ಕಾಬುಲ್, ಫೆ. ೨೭: ಪಾಕಿಸ್ತಾನವು ಅಫ್ಘಾನಿಸ್ತಾನದ ರಾಜಧಾನಿಯಾಗಿರುವ ಹಾಗೂ ಅಲ್ಲಿನ ತಾಲಿಬಾನ್ ಸರಕಾರದ ಕೇಂದ್ರ ಸ್ಥಾನವಿರುವ ಕಾಬುಲ್ ನಗರ ಸೇರಿದಂತೆ ಪ್ರಮುಖ ನಗರಗಳ ಮೇಲೆ ಶುಕ್ರವಾರ ಮುಂಜಾನೆ ವಾಯುದಾಳಿ ಮೂಲಕ ಬಾಂಬ್ ಪ್ರಹರ ನಡೆಸಿದ್ದು, ಅಧಿಕೃತವಾಗಿ ‘ಯುದ್ಧ’ವನ್ನು ಪಾಕಿಸ್ತಾನಿ ರಕ್ಷಣಾ ಸಚಿವ ಖವಾಜಾ ಮುಹಮ್ಮದ್ ಆಸಿಫ್ ಘೋಷಿಸಿದ್ದಾರೆ. ದಾಳಿಯಲ್ಲಿ ೧೩೩ ಅಫ್ಘಾನಿ ಸೇನಾ ಸಿಬ್ಬಂದಿ ಹತ್ಯೆಯಾಗಿರುವುದಾಗಿ ತಿಳಿದುಬಂದಿದೆ.

ಪಾಕಿಸ್ತಾನ ನಡೆಸಿದ ದಾಳಿ ಅಫ್ಘಾನ್ ರಾಜಧಾನಿ ಕಾಬೂಲ್ ಮತ್ತು ತಾಲಿಬಾನ್ ನಾಯಕರು ನೆಲೆಸಿರುವ ಕಂದಹಾರ್ ನಗರವನ್ನು ಗುರಿಯಾಗಿಸಿತ್ತು. ಪಾಕಿಸ್ತಾನವು ಈ ಹಿಂದೆ ಅಫ್ಘಾನಿಸ್ತಾನದ ಮೇಲೆ ನಡೆಸಿದ ವಾಯುದಾಳಿಗೆ ಪ್ರತೀಕಾರವಾಗಿ ಪಾಕಿಸ್ತಾನದ ಸೇನೆಯ ಮೇಲೆ ಎರಡು ದೇಶಗಳ ಗಡಿಯಲ್ಲಿ ಅಫ್ಘಾನ್ ದಾಳಿ ನಡೆಸಿತ್ತು. ಇದಕ್ಕೆ ಪ್ರತೀಕಾರವಾಗಿ ಪಾಕಿಸ್ತಾನವು, ಶುಕ್ರವಾರ ಮುಂಜಾನೆ ಅಫ್ಘಾನ್ ರಾಜಧಾನಿ ಕಾಬೂಲ್ ಸೇರಿದಂತೆ ಕಂದಹಾರ್ ಹಾಗೂ ಪಕ್ತಿಯಾ ಪ್ರಾಂತ್ಯದಲ್ಲಿರುವ ತಾಲಿಬಾನ್ ಮಿಲಿಟರಿ ಕಚೇರಿಗಳು ಮತ್ತು ಪೋಸ್ಟ್ಗಳ ಮೇಲೆ ವಾಯು ಪಡೆ ಸಹಕಾರದಿಂದ ಕ್ಷಿಪಣಿ ದಾಳಿ ನಡೆಸಿದ್ದು, ಇದಕ್ಕೆ ಪ್ರತಿಕಾರವಾಗಿ ಪಾಕಿಸ್ತಾನಿ ಮಿಲಿಟರಿ ಸ್ಥಾಪನೆಗಳ ಮೇಲೆ ತಾಲಿಬಾನ್ ಡ್ರೋನ್ ದಾಳಿ ನಡೆಸಿದೆ. ಎರಡೂ ಕಡೆಗಳಲ್ಲಿ ಸಾವು-ನೋವು ಸಂಭವಿಸಿದ್ದು ಯುದ್ಧ ಸ್ಥಿತಿ ನಿರ್ಮಾಣವಾಗಿದೆ.

ಎರಡು ದೇಶಗಳ ನಡುವಿನ ೨,೬೦೦ ಕಿ.ಮೀ. ಗಡಿಯಲ್ಲಿ ತಾಲಿಬಾನ್ ಬೆಂಬಲಿತ ೪ಐದನೇ ಪುಟಕ್ಕೆ

(ಮೊದಲ ಪುಟದಿಂದ) ಉಗ್ರರು ಪಾಕಿಸ್ತಾನದ ವಿರುದ್ಧ ದಾಳಿ ನಡೆಸುತ್ತಿದೆ ಎಂಬ ಆರೋಪದಡಿ ಕಳೆದ ಅಕ್ಟೋಬರ್‌ನಿಂದಲೇ ಎರಡು ದೇಶಗಳ ನಡುವೆ ದಾಳಿ-ಪ್ರತಿದಾಳಿಗಳು ನಡೆಯುತ್ತಲಿವೆ. ತಾಲಿಬಾನ್ ಈ ಆರೋಪವನ್ನು ಹಲವು ಬಾರಿ ನಿರಾಕರಿಸಿದೆ.

ಆದರೂ ಅಫ್ಘಾನಿನ ಅಮಾಯಕ ನಾಗರೀಕರ ಮೇಲೆಯೂ ಈ ಹಿಂದೆ ಪಾಕ್ ವಾಯುಸೇನೆ ದಾಳಿ ನಡೆಸಿ ಹತ್ಯೆಗೈದಿತ್ತು. ಇದೀಗ ಇದರ ತೀವ್ರತೆ ತಾರಕಕ್ಕೇರಿದ್ದು ತಾಲಿಬಾನ್‌ನ ಮಿಲಿಟರಿ ಕೇಂದ್ರಗಳನ್ನು ಗುರಿಯಾಗಿಸಿ ಪಾಕ್ ಸೇನೆ ವಾಯು ದಾಳಿ ನಡೆಸಿದೆ. ಈ ಮೂಲಕ ಯುದ್ಧದ ವಾತಾವರಣ ಸೃಷ್ಟಿಯಾಗಿದ್ದು, ಪಾಕಿಸ್ತಾನಿ ರಕ್ಷಣಾ ಸಚಿವ ಅಧಿಕೃತವಾಗಿ ಯುದ್ಧವನ್ನೇ ಘೋಷಣೆ ಮಾಡಿದ್ದಾರೆ.

ಪಾಕಿಸ್ತಾನ ಪರಮಾಣು ಶಸ್ತçಸಜ್ಜಿತವಾಗಿದೆ ಹಾಗೂ ಅದರ ಮಿಲಿಟರಿ ಸಾಮರ್ಥ್ಯ ಅಫ್ಘಾನಿಸ್ತಾನಕ್ಕಿಂತ ಹೆಚ್ಚಿದೆ.

ಸಂಘರ್ಷ ತಾರಕಕ್ಕೇರದಂತೆ ರಷ್ಯಾ, ಚೀನಾ, ಟರ್ಕಿ ಮತ್ತು ಸೌದಿ ಅರೇಬಿಯಾ ಮಧ್ಯಸ್ಥಿಕೆ ವಹಿಸಲು ಪ್ರಯತ್ನಿಸುತ್ತಿವೆ. ಇರಾನ್ ಸಹ ಸಹಾಯ ಮಾಡಲು ಮುಂದಾಗಿದೆ ಎಂದು ಅದರ ವಿದೇಶಾಂಗ ಸಚಿವಾಲಯ ತಿಳಿಸಿದೆ.