ನಾಪೋಕ್ಲು, ಫೆ. ೨೮: ಬಲ್ಲಮಾವಟಿಯಲ್ಲಿ ಹಿಂದೂ ಸಂಗಮ ಆಯೋಜನಾ ಸಮಿತಿಯಿಂದ ಆಯೋಜಿಸಲಾದ ಹಿಂದೂ ಸಂಗಮ ಕಾರ್ಯಕ್ರಮ ಶಾಂತಿಯುತವಾಗಿ ನಡೆಯಿತು. ಕಾರ್ಯಕ್ರಮದಲ್ಲಿ ದಿಕ್ಸೂಚಿ ಭಾಷಣ ಮಾಡಿದ ವಿಶ್ವ ಹಿಂದೂ ಪರಿಷತ್‌ನ ಶರಣ್ ಪಂಪ್‌ವೆಲ್, ಸಂಘ ಇರುವುದೇ ಹಿಂದೂ ಸಮಾಜಕ್ಕೋಸ್ಕರ.
ಸಂಘವು ರಾಜ್ಯದಾದ್ಯಂತ ಹಳ್ಳಿ ಹಳ್ಳಿಗಳಲ್ಲಿ, ಗ್ರಾಮ ಗ್ರಾಮಗಳಲ್ಲಿ ಕಾರ್ಯಕ್ರಮಗಳನ್ನು ಆಯೋಜಿಸಿದೆ. ಎಲ್ಲೂ ಸಂಘರ್ಷ ನಡೆದಿಲ್ಲ. ಎಲ್ಲೂ ಗೊಂದಲ ಆಗಿಲ್ಲ. ಆದರೆ ನಾಪೋಕ್ಲುವಿನಲ್ಲಿ ಅಹಿತಕರ ಘಟನೆ ನಡೆದಿದೆ. ಹಿಂದೂ ವ್ಯಕ್ತಿಯ ಮೇಲೆ ಹಲ್ಲೆ ನಡೆದಿದ್ದು, ಇದು ಖಂಡನೀಯ ಎಂದರು.
ರಾಷ್ಟç ಸೇವಿಕ ಸಮಿತಿಯ ಮಂಗಳೂರಿನ ಜಿಲ್ಲಾ ಸೇವಾ ಪ್ರಮುಖ್ ಶ್ರೀದೇವಿ ಮಾತನಾಡಿ, ಎಲ್ಲಿ ಸ್ತಿçà ಪೂಜಿಸಲ್ಪಡುತ್ತಾಳೋ ಅಲ್ಲಿ ದೇವತೆಗಳು ನೆಲೆಸಿರುತ್ತಾರೆ. ಹಿಂದೂ ಸಂಸ್ಕೃತಿ ಸ್ತಿçÃಯನ್ನು ಅತ್ಯಂತ ಗೌರವದಿಂದ ಕಾಣುವ ಸಂಸ್ಕೃತಿ ಎಂದ ಅವರು, ಲವ್ ಜಿಹಾದ್ ಬಗ್ಗೆ ಬೆಳಕು ಚೆಲ್ಲಿದರು.
ಕಾವೇರಿ ಮಹಿಳಾ ಸಮಾಜದ ಅಧ್ಯಕ್ಷರಾದ ಅಪ್ಪಚೆಟ್ಟೋಳಂಡ ವನುವಸಂತ, ಹಿಂದೂ ಧರ್ಮದಲ್ಲಿ ಮಹಿಳೆಯ ಪಾತ್ರ ಎಂಬ ವಿಷಯದ ಕುರಿತು ಮಾತನಾಡಿ, ತಾಯಂದಿರು ಮಕ್ಕಳಿಗೆ ಸಮಾಜದಲ್ಲಿ ಗೌರವಯುತವಾಗಿ ಬಾಳುವ ಬಗ್ಗೆ ತಿಳಿ ಹೇಳಬೇಕು. ಉತ್ತಮ ನಾಗರಿಕರನ್ನಾಗಿ ಮಾಡಬೇಕು ಎಂದರಲ್ಲದೆ ಮಾತೃಶಕ್ತಿಯ ಬಗ್ಗೆ ವಿವರಿಸಿದರು.
ನಿವೃತ್ತ ಅಬಕಾರಿ ಕಮಿಷನರ್ ಮೂವೆರ ಸಚಿನ್ ಕುಟ್ಟಪ್ಪ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಗೋಪೂಜೆ ಹಾಗೂ ದೀಪ ಬೆಳಗಿಸುವುದರ ಮೂಲಕ ಸಭಾ ಕಾರ್ಯಕ್ರಮದ ಉದ್ಘಾಟನೆಯನ್ನು ನೆರವೇರಿಸಿ ಭಾರತ ಮಾತೆಯ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಲಾಯಿತು.
ವೇದಿಕೆಯಲ್ಲಿ ನಿವೃತ್ತ ನೌಕಾಪಡೆ ಅಧಿಕಾರಿ ಪೆಬ್ಬೆಟ್ಟಿರ ಎಂ. ಕುಶಾಲಪ್ಪ, ನಿವೃತ್ತ ಸೇನಾಧಿಕಾರಿ ಎಡಿಕೇರಿ ಮಣಿ ಮಂದಣ್ಣ, ನೆಲಜಿ ಕೃಷಿ ಪತ್ತಿನ ಸಹಕಾರ ಸಂಘದ ಉಪಾಧ್ಯಕ್ಷ ಚೀಯಕಪೂವಂಡ ರೀನಾ ವಿಠ್ಠಲ್ ಉಪಸ್ಥಿತರಿದ್ದರು.
ಸಭಾ ಕಾರ್ಯಕ್ರಮಕ್ಕೂ ಮುನ್ನ ಕೇರಳದ ಚಂಡೆ ವಾದ್ಯ, ಭಾರತ ಮಾತೆಯ ಸ್ತಬ್ಧಚಿತ್ರದೊಂದಿಗೆ ಅದ್ದೂರಿ ಶೋಭಾಯಾತ್ರೆ ಮೆರವಣಿಗೆ ನಡೆಯಿತು.
ಪ್ರಮುಖರಾದ ಅಪ್ಪಚೆಟ್ಟೋಳಂಡ ಮನು ಮುತ್ತಪ್ಪ ಸ್ವಾಗತಿಸಿ, ನುಚ್ಚಿಮಣಿಯಂಡ ನಿಶ್ಚಿತ ನಿರೂಪಿಸಿದರು. ಹಿಂದೂ ಸಂಗಮ ಪ್ರಮುಖರಾದ ಕರವಂಡ ಲವ ನಾಣಯ್ಯ ವಂದಿಸಿದರು.
ಕಾರ್ಯಕ್ರಮದಲ್ಲಿ ಚುನಾಯಿತ ಪ್ರತಿನಿಧಿಗಳು, ವಿವಿಧ ಸಂಘ -ಸಂಸ್ಥೆಗಳ ಪದಾಧಿಕಾರಿಗಳು ಹಾಗೂ ಹಿಂದೂ ಸಮುದಾಯದವರು ಅಧಿಕ ಸಂಖ್ಯೆಯಲ್ಲಿ ಭಾಗವಹಿಸಿದ್ದರು.
- ದುಗ್ಗಳ ಸದಾನಂದ.