*ಗೋಣಿಕೊಪ್ಪ, ಫೆ. ೨೪: ಒತ್ತಡದ ಕರ್ತವ್ಯದ ನಡುವೆ ಪೊಲೀಸ್ ಸಿಬ್ಬಂದಿಯೊಬ್ಬರು ಸಣ್ಣ ಕಥೆಗಳ ಸಂಕಲನವನ್ನು ಪ್ರಕಟಿಸುವ ಮೂಲಕ ಗಮನ ಸೆಳೆದಿದ್ದಾರೆ.
ವೀರಾಜಪೇಟೆ ಠಾಣೆಯಲ್ಲಿ ಕರ್ತವ್ಯ ನಿರತರಾಗಿರುವ ಎ.ಟಿ ಮಂಜುನಾಥ್ “ಕಾಣದ ಕಡಲು” ಎಂಬ ಕಥಾ ಸಂಕಲನದಲ್ಲಿ ಸುಮಾರು ೬೨ ಸಣ್ಣ ಕಥೆಗಳನ್ನು ಬರೆದು ಸಂಕಲನ ರೂಪದಲ್ಲಿ ಹೊರತಂದು ಕಥೆಗಾರರಾಗಿ ಸಾಹಿತ್ಯ ಲೋಕವನ್ನು ಪ್ರವೇಶಿಸಿದ್ದಾರೆ.
ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್, ಪೊನ್ನಂಪೇಟೆ ತಾಲೂಕು ಕನ್ನಡ ಸಾಹಿತ್ಯ ಪರಿಷತ್, ಪೊನ್ನಂಪೇಟೆ ಹೋಬಳಿ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಗೋಣಿಕೊಪ್ಪ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ನಡೆದ ದತ್ತಿ ಉಪನ್ಯಾಸದಲ್ಲಿ ಪುಸ್ತಕವನ್ನು ಜಿಲ್ಲಾ ಸಾಹಿತ್ಯ ಪರಿಷತ್ ಅಧ್ಯಕ್ಷ ಎಂ.ಪಿ ಕೇಶವ ಕಾಮತ್ ಲೋಕಾರ್ಪಣಗೊಳಿಸಿದರು.
ಪೊನ್ನಂಪೆಟೆ ಹೋಬಳಿ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ, ಸಾಹಿತಿ, ನಿವೃತ್ತ ಪ್ರಾಂಶುಪಾಲ ಡಾ.ಜೆ ಸೋಮಣ್ಣ, ಗೋಣಿಕೊಪ್ಪ ಸರಕಾರಿ ಪ್ರೌಢಶಾಲೆಯ ಶಿಕ್ಷಕಿ, ಚಂದನ ಮಂಜುನಾಥ್, ಉದ್ಯಮಿ ಎಂ.ಜಿ ಮೋಹನ್, ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯ ಮೇಲುಸ್ತುವಾರಿ ಸಮಿತಿ ಅಧ್ಯಕ್ಷ ಜಗದೀಶ್ ಜೋಡುಬೀಟಿ, ಮುಖ್ಯೋಪಾಧ್ಯಾಯ ಎಚ್.ಕೆ ಕುಮಾರ್, ದತ್ತಿ ದಾನಿಗಳ ಸಹೋದರ ಹಾಗೂ ಉದ್ಯಮಿ ಎಂ.ಜಿ ನಾಗರಾಜ್, ಶಾಲೆಯ ಹಿರಿಯ ವಿದ್ಯಾರ್ಥಿಗಳ ಸಂಘದ ಖಜಾಂಚಿ ಪ್ರಮೋದ್ ಕಾಮತ್, ಪೊಲೀಸ್ ಸಿಬ್ಬಂದಿ ಮತ್ತು “ಕಾಣದ ಕಡಲು” ಕಥಾಸಂಕಲನದ ಕಥೆಗಾರ ಮಂಜುನಾಥ್ ಮತ್ತು ಪೊನ್ನಂಪೇಟೆ ತಾಲೂಕು ಸಾಹಿತ್ಯ ಪರಿಷತ್ತಿನ ಕಾರ್ಯದರ್ಶಿ ಕೆ.ವಿ ರಾಮಕೃಷ್ಣ, ಟಿ.ಜಿ ಜೀವನ್, ಕೋಶಾಧಿಕಾರಿ ಪಿ.ಜಿ ರಾಜಶೇಖರ್, ಶಿಕ್ಷಕರುಗಳಾದ ಮಹೇಶ್, ರೋಜಿû ಇದ್ದರು.