ಕೂಡಿಗೆ, ಫೆ. ೨೪: ಕರ್ನಾಟಕ ರಾಜ್ಯದಲ್ಲಿಯೇ ಪ್ರಥಮವಾಗಿ ಆರಂಭಗೊAಡ., ಸಾವಿರಾರು ಕ್ರೀಡಾರ್ಥಿಗಳಿಗೆ ತರಬೇತಿ ನೀಡಿ ರಾಜ್ಯ, ರಾಷ್ಟç, ಅಂತರರಾಷ್ಟಿçÃಯ ಕ್ರೀಡಾಪಟುಗಳನ್ನು ಕೊಡುಗೆಯಾಗಿ ನೀಡಿದ ಕೂಡಿಗೆಯ ಕ್ರೀಡಾ ಪ್ರೌಢಶಾಲೆ ಇದೀಗ ಸರಕಾರಿ ನೌಕರರೇ ಇಲ್ಲದೆ ನಡೆಯುತ್ತಿದೆ.

೧೯೮೨ರಲ್ಲಿ ಅಂದಿನ ಮುಖ್ಯಮಂತ್ರಿ. ಜಿಲ್ಲೆಯ ಕುಶಾಲನಗರದವರಾದ ದಿ. ಗುಂಡೂರಾವ್ ಅವರ ಕನಸಿನ ಕೂಸಾದ ಕೂಡಿಗೆ ಕ್ರೀಡಾ ಶಾಲೆ ಇದುವರೆಗೆ ಹಲವು ಏಳು-ಬಿಳುಗಳನ್ನು ಕಾಣುತ್ತಾ ಸರಕಾರದ ವಿವಿಧ ಯೋಜನೆಯನ್ನು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ನಿಯಮಾನುಸಾರ ಅನುಗುಣವಾಗಿ ಹಂತ ಹಂತವಾಗಿ ಪ್ರಗತಿ ಕಾಣುತ್ತಾ ಬರುತ್ತಿದೆ. ಈ ಕ್ರಿಡಾ ಶಾಲೆಯಲ್ಲಿ ವಿದ್ಯಾಭ್ಯಾಸದೊಂದಿಗೆ ಕ್ರೀಡಾ ತರಬೇತಿ ಪಡೆದ ಸಹಸ್ರಾರು ಮಂದಿ ರಾಷ್ಟಿçÃಯ, ಅಂತರರಾಷ್ಟಿçÃಯ ಮಟ್ಟದಲ್ಲಿ ಭಾಗವಹಿಸಿ, ಉತ್ತಮ ಪ್ರದರ್ಶನ ನೀಡಿ ದೇಶ, ರಾಜ್ಯ, ಜಿಲ್ಲೆಗೆ ಗೌರವ ತಂದುಕೊಟ್ಟಿರುತ್ತಾರೆ.

ಆದರೆ ಇದುವರೆಗೆ ಶಾಲೆಯಲ್ಲಿ ಇದ್ದ ಸರಕಾರಿ ನೌಕರರು , ಶಿಕ್ಷಕರಾಗಿ ಸೇವೆ ಸಲ್ಲಿಸಿದವರು ವಯೋನಿವೃತ್ತಿ ಹೊಂದಿ ೯ ತಿಂಗಳುಗಳು ಕಳೆದರೂ ಇನ್ನೂ ಕೂಡ ಮರು ನೇಮಕಾತಿಯಾಗದೆ ಹಂಗಾಮಿ ನೌಕರರು, ಶಿಕ್ಷಕರು ಮಾತ್ರ ಸೇವೆ ಸಲ್ಲಿಸುತ್ತಿದ್ದಾರೆ.

ಕಳೆದ ೩ ವರ್ಷಗಳಿಂದ ಸರಕಾರಿ ನೌಕರರಾಗಿ, ಶಾಲೆಯ ಶಿಕ್ಷಕರಾಗಿ, ಪ್ರಬಾರ ಮುಖ್ಯೋಪಾಧ್ಯಾಯರಾಗಿ ಸೇವೆ ಸಲ್ಲಿಸುತ್ತಿದ್ದವರು ಕಳೆದ ೯ ತಿಂಗಳ ಹಿಂದೆ ನಿವೃತ್ತಿ ಹೊಂದಿದ್ದಾರೆ. ಈಗ ಇರುವ ವಿವಿಧ ವಿಭಾಗದ ಶಿಕ್ಷಕರು ಗೌರವ ಧನದ ಆಧಾರದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಶಿಕ್ಷಣ ಇಲಾಖೆಯ ನಿಯಮಾನುಸಾರ ಪ್ರಥಮವಾಗಿ ಮುಖ್ಯೋಪಾಧ್ಯಾಯರ ನೇಮಕ ಅಗಬೇಕಾಗಿದೆ, ಕಳೆದ ೩೫ ವರ್ಷಗಳಿಂದಲೂ ಸರಕಾರಿ ನೌಕರರ ನೇಮಕಾತಿ ಅಗದೆ ಇರುವ ಈ ಇಲಾಖೆಯಲ್ಲಿ ಇಂದು ಇಬ್ಬರು ಶಿಕ್ಷಕರಲ್ಲಿ ಕಳೆದ ೫ ವರ್ಷಗಳಲ್ಲಿ ಒಬ್ಬರು ನಿವೃತ್ತಿ ಹೊಂದಿದ ಹಿನ್ನೆಲೆಯಲ್ಲಿ ಇದುವರೆಗೆ ಇದ್ದ ಒಬ್ಬ ಶಿಕ್ಷಕ ಇದೀಗ ನಿವೃತ್ತಿಗೊಂಡ ಹಿನ್ನೆಲೆಯಲ್ಲಿ ಸರಕಾರಿ ಶಿಕ್ಷಕರಿಲ್ಲದ ಕ್ರೀಡಾ ಶಾಲೆಯಾಗಿದೆ.

ಉತ್ತಮ ತರಬೇತಿ

ಇಲ್ಲಿನ ಕ್ರೀಡಾ ತರಬೇತಿದಾರರು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಮುಖೇನ ನೇರ ಆಯ್ಕೆಗೊಂಡು ವಿದ್ಯಾರ್ಥಿಗಳಿಗೆ ಉತ್ತಮ ರೀತಿಯಲ್ಲಿ ತರಬೇತಿ ನೀಡುತ್ತಿದ್ದಾರೆ. ಈಗಾಗಲೇ ಶಾಲೆಯು ಆರಂಭಗೊAಡು ೪೩ ವರ್ಷಗಳು ಕಳೆಯುತ್ತಾ ಬಂದಿದೆ. ಅಂದಿನ ದಿನಗಳಲ್ಲಿ ಮಣ್ಣಿನ ನೆಲದಲ್ಲಿ ಆರಂಭಗೊAಡ ಕ್ರೀಡಾ ತರಬೇತಿ ಇದೀಗ ದೇಶೀಯ ಮತ್ತು ಅಂತರರಾಷ್ಟಿçÃಯ ಮಟ್ಟದ ಕ್ರೀಡಾಕೂಟಗಳು ನಡೆಸುವಂತಹ ಉತ್ತಮ ಗುಣಮಟ್ಟದ ಕ್ರೀಡಾಂಗಣದಲ್ಲಿ ನಡೆಯುತ್ತಿದೆ.

ಕೂಡಿಗೆ ಕ್ರೀಡಾ ಶಾಲೆ ಆರಂಭದಿAದಲೂ ವಿವಿಧ ಹಂತಗಳಲ್ಲಿ ಉತ್ತಮ ಕ್ರೀಡಾಪಟುಗಳನ್ನು ಸಿದ್ದಪಡಿಸುವುದರ ಜೊತೆಗೆ ಶಿಕ್ಷಣವನ್ನು ನೀಡುತ್ತಾಬಂದಿದೆ. ಕೂಡಿಗೆ ಕ್ರೀಡಾ ಶಾಲೆಯಲ್ಲಿ ತರಬೇತಿ ಪಡೆದ ವಿದ್ಯಾರ್ಥಿಗಳಲ್ಲಿ ಅನೇಕರು ದೇಶವನ್ನು ಪ್ರತಿನಿಧಿಸಿದ್ದಾರೆ. ಭಾರತ ಹಾಕಿ ತಂಡ ಆಟಗಾರ ರವಿನಾಯಕ್ ಸೇರಿದಂತೆ ಆಥ್ಲೆಟಿಕ್ ವಿಭಾಗ, ಬೇರೆ, ಬೇರೆ ಕ್ರೀಡೆಗಳಲ್ಲಿ ಅನೇಕ ವಿದ್ಯಾರ್ಥಿಗಳು ವಿವಿಧ ಹಂತಗಳಲ್ಲಿ ರಾಷ್ಟಿçÃಯ, ಮತ್ತು ಅಂತರರಾಷ್ಟಿçÃಯ ಮಟ್ಟದಲ್ಲಿ ತಮ್ಮ ಕ್ರೀಡಾ ಪ್ರತಿಭೆಯನ್ನು ಮೆರೆದಿದ್ದಾರೆ.

ವಸತಿ-ಶಿಕ್ಷಣ

ರಾಜ್ಯದಲ್ಲಿ ಪ್ರಥಮವಾಗಿ ಆರಂಭಗೊAಡ ಕ್ರೀಡಾ ಪ್ರೌಢಶಾಲೆಯಲ್ಲಿ ಪ್ರೌಢಶಾಲಾ ವಿದ್ಯಾಭ್ಯಾಸ ಮುಗಿಸಿದ ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ಪದವಿಪೂರ್ವ ಶಿಕ್ಷಣಕ್ಕೆ ಅವಕಾಶವನ್ನು ಸರಕಾರ ಮಾಡಿಕೊಟ್ಟಿದೆ. ಆದರೆ ಪದವಿಪೂರ್ವ ವಿದ್ಯಾರ್ಥಿಗಳಿಗೆ ತರಬೇತಿ ಮತ್ತು ವಸತಿಗೃಹಗಳ ಅವಕಾಶ ಶಾಲಾ ಆವರಣದಲ್ಲಿಯೇ ಇದ್ದು, ವಿದ್ಯಾಭ್ಯಾಸ ಮಾತ್ರ ಬೇರೆ ಪದವಿಪೂರ್ವ ಕಾಲೇಜಿನಲ್ಲಿ ಪಡೆಯುತ್ತಿದ್ದಾರೆ.

ರೂ.೩ ಕೋಟಿ ಅನುದಾನ

ಈ ಸಾಲಿನಲ್ಲಿ ರಾಜ್ಯ ಸರಕಾರ ರೂ. ೩ ಕೋಟಿ ಅನುದಾನವನ್ನು ಬಜೆಟ್‌ನಲ್ಲಿ ಕೂಡಿಗೆ ಕ್ರೀಡಾ ಶಾಲೆಯ ಅಭಿವೃದ್ಧಿಗೆ ಘೋಷಣೆ ಮಾಡಿದೆ. ಇದರಿಂದಾಗಿ ಕ್ರೀಡಾ ಶಾಲೆಗೆ ಸುಸಜ್ಜಿತ ವಿದ್ಯಾರ್ಥಿಗಳ ವಸತಿ ಗೃಹ, ಮತ್ತು ನೂತನ ಕಟ್ಟಡ ಹಾಗೂ ಇತರ ದುರಸ್ತಿ ಕಾರ್ಯಕ್ಕೆ ಅನುಕೂಲವಾಗಿ ಈಗಾಗಲೇ ಅದರ ಕ್ರಿಯಾ ಯೋಜನೆ ರಾಜ್ಯ ಮಟ್ಟದ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಮೂಲಕ ನಡೆಯುತ್ತಿದೆ. ಇದರ ಜೊತೆಯಲ್ಲಿ ಇನ್ನೂ ಹೆಚ್ಚಿನ ಪ್ರಗತಿ ಹೊಂದಲು ಸರಕಾರ ಇಲಾಖೆಯ ನಿಯಮಾನುಸಾರ ಸರಕಾರಿ ನೌಕರರುಗಳ ನೇಮಕÀ ಮಾಡುವದರೊಂದಿಗೆ ಕ್ರೀಡಾ ಜಿಲ್ಲೆಯಲ್ಲಿ ಕ್ರೀಡಾ ವಿದ್ಯಾರ್ಥಿಗಳಿಗೆ ಹೆಚ್ಚಿನ ಸೌಲಭ್ಯಗಳನ್ನು ಒದಗಿಸಬೇಕಾಗಿದೆ.

ಆವರಣದಲ್ಲಿ ಕಾಡು

ವಿಶಾಲವಾದ ಆವರಣವನ್ನು ಹೊಂದಿರುವ ಈ ಕ್ರೀಡಾ ಶಾಲೆಯ ಆವರಣ ನಿರ್ವಹಣೆಯ ಕೊರತೆಯಿಂದಾಗಿ ಕೆಲವು ಕಡೆಗಳಲ್ಲಿ ಕಾಡಿನಿಂದ ಆವೃತ್ತವಾಗಿದೆ. ಅಥ್ಲೆಟಿಕ್ ಟ್ರಾö್ಯಕ್ ಹಾಗೂ ಪದವಿ ಪೂರ್ವ ಬಾಲಕರ ವಸತಿ ನಿಲಯದ ಬಳಿ ಸಂಪೂರ್ಣ ಕಾಡು ಕೂಡಿಕೊಂಡಿದ್ದು, ಹಾವುಗಳು ಸೇರಿದಂತೆ ಸರೀಸೃಪಗಳು ವಸತಿ ನಿಲಯದ ಬಳಿಯಲ್ಲಿಯೇ ಹರಿದಾಡುತ್ತಿದ್ದು, ಕ್ರೀಡಾರ್ಥಿಗಳಲ್ಲಿ ಆತಂಕ ಮೂಡಿಸುತ್ತಿದೆ.

ಈಗಾಗಲೇ ಸಂಬAಧಿಸಿದ ರಾಜ್ಯ ಮಟ್ಟದ ಅಧಿಕಾರಿ ವರ್ಗದವರಿಗೆ ಇದರ ಬಗ್ಗೆ ಸಮಗ್ರವಾದ ವರದಿಯನ್ನು ನೀಡಲಾಗಿದೆ ಎಂದು ಜಿಲ್ಲಾ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಉಪ ನಿರ್ದೇಶಕರು ತಿಳಿಸಿದ್ದಾರೆ.

ಪದವಿ ನಿಲಯ ಅಗತ್ಯ

ಹಾಕಿ ಮತ್ತು ಅಥ್ಲೆಟಿಕ್‌ನಲ್ಲಿ ಅಂತರರಾಷ್ಟಿçÃಯ ಮಟ್ಟದ ಸೌಕರ್ಯಗಳನ್ನು ಒಳಗೊಂಡಿರುವ ಕ್ರೀಡಾಶಾಲೆ ಕೂಡಿಗೆಯಲ್ಲಿ ಪದವಿ ತರಗತಿಗಳಿಗಾಗಿ ಹಾಸ್ಟೆಲ್ ಸೌಕರ್ಯಗಳನ್ನು ಪ್ರಾರಂಭಿಸುವುದು ಬಹಳ ಸೂಕ್ತವಾಗಿರುತ್ತದೆ. ಕೊಡಗಿನ ಕ್ರೀಡಾಪಟುಗಳು ಹೊರಜಿಲ್ಲೆಗೆ ಹೋಗಿ ಅಲ್ಲಿ ಸೌಲಭ್ಯಗಳನ್ನು ಉಪಯೋಗಿಸಿಕೊಳ್ಳುತ್ತಿದ್ದಾರೆ. ಅದರ ಬದಲಿಗೆ ಕೂಡಿಗೆ ಕ್ರೀಡಾ ನಿಲಯದಲ್ಲಿ ಪದವಿ ಮತ್ತು ಎರಡು ವರ್ಷಗಳ ಉತ್ಕೃಷ್ಟ ಕೇಂದ್ರವನ್ನು ಪ್ರಾರಂಭ ಮಾಡಿದರೆ ಮುಂದಿನ ದಿನಗಳಲ್ಲಿ ಜಿಲ್ಲೆಯ ಮಣ್ಣಿನಿಂದಲೇ ಅಂತರರಾಷ್ಟಿçÃಯ ಕ್ರೀಡಾಪಟುಗಳನ್ನು ನೋಡುವ ದಿನಗಳು ದೂರವಿಲ್ಲ.

ಇದೀಗ ಅಭಿವೃದ್ಧಿ ಕಾಣುತ್ತಿರುವ ಕ್ರೀಡಾ ಶಾಲೆಯಲ್ಲಿ ದಸರಾ ಕ್ರೀಡಾಕೂಟ ಸೇರಿದಂತೆ ಶಿಕ್ಷಣ ಇಲಾಖೆಯ ವಿವಿಧ ಹಂತಗಳ ಕ್ರೀಡಾಕೂಟಗಳು, ಸೈನಿಕ ಶಾಲೆ, ರಾಜ್ಯ ಮಟ್ಟದ ಹಾಕಿ ಕ್ರೀಡಾಕೂಟಗಳು ಸಹ ಈ ಕ್ರೀಡಾ ಶಾಲೆಯಲ್ಲಿ ನಡೆಯುತ್ತವೆ. ಸಂಬAಧಿಸಿದ ಇಲಾಖೆಯವರು ಸರಕಾರಿ ನೌಕರರ ನೇಮಕ ಮಾಡುವುದರಿಂದ ಶಾಲಾ ಆಡಳಿತ ವ್ಯವಸ್ಥೆಗೆ ಅನುಕೂಲವಾಗಲಿದೆ. - ಕೆ.ಕೆ. ನಾಗರಾಜಶೆಟ್ಟಿ