ಕೂಡಿಗೆ, ಫೆ. ೨೫: ಕುಶಾಲನಗರ ತಾಲೂಕು ಹಿಂದೂ ಸಂಗಮ ಆಯೋಜನಾ ಸಮಿತಿಯ ನಂಜರಾಯಪಟ್ಟಣ ಮಂಡಲದ ವತಿಯಿಂದ ಹಿಂದೂ ಸಂಗಮ ಪ್ರಯುಕ್ತ ಅದ್ದೂರಿ ಶೋಭಾಯಾತ್ರೆ ಹಮ್ಮಿಕೊಳ್ಳಲಾಗಿತ್ತು.
ಹೊಸಪಟ್ಟಣದ ಬಸವೇಶ್ವರ ದೇವಾಲಯದಲ್ಲಿ ಪೂಜೆ ಸಲ್ಲಿಸಿ ಮೆರವಣಿಗೆಗೆ ಚಾಲನೆ ನೀಡಲಾಯಿತು. ಹೊಸಪಟ್ಟಣದಿಂದ ಆರಂಭಗೊAಡ ಶೋಭಾಯಾತ್ರೆಯ ಮೆರವಣಿಗೆ ನಂಜರಾಯಪಟ್ಟಣ ಸೊಸೈಟಿವರೆಗೆ ತೆರಳಿ ಬಳಿಕ ನಂಜುAಡೇಶ್ವರ ದೇವಾಲಯ ಬಳಿ ಸಮಾಪ್ತಿಗೊಂಡಿತು.
ವಿವಿಧ ವೇಷಧಾರಿ ಮಕ್ಕಳು, ಬೆಳ್ಳಿ ರಥ, ಭಾರತಾಂಭೆ ಭಾವಚಿತ್ರ ಒಳಗೊಂಡ ವಾಹನದೊಂದಿಗೆ ಕಲಶಹೊತ್ತ ಮಹಿಳೆಯರ ಸಮ್ಮುಖದಲ್ಲಿ ೭೦೦ ಕ್ಕೂ ಅಧಿಕ ಹಿಂದೂ ಬಾಂಧವರು ಕೇಸರಿ ಶಲ್ಯ ಧರಿಸಿ ಭಾವುಟ ಹಿಡಿದು ಮೆರವಣಿಗೆಯಲ್ಲಿ ಸಾಗಿಬಂದರು. ಮೆರವಣಿಗೆ ಉದ್ದಕ್ಕೂ ಮಕ್ಕಳಿಂದ ಸಾಂಪ್ರದಾಯಿಕ ಭಜನೆ, ನೃತ್ಯ ಪ್ರದರ್ಶನ ನಡೆಯಿತು. ಚಂಡೆವಾದ್ಯದೊAದಿಗೆ ಬೃಹತ್ ಗೊರಿಲ್ಲಾ ಮತ್ತಿತರ ಗೊಂಬೆ ವೇಷಧಾರಿಗಳು ಮೆರವಣಿಗೆಯಲ್ಲಿ ಗಮನ ಸೆಳೆದವು.
ಕಾರ್ಯಕ್ರಮವನ್ನುದ್ದೇಶಿಸಿ ನಂಜರಾಯಪಟ್ಟಣ ಮಂಡಲ ಅಧ್ಯಕ್ಷ ಬಿ.ಸಿ ಮುರಳಿ ಮಾದಯ್ಯ ಮಾತನಾಡಿ, ಜಾತಿ, ಉಪಜಾತಿ ಆಧಾರದ ಮೇಲೆ ಈ ಹಿಂದಿನಿAದಲೂ ಇದ್ದ ಹಿಂದೂಗಳನ್ನು ಒಡೆದಾಳುವ ನೀತಿ ಇಂದಿಗೂ ಮುಂದುವರೆದುಕೊAಡು ಬಂದಿದೆ. ಹಿಂದೂಗಳು ಎಲ್ಲರೂ ಒಂದು ಎಂದು ಸಾರುವ ನಿಟ್ಟಿನಲ್ಲಿ ಹಾಗೂ ಮುಂದಿನ ಪೀಳಿಗೆಗೆ ಧರ್ಮ ಮತ್ತು ಸಂಸ್ಕೃತಿಯ ಅರಿವು ಮೂಡಿಸುವುದು, ಹಿಂದೂ ಬಾಂಧವರನ್ನು ಒಗ್ಗೂಡಿಸುವ ಉದ್ದೇಶದಿಂದ ಈ ಹಿಂದೂ ಸಂಗಮ ಕಾರ್ಯಕ್ರಮ ಆಯೋಜಿಸಿರುವುದಾಗಿ ಹೇಳಿದರು.
ಕಾರ್ಯಕ್ರಮದ ಕುರಿತು ಪ್ರಮುಖರಾದ ಕೆ.ವಿ ಪ್ರೇಮಾನಂದ ಮಾತನಾಡಿ, ಅತ್ಯಧಿಕ ಸಂಖ್ಯೆಯಲ್ಲಿ ಹಿಂದೂ ಬಾಂಧವರು ಕಾರ್ಯಕ್ರಮದಲ್ಲಿ ಪಾಲ್ಗೊಂಡು ಒಗ್ಗಟ್ಟಿನ ಸಂದೇಶ ಸಾರಿದ್ದಾರೆ ಎಂದರು. ಆರ್.ಎಸ್.ಎಸ್ ಕಾರ್ಯಕಾರಿಣಿ ಸದಸ್ಯರಾದ ಸುಳ್ಯದ ನವೀನ್ ಸುಬ್ರಮಣ್ಯ ದಿಕ್ಸೂಚಿ ಭಾಷಣ ಮಾಡಿದರು.
ಈ ಸಂದರ್ಭ ಕುಶಾಲನಗರ ತಾಲೂಕು ಹಿಂದೂ ಸಂಗಮ ಆಯೋಜನಾ ಸಮಿತಿ ಅಧ್ಯಕ್ಷರಾದ ದೇವಿಪ್ರಸಾದ್, ನಂಜರಾಯಪಟ್ಟಣ ನಂಜುAಡೇಶ್ವರ ದೇವಾಲಯ ಸಮಿತಿ ಅಧ್ಯಕ್ಷ ಎನ್.ಕೆ ಮೋಹನ್ ಕುಮಾರ್, ಮಾಜಿ ಶಾಸಕ ಅಪ್ಪಚ್ಚು ರಂಜನ್, ಗ್ರಾಮ ಪಂಚಾಯಿತಿ ಮಾಜಿ ಸದಸ್ಯರಾದ ಆರ್.ಕೆ ಚಂದ್ರ, ಮಾವಜಿ ರಕ್ಷಿತ್, ನವೀನ, ಉದ್ಯಮಿ ಕೆ.ಎಸ್ ರತೀಶ್, ಪ್ರಮುಖರಾದ ವಿಜು ಚಂಗಪ್ಪ, ಯದುಕುಮಾರ್, ವಂದನಾ ಸೇರಿದಂತೆ ಮಾಜಿ ಜನಪ್ರತಿನಿಧಿಗಳು, ಸಂಘ-ಸAಸ್ಥೆಗಳ ಪ್ರಮುಖರು ಇದ್ದರು.