ಶನಿವಾರಸಂತೆ, ಫೆ. ೨೬: ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಕರಾಟೆ ಮತ್ತು ಯೋಗ ಸಂಸ್ಥೆ ವತಿಯಿಂದ ಶನಿವಾರಸಂತೆ ಭಾರತಿ ವಿದ್ಯಾಸಂಸ್ಥೆ ಸಭಾಂಗಣದಲ್ಲಿ ಕರಾಟೆ ಬೆಲ್ಟ್ ಪರೀಕ್ಷೆ ನಡೆಯಿತು.

ಪರೀಕ್ಷೆಯಲ್ಲಿ ಶನಿವಾರಸಂತೆ ಹೋಬಳಿ ವ್ಯಾಪ್ತಿಯ ವಿವಿಧ ಶಾಲೆಗಳಿಂದ ೪೦೦ ವಿದ್ಯಾರ್ಥಿಗಳು ವಿವಿಧ ಹಂತಗಳ ಬೆಲ್ಟ್ಗಳ ಪರೀಕ್ಷೆ ಎದುರಿಸಲು ಹಾಜರಾಗಿದ್ದು ತಮ್ಮ-ತಮ್ಮ ಸಾಮರ್ಥ್ಯ ಪ್ರದರ್ಶಿಸಿದರು.

ಪರೀಕ್ಷೆಯಲ್ಲಿ ೫೦ ವಿದ್ಯಾರ್ಥಿಗಳು ವೈಟ್ ಬೆಲ್ಟ್ನಿಂದ ಯೆಲ್ಲೋ ಬೆಲ್ಟ್ಗೆ, ೪೦ ವಿದ್ಯಾರ್ಥಿಗಳು ಯೆಲ್ಲೊದಿಂದ ಆರೆಂಜ್ ಬೆಲ್ಟ್ಗೆ, ೩೦ ವಿದ್ಯಾರ್ಥಿಗಳು ಆರೆಂಜ್‌ನಿAದ ಹಸಿರು ಬೆಲ್ಟ್ಗೆ ಉತ್ತೀರ್ಣರಾದರು.

ಬ್ಲೂ, ಪರ್ಪಲ್ ಮತ್ತು ಬ್ಲಾಕ್ ಬೆಲ್ಟ್ ಹಂತಗಳಿಗಾಗಿ ವಿದ್ಯಾರ್ಥಿಗಳು ತಮ್ಮ ಶಕ್ತಿ, ಶಿಸ್ತು ಹಾಗೂ ತಾಂತ್ರಿಕ ನಿಪುಣತೆಯನ್ನು ಪ್ರದರ್ಶಿಸಿದರು. ಪ್ರತಿ ವಿಭಾಗದಲ್ಲೂ ಅತ್ಯುತ್ತಮ ಸಾಧನೆ ಮಾಡಿದ “ಬೆಸ್ಟ್ ಆಫ್ ತ್ರಿ’’ ವಿದ್ಯಾರ್ಥಿಗಳನ್ನು ಆಯ್ಕೆ ಮಾಡಿ, ಸ್ಮರಣಿಕೆ ನೀಡಿ ಗೌರವಿಸಲಾಯಿತು.

ಕಾರ್ಯಕ್ರಮದಲ್ಲಿ ರಾಜ್ಯ ಪ್ರಶಸ್ತಿ ಪುರಸ್ಕೃತ ಮುಳ್ಳೂರು ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕ ಸಿ.ಎಸ್ ಸತೀಶ್ ಮಾತನಾಡಿ, ಕರಾಟೆ ಕಲಿಕೆ ವಿದ್ಯಾರ್ಥಿಗಳಲ್ಲಿ ಕೇವಲ ದೈಹಿಕ ಸಾಮರ್ಥ್ಯವನ್ನಷ್ಟೇ ಅಲ್ಲದೇ ಮಾನಸಿಕ ದೃಢತೆ, ಆತ್ಮವಿಶ್ವಾಸ, ಶಿಸ್ತು ಮತ್ತು ಸ್ವಯಂ ರಕ್ಷಣಾ ತಂತ್ರಗಳನ್ನು ಬೆಳೆಸುವ ಮಹತ್ವದ ಕಲೆಯಾಗಿದೆ. ಕೊಡಗಿನಲ್ಲಿ ಕರಾಟೆಯ ಪ್ರತಿಷ್ಠಿತ ಸಂಸ್ಥೆಯನ್ನು ಸ್ಥಾಪಿಸಿರುವ ಕರಾಟೆ ಮಾಸ್ಟರ್ ಅರುಣ್ ಅವರ ಸಾಧನೆ ಶ್ಲಾಘನೀಯ, ಅವರ ಮಾರ್ಗದರ್ಶನದಲ್ಲಿ ಅನೇಕ ವಿದ್ಯಾರ್ಥಿಗಳು ರಾಷ್ಟಿçÃಯ ಚಾಂಪಿಯನ್ ಆಗಿ ಹೊರಹೊಮ್ಮಿರುವುದು ಕೊಡಗಿಗೆ ಹೆಮ್ಮೆಯ ವಿಷಯ ಎಂದರು.

ಕರಾಟೆ ಸಂಸ್ಥೆ ಮುಖ್ಯಸ್ಥ ಅರುಣ್ ಅವರ ನೇತೃತ್ವದಲ್ಲಿ ಮಾರ್ಗದರ್ಶಕ ಶಿಕ್ಷಕರಾದ ಸಂಜಯ್, ಭರತ್, ನಳಿನಾಕ್ಷಿ, ಸಚಿನ್, ಅಶ್ವಿತಾ, ಕನ್ನಿಕಾ ಆಕಾಶ್, ಜಯಣ್ಣ ಪರೀಕ್ಷೆಗಳನ್ನು ನಡೆಸಿಕೊಟ್ಟರು.

ಬ್ರೆöÊಟ್ ಅಕಾಡೆಮಿ ವಿದ್ಯಾಸಂಸ್ಥೆ ಕಾರ್ಯದರ್ಶಿ ಹೇಮಾ ಪರಮೇಶ್, ನಿಡ್ತ ಪ್ರೌಢಶಾಲೆ ಶಿಕ್ಷಕ ಡಿ.ಎಸ್ ಮಧುಕುಮಾರ್, ಕೊಡ್ಲಿಪೇಟೆ ಶಾಲಾ ಶಿಕ್ಷಕಿ ಗಾನವಿ ಹಾಜರಿದ್ದರು.