ಮಡಿಕೇರಿ, ಫೆ. ೨೫: ದಕ್ಷಿಣ ಕೊಡಗಿನ ಬಾಡಗರಕೇರಿ ಗ್ರಾಮದಲ್ಲಿರುವ ಐತಿಹಾಸಿಕ ಹಿನ್ನೆಲೆಯ ಶ್ರೀ ಮೃತ್ಯುಂಜಯ ದೇವಸ್ಥಾನದ ವಾರ್ಷಿಕ ಉತ್ಸವ ತಾ. ೨೬ ರಿಂದ (ಇಂದಿನಿAದ) ಆರಂಭಗೊಳ್ಳಲಿದ್ದು, ಮಾರ್ಚ್ ೮ ರವರೆಗೆ ಜರುಗಲಿದೆ.
ತಾ. ೨೬ ರಂದು (ಇಂದು) ಕೊಡಿಮರ ನಿಲ್ಲಿಸುವ ಮೂಲಕ ೧೧ ದಿನಗಳ ವಾರ್ಷಿಕ ಪೂಜೋತ್ಸವಗಳಿಗೆ ಚಾಲನೆ ಸಿಗಲಿದೆ. ಬೆಳಗ್ಗಿನ ಜಾವ ತಕ್ಕಮುಖ್ಯಸ್ಥರು, ಆಡಳಿತ ಮಂಡಳಿ, ಊರಿನವರು ಮತ್ತು ಊರಿನ ಮಹಿಳೆಯರಿಂದ ೧೨ ತಳಿಯ ತಕ್ಕಿಬೊಳ್ಚ ದುಡಿಕೊಟ್ಟ್ ಪಾಟ್ನೊಂದಿಗೆ ಹಬ್ಬಕ್ಕೆ ಚಾಲನೆ ಸಿಗಲಿದ್ದು, ನಂತರ ಊರಿನ ಪರವಾಗಿ ಶತರುದ್ರಾಭಿಷೇಕ, ಪ್ರಸಾದ ವಿತರಣೆ, ರಾತ್ರಿ ೮ ಗಂಟೆಗೆ ಆರಿದ್ರ ನಕ್ಷತ್ರ ಶುಭ ಮುಹೂರ್ತದಲ್ಲಿ ಕೊಡಿಮರ ನಿಲ್ಲಿಸುವದು, ಶುದ್ಧ ಕಲಶ, ಉತ್ಸವ ಮೂರ್ತಿಗಳ ದರ್ಶನ, ಪ್ರಸಾದ ವಿತರಣೆ ನಂತರ ಅನ್ನದಾನವಿದೆ.
ತಾ. ೨೭ ರಿಂದ ಬೆಳಿಗ್ಗೆ ೧೧ ರಿಂದ ನಿತ್ಯಪೂಜೆ, ಸಂಜೆ ತೂಚಂಬಲಿ, ಬೆಳಿಗ್ಗೆ ೫ಕ್ಕೆ ಉತ್ಸವ ಮೂರ್ತಿಯದರ್ಶನದಂತಹ ಕಾರ್ಯಕ್ರಮಗಳು ಜರುಗಲಿವೆ. ಮಾ. ೨ ರ ಬೆಳಿಗ್ಗೆ ೫ ರಿಂದ ಇರುಬಳಕು, ತುಲಾಭಾರ ಸೇವೆಗಳು ತಾ. ೫ ರಿಂದ ಹರಕೆ ಬಳಕು ಆರಂಭಗೊಳ್ಳಲಿವೆ. ಮಾ. ೭ ರಂದು ನಿತ್ಯಪೂಜೆಯೊಂದಿಗೆ ಸಂಜೆ ೫ ಗಂಟೆಗೆ ನೆರಪು, ರಾತ್ರಿ ೮ಕ್ಕೆ ಶ್ರೀ ವಿಷ್ಣು ದೇವರ ಅಲಂಕಾರ ಪೂಜೆ ಹಾಗೂ ಅಂತಿಮ ದಿನವಾದ ತಾ. ೮ ರಂದು ಬೆಳಿಗ್ಗೆ ೧೦ ರಿಂದ ನಿತ್ಯಪೂಜೆ, ತುಲಾಭಾರ, ಅಪರಾಹ್ನ ೩ ಗಂಟೆಗೆ ಶಾಸ್ತೊçÃಕ್ತವಾಗಿ ೧೨ ತೆಂಗಿನಕಾಯಿಗೆ ಗುಂಡು ಹೊಡೆಯುವ ಕಾರ್ಯಕ್ರಮ ಸಂಜೆ ೫ ಗಂಟೆಗೆ ಉತ್ಸವ ಮೂರ್ತಿ ದರ್ಶನ, ಅವಭೃತ ಸ್ನಾನ, ರಾತ್ರಿ ೮.೩೦ ಗಂಟೆಗೆ ಉತ್ಸವ ಮೂರ್ತಿಯನ್ನು ಊರಿನ ಪ್ರತಿ ಕುಟುಂಬದ ಮಹಿಳೆಯರು ಸಾಂಪ್ರದಾಯಿಕ ಉಡುಗೆ ತಳಿಯ ತಕ್ಕಿ ಬೊಳ್ಚದೊಂದಿಗೆ ಸ್ವಾಗತಿಸುವದು ನಂತರ ದೇವರ ದರ್ಶನ ವಸಂತಪೂಜೆ ನಡೆಯಲಿದೆ.
ಇದಕ್ಕೂ ಮುನ್ನ ಸಂಜೆ ೬ ರಿಂದ ಸಾಂಸ್ಕೃತಿಕ ಕಾರ್ಯಕ್ರಮವಿದೆ ಎಂದು ತಕ್ಕಮುಖ್ಯಸ್ಥರು, ಅಧ್ಯಕ್ಷರು ಹಾಗೂ ಆಡಳಿತ ಮಂಡಳಿಯವರು ತಿಳಿಸಿದ್ದಾರೆ.