ಮಡಿಕೇರಿ, ಫೆ. ೨೮: ಕೊಡಗು ಪುಟ್ಟ ಜಿಲ್ಲೆಯಾದರೂ ಈ ದೇಶಕ್ಕೆ ಕೊಡವ ಜನಾಂಗದ ಕೊಡುಗೆ ಅಪಾರವಾದದ್ದು. ಕೊಡವ ಸಾಹಿತ್ಯ-ಸಂಸ್ಕೃತಿ, ಭಾಷೆಯ ರಕ್ಷಣೆಗೆ ಪೂರಕವಾಗಿ ಕೊಡವ ಸಾಹಿತ್ಯ ಅಕಾಡೆಮಿಯು ಅಧ್ಯಕ್ಷ ಅಜ್ಜಿನಿಕಂಡ ಮಹೇಶ್ ನಾಚಯ್ಯ ನೇತೃತ್ವದಲ್ಲಿ ಕಾರ್ಯಕ್ರಮಗಳನ್ನು ಯಶಸ್ಸಾಗಿ ನಡೆಸುತ್ತಿದ್ದು, ಸರ್ವ ಸದಸ್ಯರ ಸಹಕಾರ ಎದ್ದು ಕಾಣುತ್ತಿದೆ. ಎಲ್ಲರೂ ಒಗ್ಗಟ್ಟಾಗಿ ಕೆಲಸ ಮಾಡಿದರೆ ಯಶಸ್ಸು ಖಂಡಿತಾ ಎಂದು ಶಾಸಕ, ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ ಅಜ್ಜಿಕುಟ್ಟಿರ ಎಸ್. ಪೊನ್ನಣ್ಣ ಹೇಳಿದರು.
ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಹಾಗೂ ಕೊಡವ ಸಮಾಜ ಕುಟ್ಟ ಇವರ ಜಂಟಿ ಆಶ್ರಯದಲ್ಲಿ ಆಯೋಜಿಸಿದ, “೨೦೨೬ನೇ ಸಾಲಿನ ಗೌರವ ಪ್ರಶಸ್ತಿ ಪ್ರದಾನ ಮತ್ತು “ಕೊಡವ ಸಾಹಿತ್ಯ-ಸಂಸ್ಕೃತಿರ ಅಂದೋಳ” ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಅವರು ಮಾತನಾಡಿದರು.
ಸರಕಾರವು ಸಾಹಿತ್ಯ, ಸಂಸ್ಕೃತಿ, ಭಾಷೆಯ ರಕ್ಷಣೆ ಹಾಗೂ ಬೆಳವಣಿಗೆಯ ಉದ್ದೇಶದಿಂದ ಅಕಾಡೆಮಿಗಳನ್ನು ಸ್ಥಾಪಿಸಿದ್ದು, ಅದರಂತೆ ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿಯಿಂದ ಉತ್ತಮ ಕಾರ್ಯಕ್ರಮಗಳು ನಡೆಯುತ್ತಿವೆ. ಕೊಡವ ಸಂಸ್ಕೃತಿ, ಸಂಪ್ರದಾಯ ಭಾಷೆ ಹಾಗೂ ಸಾಹಿತ್ಯದ ಏಳಿಗೆಗೆ ವಿವಿಧ ಸ್ಥಳಗಳಲ್ಲಿ ಇಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದರಿಂದ ಅನುಕೂಲವಾಗಲಿದೆ.
ಯುವಜನತೆಗೆ ನಮ್ಮ ಸಾಹಿತ್ಯ ಹಾಗೂ ಸಂಸ್ಕೃತಿಯನ್ನು ಪಾಲಿಸಲು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಇಂತಹ ಕಾರ್ಯಕ್ರಮಗಳು ಸಹಕಾರಿ. ಆಧುನಿಕ ಯುಗದೊಂದಿಗೆ ನಾವು ಹೊಂದಿಕೊAಡರೂ ಸಹ ನಮ್ಮ ಸಂಸ್ಕೃತಿಯನ್ನು ಕಾಪಾಡಿಕೊಳ್ಳುವುದು ಅತೀ ಅವಶ್ಯಕವಾಗಿದೆ ಎಂದರು.
ಅಕಾಡೆಮಿ ಅಧ್ಯಕ್ಷ ಅಜ್ಜಿನಿಕಂಡ ಮಹೇಶ್ ನಾಚಯ್ಯ ಮಾತನಾಡಿ, ೧೯ನೇ ಶತಮಾನದಲ್ಲಿ ಡಾ. ಕೊರವಂಡ ಅಪ್ಪಯ್ಯ ಕೊಡವ ಲಿಪಿಯನ್ನು ರಚಿಸಿದರು. ಅಪ್ಪನೆರವಂಡ ಅಪ್ಪಚ್ಚಕವಿ, ನಡಿಕೇರಿಯಂಡ ಚಿಣ್ಣಪ್ಪ, ಬಾಚಮಡ ಡಿ. ಗಣಪತಿ, ಐಚೆಟ್ಟಿರ ಮಾ ಮುತ್ತಣ್ಣ ಸೇರಿದಂತೆ ಹಲವರು ಅಂದಿನ ಕಾಲಘಟ್ಟದಲ್ಲಿ ಹಲವು ಕೊಡವ ಕವನ ಸಾಹಿತ್ಯ, ಕಥಾಸಾಹಿತ್ಯ, ಜನಪದ ಸಾಹಿತ್ಯವನ್ನು ರಚಿಸಿ ಕೊಡವ ಸಾಹಿತ್ಯ ಕ್ಷೇತ್ರವನ್ನು ಬೆಳೆಸುವಲ್ಲಿ ಕಾರಣೀಭೂತರಾದರು. ಅವರ ಸಾಹಿತ್ಯದಿಂದಾಗಿ ಇಂದು ೪ಐದನೇ ಪುಟಕ್ಕೆ
(ಮೊದಲ ಪುಟದಿಂದ)
ಕೊಡವ ಸಾಹಿತ್ಯ-ಸಂಸ್ಕೃತಿ ತನ್ನದೇ ಆದ ನೆಲೆಯನ್ನು ಕಂಡುಕೊAಡಿದ್ದು, ಇವರೆಲ್ಲರ ಪ್ರೇರಣೆಯಿಂದಾಗಿ ಆಧುನಿಕ ಬರಹಗಾರರು ಸಾಹಿತ್ಯ-ಸಂಸ್ಕೃತಿಯ ಏಳಿಗೆಯಲ್ಲಿ ತೊಡಗಿರುವುದು ಶ್ಲಾಘನೀಯ ಎಂದರು.
ಕೊಡವ ಸಾಹಿತ್ಯ, ಸಂಸ್ಕೃತಿ, ಸಮಾಜ ಸೇವೆ, ಜನಪದಗಳ ಏಳಿಗೆಯ ನಿಟ್ಟಿನಲ್ಲಿ ದುಡಿಯುತ್ತಿರುವ ಪ್ರತಿಯೋರ್ವರು ಕೊಡವ ಸಾಮಾಜಿಕ ನೆಲೆಯಲ್ಲಿ ಗೌರವಾನ್ವಿತರು. ಇವರುಗಳ ಸೇವೆ ಇನ್ನುಳಿದವರಿಗೆ ಪ್ರೇರಣಾಶಕ್ತಿಯಾಗಲಿ ಎಂದು ಆಶಿಸಿದರು.
ಇನ್ನೋರ್ವ ಮುಖ್ಯ ಅತಿಥಿ ವಿಧಾನ ಪರಿಷತ್ ಸದಸ್ಯ ಮಂಡೇಪAಡ ಸುಜಾ ಕುಶಾಲಪ್ಪ ಮಾತನಾಡಿ, ಕೊಡವರ ಸಾಹಿತ್ಯ, ಸಂಸ್ಕೃತಿಯು ವಿಶ್ವದಲ್ಲಿಯೇ ಮಾನ್ಯತೆ ಪಡೆದಿದೆ. ಇಂತಹ ಸಾಹಿತ್ಯ ಸಂಸ್ಕೃತಿಯನ್ನು ಉಳಿಸಿ ಬೆಳೆಸಲು ಕೊಡವ ಸಾಹಿತ್ಯ ಅಕಾಡೆಮಿ ಉತ್ತಮವಾದ ಕಾರ್ಯಕ್ರಮಗಳನ್ನು ನಡೆಸುತ್ತಾ ಬರುತ್ತಿದೆ. ಸರ್ವರೂ ಪ್ರೀತಿ ವಿಶ್ವಾಸದಿಂದ ಮುನ್ನಡೆಯುವ ಮೂಲಕ ಕೊಡವ ಸಾಹಿತ್ಯ-ಸಂಸ್ಕೃತಿಯನ್ನು ಬೆಳೆಸುವಂತಾಗಲಿ ಎಂದರು.
ಕುಟ್ಟ ಕೊಡವ ಸಮಾಜದ ಅಧ್ಯಕ್ಷ ಕಳ್ಳಿಚಂಡ ವಿಷ್ಣು ಕಾರ್ಯಪ್ಪ ಮಾತನಾಡಿ, ಕೊಡವ ಸಾಹಿತ್ಯ ಅಕಾಡೆಮಿಯಿಂದ ನಡೆಯುತ್ತಿರುವ ಕಾರ್ಯಕ್ರಮಗಳು ಅತ್ಯುತ್ತಮವಾಗಿದ್ದು, ಇದು ಹೀಗೆ ಮುಂದುವರಿಯಲಿ ಎಂದರು.
ವೇದಿಕೆಯಲ್ಲಿ ಜಿಲ್ಲಾ ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ತೀತಿರ ಧರ್ಮಜ ಉತ್ತಪ್ಪ, ವಿಧಾನ ಪರಿಷತ್ ಮಾಜಿ ಸದಸ್ಯೆ ಶಾಂತೆಯAಡ ವೀಣಾ ಅಚ್ಚಯ್ಯ, ಅಖಿಲ ಕೊಡವ ಸಮಾಜದ ಅಧ್ಯಕ್ಷ ಪರದಂಡ ಸುಬ್ರಮಣಿ, ಕುಟ್ಟ ಕೊಡವ ಸಮಾಜ ಜಾಗ ದಾನಿ ಮುಕ್ಕಾಟಿರ ರಾಜ ಮಂದಣ್ಣ ಇದ್ದರು.
ಕಾರ್ಯಕ್ರಮದಲ್ಲಿ ವೀರಾಜಪೇಟೆ ಕೊಡವ ಸಮಾಜ ಅಧ್ಯಕ್ಷ ಅಮ್ಮಣಿಚಂಡ ರವಿ ಉತ್ತಪ್ಪ, ಅಮ್ಮ ಕೊಡವ ಸಮಾಜ ಅಧ್ಯಕ್ಷ ಬಾನಂಡ ಪ್ರಥ್ಯು, ಪೊನ್ನಂಪೇಟೆ ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಕಾಳಿಮಡ ಪ್ರಶಾಂತ್, ಮೂರ್ನಾಡು ಕೊಡವ ಸಮಾಜ ಅಧ್ಯಕ್ಷ ತೇಲಪಂಡ ಸುಬ್ಬಯ್ಯ, ಅರೆಕಾಡು ಕೊಡವ ಅಸೋಸಿಯೇಶನ್ ಅಧ್ಯಕ್ಷ ಕುಕ್ಕೆರ ಜಯ ಚಿಣ್ಣಪ್ಪ, ಕೊಡವ ಕೆಂಬಟ್ಟಿ ಸಮಾಜ ಅಧ್ಯಕ್ಷ ಬಿಲ್ಲಿರಿಕುಟ್ಟಡ ಪ್ರಭು ಅಯ್ಯಪ್ಪ, ಶ್ರೀ ಕನ್ನಿ ಕಾವೇರಿ ಟ್ರಸ್ಟ್ ಅಧ್ಯಕ್ಷ ಮುಲ್ಲೇಂಗಡ ಶಂಕರಿ ಪೊನ್ನಪ್ಪ, ಕಾಪಾಳ ಸಮಾಜ ಅಧ್ಯಕ್ಷ ಕಾಪಾಳಡ ಟಿ ಪೂಣಚ್ಚ, ಬಣ್ಣ ಸಮಾಜದ ಅಧ್ಯಕ್ಷ ಬೀಕಚಂಡ ಪುಟ್ಟ ಬೆಳ್ಯಪ್ಪ, ಹುದಿಕೇರಿ ಕೊಡವ ಸಮಾಜ ಅಧ್ಯಕ್ಷ ಮೀದೇರಿರ ಎ. ಸವಿನ್, ಟಿ.ಶೆಟ್ಟಿಗೇರಿ ಸಮಾಜ ಅಧ್ಯಕ್ಷ ಕೈಬುಲಿರ ಹರೀಶ್ ಹಾಗೂ ಅಕಾಡೆಮಿಯ ಸದಸ್ಯರಾದ ಪುತ್ತರಿರ ಪಪ್ಪು ತಿಮ್ಮಯ್ಯ, ಕಂಬೆಯAಡ ಡೀನ ಬೋಜಣ್ಣ,, ಕೊಂಡಿಜಮ್ಮನ ಬಾಲಕೃಷ್ಣ, ಚೊಟ್ಟೆಯಂಡ ಸಂಜು ಕಾವೇರಪ್ಪ, ನಾಪಂಡ ಸಿ. ಗಣೇಶ್, ಪಾನಿಕುಟ್ಟಿರ ಕೆ. ಕುಟ್ಟಪ್ಪ, ಪೊನ್ನಿರ ಯು. ಗಗನ್, ಕುಡಿಯರ ಕೆ. ಕಾವೇರಪ್ಪ, ನಾಯಂದಿರ ಆರ್. ಶಿವಾಜಿ, ಚೆಪ್ಪುಡಿರ ಎಸ್. ಉತ್ತಪ್ಪ, ೨೧ ಕೊಡವ ಭಾಷಿಕ ಸಮುದಾಯದ ಪ್ರಮುಖರು, ಕಳ್ಳಿಚಂಡ ಶಾಲಿನಿ ಕಾರ್ಯಪ್ಪ, ಮುಕ್ಕಾಟಿರ ಅರ್ಚನ, ಪಲ್ವಿನ್ ಪೂಣಚ್ಚ, ತೀತಿರ ಪ್ರಭು, ಚೆಯ್ಯಂಡ ಸತ್ಯ ಗಣಪತಿ, ಕಾಡ್ಯಮಾಡ ಕುಸುಮ ಹಾಗೂ ಪ್ರಮುಖರು ಉಪಸ್ಥಿತರಿದ್ದರು.
ಕುಟ್ಟ ಬಸ್ಸು ನಿಲ್ದಾಣದಿಂದ ಸಾಂಸ್ಕೃತಿಕ ಮೆರವಣಿಗೆಯು ಎತ್ತು ತೆರೆ, ಕಾಪಾಳ ಕಳಿ, ದುಡಿಕೊಟ್ಟ್ ಪಾಟ್, ತಳಿಯತಕ್ಕಿ ಬೊಳ್‌ಚ, ಕೊಂಬು-ಕೊಟ್ಟ್ ವಾಲಗದೊಂದಿಗೆ ಕುಟ್ಟ ಕೊಡವ ಸಮಾಜದವರೆಗೆ ನಡೆಯಿತು. ಕುಟ್ಟ ಕೊಡವ ಸಮಾಜ ಅಧ್ಯಕ್ಷ ಕಳ್ಳಿಚಂಡ ವಿಷ್ಣು ಕಾರ್ಯಪ್ಪ, ಮುಕ್ಕಾಟಿರ ರಾಜ ಮಂದಣ್ಣ ಉದ್ಘಾಟಿಸಿದರು.
ಕೊಡವ ಸಾಹಿತ್ಯ ಅಕಾಡೆಮಿ ವತಿಯಿಂದ ೩ನೇ ಕೊಡವ ಪುಸ್ತಕ ಪತ್ತಾಯವನ್ನು ಕುಟ್ಟ ಕೊಡವ ಸಮಾಜದಲ್ಲಿ ಸ್ಥಾಪಿಸಲಾಯಿತು. ಈ ವೇಳೆ ಪತ್ತಾಯ ನೋಂದಣಿ ಮೊತ್ತ ಹತ್ತು ಸಾವಿರ ರೂಪಾಯಿಯ ಚೆಕ್ಕನ್ನು ಕುಟ್ಟ ಕೊಡವ ಸಮಾಜದ ವತಿಯಿಂದ ಕೊಡವ ಸಾಹಿತ್ಯ ಅಕಾಡೆಮಿ ಅಧ್ಯಕ್ಷರಿಗೆ ಹಸ್ತಾಂತರಿಸಲಾಯಿತು.
ಕಾರ್ಯಕ್ರಮದಲ್ಲಿ ಕೊಡವ ಅಕಾಡೆಮಿಯ ಮೂರು ತಿಂಗಳ ಪತ್ರಿಕೆ ಕೊಡವೋಲೆ ಹಾಗೂ ಕಂಬೆಯAಡ ಅಕ್ಷರ ಬೋಜಣ್ಣ ಬರೆದಿರುವ “ಕೌಂಟರಿAಗ್ ಕೊಲನಿಯಲ್ ನರೇಟಿವ್ಸ್ ಥ್ರೂ ಪಟ್ಟೋಲೆ ಪಳಮೆ” ಪುಸ್ತಕವನ್ನು ಮುಖ್ಯ ಅತಿಥಿಗಳು ಬಿಡುಗಡೆಗೊಳಿಸಿದರು.
ತೀತಮಾಡ ಅರ್ಜುನ್ ದೇವಯ್ಯ ಹಾಗೂ ತೀತಿರ ರೇಖ ವಸಂತ್ ವಿಚಾರ ಮಂಡನೆ ಮಾಡಿದರು. ಕವಿಗಳಾದ ವೈಲೇಶ್ ಪಿಎಸ್, ಪುತ್ತಾಮನೆ ವಿದ್ಯಾ ಜಗದೀಶ್, ಉಳುವಂಗಡ ಕಾವೇರಿ ಉದಯ ಹಾಗೂ ಅಜ್ಜಿಕುಟ್ಟಿರ ಭವ್ಯ ಬೋಪಣ್ಣ ಕವನ ವಾಚಿಸಿದರು.
ಗೌರವ ಪ್ರಶಸ್ತಿ ಪ್ರಧಾನದಲ್ಲಿ ಮಲ್ಲೇಂಗಡ ದಾದ ಬೆಳ್ಯಪ್ಪ, ಚೆಪ್ಪುಡಿರ ತಿಲಕ್ ಸುಬ್ಬಯ್ಯ, ಉದಿಯಂಡ ರೋಶನ್ ಸೋಮಣ್ಣ, ತೀತಮಾಡ ಅರ್ಜುನ್ ದೇವಯ್ಯ, ಚೆನಿಯಪಂಡ ಮನು ಮಂದಣ್ಣ, ಚೊಟ್ಟಿಯಂಡ ಅಪ್ಪಾಜಿ, ಕಣಿಯರ ನಾಣಯ್ಯ, ಚಮ್ಮಣಮಡ ವಾಣಿ ರಾಘವೇಂದ್ರ, ಕುಡಿಯಡ ಕೆ. ಚಿಣ್ಣಪ್ಪ, ಸುಳ್ಳಿಮಡ ಗೌರಿ ನಂಜಪ್ಪ, ಚೋಕಂಡ ಸಂಜು ಸುಬ್ಬಯ್ಯ, ಕೊರಕುಟ್ಟಿರ ಸರ ಚಂಗಪ್ಪ, ಐಮಂಡ ರೂಪೇಶ್ ನಾಣಯ್ಯ, ಕಾಳೆಕುಟ್ಟಡ ಮುತ್ತಣ್ಣ ಇವರುಗಳಿಗೆ ಪ್ರಶಸ್ತಿ ನೀಡಿ ಸನ್ಮಾನಿಸಿ ಗೌರವಿಸಲಾಯಿತು. ಅಕಾಡೆಮಿ ವತಿಯಿಂದ ೧೮ ಸಂಘ-ಸAಸ್ಥೆ, ಸಮಾಜ, ಐನ್‌ಮನೆಗಳಿಗೆ ಒಟ್ಟು ೫೦ ದುಡಿ ನೀಡಲಾಯಿತು.