ಮಡಿಕೇರಿ, ಫೆ. ೨೭: ವಿದ್ಯಾರ್ಥಿ ಜೀವನದಲ್ಲಿ ಮತ್ತೊಂದು ಮೈಲಿಗಲ್ಲಾಗಿರುವ ದ್ವಿತೀಯ ಪಿಯುಸಿ ಪರೀಕ್ಷೆ ತಾ. ೨೮ ರಿಂದ (ಇಂದಿನಿAದ) ರಾಜ್ಯಾದ್ಯಂತ ಆರಂಭಗೊಳ್ಳಲಿದ್ದು, ಮಾರ್ಚ್ ೧೭ರ ತನಕ ನಡೆಯಲಿದೆ. ವ್ಯವಸ್ಥಿತ ರೀತಿಯಲ್ಲಿ ಪರೀಕ್ಷೆ ನಡೆಸಲು ಕೊಡಗು ಜಿಲ್ಲೆಯಲ್ಲಿಯೂ ಸಿದ್ಧತೆ ನಡೆದಿದೆ.
ಜಿಲ್ಲಾಧಿಕಾರಿ, ಅಪರ ಜಿಲ್ಲಾಧಿಕಾರಿ, ಉಪವಿಭಾಗಾಧಿಕಾರಿ, ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ, ಪೊಲೀಸ್ ವರಿಷ್ಠಾಧಿಕಾರಿಗಳ ಮುಂದಾಳತ್ವದಲ್ಲಿ ಪಿಯು ಮಂಡಳಿ ಮೂಲಕ ಅಗತ್ಯ ವ್ಯವಸ್ಥೆ ಮಾಡಲಾಗಿದೆ. ಜಿಲ್ಲೆಯಲ್ಲಿ ಒಟ್ಟು ೧೮ ಪರೀಕ್ಷಾ ಕೇಂದ್ರಗಳನ್ನು ತೆರೆಯಲಾಗಿದೆ. ಈ ಕೇಂದ್ರಗಳ ವ್ಯಾಪ್ತಿಯಲ್ಲಿ ಪರೀಕ್ಷಾ ಸಂದರ್ಭ ಸೆಕ್ಷನ್ ೧೬೩ ಬಿಎನ್‌ಎಸ್‌ನಂತೆ ನಿಷೇಧಾಜ್ಞೆ ಜಾರಿ ಮಾಡಲಾಗಿದೆ. ಒಟ್ಟು ೫೨೫೫ ವಿದ್ಯಾರ್ಥಿಗಳು ಈ ಬಾರಿಯ ಪರೀಕ್ಷೆ ಬರೆಯಲಿದ್ದಾರೆ. ೩೧೫೩ ಬಾಲಕಿಯರು, ೨೧೦೨ ಬಾಲಕರು ಪರೀಕ್ಷೆ ಎದುರಿಸುತ್ತಿದ್ದಾರೆ. ಹೊಸದಾಗಿ ೪೮೦೯, ಖಾಸಗಿಯಾಗಿ ೨೫೦ ಹಾಗೂ ೧೯೬ ಮಂದಿ ಮರುಪರೀಕ್ಷೆ ಎದುರಿಸುತ್ತಿದ್ದಾರೆ. ಮಡಿಕೇರಿ ತಾಲೂಕಿನಲ್ಲಿ ೫, ವೀರಾಜಪೇಟೆ ೫ ಹಾಗೂ ಸೋಮವಾರಪೇಟೆ ತಾಲೂಕು ವ್ಯಾಪ್ತಿಯಲ್ಲಿ ೮ ಪರೀಕ್ಷಾ ಕೇಂದ್ರಗಳಿವೆ.
ಜಿಲ್ಲೆಯಲ್ಲಿ ಒಟ್ಟು ೬೫ ದ್ವಿತೀಯ ಪಿಯುಸಿ ಕಾಲೇಜುಗಳಿದ್ದು, ವಿವಿಧೆಡೆ ಪರೀಕ್ಷಾ ಕೇಂದ್ರಗಳನ್ನು ನಿಗದಿ ಮಾಡಲಾಗಿದೆ.
ಸಿಸಿ ಕಣ್ಗಾವಲು
ಪರೀಕ್ಷಾ ಕೇಂದ್ರಗಳ ಎಲ್ಲಾ ಕೊಠಡಿಗಳಲ್ಲೂ ಸಿಸಿಟಿವಿ ಕಣ್ಗಾವಲು ಇರಲಿದೆ. ಈ ಕೇಂದ್ರಗಳ ಚಟುವಟಿಕೆಗಳನ್ನು ವೆಬ್ ಕಾಸ್ಟಿಂಗ್ ಮೂಲಕ ಜಿಲ್ಲಾಧಿಕಾರಿ ಕಚೇರಿ, ಪ.ಪೂ. ಶಿಕ್ಷಣ ಇಲಾಖೆ ಉಪನಿರ್ದೇಶಕರ ಕಚೇರಿ ಸಹಿತವಾಗಿ ಬೆಂಗಳೂರಿನ ಪಿಯು ಮಂಡಳಿ ಕಚೇರಿಯಲ್ಲಿ ಗಮನಿಸಬಹುದಾಗಿದೆ.
ಜಾಗೃತ ದಳ
ಜಿಲ್ಲಾ ಜಾಗೃತದಳ, ಮೂರು ತಾಲೂಕುಗಳ ಒಂದೊAದು ಜಾಗೃತ ದಳ ಹಾಗೂ ಉಪನಿರ್ದೇಶಕರ ಕಚೇರಿಯ ವಿಶೇಷ ಜಾಗೃತದಳ ಸೇರಿ ಒಟ್ಟು ಐದು ಜಾಗೃತ ದಳ ಕಾರ್ಯನಿರ್ವಹಿಸಲಿದೆ.
ಪ್ರಶ್ನೆ ಪತ್ರಿಕೆಗಳನ್ನು ಜಿಲ್ಲಾ ಖಜಾನೆಯಲ್ಲಿ ಭದ್ರವಾಗಿರಿಸಲಾಗಿದ್ದು, ಆಯಾ ದಿನದಂದು ಬೆಳಿಗ್ಗೆ ಒಟ್ಟು ೭ ಮಾರ್ಗಗಳಲ್ಲಿ ಓರ್ವ ೪ಐದನೇ ಪುಟಕ್ಕೆ
(ಮೊದಲ ಪುಟದಿಂದ) ತಹಶೀಲ್ದಾರ್, ಬಿಇಓ ಹಾಗೂ ಹಿರಿಯ ಪ್ರಾಂಶುಪಾಲರ ನೇತೃತ್ವದಲ್ಲಿ ಪೊಲೀಸ್ ಭದ್ರತೆಯೊಂದಿಗೆ ಪರೀಕ್ಷಾ ಕೇಂದ್ರಗಳಿಗೆ ತಲುಪಿಸಲಿದ್ದಾರೆ. ಪ್ರಶ್ನೆ ಪತ್ರಿಕೆ ಪಾಲಕರಾಗಿ ಭಾಗಮಂಡಲ ಕಾವೇರಿ ಕಾಲೇಜಿನ ಪ್ರಾಂಶುಪಾಲ ದಿವಾಕರ್ ಕೆ.ಜಿ. ಅವರು ನಿಯೋಜಿತರಾಗಿದ್ದಾರೆ. ಇವರು ಪ್ರಶ್ನೆ ಪತ್ರಿಕೆಗಳ ಭದ್ರತೆ-ವಿತರಣೆಯ ಜವಾಬ್ದಾರಿ ನಿರ್ವಹಿಸಲಿದ್ದಾರೆ. ಕಲಾ ವಿಭಾಗದಲ್ಲಿ ೧೦೫೪, ವಾಣಿಜ್ಯ ವಿಭಾಗದಲ್ಲಿ ೨೬೦೩ ಹಾಗೂ ವಿಜ್ಞಾನ ವಿಭಾಗದಲ್ಲಿ ೧೫೯೮ ವಿದ್ಯಾರ್ಥಿಗಳು ಈ ಬಾರಿ ಪರೀಕ್ಷೆ ಬರೆಯಲು ಅರ್ಹತೆ ಹೊಂದಿದ್ದಾರೆ. ವ್ಯವಸ್ಥೆಗಳ ಬಗ್ಗೆ ಇಲಾಖೆ ಉಪನಿರ್ದೇಶಕರಾದ ವಿಜಯ್ ಅವರು ಮಾಹಿತಿ ನೀಡಿದರು.