ಚೆಯ್ಯಂಡಾಣೆ, ಫೆ. ೨೫: ಕಕ್ಕಬ್ಬೆಯ ಪಾಡಿ ಶ್ರೀ ಇಗ್ಗುತಪ್ಪ ದೇವಾಲಯದಲ್ಲಿ ವಾರ್ಷಿಕ ಹಬ್ಬವಾದ ಕುಂಬ್ಯಾರು ಕಲಾಡ್ಚ ಮಾ. ೨ ರಂದು ನಡೆಯಲಿದೆ. ಈಗಾಗಲೇ ಅಮ್ಮಂಗೇರಿ ಜ್ಯೋತಿಷ್ಯರಾದ ಕಣಿಯರ ಕೆ. ಶಶಿಕುಮಾರ್ ಅವರ ಮಾರ್ಗದರ್ಶನದಂತೆ ತಾ. ೧೭ ರಂದು ಉತ್ಸವದ ಕಟ್ಟುಬಿದ್ದಿದೆ.
ಮಾ. ೨ ರಂದು ಬೆಳಿಗ್ಗೆ ೫.೩೦ ಗಂಟೆಗೆ ಅಭಿಷೇಕ ಪೂಜೆ, ೬ ಗಂಟೆಗೆ ಪ್ರಾತಃಕಾಲದ ಪೂಜೆ, ೧೦ ಗಂಟೆಗೆ ಎತ್ತು ಪೋರಾಟ, ೧೦.೩೦ಕ್ಕೆ ತುಲಾಭಾರ ಸೇವೆ, ೧೧ಕ್ಕೆ ಭಕ್ತಾದಿಗಳ ಸೇವಾ ಪೂಜೆಗಳು, ಮ. ೧೨.೩೦ಕ್ಕೆ ಮಹಾಮಂಗಳಾರತಿ ಹಾಗೂ ತೀರ್ಥ ಪ್ರಸಾದ ವಿತರಣೆ, ೧ ಗಂಟೆಗೆ ಅನ್ನಸಂತರ್ಪಣೆ ನಡೆಯಲಿದೆ.
ಮಧ್ಯಾಹ್ನ ೨ಕ್ಕೆ ದೇವರು ಮಲ್ಮಾ ಬೆಟ್ಟಕ್ಕೆ ತೆರಳುವುದು, ಮಲ್ಮಾದಿಂದ ದೇವಾಲಯಕ್ಕೆ ಹಿಂತಿರುಗಿ ಧಾರ್ಮಿಕ ಕಾರ್ಯಗಳು ನಡೆಯಲಿವೆೆ ಎಂದು ದೇವಾಲಯ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರು ಹಾಗೂ ಕಾರ್ಯನಿರ್ವಾಹಕ ಅಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.