ಮಡಿಕೇರಿ, ಫೆ. ೨೪: ಕೊಡಗಿನ ಗಡಿಭಾಗ ಕುಟ್ಟದಲ್ಲಿ ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿಯಿಂದ ೨೦೨೬ರ ಸಾಲಿನ ಗೌರವ ಪ್ರಶಸ್ತಿ ಪ್ರದಾನ ಹಾಗೂ ಸಾಹಿತ್ಯ-ಸಾಂಸ್ಕೃತಿಕ ವೈಭವ ನಡೆಸಲು ತಯಾರಿ ನಡೆಯುತ್ತಿದೆ.

ಫೆಬ್ರವರಿ ೨೮ನೇ ಶನಿವಾರ ಕುಟ್ಟ ಕೊಡವ ಸಮಾಜದಲ್ಲಿ ನಡೆಸಲು ಉದ್ದೇಶಿಸಿರುವ ಕಾರ್ಯಕ್ರಮದಲ್ಲಿ ಸಾಹಿತ್ಯ, ಸಾಂಸ್ಕೃತಿಕ, ಜಾನಪದ ಹಾಗೂ ಸಮಾಜ ಸೇವಾ ಕ್ಷೇತ್ರದಲ್ಲಿ ಅಪಾರವಾದ ಸೇವೆಗೈದಿರುವ ವ್ಯಕ್ತಿಗಳನ್ನು ಗುರುತಿಸಿ ಒಟ್ಟು ೧೫ ಜನರಿಗೆ ಸನ್ಮಾನ ಮಾಡಲು ಅಕಾಡೆಮಿ ಉದ್ದೇಶಿಸಿದೆ.

ಈ ಪ್ರಯುಕ್ತ ಮಲ್ಲೇಂಗಡ ದಾದ ಬೆಳ್ಯಪ್ಪ(ಸಮಾಜ ಸೇವೆ ಕ್ಷೇತ್ರ), ಚೆಪ್ಪುಡಿರ ತಿಲಕ್ ಸುಬ್ಬಯ್ಯ(ಸಮಾಜ-ಸಂಸ್ಕೃತಿ ಕ್ಷೇತ್ರ), ತೀತಮಾಡ ಅರ್ಜುನ್ ದೇವಯ್ಯ(ವ್ಯಕ್ತಿತ್ವ-ಸಮಾಜ ಕ್ಷೇತ್ರ), ಉದಿಯಂಡ ರೋಷನ್ ಸೋಮಣ್ಣ(ಸಾಹಿತ್ಯ-ಸಮಾಜ ಕ್ಷೇತ್ರ), ಚೆನಿಯಪಂಡ ಮನು ಮಂದಣ್ಣ(ಸಾಹಿತ್ಯ-ಸAಸ್ಕೃತಿ ಕ್ಷೇತ್ರ), ಚೊಟ್ಟೆಯಂಡ ಅಪ್ಪಾಜಿ(ಸಂಸ್ಕೃತಿ ಕ್ಷೇತ್ರ), ಕಣಿಯರ ನಾಣಯ್ಯ(ಜಾನಪದ ಕ್ಷೇತ್ರ), ನಡಿಕೇರಿಯಂಡ ವಿಕ್ರಂ ಅಪ್ಪಯ್ಯ(ಕಲೆ-ಸಂಸ್ಕೃತಿ ಕ್ಷೇತ್ರ), ಚಮ್ಮಣಮಡ ವಾಣಿ ರಾಘವೇಂದ್ರ (ಸಾಹಿತ್ಯ ಕ್ಷೇತ್ರ), ಕುಡಿಯರ ಕೆ. ಚಿಣ್ಣಪ್ಪ(ಜಾನಪದ ಕ್ಷೇತ್ರ), ಸುಳ್ಳಿಮಾಡ ಗೌರಿ ನಂಜಪ್ಪ (ಜಾನಪದ ಕ್ಷೇತ್ರ), ಚೋಕಂಡ ಸಂಜು ಸುಬ್ಬಯ್ಯ(ಸಮಾಜ ಸೇವೆ ಕ್ಷೇತ್ರ), ಐಮಂಡ ರೂಪೇಶ್ ನಾಣಯ್ಯ(ಕಲಾ ಸೇವಾ ಕ್ಷೇತ್ರ), ಕಾಳೆಕುಟ್ಟಡ ಬೋಜಣ್ಣ(ಸಂಸ್ಕೃತಿ ಕ್ಷೇತ್ರ), ಕೊರಕುಟ್ಟಿರ ಸರ ಚಂಗಪ್ಪ(ಸಮಾಜ ಸೇವೆ ಕ್ಷೇತ್ರ)ಗಳ ಸೇವೆಯನ್ನು ಗುರುತಿಸಿ, ಇವರನ್ನು ಸನ್ಮಾನಿಸಲಾಗುವುದು. ಈ ಸಂದರ್ಭದಲ್ಲಿ ‘ಕೊಡವ ಪುಸ್ತಕ ಪತ್ತಾಯ’ವನ್ನು ಕುಟ್ಟ ಕೊಡವ ಸಮಾಜದಲ್ಲಿ ತೆರೆಯಲಾಗುವುದು.

ಕಾರ್ಯಕ್ರಮದಲ್ಲಿ ಕೊಡಗು ಉಸ್ತುವಾರಿ ಸಚಿವರು ಹಾಗೂ ಸಣ್ಣ ನೀರಾವರಿ ಹಾಗೂ ತಂತ್ರಜ್ಞಾನ ಸಚಿವರಾದ ಎನ್.ಎಸ್.ಬೋಸರಾಜು ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ. ವೀರಾಜಪೇಟೆ ಶಾಸಕ ಹಾಗೂ ಮುಖ್ಯಮಂತ್ರಿಯವರ ಕಾನೂನು ಸಲಹೆಗಾರರಾದ ಅಜ್ಜಿಕುಟ್ಟಿರ ಎಸ್.ಪೊನ್ನಣ್ಣ ಅವರು ಉತ್ಸವಕ್ಕೆ ಚಾಲನೆ ನೀಡಲಿದ್ದಾರೆ. ಕುಟ್ಟ ಕೊಡವ ಸಮಾಜದ ಅಧ್ಯಕ್ಷರಾದ ಕಳ್ಳಿಚಂಡ ವಿಷ್ಣು ಕಾರ್ಯಪ್ಪ ಹಾಗೂ ಕುಟ್ಟ ಕೊಡವ ಸಮಾಜದ ಜಾಗ ದಾನಿ ಮುಕ್ಕಾಟಿರ ರಾಜ ಮಂದಣ್ಣ ಅವರು ಮೆರವಣಿಗೆಗೆ ಚಾಲನೆ ನೀಡಲಿದ್ದಾರೆ.

ಬೆಳಿಗ್ಗೆ ೧೦ ಗಂಟೆಗೆ ವೀರಾಜಪೇಟೆ ಶಾಸಕ ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ ಅಜ್ಜಿಕುಟ್ಟಿರ ಎಸ್ ಪೊನ್ನಣ್ಣ ಅವರು ‘ನಮ್ಮೆ’ಗೆ ಚಾಲನೆ ನೀಡಲಿದ್ದಾರೆ. ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾದ ಅಜ್ಜಿನಿಕಂಡ ಸಿ ಮಹೇಶ್ ನಾಚಯ್ಯ ಅಧ್ಯಕ್ಷತೆಯಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ‘ಮುಖ್ಯ ಬೆಂದು’ಗಳಾಗಿ ಕೊಡಗು-ಮೈಸೂರು ಲೋಕಸಭಾ ಕ್ಷೇತ್ರದ ಸಂಸದರಾದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್, ಮಡಿಕೇರಿ ವಿಧಾನಸಭಾ ಕ್ಷೇತ್ರದ ಶಾಸಕರಾದ ಡಾ.ಮಂತರ್ ಗೌಡ, ವಿಧಾನ ಪರಿಷತ್ತ್ ಸದಸ್ಯರಾದ ಮಂಡೇಪAಡ ಸುಜಾ ಕುಶಾಲಪ್ಪ, ‘ಖನಪಟ್ಟ ಬೆಂದು’ಗಳಾಗಿ ರಾಜ್ಯ ಕ್ರೀಡಾ ಪ್ರಾಧಿಕಾರದ ಉಪಾಧ್ಯಕ್ಷರಾದ ಚೆಪ್ಪುಡಿರ ಎಸ್ ಅರುಣ್ ಮಾಚಯ್ಯ, ಜಿಲ್ಲಾ ಗ್ಯಾರೆಂಟಿ ಅನುಷ್ಠಾನ ಸಮಿತಿಯ ಅಧ್ಯಕ್ಷರಾದ ತೀತಿರ ಧರ್ಮಜ ಉತ್ತಪ್ಪ, ‘ಕೊದಿರ ಬೆಂದು’ಗಳಾಗಿ ಕೊಡಗು ಜಿಲ್ಲೆಯ ಜಿಲ್ಲಾಧಿಕಾರಿ ಎಸ್.ಜೆ ಸೋಮಶೇಖರ್, ಕೊಡಗು ಜಿಲ್ಲೆಯ ಪೊಲೀಸ್ ವರಿಷ್ಠಾಧಿಕಾರಿ ಆರ್.ಎನ್ ಬಿಂದುಮಣಿ, ವಿಧಾನ ಪರಿಷತ್ತು ಮಾಜಿ ಸದಸ್ಯರಾದ ಶಾಂತೆಯAಡ ವೀಣಾ ಅಚ್ಚಯ್ಯ, ಕುಟ್ಟ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಹೇಮ ಎಚ್.ಎನ್ ಹಾಗೂ ‘ಕೊದಿರ ಬೆಂದು’ಗಳಾಗಿ ಅಖಿಲ ಕೊಡವ ಸಮಾಜದ ಅಧ್ಯಕ್ಷರಾದ ಪರದಂಡ ಕೆ.ಸುಬ್ರಮಣಿ, ಮೈಸೂರು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಜಂಟಿ ನಿರ್ದೇಶಕರಾದ ವಿ.ಎನ್ ಮಲ್ಲಿಕಾರ್ಜುನ ಸ್ವಾಮಿ, ಕೊಡವ ತಕ್ಕ್ ಜನಾಂಗಕಾರಡ ಒಕ್ಕೂಟದ ಅಧ್ಯಕ್ಷರಾದ ಪಡಿಞÁರಂಡ ಜಿ. ಅಯ್ಯಪ್ಪ ಹಾಗೂ ಕೊಡವ ಭಾಷಿಕ ಸಮುದಾಯ ಕೂಟದ ಅಧ್ಯಕ್ಷರಾದ ಡಾ| ಮೇಚಿರ ಸುಭಾಶ್ ನಾಣಯ್ಯ ಅವರು ಭಾಗವಹಿಸಲಿದ್ದಾರೆ.

‘ಕೊಡವ ಸಾಹಿತ್ಯ-ಸಂಸ್ಕೃತಿರ ಅಂದೋಳ’ಕ್ಕೆ ಎಲ್ಲಾ ಕೊಡವ ಹಾಗೂ ಭಾಷಿಕ ಸಮಾಜ, ಸಂಘ-ಸAಸ್ಥೆಗಳ ಅಧ್ಯಕ್ಷರು, ಆಡಳಿತ ಮಂಡಳಿ, ಸದಸ್ಯರುಗಳನ್ನು, ಸಾಹಿತ್ಯ, ಸಂಸ್ಕೃತಿಯ ಅಭಿಮಾನಿಗಳನ್ನು ಜಾತಿ-ಧರ್ಮಾತೀತವಾಗಿ ಈ ಸಂದರ್ಭ ಸ್ವಾಗತಿಸಲಾಗುವುದು.

ಅಂದಿನ ದಿನ ಆಯ್ದ ಸಂಘ-ಸAಸ್ಥೆ-ಸಮಾಜಗಳಿಗೆ ದುಡಿ, ತಾಳ, ಕೋಲ್, ಕೊಂಬು, ಧೋಳ್ ಕೊಡಲಾಗುವುದು. ವಿಚಾರ ಮಂಡನೆಯಲ್ಲಿ ‘ಕೊಡವ ಸಂಸ್ಕೃತಿರ ಗುಣ-ಲಕ್ಷಣ ಪಿಞ್ಞ ನೀತಿ-ನಡತೆ’ ಎಂಬ ವಿಷಯವಾಗಿ ಅಭಿಮನ್ಯು ಫೌಂಡೇಷನ್ ಅಧ್ಯಕ್ಷ ಖ್ಯಾತ ಅಂತರರಾಷ್ಟಿçÃಯ ಕ್ರೀಡಾಪಟು ತೀತಮಾಡ ಅರ್ಜುನ್ ದೇವಯ್ಯ, ‘ಕೊಡವ ಪಾಜೆರ ರಕ್ಷಣೆಲ್ ಜನಾಂಗತ್‌ರ ಜವಾಬ್ದಾರಿ’ ವಿಷಯವಾಗಿ ಡಾ.ತೀತಿರ ರೇಖಾ ವಸಂತ ವಿಚಾರ ಮಂಡಿಸಲಿದ್ದಾರೆ.

ಕವಿಗಳಾದ ಪುತ್ತಾಮನೆ ವಿದ್ಯಾ ಜಗದೀಶ್, ವೈಲೇಶ್ ಪಿ.ಎಸ್, ಉಳುವಂಗಡ ಕಾವೇರಿ ಉದಯ ಹಾಗೂ ೪ಐದನೇ ಪುಟಕ್ಕೆ

(ಮೊದಲ ಪುಟದಿಂದ) ಅಜ್ಜಿಕುಟ್ಟಿರ ಭವ್ಯ ಬೋಪಣ್ಣ ಕವನ ವಾಚನ ಮಾಡಲಿದ್ದಾರೆ.

ಶ್ರೀ ಮಂದತವ್ವ ಸಾಂಸ್ಕೃತಿಕ ತಂಡ ಬೆಕ್ಕೆಸೊಡ್ಲೂರು-ಸುಳ್ಳಿಮಾಡ ಶಾಮಲ ಮತ್ತು ತಂಡದವರಿAದ ಗೆಜ್ಜೆತಂಡ್ ನೃತ್ಯ, ಪೊಂಬೊಳಕ್ ಕೊಡವ ಕೂಟ ಮೈಸೂರು ಇವರಿಂದ ಕೋಲಾಟ್ ಮತ್ತು ಗ್ರೂಪ್ ಡ್ಯಾನ್ಸ್, ಗೋಪಮ್ಮ ಮತ್ತು ತಂಡದವರಿAದ ಉರ್‌ಟಿಕೊಟ್ ನೃತ್ಯ, ಕುಟ್ಟ ಕೊಡವ ಸಮಾಜ ಪೊಮ್ಮಕ್ಕಡ ಕೂಟದವರಿಂದ ಸಾಂಸ್ಕೃತಿಕ ಕಾರ್ಯಕ್ರಮ, ಬೀಕಚಂಡ ಪುಟ್ಟ ಬೆಳ್ಯಪ್ಪನವರಿಂದ ಎತ್ತ್ತೆರೆ, ಕಾಪಾಳ ತಂಡ, ದುಡಿಕೊಟ್ಟ್ ಪಾಟ್, ಶ್ರೀಮಂಗಲ ಪೊಮ್ಮಕ್ಕಡ ಕೂಟದವರಿಂದ ಸಾಂಸ್ಕೃತಿಕ ನೃತ್ಯ, ಟಿ. ಶೆಟ್ಟಿಗೇರಿ ಸಂಭ್ರಮ ಪೊಮ್ಮಕ್ಕ ತಂಡ ಹಾಗೂ ಇತರೆ ಸಂಘ-ಸAಸ್ಥೆಗಳು ಸಾಂಸ್ಕೃತಿಕ ಕಾರ್ಯಕ್ರಮ ನೀಡಲಿವೆ.

ಕೊಂಡಿಜಮ್ಮನ ಎಂ ಬಾಲಕೃಷ್ಣ, ಪೊನ್ನಿರ ಯು ಗಗನ್, ನಾಯಂದಿರ ಆರ್ ಶಿವಾಜಿ ಮತ್ತು ಚೆಪ್ಪುಡಿರ ಎಸ್. ಉತ್ತಪ್ಪ ಅವರು ಸಂಚಾಲಕರಾಗಿ ಕಾರ್ಯನಿರ್ವಹಿಸಲಿದ್ದಾರೆ ಎಂದು ಅಕಾಡೆಮಿ ಪ್ರಕಟಣೆ ತಿಳಿಸಿದೆ.