ನಾಪೋಕ್ಲು, ಫೆ. ೨೪: ಗೌಡ ಸಮಾಜ-ಕಾರುಗುಂದ ಮತ್ತು ಚೇರಂಬಾಣೆ ಗೌಡ ಯುವ ವೇದಿಕೆ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಿದ್ದ ಜಿಲ್ಲಾ ಮಟ್ಟದ ಗೌಡ ಜನಾಂಗದ ಕ್ಯಾರಂ ಪಂದ್ಯಾಟ ಇತ್ತೀಚೆಗೆ ಕಾರುಗುಂದ ಗೌಡ ಸಮಾಜದಲ್ಲಿ ನಡೆಯಿತು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಪ್ರಮುಖರುಗಳಾದ ಹರಪ್ಪÀಳ್ಳಿ ರವೀಂದ್ರ, ಎಡಿಕೇರಿ ಪ್ರಸನ್ನ ಕುಶಾಲಪ್ಪ, ಕೊಡಪಾಲು ಎಸ್ ಗಣಪತಿ, ಕಡ್ಲೇರ ತುಳಸಿ ಮೋಹನ್, ಕೇಕಡ ದಿನೇಶ್ ಮತ್ತು ಬೆಳ್ಯನ ಚಂದ್ರಪ್ರಕಾಶ್ ಕ್ರೀಡಾಕೂಟ ಉದ್ಘಾಟನೆ ನೆರವೇರಿಸಿ ಮಾತನಾಡಿ ಕಾರ್ಯಕ್ರಮದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಪುರುಷರ ವಿಭಾಗದ ಸಿಂಗಲ್ಸ್ನಲ್ಲಿ ಪ್ರಥಮ- ಇಂದ್ರೇಶ್ ಕುದುಕುಳಿ ಮತ್ತು ಡಬಲ್ಸ್ನಲ್ಲಿ ಪ್ರಥಮ- ಭರತ್ ಕಾವೇರಿಮನೆ, ಮಕ್ಕಳ ಡಬಲ್ಸ್ ವಿಭಾಗದಲ್ಲಿ ಪ್ರಥಮ- ಗೌರವ್ ಕುದುಕುಳಿ, ಸಿಂಗಲ್ಸ್ ವಿಭಾಗದಲ್ಲಿ ಪ್ರಥಮ - ದ್ರುವ ಸುಳ್ಯಕೋಡಿ ಸ್ಥಾನ ಗಳಿಸಿದರು.

ಸಿಂಗಲ್ಸ್ನಲ್ಲಿ ದ್ವಿತೀಯ-ಕೆದಂಬಾಡಿ ತಿಮ್ಮಯ್ಯ ಹಾಗೂ ಡಬಲ್ಸ್ನಲ್ಲಿ ದ್ವಿತೀಯ - ಇಂದ್ರೇಶ್ ಕದುಕುಳಿ ಹಾಗೂ ಮಕ್ಕಳ ವಿಭಾಗದಲ್ಲಿ ಡಬಲ್ಸ್ ಮೋಹಿತ್ ಕುದುಕುಳಿ ದ್ವಿತೀಯ ಮೋನಿಶ್ ಕೆಟೋಳಿ ಮತ್ತು ಪಾರ್ಥ ಕೊಡಗನ, ಸಿಂಗಲ್ಸ್ ವಿಭಾಗದಲ್ಲಿ ದ್ವಿತೀಯ - ಡೀನ್ ಬೊಳ್ಳೂರು ಪಡೆದುಕೊಂಡರು.