ಶನಿವಾರಸಂತೆ ; ಫೆ. ೨೮ ಸಮೀಪದ ಹಂಡ್ಲಿ ಮಂಡಲ,ಹಿAದೂ ಸಂಗಮ ಆಯೋಜನಾ ಸಮಿತಿ ವತಿಯಿಂದ ಶನಿವಾರ ಹಮ್ಮಿಕೊಂಡಿದ್ದ ಹಿಂದೂ ಸಂಗಮ “ಬೃಹತ್ ಶೋಭಾ ಯಾತ್ರೆ’’ ವಿಜೃಂಭಣೆಯಿAದ ಜರುಗಿತು. ಹಂಡ್ಲಿ ಗ್ರಾಮವನ್ನು ಕೇಸರಿ ಧ್ವಜ ಹಾಗೂ ಬಂಟಿAಗ್ಸ್ನಿAದ ಅಲಂಕರಿಸಲಾಗಿದ್ದು ಕೇಸರಿಮಯವಾಗಿ ಕಂಗೊಳಿಸುತ್ತಿತ್ತು.

ಬೆಳಿಗ್ಗೆ ಗುಡುಗಳಲೆ ಗ್ರಾಮದ ಶ್ರೀ ಬಸವೇಶ್ವರ ದೇವಸ್ಥಾನದಿಂದ ಬೃಹತ್ ಶೋಭಾ ಯಾತ್ರೆಗೆ ಚಾಲನೆ ನೀಡಲಾಯಿತು.ಕಳಸ ಹೊತ್ತ ಮಹಿಳೆಯರು, ವೀರಗಾಸೆ, ನಾಸಿಕ್ ಬ್ಯಾಂಡ್ ಮತ್ತು ಚಂಡೆವಾದ್ಯದೊAದಿಗೆ ನೂರಾರು ಮಂದಿ ಹಿಂದೂ ಬಾಂಧವರು, ಕಾರ್ಯಕರ್ತರು ಪಾಲ್ಗೊಂಡು ಸಾಗಿದ ಮೆರವಣಿಗೆ ಹಂಡ್ಲಿ ಗ್ರಾಮವನ್ನು ತಲುಪಿತು.

ಮಧ್ಯಾಹ್ನ ೧೨ ಗಂಟೆಗೆ ಗ್ರಾಮದ ಸಹಕಾರ ಸಂಘದ ಸಭಾಂಗಣದಲ್ಲಿ ಸಭಾ ಕಾರ್ಯಕ್ರಮ ಆರಂಭವಾಯಿತು.ಕಾರ್ಯಕ್ರಮ ಉದ್ಘಾಟಿಸಿದ ಅಂಕನಹಳ್ಳಿ ಶ್ರೀತಪೋಕ್ಷೇತ್ರ ಮನೆಹಳ್ಳಿ ಮಠದ ಮಹಾಂತ ಶಿವಲಿಂಗ ಸ್ವಾಮೀಜಿ ಆಶೀರ್ವಚನ ನೀಡುತ್ತಾ, ಹಿಂದೂ ಧರ್ಮ ನಿಂತಿರುವುದು ಸಂಸ್ಕಾರದ ಮೇಲೆ. ಘೋಷ ವಾಕ್ಯ ಕೂಗುವುದೇ ಕರ್ತವ್ಯವಲ್ಲ, ಅದೊಂದು ಧ್ಯೋತಕವಾಗಿದೆ. ನಿತ್ಯ ಜೀವನದಲ್ಲಿ ಬೆಳಿಗ್ಗೆ ಎದ್ದು ಸ್ನಾನ, ಪೂಜೆ, ಜಪತಪ ಮಾಡುವುದು, ಸತ್ಯ ನುಡಿಯುವುದು, ದೇವಸ್ಥಾನಗಳಿಗೆ ಜಾಗೃತ ಸಭೆಗಳಿಗೆ ಹೋಗುವುದು. ಅಲ್ಲಿ ಧರ್ಮದ ಆಚಾರ-ವಿಚಾರಗಳನ್ನು ತಿಳಿದುಕೊಳ್ಳಬೇಕು. ರಾಯ ಸ್ವಯಂ ಸೇವಾ ಸಂಘದ ಜನ್ಮ ಶತಮಾನೋತ್ಸವದ ಸ್ಮರಣೆಯಲ್ಲಿ ಮಂಡಲ ಜಾಗೃತ ಸಮಾವೇಶವನ್ನು ಹಮ್ಮಿಕೊಂಡಿದೆ.ಸAಘಟನೆಯಲ್ಲಿ ಒಗ್ಗಟ್ಟು ಮುಖ್ಯವಾಗಿದೆ ಎಂದರು.

ಸುಳ್ಯದ ಸಾಮಾಜಿಕ ಕಾರ್ಯಕರ್ತ ನವೀನ್ ಸುಬ್ರಹ್ಮಣ್ಯರವರು ದಿಕ್ಸೂಚಿ ಭಾಷಣ ಮಾಡುತ್ತಾ, ಸಮಾಜ ಸುಧಾರಕರಾದ ಗುರು ಬ್ರಹ್ಮನಾರಾಯಣ ಹಿಂದೂ ಸಮಾಜಕ್ಕೆ ಕೊಟ್ಟ ವಿಶ್ವಾಸ, ೧೨ ನೇ ಶತಮಾನದ ಬಸವಣ್ಣನವರು ಜಾತೀಯ ಮೇಲು-ಕೀಳು ಭಾವನೆಯನ್ನು ಅಳಿಸಿ ಸಮಾನತೆಯ ಚಿಂತನೆಯನ್ನು ಕೊಟ್ಟು ಕಾಯಕದಿಂದ ಪರಿಕಲ್ಪನೆಯೊಂದಿಗೆ ಪ್ರಜಾಪ್ರಭುತ್ವ ಕಲ್ಪನೆಯನ್ನು ಅನುಭವ ಮಂಟಪದ ಮೂಲಕ ಕಲಿಸಿಕೊಟ್ಟರು. ಪೂರ್ವಜರ ಚಿಂತನೆಯಿAದ ಸಂಸ್ಕೃತಿಯನ್ನು ಜೀವಂತವಾಗಿಟ್ಟುಕೊಳ್ಳಲು ಸಾಧ್ಯವಾಗಿದೆ ಎಂದರು.

ಹಿAದೂ ಸಂಗಮ ತಾಲೂಕು ಅಧ್ಯಕ್ಷ ಕೆ.ಟಿ. ಸನತ್, ಹಂಡ್ಲಿ ಮಂಡಲ ಹಿಂದೂ ಸಂಗಮ ಆಯೋಜನ ಸಮಿತಿ ಗೌರವ ಅಧ್ಯಕ್ಷ ಶಾಂತಮಲ್ಲಯ್ಯ, ಉಪಾಧ್ಯಕ್ಷ ಮಣಿಕಂಠ, ಕಾರ್ಯದರ್ಶಿ ಪುನೀತ್ ತಾಳೂರು, ನಿರಂಜನ್, ಶಿವಕುಮಾರ್, ಸಂದೀಪ್, ಹೇಮಚಂದ್ರ, ದಿಲೀಪ್, ನಾಗೇಶ್, ಎಚ್.ಮನು, ಜಗದೀಶ್, ಹರೀಶ್, ಇತರ ಪದಾಧಿಕಾರಿಗಳು ಹಾಜರಿದ್ದರು. ಮೆರವಣಿಗೆ ಹಾಗೂ ಸಭಾ ಕಾರ್ಯಕ್ರಮದಲ್ಲಿ ಮಹಿಳೆಯರು ಅಧಿಕ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು. ಪುನೀತ್ ತಾಳೂರು ಸ್ವಾಗತಿಸಿ, ಎಚ್.ಮನು ವಂದಿಸಿದರು. ಹೇಮಚಂದ್ರ ನಿರೂಪಿಸಿದರು.