ಮಡಿಕೇರಿ, ಫೆ. ೨೪: ಮಡಿಕೇರಿಯ ಜ್ಯೋತಿ ಬಡಾವಣೆ ಯ ಶ್ರೀ ವನ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ತಾ.೨೬ ಮತ್ತು ೨೭ರಂದು ಬಹ್ಮಕಳಶ ಅಷ್ಟಬಂಧ ಪುನರ್ ಪ್ರತಿಷ್ಠಾಪನಾ ಮಹೋತ್ಸವ ನಡೆ ಯಲಿದೆಯೆಂದು ದೇವಾಲಯದ ಜೀರ್ಣೋದ್ದಾರ ಸಮಿತಿಯ ಅಧ್ಯಕ್ಷ ಟಿ.ಕೆ.ಸುಧೀರ್ ತಿಳಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಅವರು, ತಾ.೨೬ರಂದು ಸಂಜೆ ೪ಗಂಟೆಗೆ ನಗರದ ಗಾಂಧಿ ಮೈದಾನದಿಂದ ದೇವಾಲಯದವರೆಗೆ ದೀಪಾಲಂಕೃತ ಮಂಟಪದಲ್ಲಿ ಭವ್ಯ ಕಳಸ ಮೆರವಣಿಗೆಯು ಚಿಂಗಾರಿಮೇಳ ಮತ್ತು ಮಂಗಳೂರಿನ ಭಜನಾ ಕುಣಿತ ತಂಡಗಳೊAದಿಗೆ ನಡೆಯಲಿದೆಯೆಂದು ತಿಳಿಸಿದರು. ಸಂಜೆ ೭ ಗಂಟೆಗೆ ಸಾಮೂಹಿಕ ಪ್ರಾರ್ಥನೆ, ೭.೧೫ ರಿಂದ ಆಚಾರ್ಯಾವರಣ, ಗಣಪತಿ ಪೂಜೆ, ಪ್ರಸಾದ ಶುದ್ಧಿ, ವಾಸ್ತುಬಲಿ, ಭಗವತಿ ಸೇವೆ, ರಾತ್ರಿ ಪೂಜೆ ನಡೆಯಲಿದೆ. ತಾ.೨೭ ರಂದು ಬೆಳಿಗ್ಗೆ ೬ ಗಂಟೆಗೆ ಮಹಾಗಣಪತಿ ಹೋಮ, ಉಷಾ ಪೂಜೆ, ಅನುಜ್ಞಾಕಲಶಾಭಿಷೇಕ, ಪ್ರಾರ್ಥನೆ, ಜೀವೋದ್ವಾಸನ, ಬಿಂಭ ಶುದ್ಧಿ, ದ್ಯಾನಾಧಿವಾಸಂ, ಪ್ರಸಾದ ಪ್ರತಿಷ್ಠೆ, ಪೀಠ ಪ್ರತಿಷ್ಠೆ, ೧೧.೧೨ ರಿಂದ ೧೧.೩೪ ರವರೆಗಿನ ಕುಂಭ ಲಗ್ನ ಶುಭಮುಹೂರ್ತದಲ್ಲಿ ಬಿಂಬ ಪ್ರತಿಷ್ಠೆ, ಕಲಾಭಿಷೇಕ ಪೂಜೆ, ಮಹಾಪೂಜೆ ನೆರವೇರಲಿದೆ ಎಂದು ತಿಳಿಸಿದರು.
ಮಾ.೩ ರಂದು ದೇವಾಲಯದ ವಾರ್ಷಿಕ ಪೂಜೆಯ ಪ್ರಯುಕ್ತ ಬೆಳಿಗ್ಗೆ ೧೦ ಗಂಟೆಗೆ ಬಲಿಪೂಜೆ ಹಾಗೂ ೧೨ ಗಂಟೆಗೆ ಮಹಾಮಂಗಳಾರತಿ ನಡೆಯಲಿದೆ. ಎಲ್ಲ ದೈವಿಕ ಕೈಂಕರ್ಯಗಳು ಕ್ಷೇತ್ರದ ತಂತ್ರಿಗಳಾದ ಬ್ರಹ್ಮಶ್ರೀ ಶ್ರೀಕಾಂತ್ ಭಟ್ಟತಿರಿ ಅವರ ನೇತೃತ್ವದಲ್ಲಿ ನಡೆಯಲಿದೆ ಎಂದು ಹೇಳಿದರು.
ಗೋಷ್ಠಿಯಲ್ಲಿ ವನಚಾಮುಂಡೇಶ್ವರಿ ದೇವಸ್ಥಾನ ಟ್ರಸ್ಟ್ ಅಧ್ಯಕ್ಷ ಒ.ಎನ್.ಬಾಬು, ಉಪಾಧ್ಯಕ್ಷ ಕೆ.ಎನ್.ಗುರುಪ್ರಸಾದ್, ಕಾರ್ಯದರ್ಶಿ ಎನ್.ಸಿ.ಸುನಿಲ್, ಧರ್ಮದರ್ಶಿ ಎಂ.ಕೆ.ನAಜಪ್ಪ ಹಾಗೂ ಕೆ.ಆರ್.ನಾಗೇಶ್ ಉಪಸ್ಥಿತರಿದ್ದರು.