ಐಗೂರು, ಫೆ.೨೪: ಅಂಚೆ ಇಲಾಖೆ ಸೋಮವಾರಪೇಟೆ ಉಪವಿಭಾಗದ ವತಿಯಿಂದ ಐಗೂರಿನ ಗ್ರಾಮ ಪಂಚಾಯಿತಿ ಆವರಣದಲ್ಲಿ ಆಧಾರ್ ನೋಂದಣಿ ಮತ್ತು ಪರಿಷ್ಕರಣಾ ಶಿಬಿರ ನಡೆಯಿತು.
ಶಿಬಿರದಲ್ಲಿ ೧೦ ವರ್ಷಗಳ ಹಿಂದಿನ ಆಧಾರ್ ಕಾರ್ಡ್ ನವೀಕರಣ, ಹೆಸರು ಬದಲಾವಣೆ, ವಿಳಾಸ ಬದಲಾವಣೆ, ಮೊಬೈಲ್ ಸಂಖ್ಯೆ ನೋಂದಣಿ/ಬದಲಾವಣೆ, ೫ ವರ್ಷ ಮತ್ತು ೧೫ ವರ್ಷ ಹೊಂದಿದ ಮಕ್ಕಳ ಬಯೋಮೆಟ್ರಿಕ್ ನವೀಕರಣ ನಡೆಯಿತು.
ಕಾಜೂರು ಮತ್ತು ಯಡವನಾಡಿನ ಗ್ರಾಮಸ್ಥರು ಶಿಬಿರದಲ್ಲಿ ಭಾಗವಹಿಸಿ ಪ್ರಯೋಜನ ಪಡೆದುಕೊಂಡರು. ಕಾರ್ಯಕ್ರಮದಲ್ಲಿ ಅಂಚೆ ಮೇಲ್ವಿಚಾರಕರಾದ ಮಹೇಶ್ ಸಿ.ಎಲ್, ಮಂಜು ಟಿ. ಕೆ ಮತ್ತು ಐಗೂರಿನ ಅಂಚೆ ಕಚೇರಿಯ ಮೇಲ್ವಿಚಾರಕರಾದ ಮಂಜುನಾಥ್ ಕಾರ್ಯನಿರ್ವಹಿಸಿದರು.