ಚೆಯ್ಯಂಡಾಣೆ, ಫೆ. ೨೪: ನರಿಯಂದಡ ಎಡಪಾಲಕೇರಿ ಶ್ರೀ ಪೊನ್ನುಮುತ್ತಪ್ಪ ಮಠಪುರ ಶ್ರೀ ವಯನಾಟ್ ಕುಲವನ್ ದೇವಸ್ಥಾನದ ಪ್ರತಿಷ್ಠಾ ಮಹೋತ್ಸವ ತಾ. ೨೬ ರಿಂದ ೨೮ ರವರೆಗೆ ನಡೆಯಲಿದೆ.

ತಾ. ೨೬ ರಂದು ಸಂಜೆ ೪ ಗಂಟೆಗೆ ಶ್ರೀ ಶಶಿಂದ್ರನ್ ಅವರ ನೇತೃತ್ವದಲ್ಲಿ ದೇವಸ್ಥಾನದ ಗುತ್ತಿ ಪೂಜೆ ನಡೆಯಲಿದೆ. ತಾ. ೨೭ ರಂದು ಬೆಳಿಗ್ಗೆ ೫ ಗಂಟೆಗೆ ಶ್ರೀ ಗಣಪತಿ ಹೋಮ ನಂತರ ಶ್ರೀ ಚಂದ್ರನ್ ಮಡೆಯನ್ ಪರಶಿನಿಕಡವ್ ಅವರಿಂದ ಶ್ರೀ ಪೊನ್ನು ಮುತ್ತಪ್ಪ ದೇವರ ಪ್ರತಿಷ್ಠಾಪನೆ ನಡೆಯಲಿದೆ.

ದರ್ಶನಕಾಯರಾದ ಭಾಸ್ಕರ್ ಅಜ್ಜಾವರ ಹಾಗೂ ಆನಂದ ಅಡಪಂಕಾಯ ನೇತೃತ್ವದಲ್ಲಿ ಶ್ರೀ ವಯನಾಟ್ ಕುಲವನ್ ದೇವರ ಪ್ರತಿಷ್ಠಾಪನೆ ನಡೆಯಲಿದೆ. ನಂತರ ಗುಳಿಗ ದೇವರ ಪ್ರತಿಷ್ಠಾಪನೆ, ಶ್ರೀ ಪೊನ್ನು ಮುತ್ತಪ್ಪ ದೇವರ ವೆಳ್ಳಾಟಂ, ಶ್ರೀವಯನಾಟ್ ಕುಲವನ್ ದೇವರಿಗೆ ಪುತ್ತರಿ ಸಮರ್ಪಣೆ ನಡೆಯಲಿದೆ.

ತಾ. ೨೮ರಂದು ಶ್ರೀ ಪೊನ್ನುಮುತ್ತಪ್ಪ ದೇವರ ಅಂಧಿತೆರೆ, ಶ್ರೀ ವಯನಾಟ್ ಕುಲವನ್ ದೇವರಿಗೆ ಕೈವೇದ್ ಸಮರ್ಪಣೆ, ಪ್ರಸಾದ ವಿತರಣೆ, ಅನ್ನದಾನ ನಡೆಯಲಿದೆಯೆಂದು ಪ್ರಕಟಣೆ ತಿಳಿಸಿದೆ.