ಮಡಿಕೇರಿ, ಫೆ.೨೩: ಕೊಡಗಿನ ಇಬ್ಬರು ಶಾಸಕರುಗಳೂ ಸೇರಿದಂತೆ ಕರ್ನಾಟಕದ ವಿವಿಧ ಭಾಗಗಳಿಂದ ನೂತನವಾಗಿ ಆಯ್ಕೆಗೊಂಡಿರುವ ೩೮ ಶಾಸಕರುಗಳ ಪೈಕಿ ೩೧ ಮಂದಿ ಶಾಸಕರುಗಳು ಸಹಿ ಮಾಡಿ ಮನವಿ ಪತ್ರವೊಂದನ್ನು ಕಾಂಗ್ರೆಸ್ ಹೈಕಮಾಂಡ್‌ಗೆ ಇತ್ತೀಚೆಗೆ ರವಾನಿಸಿದ್ದು ನೂತನ ಶಾಸಕರುಗಳ ಪೈಕಿ ಕನಿಷ್ಟ ಐವರಿಗೆ ಸಚಿವ ಸಂಪುಟ ಪುರ‍್ರಚನೆ ಸಂದರ್ಭ ಅವಕಾಶ ಕಲ್ಪಿಸುವಂತೆ ಮನವಿ ಮಾಡಿದ್ದಾರೆ.

ಈ ಬಗ್ಗೆ “ಶಕ್ತಿ” ಮುಖ್ಯಮಂತ್ರಿಯವರ ಕಾನೂನು ಸಲಹೆಗಾರರು ಹಾಗೂ ವೀರಾಜಪೇಟೆ ಕ್ಷೇತ್ರದ ಶಾಸಕ ಅಜ್ಜಿಕುಟ್ಟಿರ ಎಸ್. ಪೊನ್ನಣ್ಣ ಅವರನ್ನು ಸಂಪರ್ಕಿಸಿದಾಗ ಹೈ ಕಮಾಂಡ್‌ಗೆ ಮನವಿ ಸಲ್ಲಿಸಿರುವುದನ್ನು ಅವರು ಖಚಿತಪಡಿಸಿದರು. ಮುಂದೆ ಸಚಿವ ಸಂಪುಟ ಪುರ‍್ರಚನೆಯಾಗುವ ಸಂದರ್ಭ ಅವಕಾಶ ಕಲ್ಪಿಸುವಂತೆ ಮನವಿ ಮಾಡಲಾಗಿದೆ ಎಂದರು. ಮಡಿಕೇರಿ ಕ್ಷೇತ್ರದ ಶಾಸಕ ಡಾ. ಮಂತರ್ ಗೌಡ ಅವರನ್ನು “ಶಕ್ತಿ” ಸಂಪರ್ಕಿಸಿದಾಗ ಅವರೂ ಕೂಡ ಈ ಬಗ್ಗೆ ಹೈಕಮಾಂಡ್‌ಗೆ ಮನವಿ ಪತ್ರ ಕಳುಹಿಸಿರುವುದನ್ನು ಖಚಿತಪಡಿಸಿದರು. ೩೧ ಶಾಸಕರು ಸಹಿ ಹಾಕಿದ ಮನವಿ ಪತ್ರಗಳನ್ನು ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಹಾಗೂ ಮತ್ತೋರ್ವ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ರಣ್‌ದೀಪ್ ಸಿಂಗ್ ಸುರ್ಜೇವಾಲ ಇವರುಗಳಿಗೆ ಕಳುಹಿಸಿದ್ದಾರೆ.

ಮನವಿ ಪತ್ರದಲ್ಲಿನ ಒಕ್ಕಣೆ ಹೀಗಿದೆ: “ಕರ್ನಾಟಕ ರಾಜ್ಯ ಸರ್ಕಾರದಲ್ಲಿ ಪ್ರಸ್ತಾವಿತ ಸಚಿವಾಲಯ ಪುರ‍್ರಚನೆಯ ಸಮಯದಲ್ಲಿ ಸಚಿವ ಸಂಪುಟದಲ್ಲಿ ಸೇರಿಸಿಕೊಳ್ಳುವಂತೆ ಭಾರತೀಯ ರಾಷ್ಟಿçÃಯ ಕಾಂಗ್ರೆಸ್‌ನಿAದÀ ಮೊದಲ ಬಾರಿಗೆ ಶಾಸಕರುಗಳಾಗಿ ಆಯ್ಕೆಯಾದವರಿಂದ ಮನವಿ ಮಾಡುತ್ತಿದ್ದೇವೆ. ನಿಮಗೆ ತಿಳಿದಿರುವಂತೆ, ಕರ್ನಾಟಕದ ಜನರು ಭಾರತೀಯ ರಾಷ್ಟಿçÃಯ ಕಾಂಗ್ರೆಸ್‌ನಿAದ ಮೊದಲ ಬಾರಿಗೆ ೩೮ ಸದಸ್ಯರನ್ನು ವಿಧಾನಸಭೆಗೆ ಆಯ್ಕೆ ಮಾಡಿದ್ದಾರೆ ಮತ್ತು ಆ ಮೂಲಕ ಶಾಸಕಾಂಗದಲ್ಲಿ ಹೊಸ ಯುವ ಮುಖಗಳನ್ನು ನೋಡಲು ಬಯಸುತ್ತಾರೆ ಎಂಬ ಸ್ಪಷ್ಟ ಸಂದೇಶವನ್ನು ರವಾನಿಸಿದ್ದಾರೆ ಮತ್ತು ಅದು ಕರ್ನಾಟಕದ ಜನರ ಆಕಾಂಕ್ಷೆಯೂ ಆಗಿದೆ. ಹಾಗಾದರೆ ಮೊದಲ ಬಾರಿಗೆ ಶಾಸಕರಿಗೂ ಸಂಪುಟದಲ್ಲಿ ಸ್ಥಾನ ನೀಡುವುದು ಸಮರ್ಥನೀಯ. ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಶಿವಕುಮಾರ್ ಅವರುಗಳ ನೇತೃತ್ವದ ಸಚಿವ ಸಂಪುಟ ರಚನೆಯಾದ ಸಮಯದಲ್ಲಿ, ಮೊದಲ ಬಾರಿಗೆ ಆಯ್ಕೆಯಾದ ಶಾಸಕರಿಗೆ ಕರ್ನಾಟಕದಲ್ಲಿ ೩೪ ಸದಸ್ಯರ ಸಂಪುಟದ ಭಾಗವಾಗಲು ಅವಕಾಶ ನೀಡಿಲ್ಲ್ಲ. ಯುವ ಕ್ರಿಯಾತ್ಮಕ ಮತ್ತು ಕ್ರಿಯಾಶೀಲರಾಗಿರುವ ಮೊದಲ ಬಾರಿಗೆ ಶಾಸಕರಿಗೆ ಸಂಪುಟದಲ್ಲಿ ಸಚಿವರಾಗಿ ಸೇವೆ ಸಲ್ಲಿಸಲು ಅವಕಾಶ ನೀಡುವುದು ಇಂದಿನ ಅಗತ್ಯವಾಗಿದೆ. ಶಾಸಕಾಂಗ ಸಭೆಯ ಕೆಳಗೆ ಸಹಿ ಮಾಡಿರುವ ಸದಸ್ಯರಾದ ನಾವು, ಮುಖ್ಯಮಂತ್ರಿಗಳು, ಕಾಂಗ್ರೆಸ್ ಹೈಕಮಾಂಡ್ ಮತ್ತು ಉಪಮುಖ್ಯಮಂತ್ರಿಗಳೊAದಿಗೆ ಸಮಾಲೋಚಿಸಿ ಸಚಿವ ಸಂಪುಟ ಪುರ‍್ರಚನೆಯನ್ನು ಕೈಗೊಳ್ಳುವಾಗ, ಮೊದಲ ಬಾರಿಗೆ ಆಯ್ಕೆಯಾಗಿರುವವರÀÀ ಪೈಕಿ ಕನಿಷ್ಟ ಐದು ಮಂದಿ ಶಾಸಕರಿಗೆ ಸಂಪುಟದಲ್ಲಿ ಸ್ಥಾನ ನೀಡಬೇಕೆಂದು ನಿಮ್ಮನ್ನು ವಿನಂತಿಸುತ್ತೇವೆ. ಶಾಸಕಾಂಗ ಸಭೆಯಲ್ಲಿ ಹೊಸಬರಿಗೆ ಅನುಮೋದನೆ ನೀಡುವುದು ಹೊಸ ವಿದ್ಯಮಾನವಲ್ಲ, ನಾವು ಅವಲೋಕಿಸಿದರೆ ಹಲವಾರು ರಾಜ್ಯ ಸರ್ಕಾರಗಳು ಮೊದಲ ಬಾರಿಗೆ ಶಾಸಕರಾಗಿರುವವÀರಿಗೆ ಮುಖ್ಯಮಂತ್ರಿ ಸ್ಥಾನ ಮತ್ತು ಹಲವಾರು ಮೊದಲ ಬಾರಿಗೆ ಶಾಸಕರಾಗಿ ನೇಮಕಗೊಂಡ ಶಾಸಕರಿಗೆ ಸಚಿವ ಸ್ಥಾನ ನೀಡಿರುವುದನ್ನು ಇಲ್ಲಿ ಉಲ್ಲೇಖಿಸುವುದು ಅಗತ್ಯವಾಗಿದೆ. ನಾವೆಲ್ಲರೂ ಕಾಂಗ್ರೆಸ್ ಸಿದ್ಧಾಂತದೊAದಿಗೆ ಬಲವಾಗಿ ಸಂಪರ್ಕ ಹೊಂದಿದ್ದೇವೆ ಮತ್ತು ಕರ್ನಾಟಕ ರಾಜ್ಯ ಸರ್ಕಾರದಲ್ಲಿ ಶುದ್ಧ, ಪಾರದರ್ಶಕ ಮತ್ತು ವಿಶ್ವಾಸಾರ್ಹ ಆಡಳಿತವನ್ನು ಒದಗಿಸಲಾಗಿದೆಯೆ ಎಂದು ಖಚಿತಪಡಿಸಿಕೊಳ್ಳಲು ಶ್ರಮಿಸುತ್ತೇವೆ, ಇದರಿಂದಾಗಿ ೨೦೨೮ ರಲ್ಲಿ ನಾವು ಮತ್ತೆ ಅಧಿಕಾರಕ್ಕೆ ಬರಲು ಸಾಧ್ಯವಾಗುತ್ತದೆ. ಯುವಕರು ಮತ್ತು ಅನುಭವಿಗಳ ಜೋಡಣೆಯು ಯಾವಾಗಲೂ ಶ್ರಮಿಸಲು ಸರಿಯಾದ ಸಮತೋಲನವಾಗಿದೆ. ಕರ್ನಾಟಕದಲ್ಲಿ ದೂರದೃಷ್ಟಿಯಿರಿಸಿ ಅವಕಾಶ ಕಲ್ಪಿಸುವಂತೆ ನಾವು ವಿನಂತಿಸುತ್ತೇವೆ.”

ಈ ಪತ್ರಕ್ಕೆ ಕೊಡಗಿನ ಇಬ್ಬರು ಶಾಸಕರುಗಳು ಸೇರಿದಂತೆ ಸಹಿ ಹಾಕಿರುವ ಇತರ ಪ್ರಮುಖ ಶಾಸಕರುಗಳೆಂದರೆ ಭೀಮಸೇನ ಚಿಮ್ಮನಕಟ್ಟಿ, ಪ್ರದೀಪ್ ಈಶ್ವರ್, ಇಕ್ಬಾಲ್ ಹುಸೇನ್, ಎನ್.ಟಿ. ಶ್ರೀನಿವಾಸ, ಅಶೋಕ್ ಕುಮಾರ್ ರೈ, ಎನ್. ಶ್ರೀನಿವಾಸಯ್ಯ, ದರ್ಶನ್ ಧ್ರುವನಾರಾಯಣ, ಶಿವಗಂಗಾ ಬಸವರಾಜು, ವಿಶ್ವಾಸ್ ವೈದ್ಯ, ನಾರಾ ಭರತ್ ರೆಡ್ಡಿ, ಪ್ರಕಾಶ್ ಕೋಳಿವಾಡ, ಕೆ.ಎಸ್. ಆನಂದ, ಚನ್ನಾರೆಡ್ಡಿ ಪಾಟೀಲ್, ದೇವೇಂದ್ರಪ್ಪ. ಡಿ. ರವಿಶಂಕರ್, ನಯನಾ ಮೋಟಮ್ಮ, ರಾಜಾವೇಣುಗೋಪಾಲ ನಾಯಕ, ಮಹೇಂದ್ರ ತಮ್ಮಣ್ಣನವರ್, ಎ.ಸಿ. ಶ್ರೀನಿವಾಸ, ಅಶೋಕ್ ಮನಗೂಳಿ, ಪಿ. ರವಿಕುಮಾರ್, ಬಾಬಾಸಾಹೇಬ್ ಪಾಟೀಲ್, ಹೆಚ್. ಎಂ. ಗಣೇಶ್ ಪ್ರಸಾದ್, ಬಾಬಾ ಸಾಹೇಬ್ ಪಾಟೀಲ್, ಹೆಚ್.ವಿ. ವೆಂಕಟೇಶ್ ಮತ್ತಿತರರು.