ಮುಳ್ಳೂರು, ಫೆ. ೨೫: ಸಮೀಪದ ನಿಡ್ತ ಸರಕಾರಿ ಪ್ರೌಢಶಾಲೆಯ ನಿಸರ್ಗ ಇಕೋ ಕ್ಲಬ್ ವತಿಯಿಂದ ವಿದ್ಯಾರ್ಥಿಗಳಿಗೆ ಪರಿಸರಕ್ಕಾಗಿ ಜೀವನ ಶೈಲಿ ಬದಲಾವಣೆ ಎಂಬ ವಿಷಯದ ಕುರಿತು ಮಾಗದರ್ಶನ ಮತ್ತು ಮಾಹಿತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ವಿದ್ಯಾರ್ಥಿಗಳಿಗೆ ವಿಷಯದ ಕುರಿತು ಮಾಹಿತಿ ನೀಡಿದ ಶಾಲಾ ಶಿಕ್ಷಕ ಜಗದೀಶ್, ನಾವು ಪರಿಸರ ಸಮೃದ್ದಿ ಬಗ್ಗೆ ಮಾತ್ರ ಜಾಗೃತಿ ಹೊಂದಿದರೆ ಸಾಲದು. ಪರಿಸರಕ್ಕಾಗಿ ತಮ್ಮ ಜೀವನ ಶೈಲಿ ಬದಲಾವಣೆ ಮಾಡುವ ನಿಟ್ಟಿನಲ್ಲಿ ಜಾಗೃತಿ ಹೊಂದಬೇಕು. ಪರಿಸರ ನಮಗೆ ನೀಡಿರುವ ಅಂಶವನ್ನು ಯಾವ ರೀತಿ ಬಳಕೆ ಮಾಡಿಕೊಂಡು ಉಳಿಸಿಕೊಳ್ಳಬೇಕು ಮತ್ತು ಪರಿಸರದಲ್ಲಿ ಉತ್ತಮ ಶೈಲಿಯ ಜೀವನ ನಡೆಸುತ್ತಿರುವ ನಮ್ಮ ಜವಾಬ್ದಾರಿಯ ಬಗ್ಗೆಯೂ ಚಿಂತನೆ ಹರಿಸಬೇಕಾಗಿದೆ ಎಂದು ಕರೆ ನೀಡಿದರು.
ಪ್ಲಾಸ್ಟಿಕ್ ವಸ್ತುಗಳ ಬಳಕೆಯಿಂದ ಪರಿಸರದ ಮೇಲೆ ಹಾನಿಯಾಗುತ್ತಿದ್ದು ಈ ಬಗ್ಗೆ ವಿದ್ಯಾರ್ಥಿಗಳು ಜನರಲ್ಲಿ ಪ್ಲಾಸ್ಟಿಕ್ ವಸ್ತುಗಳ ಬಳಕೆ ಮಾಡದಂತೆ ಜಾಗೃತಿ ಮೂಡಿಸಬೇಕು. ನೀರು, ವಿದ್ಯುತ್ ಉಳಿಸಬೇಕು ಎಂದರು.
ಕಾರ್ಯಕ್ರಮದಲ್ಲಿ ಶಾಲಾ ಮುಖ್ಯ ಶಿಕ್ಷಕಿ ಎಂ.ಸಿ. ನಳಿನಿ, ಸಹ ಶಿಕ್ಷಕರಾದ ಮಾರುತಿ ಅರೇರ್, ಎಂ.ವಿ. ರೂಪಾ, ಡಿ.ಎಂ. ಮಹಾದೇವಿ, ಗೀತಾ ಇಕ್ಕೋ ಕ್ಲಬ್ ನೋಡಲ್ ಶಿಕ್ಷಕ ಡಿ.ಎಸ್. ಮಧುಕುಮಾರ್ ಮುಂತಾದವರು ಹಾಜರಿದ್ದರು.