನೂಪ್ ಮಾದಪ್ಪ, ಮಡಿಕೇರಿ ಗ್ರಾಮಾಂತರ ಇನ್ಸ್ಪೆಕ್ಟರ್ ಚಂದ್ರಶೇಖರ್, ನಾಪೋಕ್ಲು ಠಾಣಾಧಿಕಾರಿ ರಾಘವೇಂದ್ರ ಸೇರಿದಂತೆ ಅಧಿಕಾರಿಗಳ ತಂಡ ತಕ್ಷಣ ದೌಡಾಯಿಸಿ ಅಹಿತಕರ ಘಟನೆ ನಡೆಯದಂತೆ ಎಚ್ಚರಿಕೆ ವಹಿಸಿ ಪ್ರತಿಭಟನಾಕಾರರ ಮನವೊಲಿಸುವ ಪ್ರಯತ್ನವನ್ನು ಮಾಡಿತ್ತು. ಆರೋಪಿಗಳ ಪೈಕಿ ಓರ್ವನನ್ನು ನಿನ್ನೆಯೆ ಬಂಧಿಸಲಾಗಿತ್ತು. ಉಳಿದ ಆರೋಪಿಗಳನ್ನು ಇಂದು ಬಂಧಿಸಲಾಗಿದೆ.
ತಪ್ಪಿತಸ್ಥರಿಗೆ ಶಿಕ್ಷೆ ಆಗುತ್ತದೆ - ಪೊನ್ನಣ್ಣ
ಗೌತಮ್ ಮೇಲಿನ ಹಲ್ಲೆ ಪ್ರಕರಣಕ್ಕೆ ಸಂಬAಧಿ ಸಿದಂತೆ ತಪ್ಪಿತಸ್ಥರಿಗೆ ಕಾನೂನಿನ ಅಡಿಯಲ್ಲಿ ಶಿಕ್ಷೆ ಆಗಲಿದೆ ಎಂದು ವೀರಾಜಪೇಟೆ ಶಾಸಕ, ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ ಎ.ಎಸ್. ಪೊನ್ನಣ್ಣ ಹೇಳಿದರು.
ಜಿಲ್ಲಾಸ್ಪತ್ರೆಗೆ ಭೇಟಿ ನೀಡಿ ಗೌತಮ್ ಯೋಗಕ್ಷೇಮ ವಿಚಾರಿಸಿದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಗೌತಮ್ ಅವರಿಗೆ ಸೂಕ್ತ ಚಿಕಿತ್ಸೆ ನೀಡುವ ಸಂಬAಧ ವೈದ್ಯರೊಂದಿಗೆ ಚರ್ಚಿ ಸಿದ್ದೇವೆ, ಘಟನೆ ಸಂಬAಧ ನಿರ್ದಾಕ್ಷಿಣ್ಯ ಕ್ರಮಕ್ಕೆ ಪೊಲೀಸ್ ಇಲಾಖೆಗೆ ಸೂಚಿಸಿದ್ದೇವೆ. ಈಗಾಗಲೇ ೪ ಆರೋಪಿಗಳನ್ನು ಬಂಧಿಸಲಾಗಿದ್ದು, ನ್ಯಾಯಾಂಗ ಬಂಧನಕ್ಕೆ ಒಳಗಾಗಿದ್ದಾರೆ.
ಘಟನೆ ನಡೆದ ಬಳಿಕ ಪೊಲೀಸರಿಂದ ಕ್ರಮ ಜರುಗದಿದ್ದಾಗ ಪ್ರತಿಭಟಿಸುವುದು, ಹೇಳಿಕೆಗಳನ್ನು ಕೊಡುವುದು ಸರಿ. ಆದರೆ ಈ ಘಟನೆಯಲ್ಲಿ ಪೊಲೀಸರು ತಕ್ಷಣಕ್ಕೆ ಕ್ರಮ ಕೈಗೊಂಡಿದ್ದಾರೆ. ಗಾಯಾಳು ಹೇಳಿಕೆ ಪಡೆದು ಮುಂದುವರೆಯಬೇಕಿದ್ದರೂ ಒತ್ತಡದಿಂದಾಗಿ ಅಲ್ಲಿಗೆ ಲವ ಎಂಬವರಿAದ ದೂರು ಸ್ವೀಕರಿಸಿದ್ದಾರೆ. ೪ಐದನೇ ಪುಟಕ್ಕೆ
ತಪ್ಪಿತಸ್ಥರಿಗೆ ಶಿಕ್ಷೆ ಆಗುತ್ತದೆ - ಪೊನ್ನಣ್ಣ
(ಮೊದಲ ಪುಟದಿಂದ) ಯುವಕನ ಮೇಲೆ ಹಲ್ಲೆ ನಡೆದಿರುವುದು ನೋವಿನ ವಿಚಾರವಾಗಿದ್ದು, ಇದರಲ್ಲಿ ಯಾರು ರಾಜಕೀಯ ತರಬಾರದು ಎಂದು ಹೇಳಿದರು. ಇಂತಹ ಘಟನೆ ನಡೆಯಬಾರದಿತ್ತು, ಆರೋಪಿಗಳ ಪೈಕಿ ಓರ್ವ ಕಾಂಗ್ರೆಸ್ ಬ್ಲಾಕ್ ಅಧ್ಯಕ್ಷರ ಪುತ್ರನಾಗಿದ್ದು, ಆತನನ್ನು ಕೂಡ ಬಂಧಿಸಲಾಗಿದೆ. ಕಾನೂನು ಎಲ್ಲರಿಗೂ ಒಂದೇ ಎಂದು ಪೊನ್ನಣ ಹೇಳಿದರು.
ಈ ಸಂದರ್ಭ ಮಾಜಿ ಎಂಎಲ್‌ಸಿ ವೀಣಾ ಅಚಯ್ಯ, ಕಾಂಗ್ರೆಸ್ ಸಾಮಾಜಿಕ ಜಾಲತಾಣದ ಪ್ರಮುಖ ಸೂರಜ್ ಹೊಸೂರು ಮತ್ತಿತರರು ಇದ್ದರು.