ಕಣಿವೆ, ಫೆ. ೨೪: ಕುಶಾಲನಗರ ಪಟ್ಟಣ ದಲ್ಲಿ ಬೀದಿನಾಯಿಗಳ ಹಾವಳಿ ಎಲ್ಲೆ ಮೀರಿದೆ. ನಗರದ ಆದರ್ಶ ದ್ರಾವಿಡ ಬಡಾವಣೆ ನಿವಾಸಿಯೂ ಆದ ಪುರಸಭೆ ನೌಕರ ಬಣ್ಣಾರಿ ಎಂಬವರಿಗೆ ಸೇರಿದ ಎರಡು ಮೇಕೆಗಳನ್ನು ಬೀದಿನಾಯಿಗಳು ದಾಳಿ ನಡೆಸಿ ಕೊಂದು ಹಾಕಿದೆ. ಈ ಸಂಬAಧ ಬಣ್ಣಾರಿ ಸ್ಥಳೀಯ ಪುರಸಭೆ ಅಧಿಕಾರಿಗಳಿಗೆ ದೂರು ನೀಡಿದ್ದು ಸೂಕ್ತ ಪರಿಹಾರಕ್ಕೆ ಮನವಿ ಸಲ್ಲಿಸಿದ್ದಾರೆ.

ಅಲ್ಲದೇ ಸ್ಥಳೀಯ ಪಶುಪಾಲನಾ ಇಲಾಖೆ ಆಸ್ಪತ್ರೆಯ ವೈದ್ಯಾಧಿಕಾರಿಗಳ ಬಳಿ ತೆರಳಿ ಘಟನೆಯನ್ನು ವಿವರಿಸಿದ್ದು, ಸೂಕ್ತ ಪರಿಹಾರಕ್ಕೆ ಶಿಫಾರಸ್ಸು ಮಾಡುವಂತೆ ಒತ್ತಾಯಿಸಿದ್ದಾರೆ. ಪುರಸಭಾ ವ್ಯಾಪ್ತಿಯಲ್ಲಿ ಹೆಚ್ಚಿರುವ ಬೀದಿ ನಾಯಿಗಳ ಉಪಟಳವನ್ನು ನಿಯಂತ್ರಿಸುವAತೆ ಸಾರ್ವಜನಿಕರು ಒತ್ತಾಯಿಸುತ್ತಿದ್ದಾರೆ.