ಮಡಿಕೇರಿ, ಫೆ. ೨೬: ಕೊಡಗಿನ ಬೆಡಗಿ, ಬಹುಭಾಷ ನಟಿ ರಶ್ಮಿಕಾ ಮಂದಣ್ಣ ಮತ್ತು ನಟ ವಿಜಯ್ ದೇವರಕೊಂಡ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.
ಉದಯಪುರದ ಐಷಾರಾಮಿ ಹೊಟೇಲ್‌ನಲ್ಲಿ ಕುಟುಂಬ ಸದಸ್ಯರು ಮತ್ತು ಆಪ್ತರ ಸಮ್ಮುಖದಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಮೊದಲು ತೆಲುಗು ಕುಟುಂಬದ ಸಂಪ್ರದಾಯದAತೆ ಬೆಳಿಗ್ಗೆ ಮಂಗಳ ಮುಹೂರ್ತದಲ್ಲಿ ವಿವಾಹ ಕಾರ್ಯಕ್ರಮ ನಡೆಯಿತು. ಅದೇ ರೀತಿ ಸಂಜೆ ಕೊಡಗಿನ ಸಂಪ್ರದಾಯದAತೆ ರಶ್ಮಿಕಾ ಕುಟುಂಬಸ್ಥರಿAದ ಕಾರ್ಯಕ್ರಮಗಳು ನಡೆದಿÀವೆ ಎಂದು ಹೇಳಲಾಗುತ್ತಿದೆ.
ಹಲವು ಸಿನಿಮಾಗಳಲ್ಲಿ ಜೊತೆಯಾಗಿರುವ ರಶ್ಮಿಕಾ ಹಾಗೂ ವಿಜಯ್ ಜೋಡಿ ಇದೀಗ ನಿಜ ಬದುಕಿನಲ್ಲಿಯೂ ಸತಿಪತಿಯಾಗಿದ್ದಾರೆ.
ಮುಂದಿನ ದಿನದಲ್ಲಿ ಕೊಡಗಿನಲ್ಲಿಯೂ ಬಂಧು-ಮಿತ್ರರಿಗಾಗಿ ಕಾರ್ಯಕ್ರಮ ಆಯೋಜಿಸಲಾಗುತ್ತದೆ ಎಂದು ಹೇಳಲಾಗುತ್ತಿದೆ. ವೀರಾಜಪೇಟೆಯ ಕದನೂರು ಬಳಿಯ ರಶ್ಮಿಕಾ ನಿವಾಸವನ್ನು ತಳಿರು-ತೋರಣ ಹಾಗೂ ವಿದ್ಯುತ್‌ನಿಂದ ಅಲಂಕಾರಗೊಳಿಸಲಾಗಿದೆ.