ಮಡಿಕೇರಿ, ಫೆ. ೨೫: ತಾ.೧೨ ರಂದು ನಡೆದ ಎ.ಟಿ.ಎಫ್ ಏಷ್ಯನ್ ಥ್ರೋಬಾಲ್ ಚಾಂಪಿಯನ್ ಶಿಪ್‌ನಲ್ಲಿ ಮೂಲತಃ ಕೊಡಗಿನವರಾದ ಕಾಳಚಂಡ ನೀತು ತಮ್ಮಯ್ಯ ಭಾರತ ತಂಡವನ್ನು ಪ್ರತಿನಿಧಿಸಿದ್ದು, ತಂಡವು ಟೂರ್ನಿಯ ಚಾಂಪಿಯನ್ ಪಟ್ಟ ಅಲಂಕರಿಸಿದೆ.
ಕಾಂಬೋಡಿಯಾದಲ್ಲಿ ಜರುಗಿದ ಟೂರ್ನಿಯಲ್ಲಿ ಭಾರತ ಸೇರಿದಂತೆ ಇಂಡೋನೇಷಿಯಾ, ಥೈಲ್ಯಾಂಡ್, ಮಲೇಷ್ಯಾ ಹಾಗೂ ಕಾಂಬೋಡಿಯಾ ತಂಡಗಳು ಭಾಗವಹಿಸಿದ್ದವು. ಭಾರತ ತಂಡವು ಬಾಲಕ ಹಾಗೂ ಬಾಲಕಿಯರ ವಿಭಾಗದಲ್ಲೂ ಚಾಂಪಿಯನ್ ಪಟ್ಟ ಅಲಂಕರಿಸಿದ್ದು, ನೀತು ಅವರು ಬಾಲಕಿಯರ ತಂಡದಲ್ಲಿ ಭಾಗವಹಿಸಿದ್ದರು.
ಕಳೆದ ಆವೃತ್ತಿಯು ಮಲೇಷ್ಯಾದಲ್ಲಿ ಜರುಗಿದ್ದು, ೪ನಾಲ್ಕನೇ ಪುಟಕ್ಕೆ
(ಮೊದಲ ಪುಟದಿಂದ) ಅದರಲ್ಲಿಯೂ ಭಾರತ ಚಿನ್ನದ ಪದಕದ ಸಾಧನೆ ಮಾಡಿದ್ದು, ನೀತು ಅವರು ಆ ತಂಡದಲ್ಲಿಯೂ ಭಾಗವಹಿಸಿದ್ದರು. ಓಟ ಸ್ಪರ್ಧೆಯಲ್ಲಿಯೂ ಪರಿಣಿತರಾಗಿರುವ ನೀತು ಅವರು, ಬೆಂಗಳೂರು ಸಿಟಿ ಯೂನಿವರ್ಸಿಟಿ ಅಥ್ಲೆಟಿಕ್ ಮೀಟರ್‌ನ ೪೦೦ ಮೀಟರ್ ಓಟದ ಚಾಂಪಿಯನ್ ಕೂಡ ಆಗಿದ್ದಾರೆ.
ನೀತು ಅವರು ಪ್ರಸ್ತುತ ಬೆಂಗಳೂರಿನ ಮೌಂಟ್ ಕಾರ್ಮೆಲ್ ಕಾಲೇಜಿನಲ್ಲಿ ಪದವಿ ವ್ಯಾಸಂಗ ಮಾಡುತ್ತಿದ್ದು ರಾಷ್ಟಿçÃಯ ಅಥ್ಲೀಟ್ (ಓಟಗಾರ) ಕಾಳಚಂಡ ರವಿ ತಮ್ಮಯ್ಯ ಹಾಗೂ ಟೈನಿ ದಂಪತಿಯ ಪುತ್ರಿ.