ಕಾಯಪಂಡ ಶಶಿ ಸೋಮಯ್ಯ
ಮಡಿಕೇರಿ, ಫೆ. ೨೬: ಪ್ರಸಕ್ತ ವರ್ಷ ಕಾಫಿ ಕುಯಿಲಿನ ಕೆಲಸ ಕಾರ್ಯಗಳು ಹಲವು ಸಂಕಷ್ಟಗಳ ನಡುವೆ ಬಹುತೇಕ ಪೂರ್ಣಗೊಳ್ಳುವ ಹಂತದಲ್ಲಿದೆ. ದುಬಾರಿ ವೇತನದ ನಡುವೆ ಕಾರ್ಮಿಕರ ಕೊರತೆಯನ್ನು ಜಿಲ್ಲೆಯಾದ್ಯಂತ ಕಾಫಿ ಬೆಳೆಗಾರರು ಎದುರಿಸಿದ್ದು, ಹಿಡಿದ ಫಸಲನ್ನು ಕುಯಿಲು ಮಾಡುವಷ್ಟರಲ್ಲಿ ಬಸವಳಿದಿದ್ದಾರೆ. ಇದರೊಂದಿಗೆ ಈ ಬಾರಿ ಕಾಫಿ ಧಾರಣೆಯಲ್ಲಿ ದಿನೇ..ದಿನೇ..ವ್ಯತ್ಯಾಸ ಕಂಡುಬರುತ್ತಿದ್ದು, ಬೆಲೆ ಕುಸಿತವನ್ನೇ ಕಾಣುತ್ತಿರುವುದು ಒಂದೆAಡೆ ಆತಂಕಕ್ಕೆ ಕಾರಣವಾಗಿದೆ.
ಕಳೆದ ವರ್ಷ ಸರಿಸುಮಾರು ೫೦೦ರಷ್ಟಿದ್ದ ಇ.ಪಿ. ದರ (ಎಸ್ಟೇಟ್ ಪೌಂಡ್) ಈ ಬಾರಿ ೪೦೦ರ ಗಡಿ ದಾಟಿಲ್ಲ. ೩೯೫-೩೯೯ರಷ್ಟು ಮಾತ್ರ ಈ ಬಾರಿ ಇ.ಪಿ. ದರ ಕಂಡುಬAದಿತ್ತು. ಅದೂ ಕಾಫಿ ಕುಯಿಲು ಆರಂಭದ ವೇಳೆಯಲ್ಲಿ ಮಾತ್ರ ಇಷ್ಟು ದರ ಇದ್ದದ್ದು ಇದೀಗ ಅಂತರರಾಷ್ಟಿçÃಯ ಮಾರುಕಟ್ಟೆಯಲ್ಲಿ ದಿನೇ ದಿನೇ ಉಂಟಾಗುತ್ತಿರುವ ಏರಳಿತದ ಕಾರಣದಿಂದಾಗಿ ದಿನಂಪ್ರತಿ ಕುಸಿತವಾಗುತ್ತಲೇ ಇದೆ. ಸದ್ಯದ ಮಟ್ಟಿಗೆ ಇ.ಪಿ. ದರ ರೂ. ೩೬೦-೩೬೫ರಷ್ಟರಲ್ಲೇ ನಿಂತಿದ್ದು ಹೆಚ್ಚಾಗುವ ಸಾಧ್ಯತೆಗಳೇ ಕಂಡುಬರುತ್ತಿಲ್ಲ. ಕಳೆದ ವರ್ಷಕ್ಕೆ ಹೋಲಿಸಿದರೆ ಹಲವು ಸಾವಿರದಷ್ಟು ದರ ಕುಸಿತದಲ್ಲಿದ್ದು, ಬೆಳೆಗಾರರು ಮುಂದೇನು ಎಂಬ ಅತಂತ್ರತೆಯಲ್ಲಿ ದಿನ ದೂಡುತ್ತಿದ್ದಾರೆ. ಕಾಫಿ ವಹಿವಾಟಿನಲ್ಲಿ ಅನುಭವ ಹೊಂದಿರುವ ಕೆಲವರ ಪ್ರಕಾರ ಈ ಪರಿಸ್ಥಿತಿ ಇನಷ್ಟು ಸಮಯ ಇದೇ ರೀತಿ ಮುಂದುವರೆಯುವುದು ಖಚಿತ ಎನ್ನಲಾಗುತ್ತಿದೆ. ಜನವರಿ-ಫೆಬ್ರವರಿ ಆರಂಭದ ವೇಳೆ ಮಾತ್ರ ರಫ್ತುದಾರರು ತಮಗಿದ್ದ ಬೇಡಿಕೆ ಪೂರೈಸಲು (ಶಿಪ್‌ಮೆಂಟ್) ಮುಂದಾಗಿದ್ದರಿAದ ೩೯೦-೩೯೯ರ ತನಕ ಇ.ಪಿ. ದರ ಲಭ್ಯವಾಗಿತ್ತು. ಇದೀಗ ರಫ್ತುದಾರರಿಗೂ ನಿರೀಕ್ಷಿತ ಬೇಡಿಕೆ ಬರುತ್ತಿಲ್ಲ ಎನ್ನ ಲಾಗುತ್ತಿದೆ. ಕಾಫಿ ಬೆಳೆಯುವ ಬೇರೆ ರಾಷ್ಟçಗಳಲ್ಲಿ ಅದರಲ್ಲೂ ಯೂರೋಪಿಯನ್ ದೇಶಗಳಲ್ಲಿಯೂ ಪ್ರಸ್ತುತ ಕಾಫಿ ಬರುತ್ತಿದ್ದು, ಭಾರತದ ಕಾಫಿಗೆ ಹೋಲಿಸಿದರೆ ಅಲ್ಲಿನ ಧಾರಣೆ ಒಂದಷ್ಟು ಕಡಿಮೆಯಿರುವುದರಿಂದ ಕಾಫಿ ವಹಿವಾಟು ಆ ರಾಷ್ಟçಗಳಲ್ಲಿ ಕಾಫಿಯತ್ತ ಕೇಂದ್ರೀಕೃತವಾಗುತ್ತಿದೆ ಎಂದೂ ಹೇಳಲಾಗುತ್ತಿದೆ. ೪ಐದನೇ ಪುಟಕ್ಕೆ
(ಮೊದಲ ಪುಟದಿಂದ) ಸ್ಥಳೀಯವಾಗಿ ಭಾರತದ ಕಾಫಿಗೆ ರೂ. ೩೬೦-೨೯೦ರ ಇ.ಪಿ. ದರ ಇದ್ದದ್ದೂ ಹೊರರಾಷ್ಟçದ ಕಾಫಿಗೆ ಹೋಲಿಸಿದರೆ ಒಂದಷ್ಟು ಹೆಚ್ಚಿದೆ ಎಂದೂ ವಿಶ್ಲೇಷಿಸಲಾಗುತ್ತಿದೆ. ಕೆಲ ಸಮಯದ ಹಿಂದೆ ಮೆಟ್ರಿಕ್‌ಟನ್‌ಗೆ ರೂ. ೪,೫೦೦ ಡಾಲರ್ ಇದ್ದದ್ದು ಪ್ರಸ್ತುತ ರೂ. ೩೬೪೦ ಡಾಲರ್‌ಗೆ ಇಳಿದಿದೆ.
ಮಾರ್ಚ್ ತನಕ ಹೆಚ್ಚಿನ ಶಿಪ್‌ಮೆಂಟ್ ಕೂಡ ಇಲ್ಲ. ಜೊತೆಗೆ ಏಪ್ರಿಲ್, ಮೇ ಯಲ್ಲಿ ಉಗಾಂಡ, ಇಂಡೋನೇಷಿಯದ ಕಾಫಿಯೂ ಮಾರುಕಟ್ಟೆಗೆ ಬರಲಿದೆ. ವಿಯೆಟ್ನಾಂ ಕಾಫಿ ಕೂಡ ಶೇ ೪೦ರಷ್ಟು ಬಾಕಿ ಇದೆ. ಇವೆಲ್ಲವೂ ಭಾರತದ ಕಾಫಿಯ ಮೇಲೆ ಪರಿಣಾಮ ಬೀರುತ್ತಿರುವುದಾಗಿ ವಹಿವಾಟುದಾರರ ಅನಿಸಿಕೆಯಾಗಿದೆ. ಅಂತರರಾಷ್ಟಿçÃಯ ಮಾರುಕಟ್ಟೆಯಲ್ಲಿನ ಅನಿಶ್ಚಿತತೆಗಳಿಂದಾಗಿ ರಫ್ತುದಾರರು ಕಾಫಿ ಸಂಗ್ರಹ ಮಾಡಿಟ್ಟುಕೊಳ್ಳಲು ಮುಂದಾಗುತ್ತಿಲ್ಲ. ಬೇಡಿಕೆಗೆ ಅನುಗುಣವಾಗಿ ಎಷ್ಟು ಬೇಕೋ ಅಷ್ಟನ್ನು ಮಾತ್ರ ಖರೀದಿ ಮಾಡುತ್ತಿದ್ದಾರೆ ಎಂಬುದು ಇವರ ಅನುಭವದ ಮಾತಾಗಿದೆ. ಪ್ರಸ್ತುತ ವರ್ಷ ಭಾರತದಲ್ಲಿ ಕಳೆದ ವರ್ಷದಷ್ಟೆ ಕಾಫಿ ಉತ್ಪಾದನೆ ಕಂಡುಬರುತ್ತಿದೆ ಎಂಬುದು ಒಂದು ಅಂದಾಜು. ಸದ್ಯದ ಮಟ್ಟಿಗೆ ಈಗಿನ ಧಾರಣೆಯ ಪರಿಸ್ಥಿತಿಯೇ ಮುಂದುವರೆಯುವ ಸಾಧ್ಯತೆಗಳೇ ಅಧಿಕ ಎನ್ನಲಾಗುತ್ತಿದೆ.
ಮಳೆ ತಂದಿತ್ತ ಫಜೀತಿ...
ಕೊಡಗಿನ ಹಲವೆಡೆ ಕೆಲದಿನದಿಂದ ಒಂದಷ್ಟು ಮಳೆಯಾಗಿದ್ದು, ಕೆಲವು ಭಾಗದಲ್ಲಿ ಮಳೆಯ ಪ್ರಮಾಣ ಹೆಚ್ಚಿರುವುದು ಆ ವ್ಯಾಪ್ತಿಯವರಿಗೆ ಹೂ ಮಳೆಗೆ ಅನುಕೂಲವಾಗಿದೆ. ಆದರೆ, ಬಹುತೇಕ ಕಡೆಗಳಲ್ಲಿ ಅಗತ್ಯ ಪ್ರಮಾಣ ಮಳೆಯಾಗದೆ ಕೇವಲ ಮಳೆಯ ಸಿಂಚನವಾಗಿರುವುದರಿAದ ಸಮಸ್ಯೆ ಉಲ್ಭಣಿಸಿದೆ. ಈ ಪರಿಸ್ಥಿತಿಯಿಂದಾಗಿ ನೀರು ಹಾಯಿಸಲು ತರಾತುರಿಯ ಪ್ರಯತ್ನ ಅನಿವಾರ್ಯವಾಗಿದ್ದು, ಜಿಲ್ಲೆಯ ಹೆಚ್ಚಿನ ಭಾಗದಲ್ಲಿ ಬೆಳೆಗಾರರು ಇದಕ್ಕಾಗಿ ಪಡಿಪಾಟಲುಪಡುತ್ತಿದ್ದಾರೆ.