ಮಡಿಕೇರಿ, ಫೆ. ೨೬: ಸಮಾಜದ ಅಗತ್ಯತೆಗೆ ತಕ್ಕಂತೆ ವಿನೂತನವಾದ ಯೋಜನೆಗಳನ್ನು ಜಾರಿಗೊಳಿಸುವ ನಿಟ್ಟಿನಲ್ಲಿ ರೋಟರಿ ಸಂಸ್ಥೆಗಳು ಕಾರ್ಯಪ್ರವೃತ್ತವಾಗಬೇಕು. ಬದಲಾಗುತ್ತಿರುವ ಕಾಲಕ್ಕೆ ತಕ್ಕಂತೆ ಸಮಾಜದಲ್ಲಿಯೂ ಅಗತ್ಯತೆಗಳ ಬದಲಾವಣೆಗೆ ತಕ್ಕಂತೆ ಯೋಜನೆ ಜಾರಿಯಾಗಬೇಕೆಂದು ರೋಟರಿ ಜಿಲ್ಲೆ ೩೧೯೨ ರ ಬೆಂಗಳೂರು ಪೀಣ್ಯ ರೋಟರಿ ಸಂಸ್ಥೆಯ ಪ್ರಮುಖ ನಾಗೇಂದ್ರಪ್ರಸಾದ್ ಕರೆ ನೀಡಿದ್ದಾರೆ.

ನಗರದ ಹೊರವಲಯದಲ್ಲಿನ ಸಂಪಿಗೆ ಇಕೋ ವಿಲೇಜ್ ರೆಸಾರ್ಟ್ನಲ್ಲಿ ಮಡಿಕೇರಿ ರೋಟರಿ ಮಿಸ್ಟಿ ಹಿಲ್ಸ್ ಮತ್ತು ಪಿರಿಯಾಪಟ್ಟಣ ರೋಟರಿ ಮಿಡ್ ಟೌನ್ ವತಿಯಿಂದ ರೋಟರಿ ವಲಯ ೬ ರ ೧೪ ರೋಟರಿ ಸಂಸ್ಥೆಗಳಿಗೆ ಸೇರಿದ ಸದಸ್ಯರ ಸಮ್ಮಿಲನ ಸಮಾರಂಭ ಉದ್ಗಾಟಿಸಿ ಅವರು ಮಾತನಾಡಿದರು.

ರೋಟರಿ ಸಂಸ್ಥೆಗಳಿಗೆ ಯುವಕ-ಯುವತಿಯರನ್ನು ಹೆಚ್ಚಿನ ಸಂಖ್ಯೆಯಲ್ಲಿ ಆಕರ್ಷಿಸಬೇಕು. ಸೇವಾ ಕಾರ್ಯಗಳಿಗೆ ಯುವಪೀಳಿಗೆ ಮುಂದಾಗುವ ನಿಟ್ಟಿನಲ್ಲಿ ಪ್ರಯತ್ನಗಳು ಸಾಗಬೇಕೆಂದು ಕರೆ ನೀಡಿದ ಅವರು, ಕೋವಿಡ್ ಲಾಕ್‌ಡೌನ್ ಸಂದರ್ಭದಲ್ಲಿಯೂ ರೋಟರಿ ಸಂಸ್ಥೆಗಳು ವಿಶ್ವವ್ಯಾಪಿ ಸಕ್ರಿಯವಾದ ಕಾರ್ಯಚಟುವಟಿಕೆ ಮೂಲಕ ಜನರ ನೆರವಿಗೆ ಮುಂದಾಗಿತ್ತು, ಹಲವೊಮ್ಮೆ ಸರ್ಕಾರಗಳಿಂದಲೂ ಸಾಧ್ಯವಾಗದ ಕಾರ್ಯಯೋಜನೆಗಳು ರೋಟರಿ ಮೂಲಕ ಸಾಧ್ಯವಾಗುತ್ತಿದೆ ಎಂದು ಹೆಮ್ಮೆಯಿಂದ ನುಡಿದರು. ೧೯೦೫ ರಲ್ಲಿ ಗೆಳೆತನ ಮತ್ತು ವ್ಯವಹಾರದ ಉದ್ದೇಶದಿಂದ ಚಿಕಾಗೋ ನಗರದಲ್ಲಿ ಪೌಲ್ ಹ್ಯಾರೀಸ್ ಅವರಿಂದ ಸ್ಥಾಪಿಸಲ್ಪಟ್ಟ ರೋಟರಿ ಸಂಸ್ಥೆ ಇಂದು ಅಗಾಧವಾಗಿ ಜಗತ್ತಿನಾದ್ಯಂತ ಬೇರೂರಿರುವುದಕ್ಕೆ ರೋಟರಿ ಸದಸ್ಯರ ಸಾಮಾಜಿಕ ಸೇವಾ ಉದ್ದೇಶವೇ ಮುಖ್ಯ ಕಾರಣ ಎಂದೂ ನಾಗೇಂದ್ರ ಪ್ರಸಾದ್ ವಿಶ್ಲೇಷಿಸಿದರು.

ಮುಂದಿನ ಸಾಲಿನ ರೋಟರಿ ಗವರ್ನರ್ ಸತೀಶ್ ಬೋಳಾರ್ ಮಾತನಾಡಿ, ರೋಟರಿಗೆ ವಿಶ್ವವ್ಯಾಪಿ ಗೌರವದ ಮನ್ನಣೆಯಿದೆ. ಭಾರತದ ರೋಟರಿ ಸದಸ್ಯರ ವಿನೂತನ ಕಾರ್ಯಯೋಜನೆಗಳು ಜಗತ್ತಿನ ಗಮನ ಸೆಳೆದಿವೆ. ಇತ್ತೀಚೆಗೆ ಬೆಂಗಳೂರು ಮೂಲದ ರೋಟರಿ ಸದಸ್ಯ ರವಿಶಂಕರ್ ಡಾಕೋಜಿ ಅವರು ಅಂತರರಾಷ್ಟಿçÃಯ ರೋಟರಿ ಸಂಸ್ತೆಗೆ ರೂ. ೫೦೦ ಕೋಟಿ ದಾನ ನೀಡಿರುವುದು ಜಗತ್ತಿನ ರೋಟರಿ ಇತಿಹಾಸದಲ್ಲಿಯೇ ಅಪೂರ್ವ ದೇಣಿಗೆಯಾಗಿ ದಾಖಲಾಗಿದೆ ಎಂದರು. ಸಾಮಾಜಿಕ ಸೇವೆಗೆ ಭಾರತೀಯ ರೋಟರಿ ಸದಸ್ಯರು ಸದಾ ಸ್ಪಂದಿಸುವುದಕ್ಕೆ ಭಾರತದ ಮಣ್ಣಿನ ಗುಣವೇ ಪ್ರಮುಖ ಕಾರಣವಾಗಿದೆ ಎಂದೂ ಸತೀಶ್ ಬೋಳಾರ್ ಅಭಿಪ್ರಾಯಪಟ್ಟರು.

ರೋಟರಿಯ ಚುನಾಯಿತ ಗವರ್ನರ್ ಯಶಸ್ವಿ ಸೋಮಶೇಖರ್ ಮಾತನಾಡಿ, ಸ್ವಾರ್ಥರಹಿತ ಸಮಾಜಸೇವೆಯ ಧ್ಯೇಯದೊಂದಿಗೆ ನಾನಾ ಕಾರ್ಯಯೋಜನೆ ಜಾರಿಗೊಳಿಸುವ ಮೂಲಕ ರೋಟರಿಯು ಸಮಾಜದಲ್ಲಿ ಅತ್ಯಂತ ಪ್ರಮುಖ ಸೇವಾ ಸಂಸ್ಥೆಯಾಗಿದೆ. ಜನಪರ ಸೇವಾ ಚಳುವಳಿಗೆ ರೋಟರಿ ಪ್ರಸಿದ್ಧಿ ಪಡೆದಿದೆ. ರೋಟರಿ ಸದಸ್ಯರೆಲ್ಲರೂ ಒಗ್ಗೂಡಿ ಸಮಾಜ ಸೇವೆಗೆ ಮುಂದಾದಲ್ಲಿ ಸಮಾಜದಲ್ಲಿ ಸಾಕಷ್ಟು ಪರಿವರ್ತನೆ ಸಾಧ್ಯವಿದೆ ಎಂದರು.

ರೋಟರಿ ವಲಯ ೬ ರ ಸಹಾಯಕ ಗವರ್ನರ್ ರಾಜುಗೌಡ ಮಾತನಾಡಿ, ರೋಟರಿ ಸೇವಾ ಕಾರ್ಯಗಳು ಇತರರಿಗೂ ಸ್ಫ್ಪೂರ್ತಿಯ ಸೆಲೆಯಾಗಿದೆ ಎಂದರು. ಸಹಾಯಕ ಗವರ್ನರ್ ದಿಲನ್ ಚಂಗಪ್ಪ ಮಾತನಾಡಿ, ೧೧ ವರ್ಷಗಳ ಬಳಿಕ ವಲಯ ೬ ರ ೧೪ ರೋಟರಿ ಸಂಸ್ಥೆಗಳ ೩೫೦ ಸದಸ್ಯರು ಸಮ್ಮಿಲನಗೊಂಡಿರುವುದು ಶ್ಲಾಘನೀಯ ಎಂದರು. ರೋಟರಿ ವಲಯ ಸಹಾಯಕ ಗವರ್ನರ್ ಉಲ್ಲಾಸ್ ಕೃಷ್ಣ ಮಾತನಾಡಿ, ಇದೇ ಮಾರ್ಚ್ ೧ ರಂದು ಕುಶಾಲನಗರ ರೋಟರಿ ಸಂಸ್ಥೆಯ ೫೦ನೇ ವರ್ಷದ ಸಂಭ್ರಮವನ್ನು ವಿಭಿನ್ನ ರೀತಿಯಲ್ಲಿ ಆಚರಿಸಲಾಗುತ್ತಿದೆ ಎಂದು ಮಾಹಿತಿ ನೀಡಿದರು.

ರೋಟರಿ ಸಮ್ಮಿಲನ ಆಚರಣಾ ಸಮಿತಿ ಅಧ್ಯಕ್ಷ ಪಿರಿಯಾಪಟ್ಟಣ ರೋಟರಿ ಮಿಡ್‌ಟೌನ್‌ನ ಸತ್ಯನಾರಾಯಣ್ ಮಾತನಾಡಿ, ೧೪ ರೋಟರಿ ಸಂಸ್ಥೆಗಳ ೩೦೦ಕ್ಕೂ ಅಧಿಕ ಸದಸ್ಯರು ಒಂದೆಡೆ ಸೇರಿ ರೋಟರಿಯ ಭವಿಷ್ಯದ ಹಾದಿಯನ್ನು ನಿರ್ಧರಿಸಲು ಚಿಂತಿಸಿರುವುದು ಶ್ಲಾಘನೀಯ ಬೆಳವಣಿಗೆಯಾಗಿದೆ ಎಂದರು. ರೋಟರಿ ಮಿಸ್ಟಿಹಿಲ್ಸ್ ಅಧ್ಯಕ್ಷ ರತ್ನಾಕರ್ ರೈ ಸ್ವಾಗತಿಸಿ, ಪಿರಿಯಾಪಟ್ಟಣ ರೋಟರಿ ಮಿಡ್‌ಟೌನ್ ಅಧ್ಯಕ್ಷ ಜಿ.ಕೆ. ಜಗನ್ ವಂದಿಸಿ, ಕಾರ್ಯಕ್ರಮವನ್ನು ಸಮ್ಮಿಲನ ಕಾರ್ಯಕ್ರಮ ಸಮಿತಿ ಸಂಚಾಲಕ ಅನಿಲ್ ಎಚ್.ಟಿ. ನಿರೂಪಿಸಿದರು. ಮಿಸ್ಟಿಹಿಲ್ಸ್ ಕಾರ್ಯದರ್ಶಿ ಬಿ.ಕೆ. ಕಾರ್ಯಪ್ಪ, ಮಿಡ್‌ಟೌನ್ ಕಾರ್ಯದರ್ಶಿ ಟಿ.ಕೆ. ಚೇತನ್ ವೇದಿಕೆಯಲ್ಲಿದ್ದರು. ಡಾ. ಚೆರಿಯಮನೆ ಪ್ರಶಾಂತ್ ಅತಿಥಿ ಪರಿಚಯ ಮಾಡಿದರು. ವೀರಾಜಪೇಟೆಯ ಟಿ.ಡಿ. ಮೋಹನ್, ಅನ್ವಿತ್ ಕುಮಾರ್, ಸುಪ್ರಿತಾ ದಿಲೀಪ್, ಅಜಿತ್ ಕುಮಾರ್, ಇಶಾನಿ ರೈ ತಂಡದಿAದ ಸಂಗೀತ ಸಂಜೆ ಆಯೋಜಿತವಾಗಿತ್ತು.