ಸೋಮವಾರಪೇಟೆ, ಫೆ. ೨೮: ಇಲ್ಲಿನ ಡಾಲ್ಫೀನ್ಸ್ ಸ್ಪೋರ್ಟ್ಸ್ ಕ್ಲಬ್ ಆಶ್ರಯದಲ್ಲಿ, ಹಾಕಿ ಕೊಡಗು ಹಾಗೂ ಹಾಕಿ ಕರ್ನಾಟಕದ ಸಹಯೋಗದೊಂದಿಗೆ ದಿ. ಬಿ.ಈ. ರಂಗಸ್ವಾಮಿ ಚೂರಿಗಿಡ್ನ ಅವರ ಜ್ಞಾಪಕಾರ್ಥವಾಗಿ ಸ್ಥಳೀಯ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಟರ್ಫ್ ಮೈದಾನದಲ್ಲಿ ನಡೆಯುತ್ತಿರುವ ಜಿಲ್ಲಾ ಮಟ್ಟದ ಹಾಕಿ ಪಂದ್ಯಾವಳಿ ಕ್ರೀಡಾಪ್ರೇಮಿಗಳ ಸಂಭ್ರಮಕ್ಕೆ ಕಾರಣವಾಗಿದ್ದು, ಮಾ. ೧ರಂದು (ಇಂದು) ಫೈನಲ್ ಪಂದ್ಯಾಟದೊAದಿಗೆ ಸಮಾರೋಪ ನಡೆಯಲಿದೆ.

ಕಳೆದ ೩ ದಿನಗಳಿಂದ ಸಿಂಥೆಟಿಕ್ ಟರ್ಫ್ ಮೈದಾನದಲ್ಲಿ ಸ್ಥಳೀಯ ಪ್ರತಿಭೆಗಳೊಂದಿಗೆ ರಾಷ್ಟç, ಅಂತರರಾಷ್ಟಿçÃಯ ತಂಡದಲ್ಲಿ ಆಟವಾಡಿದ ಆಟಗಾರರು ತಮ್ಮ ಪ್ರತಿಭೆಯನ್ನು ತೋರ್ಪಡಿಸುತ್ತಿದ್ದು, ಹಾಕಿ ಪ್ರೇಮಿಗಳಿಗೆ ಕ್ರೀಡೆಯ ರಸದೌತಣ ಉಣಬಡಿಸುತ್ತಿದ್ದಾರೆ.

ಪ್ರಸಕ್ತ ವರ್ಷದ ಪಂದ್ಯಾವಳಿಯಲ್ಲಿ ಆತಿಥೇಯ ಡಾಲ್ಫೀನ್ಸ್ ಸ್ಫೋರ್ಟ್ಸ್ ಕ್ಲಬ್ ಹಾಗೂ ಯುನೈಟೆಡ್ ಸ್ಫೋರ್ಟ್ಸ್ ಕ್ಲಬ್ ಬೇರಳಿನಾಡು ತಂಡಗಳು ಫೈನಲ್ ಪ್ರವೇಶಿಸಿದ್ದು, ಮಾ. ೧ರಂದು (ಇಂದು) ಅಪರಾಹ್ನ ೨ ಗಂಟೆಗೆ ಫೈನಲ್ ಪಂದ್ಯಾಟ ನಡೆಯಲಿದೆ.

ಇಂದು ನಡೆದ ಪ್ರಥಮ ಸೆಮಿಫೈನಲ್ ಪಂದ್ಯಾಟದಲ್ಲಿ ಯುಎಸ್‌ಸಿ ಬೇರಳಿನಾಡು ತಂಡ ಡಿವೈಇಎಸ್ ಕೂಡಿಗೆ ತಂಡದ ವಿರುದ್ದ ೨-೧ ಗೋಲುಗಳ ಅಂತರದಲ್ಲಿ ಜಯಗಳಿಸಿ ಫೈನಲ್ ಪ್ರವೇಶಿಸಿತು. ಬೇರಳಿನಾಡು ತಂಡದ ಪರವಾಗಿ ಪಂದ್ಯಾಟ ಆರಂಭವಾದ ೫ನೇ ನಿಮಿಷದಲ್ಲಿ ವೆಂಕಟೇಶ್ ಅವರು ಫೀಲ್ಡ್ ಗೋಲು ಬಾರಿಸಿದರು. ೧೦ ನೇ ನಿಮಿಷದಲ್ಲಿ ಕೂಡಿಗೆ ತಂಡದ ಲಿಖಿತ್ ಗೋಲುಗಳಿಸಿ ಸಮಬಲ ಸಾಧಿಸಿದರು. ಪಂದ್ಯಾಟದ ೧೬ನೇ ನಿಮಿಷದಲ್ಲಿ ಮೊಹಮ್ಮದ್ ರಾಹಿಲ್ ಪೆನಾಲ್ಟಿ ಸ್ಟೊçÃಕ್ ಮೂಲಕ ಗೋಲು ಗಳಿಸುವ ಮೂಲಕ ತಂಡದ ಜಯಕ್ಕೆ ಕಾರಣರಾದರು.

ಬೇರಳಿನಾಡು ತಂಡದ ಪರವಾಗಿ ಇಂಟರ್‌ನ್ಯಾಷನಲ್ ಹಾಕಿ ಆಟಗಾರ ಮಹಮ್ಮದ್ ರಾಹಿಲ್, ರಾಷ್ಟಿçÃಯ ಆಟಗಾರರಾದ ವೆಂಕಟೇಶ್ ಕೆಂಜಿ, ಅಂಕಿತ್ ಮಲ್ಲಿಕ್, ನಮನ್, ಅಭಿಷೇಕ್ ಅವರುಗಳು ಭಾಗಿಯಾಗಿ ಆಕರ್ಷಕ ಪ್ರದರ್ಶನ ನೀಡಿದರೆ, ೧೭ ವರ್ಷ ವಯೋಮಾನದ ಕೂಡಿಗೆ ಕ್ರೀಡಾಶಾಲೆಯ ವಿದ್ಯಾರ್ಥಿಗಳು ಅಮೋಘ ಆಟ ಪ್ರದರ್ಶಿಸಿ ಕ್ರೀಡಾಪ್ರೇಮಿಗಳ ಮೆಚ್ಚುಗೆಗೆ ಪಾತ್ರರಾದರು.

ಅತ್ಯಂತ ರೋಚಕತೆಯಿಂದ ಕೂಡಿದ್ದ ೨ನೇ ಸೆಮಿಫೈನಲ್‌ನಲ್ಲಿ ಆತಿಥೇಯ ಡಾಲ್ಫೀನ್ಸ್ ಸ್ಪೋರ್ಟ್ಸ್ ಕ್ಲಬ್ ತಂಡವು ಮಲ್ಮ ಕಕ್ಕಬ್ಬೆ ತಂಡದ ವಿರುದ್ಧ ಪೆನಾಲ್ಟಿ ಶೂಟೌಟ್ ಮೂಲಕ ಜಯಗಳಿಸಿ ಫೈನಲ್ ಪ್ರವೇಶಿಸಿತು.

ಪಂದ್ಯಾಟದ ಆರಂಭದ ನಿಮಿಷದಲ್ಲಿಯೇ ಕಕ್ಕಬ್ಬೆ ತಂಡದ ಪರವಾಗಿ ಅಂತರರಾಷ್ಟಿçÃಯ ಹಾಕಿ ಆಟಗಾರ ಸುನಿಲ್ ಅವರು ಫೀಲ್ಡ್ ಗೋಲು ಗಳಿಸಿ ೧-೦ ಮುನ್ನಡೆ ತಂದುಕೊಟ್ಟರು. ಡಾಲ್ಫೀನ್ಸ್ ಕ್ಲಬ್ ಪರವಾಗಿ ಮತ್ತೋರ್ವ ಅಂತರರಾಷ್ಟಿçÃಯ ಹಾಕಿ ಆಟಗಾರ ಆಭರಣ್ ಸುದೇವ್ ೨೧ನೇ ನಿಮಿಷದಲ್ಲಿ ಗೋಲು ಗಳಿಸಿ ಸಮಬಲಕ್ಕೆ ಕಾರಣರಾದರು. ೨೮ನೇ ನಿಮಿಷದಲ್ಲಿ ಕಕ್ಕಬ್ಬೆಯ ಚಸ್ವಿನ್ ಗೋಲುಗಳಿಸಿದರೆ, ೩೦ನೇ ನಿಮಿಷದಲ್ಲಿ ಆಭರಣ್ ಮತ್ತೊಂದು ಗೋಲು ಬಾರಿಸಿದರು. ೩೧ನೇ ನಿಮಿಷದಲ್ಲಿ ದೊರೆತ ಪೆನಾಲ್ಟಿ ಕಾರ್ನರ್‌ನ್ನು ಡಾಲ್ಫೀನ್ಸ್ ಪರವಾಗಿ ತ್ರಿಶೂಲ್ ಅವರು ಗೋಲಾಗಿ ಪರಿವರ್ತಿಸಿದರು. ಪಂದ್ಯಾಟದ ೪೨ನೇ ನಿಮಿಷದಲ್ಲಿ ಕಕ್ಕಬ್ಬೆ ತಂಡದ ಸುನಿಲ್ ಮತ್ತೊಂದು ಗೋಲು ದಾಖಲಿಸಿ ೩-೩ರ ಸಮಬಲಕ್ಕೆ ಕಾರಣರಾದರು.

ನಂತರ ನಡೆದ ಪೆನಾಲ್ಟಿ ಶೂಟೌಟ್‌ನಲ್ಲಿ ಡಾಲ್ಫೀನ್ಸ್ ಕ್ಲಬ್ ೪ ಗೋಲು ಗಳಿಸಿದರೆ, ಕಕ್ಕಬ್ಬೆ ತಂಡ ೩ ಗೋಲು ಗಳಿಸಿ ಪಂದ್ಯಾಟದಿAದ ನಿರ್ಗಮಿಸಿತು. ಆತಿಥೇಯ ತಂಡ ಫೈನಲ್ ಪ್ರವೇಶಿಸಿತು.

ಡಾಲ್ಫೀನ್ಸ್ ಪರವಾಗಿ ಅಂತರರಾಷ್ಟಿçÃಯ ಹಾಕಿ ಆಟಗಾರರಾದ ಆಭರಣ್ ಸುದೇವ್, ವಚನ್ ಅಶೋಕ್, ಇಂಡಿಯಾ ಕ್ಯಾಂಪರ್ ಬಿಪಿನ್, ರಾಷ್ಟಿçÃಯ ಆಟಗಾರ ಬೋಪಣ್ಣ, ತ್ರಿಶೂಲ್, ಮಲ್ಮ ಕಕ್ಕಬ್ಬೆ ಪರವಾಗಿ ಅಂತರರಾಷ್ಟಿçÃಯ ಆಟಗಾರ ಸುನಿಲ್, ರಜಂತ್, ರಾಷ್ಟಿçÃಯ ಆಟಗಾರ ನಿತೇಶ್, ನಕುಲ್, ಸುಚಿನ್ ಅವರುಗಳು ಅತಿಥಿ ಆಟಗಾರರಾಗಿ ಭಾಗಿಯಾಗಿದ್ದರು.

ಮಾ. ೧ರಂದು (ಇಂದು) ಮಧ್ಯಾಹ್ನ ೨ ಗಂಟೆಗೆ ಫೈನಲ್ ಪಂದ್ಯಾಟ ಹಾಗೂ ಸಮಾರೋಪ ಸಮಾರಂಭ ನಡೆಯಲಿದೆ. ಆಯೋಜಕರಾದ ಕ್ಲಬ್‌ನ ಅಧ್ಯಕ್ಷ ಎಂ.ಈ. ಮಹೇಶ್, ಗೌರವಾಧ್ಯಕ್ಷ ಹೆಚ್.ಎನ್. ಅಶೋಕ್ ಅವರುಗಳು ಅಧ್ಯಕ್ಷತೆ ವಹಿಸಲಿದ್ದು, ಮುಖ್ಯ ಅತಿಥಿಗಳಾಗಿ ಸಂಸದ ಯದುವೀರ್ ಒಡೆಯರ್, ಶಾಸಕ ಡಾ. ಮಂತರ್ ಗೌಡ, ಹಾಕಿ ಕರ್ನಾಟಕದ ಮುಖ್ಯ ಕಾರ್ಯದರ್ಶಿ ಎ.ಬಿ. ಸುಬ್ಬಯ್ಯ, ಬಹುಮಾನ ಪ್ರಾಯೋಜಕರಾದ ಲಲಿತಾ ರಂಗಸ್ವಾಮಿ, ಬಿ.ಆರ್. ವೇಣು, ಬಿ.ಆರ್. ವಿಜಯ್, ಬಿ.ಆರ್. ವಿನಯ್, ಅಂತರರಾಷ್ಟಿçÃಯ ಹಾಕಿ ಆಟಗಾರರಾದ ಅರ್ಜುನ್ ಹಾಲಪ್ಪ, ಎಸ್.ವಿ. ಸುನಿಲ್, ವಿಕ್ರಂಕಾAತ್ ಭಾಗವಹಿಸಲಿದ್ದಾರೆ.

ಇದರೊಂದಿಗೆ ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕಿ ವಿ.ಟಿ. ವಿಸ್ಮಯಿ, ಹಾಕಿ ಕೂರ್ಗ್ ಅಧ್ಯಕ್ಷ ಲವಕುಮಾರ್, ಕಾಫಿ ಬೆಳೆಗಾರರಾದ ಸುವಿನ ಕೃಪಾಲ್, ಜೂನಿಯರ್ ಇಂಡಿಯಾ ಹಾಕಿ ತರಬೇತುದಾರ ಸಿ.ಬಿ. ಜನಾರ್ದನ್, ಉದ್ಯಮಿಗಳಾದ ಕೆ.ಟಿ. ಸತೀಶ್, ಡಿ.ಕೆ. ಅರುಣ್‌ಕುಮಾರ್, ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಬಿ.ಬಿ. ಸತೀಶ್ ಅವರುಗಳು ಅತಿಥಿಗಳಾಗಿ ಭಾಗವಹಿಸಲಿದ್ದಾರೆ.