ಸೋಮವಾರಪೇಟೆ, ಫೆ. ೨೪: ಇಲ್ಲಿನ ಡಾಲ್ಫಿನ್ಸ್ ಸ್ಪೋರ್ಟ್ಸ್ ಕ್ಲಬ್ ವತಿಯಿಂದ ತಾ.೨೬ರಿಂದ ಮಾ.೧ರ ವರೆಗೆ ದಿ. ಬಿ.ಈ. ರಂಗಸ್ವಾಮಿ ಚೂರಿಗಿಡ್ನ ಅವರ ಜ್ಞಾಪಕಾರ್ಥವಾಗಿ ಜಿಲ್ಲಾ ಮಟ್ಟದ ಹಾಕಿ ಪಂದ್ಯಾವಳಿ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಟರ್ಫ್ ಮೈದಾನದಲ್ಲಿ ನಡೆಯಲಿದೆ ಎಂದು ಕ್ಲಬ್ ಅಧ್ಯಕ್ಷ ಎಂ.ಈ. ಮಹೇಶ್ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ಹಲವಾರು ವರ್ಷಗಳಿಂದ ಡಾಲ್ಫಿನ್ಸ್ ಸ್ಪೋರ್ಟ್ಸ್ ಕ್ಲಬ್ ಯುವ ಪ್ರತಿಭೆಗಳಿಗೆ ತರಬೇತಿ ನೀಡುವ ಮೂಲಕ ರಾಜ್ಯ ಮತ್ತು ರಾಷ್ಟಿçÃಯ ತಂಡಗಳಿಗೆ ಹಲವಾರು ಕ್ರೀಡಾಪಟುಗಳನ್ನು ಕಳುಹಿಸಲು ಯಶಸ್ವಿಯಾಗಿದೆ. ಬೇಸಿಗೆ ಹಾಕಿ ಶಿಬಿರದೊಂದಿಗೆ ಈಜು ತರಬೇತಿಯನ್ನು ನೀಡುತ್ತಿದೆ ಎಂದು ಮಾಹಿತಿ ನೀಡಿದರು.
ಪಂದ್ಯಾಟಕ್ಕೆ ತಾ. ೨೬ ರಂದು ಮಧ್ಯಾಹ್ನ ೨ ಗಂಟೆಗೆ ಶಾಸಕ ಡಾ. ಮಂತರ್ ಗೌಡ ಮತ್ತು ಸಂಸದ ಯದುವೀರ್ ಒಡೆಯರ್ ಹಾಗೂ ದಾನಿಗಳಾದ ವಿಜಯ್ ಚಾಲನೆ ನೀಡಲಿದ್ದಾರೆ.
ಇದೇ ಸಂದರ್ಭ ಮಡಿಕೇರಿಯ ಸಾಯಿ ಮತ್ತು ಕೂಡಿಗೆ ಕ್ರೀಡಾ ಶಾಲೆಯ ವಿದ್ಯಾರ್ಥಿನಿಯರ ತಂಡದ ನಡುವೆ ಪ್ರದರ್ಶನ ಪಂದ್ಯಾಟ ನಡೆಯಲಿದೆ. ನಂತರ ಮೊದಲ ಪಂದ್ಯ ಗೋಣಿಕೊಪ್ಪದ ಬಿಬಿಸಿ ಮತ್ತು ಬೇರಳಿನಾಡು ತಂಡಗಳ ನಡುವೆ ನಡೆಯಲಿದ್ದು, ದ್ವಿತೀಯ ಪಂದ್ಯ ಕೂರ್ಗ್ ಚಾಲೆಂರ‍್ಸ್ ಮತ್ತು ಕೋಣನಕುಂಟೆ ತಂಡಗಳ ನಡುವೆ ನಡೆಯಲಿದೆ ಎಂದು ತಿಳಿಸಿದರು.
ರಾಷ್ಟಿçÃಯ ಹಾಕಿ ಆಟಗಾರರಾದ ಎ.ಬಿ. ಸುಬ್ಬಯ್ಯ, ಅರ್ಜುನ್ ಹಾಲಪ್ಪ, ಎಸ್.ವಿ ಸುನೀಲ್, ವಿಕ್ರಂ ಕಾಂತ್, ಭಾರತ ಜೂನಿಯರ್ ಹಾಕಿ ತಂಡದ ತರಬೇತುದಾರರಾದ ಸಿ.ಬಿ ಜನಾರ್ಧನ್ ಸೇರಿದಂತೆ ಹಲವಾರು ಕ್ರೀಡಾಪಟುಗಳು ಉದ್ಘಾಟನಾ ಕಾರ್ಯಕ್ರಮಕ್ಕೆ ಆಗಮಿಸಿಲಿದ್ದಾರೆ. ದೇಶದ ವಿವಿಧೆಡೆಯ ಹಲವಾರು ಹಾಕಿ ಕ್ರೀಡಾಪಟುಗಳು ವಿವಿಧ ತಂಡಗಳಲ್ಲಿ ಆಡಲಿರುವರು ಎಂದು ಹೇಳಿದರು.
ಹಾಕಿ ಪಂದ್ಯಾಟದಲ್ಲಿ ಪಾಲ್ಗೊಳ್ಳುವ ತಂಡಗಳು ಎರಡು ಗೋಲ್‌ಕೀಪರ್‌ನೊಂದಿಗೆ ೧೮ ಮಂದಿ ಆಟಗಾರರನ್ನು ಒಳಗೊಂಡಿರಬೇಕು. ಪ್ರತಿ ತಂಡಗಳು ೫ ಮಂದಿ ಅತಿಥಿ ಆಟಗಾರರಿಗೆ ತಂಡದಲ್ಲಿ ಅವಕಾಶ ನೀಡಬಹುದಾಗಿದೆ. ಪಂದ್ಯಾಟಕ್ಕೂ ಮುನ್ನ ೩೦ ನಿಮಿಷಕ್ಕೆ ಮೊದಲು ಮೈದಾನಕ್ಕೆ ಆಗಮಿಸಬೇಕು ಎಂದರು.
ಪ್ರಥಮ ಸ್ಥಾನ ಪಡೆಯುವ ತಂಡಕ್ಕೆ ರೂ.೧ ಲಕ್ಷ ನಗದು ಹಾಗೂ ಆಕರ್ಷಕ ಟ್ರೋಫಿ, ದ್ವಿತೀಯ ಸ್ಥಾನ ಪಡೆಯುವ ತಂಡಕ್ಕೆ ರೂ.೫೦ ಸಾವಿರ ನಗದು ಹಾಗೂ ಟ್ರೋಫಿ ಸೇರಿದಂತೆ ವೈಯಕ್ತಿಕ ಬಹುಮಾನ ನೀಡಲಾಗುವುದು. ಇದರೊಂದಿಗೆ ಪಂದ್ಯಾಟದಲ್ಲಿ ಶಿಸ್ತುಬದ್ಧ ತಂಡಕ್ಕೆ ವಿಶೇಷ ಬಹುಮಾನ ವಿತರಿಸಲಾಗುವುದು ಎಂದು ಮಾಹಿತಿ ನೀಡಿದರು.
ಗೋಷ್ಠಿಯಲ್ಲಿ ಕ್ಲಬ್ ಪ್ರಧಾನ ಕಾರ್ಯದರ್ಶಿ ಬಿ.ಎನ್ ಮಂಜುನಾಥ್, ಖಜಾಂಚಿ ಗಿರೀಶ್, ಗೌರವ ಅಧ್ಯಕ್ಷ ಅಶೋಕ್, ಸಲಹೆಗಾರರಾದ ಕೆ.ಎಸ್. ಪ್ರಕಾಶ್ ಇದ್ದರು.