ಚೆಯ್ಯಂಡಾಣೆ, ಫೆ. ೨೮: ಚೆಯ್ಯಂಡಾಣೆ ಹಿಂದೂ ಸಂಗಮ ಆಯೋಜನ ಸಮಿತಿಯ ವತಿಯಿಂದ ಹಿಂದೂ ಸಂಗಮ ಬೃಹತ್ ಶೋಭಾಯಾತ್ರೆ ನಡೆಯಿತು.
ಚೆಯ್ಯಂಡಾಣೆಯ ಚೇಲಾವರ ಸಂಪರ್ಕ ಕಲ್ಪಿಸುವ ಮುಖ್ಯ ರಸ್ತೆಯಲ್ಲಿ ಶೋಭಾಯಾತ್ರೆಯ ಮೆರವಣಿಗೆಗೆ ಹಿಂದೂ ಸಂಗಮದ ಗಣ್ಯರು ಚಾಲನೆ ನೀಡಿದರು.
ಚೆಯ್ಯಂಡಾಣೆ ಮುಖ್ಯ ಪಟ್ಟಣದ ಮೂಲಕ ಸಂಚರಿಸಿದ ಶೋಭಾಯಾತ್ರೆ ಮೆರವಣಿಗೆ ಲಕ್ಷ್ಮಿ ಮಹಿಳಾ ಸಮಾಜ ಸಮೀಪ ಸಮಾಪ್ತಿಗೊಂಡಿತು. ವಿವಿಧ ವೇಷಧಾರಿ ಮಕ್ಕಳು, ಭಾರತಾಂಭೆ ಭಾವಚಿತ್ರ ಒಳಗೊಂಡ ವಾಹನದೊಂದಿಗೆ ಕಲಶ ಹೊತ್ತ ಮಹಿಳೆಯರು, ಕೊಡಗಿನ ವಾಲಗ, ದೇಶ ಭಕ್ತಿಯನ್ನು ಸಾರುವ ಪೋಸ್ಟರ್ಗಳು ವಿವಿಧ ಕಲಾ ತಂಡಗಳು ಮೆರವಣಿಗೆಯಲ್ಲಿ ಭಾಗಿಯಾಗಿ ಮೆರುಗನ್ನು ಹೆಚ್ಚಿಸಿದರು. ಅಧಿಕ ಸಂಖ್ಯೆಯಲ್ಲಿ ಹಿಂದೂ ಬಾಂಧವರು, ಪುರುಷರು, ಮಹಿಳೆಯರಾದಿಯಾಗಿ ಕೇಸರಿ ಶಲ್ಯ ಧರಿಸಿ, ಭಾವುಟ ಹಿಡಿದು ಮೆರವಣಿಗೆಯಲ್ಲಿ ಸಾಗಿಬಂದರು.
ಮೆರವಣಿಗೆ ಉದ್ದಕ್ಕೂ ಮಕ್ಕಳಿಂದ ಸಾಂಪ್ರದಾಯಿಕ ಭಜನೆ, ನೃತ್ಯ ಪ್ರದರ್ಶನ ನಡೆಯಿತು. ಪವನ್ ತೋಟಂಬೈಲು ಅವರಿಂದ ಜೈಕಾರ ಮೊಳಗಿತು. ವೇದಿಕೆ ಕಾರ್ಯಕ್ರಮವನ್ನು ದೀಪ ಬೆಳಗಿಸುವ ಮೂಲಕ ಹಿಂದೂ ಸಮಾಜದ ಗಣ್ಯರು ಉದ್ಘಾಟಿಸಿದರು.
ಚೆಯ್ಯಂಡಾಣೆ ಹಿಂದೂ ಸಂಗಮ ಮಂಡಳ ಅಧ್ಯಕ್ಷ ಪೊಕ್ಕುಳಂಡ್ರ ದನೋಜ್ (ದಿವ್ಯ) ಮಾತನಾಡಿ, ಮುಂದಿನ ಯುವ ಪೀಳಿಗೆಗೆ ಧರ್ಮ ಮತ್ತು ಸಂಸ್ಕೃತಿ ಮಹತ್ವ ಅರಿವು ಒಗ್ಗೂಡಿಸುವ ಉದ್ದೇಶದಿಂದ ಈ ಹಿಂದೂ ಸಂಗಮ ಕಾರ್ಯಕ್ರಮ ಆಯೋಜಿಸಲಾಗಿದೆ.
ನಿನ್ನೆ ನಾಪೋಕ್ಲಿನಲ್ಲಿ ನಡೆದ ಘಟನೆ ವಿಷಾದಕರ ಎಂದರು. ಗ್ರಾಮೀಣ ಭಾಗದ ಹೆಣ್ಣು ಮಕ್ಕಳಲ್ಲಿ ಅವರ ಬದುಕಿನ ಬಗ್ಗೆ ಅರಿವು ಮೂಡಿಸಬೇಕೆಂದು ಸ್ಥಳೀಯ ಸಮಾಜ ಸೇವಕಿ ಹಾಗೂ ವಕೀಲೆ ಬಾಚಮಂಡ ಅನುಪಮಾ ಕಿಶೋರ್ ಹೇಳಿದರು.
ಮುಖ್ಯ ಅತಿಥಿಗಳಾಗಿ ರಾಷ್ಟಿçÃಯ ಸ್ವಯಂಸೇವಕ ಸಂಘದ ಗಣ್ಯರು ವಿಶ್ವ ಹಿಂದೂ ಪರಿಷತ್ ದಕ್ಷಿಣ ಪ್ರಾಂತ ಸಹಕಾರ್ಯದರ್ಶಿ ಶರಣ್ ಪಂಪ್ ವೆಲ್ ದಿಕ್ಸೂಚಿ ಭಾಷಣ ಮಾಡಿ ರಾಷ್ಟಿçÃಯ ಸ್ವಯಂ ಸೇವಕ ಸಂಘ ಇರುವುದೇ ಈ ದೇಶಕ್ಕೋಸ್ಕರ, ಈ ದೇಶದ ಹಿಂದೂ ಸಮಾಜಕ್ಕೋಸ್ಕರ, ದೇಶಾದ್ಯಂತ ಹಿಂದೂಗಳು ಹಳ್ಳಿಗಳಲ್ಲಿ ಗ್ರಾಮಗಳಲ್ಲಿ ನಗರಗಳಲ್ಲಿ ಈ ರೀತಿಯ ಹಿಂದೂ ಸಂಗಮದ ಮುಖಾಂತರ ಆ ಭಾಗದ ಹಿಂದೂಗಳನ್ನು ಸೇರಿಸಿಕೊಂಡು ಹಿಂದೂ ಧರ್ಮ, ನಮ್ಮ ಸಂಸ್ಕೃತಿ, ಸಾಂಪ್ರದಾಯ, ನಮ್ಮ ನಾಗರಿಕತೆ, ಪರಂಪರೆಯನ್ನು ಉಳಿಸಲು ಈ ತರದ ಕಾರ್ಯಕ್ರಮ ನಡೆಸಲಾಗುತ್ತಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ನಿವೃತ್ತ ಕ್ಯಾಪ್ಟನ್ ಬಿದ್ದಂಡ ನಾಣಿ ನಾಣಯ್ಯ ವಹಿಸಿ ಮಾತನಾಡಿ, ನಮ್ಮ ಅಸ್ಥಿತ್ವಕ್ಕೆ ಧಕ್ಕೆ ಬಂದಾಗ ನಾವು ಪ್ರತಿಭಟಿಸಬೇಕು ಎಂದರು.
ಈ ಸಂದರ್ಭ ಮಾಜಿ ಶಾಸಕ ಕೆ.ಜಿ. ಬೋಪಯ್ಯ, ತಳೂರು ಕಿಶೋರ್ ಕುಮಾರ್, ವಿಶ್ವ ಹಿಂದೂ ಪರಿಷತ್ ಜಿಲ್ಲಾಧ್ಯಕ್ಷ ಪುದಿಯೊಕ್ಕಡ ರಮೇಶ್, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಕೌಶಿ ಕಾವೇರಮ್ಮ, ಬಿದ್ದಂಡ ರಾಜೇಶ್ ಅಚ್ಚಯ್ಯ, ಚೇನಂಡ ಸಂಪತ್, ಐತಿಚಂಡ ಭೀಮಯ್ಯ, ಬೆಳಿಯಂಡ್ರ ಹರಿಪ್ರಸಾದ್, ಸಜನ್ ನಂಜುAಡ, ಸೇರಿದಂತೆ ಜನಪ್ರತಿನಿಧಿಗಳು, ಸಂಘ ಸಂಸ್ಥೆ ಪ್ರಮುಖರು, ಹಿಂದೂ ಸಂಗಮ ಮಂಡಲದ ಪದಾಧಿಕಾರಿಗಳು, ಕಾರ್ಯಕರ್ತರು, ಮತ್ತಿತರರು ಇದ್ದರು.
ಲೀಲಾವತಿ ಪ್ರಾರ್ಥಿಸಿ, ಬೆಳಿಯಂಡ್ರ ಚಂದ್ರಶೇಖರ್ ನಿರೂಪಿಸಿ, ತೋಟಂಬೈಲು ಅನಂತ್ ಕುಮಾರ್ ಸ್ವಾಗತಿಸಿ, ಬೇಪಡಿಯಂಡ ವಿಲಿನ್ ವಂದಿಸಿದರು. ಡಿವೈಎಸ್ಪಿ ಮಹೇಶ್ ಕುಮಾರ್ ನೇತೃತ್ವದಲ್ಲಿ ಮಡಿಕೇರಿ ನಗರ ವೃತ್ತ ನಿರೀಕ್ಷಕ ಪಿ.ಕೆ. ರಾಜು, ನಾಪೋಕ್ಲು, ಶ್ರೀಮಂಗಲ ಠಾಣಾಧಿಕಾರಿ ರವೀಂದ್ರ ಹಾಗೂ ವೀರಾಜಪೇಟೆ ಪೊಲೀಸ್ ಠಾಣಾ ಪೊಲೀಸರಿಂದ ಬಿಗಿ ಪೊಲೀಸ್ ಬಂದೋಬಸ್ತು ಏರ್ಪಡಿಸಲಾಗಿತ್ತು.