ಟೆಹ್‌ರಾನ್, ಫೆ. ೨೮: ಇರಾನ್ ಮತ್ತು ಇಸ್ರೇಲ್ ನಡುವೆ ಯುದ್ಧ ಆರಂಭವಾಗಿದ್ದು, ಅಮೇರಿಕಾ ಎಚ್ಚರಿಕೆ ಬೆನ್ನಲ್ಲೇ ಇಸ್ರೇಲ್-ಅಮೇರಿಕಾ ಇರಾನ್ ಮೇಲೆ ಜಂಟಿ ಕ್ಷಿಪಣಿ ದಾಳಿ ಮಾಡಿವೆ. ಸುಮಾರು ೮೫ ವಿದ್ಯಾರ್ಥಿನಿಯರು ಸಾವಿಗೀಡಾಗಿರುವುದಾಗಿ ವರದಿಯಾಗಿದೆ. ಇರಾನ್‌ನ ರಾಜಧಾನಿ ಟೆಹ್ರಾನ್ ಮೇಲೆ ಇಸ್ರೇಲ್-ಅಮೇರಿಕಾ ಶನಿವಾರ ಭೀಕರ ಕ್ಷಿಪಣಿ ದಾಳಿ ಆರಂಭಿಸಿವೆ.
ಇರಾನ್‌ನ ಸರ್ವೋಚ್ಚ ನಾಯಕ ಅಲಿ ಖಮೇನಿ ಹಾಗೂ ಅಧ್ಯಕ್ಷ ಮಸೂದ್ ಪೆಜೆಶ್ಕಿಯಾನ್ ಭವನವನ್ನು ಗುರಿಯಾಗಿಸಿ ಈ ದಾಳಿ ನಡೆದಿದ್ದು, ಟೆಹರಾನ್‌ನ ಹಲವೆಡೆ ಭಾರಿ ಸದ್ದಿನೊಂದಿಗೆ ಸರಣಿ ಸ್ಫೋಟ ಸಂಭವಿಸಿವೆ. ಧಾಳಿಯಲ್ಲಿ ಇರಾನ್‌ನ ಮಿನಾಬ್ ನಗರದ ಬಾಲಕಿಯರ ಶಾಲೆಯ ಸುಮಾರು ೮೫ ಮಂದಿ ಇರಾನ್‌ನ ವಿದ್ಯಾರ್ಥಿನಿಯರು ಸಾವಿಗೀಡಾಗಿರುವುದಾಗಿ ತಿಳಿದುಬಂದಿದೆ.
ಕ್ಷಿಪಣಿ ದಾಳಿ, ಸರಣಿ ಸ್ಫೋಟದಿಂದ ಇರಾನ್‌ನ ಜನತೆ ತತ್ತರಿಸಿದ್ದಾರೆ. ಇರಾನ್ ಸೇನೆ ದಾಳಿ ನಡೆಸುವ ಸಾಧ್ಯತೆ ಹಿನ್ನೆಲೆ ಮುನ್ನೆಚ್ಚರಿಕಾ ಕ್ರಮವಾಗಿ ಇರಾನ್ ಮೇಲೆ ದಾಳಿ ನಡೆಸಿದ್ದೇವೆ ಎಂದು ಇಸ್ರೇಲ್ ಪ್ರಧಾನಿ ನೆತನ್ಯಾಹು ಸ್ಪಷ್ಟನೆ ನೀಡಿದ್ದಾರೆ.
ಅಮೇರಿಕಾದ ಸಹಯೋಗದಲ್ಲಿ ಹಲವು ತಿಂಗಳುಗಳ ಯೋಜನೆಯಂತೆ ನಡೆದ ಈ ದಾಳಿಯಿಂದ ಅಮೇರಿಕಾ-ಇರಾನ್ ರಾಜತಾಂತ್ರಿಕ ಮಾತುಕತೆಗಳು ಸ್ಥಗಿತಗೊಳ್ಳುವ ಸಾಧ್ಯತೆಯಿದೆ.
ಪಶ್ಚಿಮ ಏಷ್ಯಾದಲ್ಲಿ ಯುದ್ಧದ ಭೀತಿ ದಟ್ಟವಾಗಿದ್ದು, ಶನಿವಾರ ಮುಂಜಾನೆ ಇಸ್ರೇಲ್ ಹಾಗೂ ಅಮೇರಿಕಾ ರಕ್ಷಣಾ ಪಡೆಗಳು ಇರಾನ್ ವಿರುದ್ಧ "ಮುನ್ನೆಚ್ಚರಿಕಾ ದಾಳಿ" ನಡೆಸಿವೆ ಎಂದು ಇಸ್ರೇಲ್ ರಕ್ಷಣಾ ಸಚಿವ ಇಸ್ರೇಲ್ ಕಾಟ್ಜ್ ಅಧಿಕೃತವಾಗಿ ಘೋಷಿಸಿದ್ದಾರೆ. ಇರಾನ್ ತನ್ನ ಮೇಲೆ ದಾಳಿ ನಡೆಸಲು ಸಂಚು ರೂಪಿಸಿದೆ ಎಂಬ ಗುಪ್ತಚರ ಮಾಹಿತಿ ಆಧರಿಸಿ ಈ ಕ್ಷಿಪಣಿ ದಾಳಿ ನಡೆಸಿವೆ. ಇರಾನ್‌ನ ಪ್ರಮುಖ ಮಿಲಿಟರಿ ನೆಲೆಗಳನ್ನು ಗುರಿಯಾಗಿಸಿಕೊಂಡು ಈ ಕಾರ್ಯಾಚರಣೆ ನಡೆಸಿರುವುದಾಗಿ ತಿಳಿಸಿದ್ದಾರೆ.
ಸದ್ಯ ಇಸ್ರೇಲ್ ಸರ್ಕಾರವು ದೇಶಾದ್ಯಂತ 'ಸ್ಟೇಟ್ ಆಫ್ ಎಮರ್ಜೆನ್ಸಿ' (ತುರ್ತು ಪರಿಸ್ಥಿತಿ) ಘೋಷಿಸಿದ್ದು, ಇರಾನ್ ಯಾವುದೇ ಕ್ಷಣದಲ್ಲಿ ಇಸ್ರೇಲ್ ಮೇಲೆ ಡ್ರೋನ್ ಮತ್ತು ಬ್ಯಾಲಿಸ್ಟಿಕ್ ಕ್ಷಿಪಣಿಗಳ ಮೂಲಕ ತಿರುಗೇಟು ನೀಡಬಹುದು ಎಂಬ ಆತಂಕದ ಹಿನ್ನೆಲೆಯಲ್ಲಿ ಈ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳಲಾಗಿದೆ
ಇಸ್ರೇಲ್ ಸಕಲ ಸಿದ್ಧತೆ
ಅಂತೆಯೇ ಇರಾನ್‌ನ ಸಂಭವನೀಯ ಪ್ರತಿದಾಳಿಯನ್ನು ಎದುರಿಸಲು ಇಸ್ರೇಲ್‌ನ 'ಐರನ್ ಡೋಮ್' ಸೇರಿದಂತೆ ಎಲ್ಲ ವಾಯು ರಕ್ಷಣಾ ವ್ಯವಸ್ಥೆಗಳನ್ನು ಸನ್ನದ್ಧ ಸ್ಥಿತಿಯಲ್ಲಿ ಇರಿಸಲಾಗಿದೆ. ನಾಗರಿಕರಿಗೆ ಸುರಕ್ಷಿತ ಸ್ಥಳಗಳಲ್ಲಿ ಇರುವಂತೆ ಸೂಚನೆ ನೀಡಲಾಗಿದೆ. ಈ ಬೆಳವಣಿಗೆಯಿಂದಾಗಿ ಮಧ್ಯಪ್ರಾಚ್ಯದಲ್ಲಿ ಪೂರ್ಣ ಪ್ರಮಾಣದ ಯುದ್ಧ ಆರಂಭವಾಗುವ ಲಕ್ಷಣಗಳು ಕಾಣಿಸುತ್ತಿದೆ.
ಇಸ್ರೇಲ್‌ನಲ್ಲಿ ದೇಶಾದ್ಯಂತ ತುರ್ತು ಪರಿಸ್ಥಿತಿ ಘೋಷಣೆ ಮಾಡಲಾಗಿದ್ದು, ತುರ್ತುಸೇವೆ ಹೊರತುಪಡಿಸಿ ಉಳಿದ ಸೇವೆಗಳಿಗೆ ನಿರ್ಬಂಧ ವಿಧಿಸಲಾಗಿದೆ. ತನ್ನ ವಾಯುಪ್ರದೇಶದಲ್ಲಿ ವಿಮಾನ ಹಾರಾಟವನ್ನೂ ಇಸ್ರೇಲ್ ನಿರ್ಬಂಧಿಸಿದೆ.
ಇನ್ನು ಇಸ್ರೇಲ್ - ಅಮೇರಿಕಾ ನಡೆಸಿದ ದಾಳಿ ವೇಳೆ ಇರಾನ್‌ನ ಸರ್ವೋಚ್ಚ ನಾಯಕ ಅಲಿ ಖಮೇನಿ ತೇಹ್ರಾನ್‌ನಲ್ಲಿ ಇಲ್ಲ ಎಂದು ವರದಿಯಾಗಿದೆ. ಅಮೇರಿಕಾ ಅಧಿಕಾರಿಗಳು ನ್ಯೂಯಾರ್ಕ್ ಟೈಮ್ಸ್ ಮತ್ತು ರಾಯಟರ್ಸ್ಗೆ ನೀಡಿರುವ ಮಾಹಿತಿಯ ಪ್ರಕಾರ, ಅವರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ.
ಆಪರೇಷನ್ ಶೀಲ್ಡ್ ಆಫ್ ಜುದಾ
ಪ್ರಾಥಮಿಕವಾಗಿ ಇರಾನ್ ಮೇಲಿನ ದಾಳಿ ಇಸ್ರೇಲ್ ನಡೆಸಿದೆಯಾದರೂ ಇದು ಅಮೆರಿಕ ಮತ್ತು ಇಸ್ರೇಲ್ ಜಂಟಿ ದಾಳಿಯಾಗಿದೆ. ಶನಿವಾರ ಇರಾನ್ ಮೇಲೆ ಅಮೇರಿಕಾ, ಇಸ್ರೇಲ್ ಜಂಟಿಯಾಗಿ ಆಪರೇಷನ್ ‘ಶೀಲ್ಡ್ ಆಫ್ ಜುದಾ’ ಹೆಸರಿನಲ್ಲಿ ವೈಮಾನಿಕ ದಾಳಿ ಮಾಡಿವೆ. ದಾಳಿ ಆರಂಭದ ಬಳಿಕ ಇರಾನ್ ಮತ್ತು ಇರಾಕ್ ತಮ್ಮ ವಾಯುಪ್ರದೇಶವನ್ನು ಮುಚ್ಚಿ ನಾಗರಿಕ ವಿಮಾನಗಳನ್ನು ನಿರ್ಬಂಧಿಸಿವೆ.
ಟ್ರAಪ್ ಸಮರ್ಥನೆ
ಇರಾನ್‌ನ ಪ್ರಸಕ್ತ ಆಡಳಿತವು ಕ್ರೂರ ಮತ್ತು ಅತ್ಯಂತ ನಿರ್ದಯ ಜನರ ಗುಂಪಾಗಿದೆ. ಅದರ ಅಪಾಯಕಾರಿ ಚಟುವಟಿಕೆಗಳು ಯುನೈಟೆಡ್ ಸ್ಟೇಟ್ಸ್, ನಮ್ಮ ಪಡೆಗಳು, ವಿದೇಶದಲ್ಲಿರುವ ನಮ್ಮ ಮಿಲಿಟರಿ ನೆಲೆಗಳು ಮತ್ತು ಪ್ರಪಂಚದಾದ್ಯAತದ ನಮ್ಮ ಮಿತ್ರರಾಷ್ಟ್ರಗಳಿಗೆ ನೇರವಾಗಿ ಬೆದರಿಕೆ ಹಾಕುತ್ತವೆ ಎಂದು ಅಮೇರಿಕಾ ಅಧ್ಯಕ್ಷ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಎಂದಿದ್ದಾರೆ. ಇರಾನ್ ಪರಮಾಣು ಶಕ್ತಿಯಾಗಲು ನಾವು ಬಿಡುವುದಿಲ್ಲ, ಇಲ್ಲಿ ಆಡಳಿತ ಬದಲಾವಣೆಯೇ ನಮ್ಮ ಉದ್ದೇಶ. ಇರಾನ್‌ನ ನಾಗರಿಕರ ಹಿತ ರಕ್ಷಣೆಯೂ ನಮ್ಮ ಉದ್ದೇಶವಾಗಿದೆ. ಖಮೇನಿ ದುರಾಡಳಿತ ಕೊನೆಗೊಳ್ಳಬೇಕು. ಅದೇ ರೀತಿ ಉಗ್ರÀಗಾಮಿಗಳ ಹುಟ್ಟಡಗಬೇಕು.
ಇರಾನ್‌ನ ಪರಮಾಣು ಶಕ್ತಿ ದುರ್ಬಳಕೆಯಾಗದಂತೆ ತಡೆಗಟ್ಟಬೇಕು ಎಂಬುದು ಅಮೇರಿಕಾದ ಮೂಲ ಉದ್ದೇಶವಾಗಿದೆ ಎಂದು ಟ್ರಂಪ್ ಘೋಷಿಸಿದ್ದಾರೆ. ಭವಿಷ್ಯತ್‌ನಲ್ಲಿ ಇರಾನ್‌ನ ಜನತೆ ನೆಮ್ಮದಿಯಿಂದಿರುವAತಾಗಬೇಕು ಎಂದಿದ್ದಾರೆ.
ಪೂರ್ವಯೋಜಿತ ದಾಳಿ
೨೦೨೫ರ ಜೂನ್‌ನಲ್ಲಿ ೧೨ ದಿನಗಳ ಕಾಲ ನಡೆದ ಇರಾನ್ - ಇಸ್ರೇಲ್ ವಾಯು ಯುದ್ಧದ ಬಳಿಕ ಈ ದಾಳಿ ನಡೆದಿದೆ. ಇರಾನ್ ತನ್ನ ಅಣು ಮತ್ತು ಬ್ಯಾಲಿಸ್ಟಿಕ್ ಕ್ಷಿಪಣಿ ಕಾರ್ಯಕ್ರಮ ಮುಂದುವರಿಸಿದರೆ ಮತ್ತೆ ದಾಳಿ ನಡೆಸುವುದಾಗಿ ಅಮೆರಿಕಾ ಮತ್ತು ಇಸ್ರೇಲ್ ಮುಂಚೆಯೇ ಎಚ್ಚರಿಸಿದ್ದವು. ಇಂದು (ಶನಿವಾರ) ನಡೆದ ಇಸ್ರೇಲ್ ಕಾರ್ಯಾಚರಣೆ ಅಮೇರಿಕಾದ ಜೊತೆ ಸಂಯೋಜಿತವಾಗಿತ್ತು ಎಂದು ಇಸ್ರೇಲಿ ರಕ್ಷಣಾ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಈ ಕಾರ್ಯಾಚರಣೆ ತಿಂಗಳುಗಳ ಕಾಲ ಯೋಜಿತವಾಗಿದ್ದು, ದಾಳಿ ದಿನಾಂಕವನ್ನು ವಾರಗಳ ಹಿಂದೆ ನಿಗದಿಪಡಿಸಲಾಗಿತ್ತು ಎಂದು ಹೇಳಲಾಗಿದೆ.
ಇರಾನ್ ಪ್ರತೀಕಾರ ಗುರಿ
ಪ್ರತೀಕಾರ ಕ್ರಮವಾಗಿ ಮಧ್ಯಪ್ರಾಚ್ಯದಲ್ಲಿರುವ ಎಲ್ಲಾ ಅಮೆರಿಕ ಮತ್ತು ಇಸ್ರೇಲ್ ಸೇನಾ ನೆಲೆಗಳು ಈಗ ಇರಾನ್‌ನ ಪ್ರಮುಖ ಗುರಿಗಳಾಗಿವೆ ಎಂದು ಇರಾನಿನ ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ. ಜೊತೆಗೆ, ಈ ಯುದ್ಧಕ್ಕೆ ಯಾವುದೇ ಗಡಿಗಳ ನಿರ್ಬಂಧ ಇಲ್ಲ, ಹಾಗೂ ಪ್ರತಿಯೊಂದು ದಾಳಿಗೂ ಇರಾನ್ ಪ್ರತಿಕ್ರಿಯೆಯು ದೀರ್ಘಕಾಲದವರೆಗೆ ಇರುತ್ತದೆ ಎಂದು ಹೇಳಿದ್ದಾರೆ. ಈತನ್ಮಧ್ಯೆ, ಇಸ್ರೇಲ್ ಮೇಲೆ ಇರಾನ್ ಪ್ರತಿದಾಳಿ ನಡೆಸಿದ ನಂತರ ಸೌದಿ ಅರೇಬಿಯಾದ ರಾಜಧಾನಿಯಲ್ಲಿಯೂ ಸ್ಫೋಟಗಳ ಶಬ್ದಗಳು ಕೇಳಿಬಂದಿವೆ ಎನ್ನಲಾಗಿದೆ. ಇರಾನ್ ಇಸ್ರೇಲ್ ಜೊತೆಗೆ ಅಮೇರಿಕಾದ ಮಿತ್ರ ರಾಷ್ಟçಗಳ ಮೇಲೂ ದಾಳಿ ನಡೆಸಿದೆ ಎಂದು ವರದಿಯಾಗಿದೆ.
ಬಹ್ರೇನ್, ಕ್ವಾತರ್ ಹಾಗೂ ಅರಬ್ ರಾಷ್ಟçಗಳೂ ಸೇರಿದಂತೆ ಅಮೇರಿಕಾ ಸೇನಾ ನೆಲೆಯಿರುವ ೬ ರಾಷ್ಟçಗಳ ವಿರುದ್ಧ ಇರಾನ್ ಪ್ರತಿದಾಳಿ ನಡೆಸಿದೆ.