ಕೂಡಿಗೆ, ಫೆ. ೨೫: ಜಿಲ್ಲೆಯ ರೈತರು ಕಳೆದ ೧೫ ವರ್ಷಗಳಿಂದಲೂ ವಾಣಿಜ್ಯ ಬೆಳೆಗಳ ಬೇಸಾಯದತ್ತ ಹೆಚ್ಚು ಒಲವು ತೋರುತ್ತಿದ್ದು ಈ ಸಾಲಿನಲ್ಲಿಯೂ ನೂರಾರು ರೈತರು ಈಗಾಗಲೇ ಸಿದ್ಧತೆ ಮಾಡಿಕೊಂಡಿರುವ ಭೂಮಿಯಲ್ಲಿ ವಾಣಿಜ್ಯ ಬೆಳೆ ಶುಂಠಿ ಬಿತ್ತನೆ ಕಾರ್ಯವನ್ನು ಆರಂಭಿಸಿದ್ದಾರೆ.

ತುಮಕೂರು, ಹಾಸನ, ಮೈಸೂರು, ಚಾಮರಾಜನಗರ ಜಿಲ್ಲೆಗಳ ಬಯಲು ಸೀಮೆ ಪ್ರದೇಶದಲ್ಲಿ ಹೆಚ್ಚಾಗಿ ಶುಂಠಿ ಬೆಳೆಯಲಾಗುತ್ತಿದ್ದು, ಕೊಡಗಿನ ರೈತರು ಆ ಜಿಲ್ಲೆಗಳಿಂದ ಬಿತ್ತನೆ ಬೀಜ ತಂದು ಬೆಳೆಯುತ್ತಿದ್ದಾರೆ.

ಇತರ ಸೌಲಭ್ಯಗಳೊಂದಿಗೆ ಕೊಳವೆ ಬಾವಿಯಿಂದ ನೀರಾವರಿ ಸೌಲಭ್ಯಗಳನ್ನು ಅಳವಡಿಕೆ ಮಾಡಿಕೊಂಡು ಶುಂಠಿ ಬೇಸಾಯದ ವ್ಯವಸ್ಥೆಗೆ ಸಂಬAಧಿಸಿದAತೆ ಸಾವಯವ ಗೊಬ್ಬರ, ಸಗಣಿ ಗೊಬ್ಬರ, ಶುಂಠಿಗೆ ಯಾವುದೇ ರೋಗಗಳು ಭಾಧಿಸದ ಹಾಗೆ ಮುನ್ನೆಚ್ಚರಿಕಾ ಕ್ರಮಗಳನ್ನು ಅನುಸರಿಸಿ ಬಿತ್ತನೆಯಲ್ಲಿ ತೊಡಗಿದ್ದಾರೆ. ನೆರಳಿಗೆ ಭತ್ತದ ಹುಲ್ಲಿನ ಜೊತೆಯಲ್ಲಿ ಮೆಕ್ಕೆಜೋಳದ ಕಡ್ಡಿಗಳನ್ನು ಹಾಕಲಾಗುತ್ತಿದೆ.