ಕೂಡಿಗೆ, ಫೆ. ೨೪: ಪ್ರಸ್ತುತ ಹಿಂದೂಗಳ ಸ್ಥಿತಿಯನ್ನು ನೋಡಿದಾಗ ಹಿಂದೂ ಸಂಗಮಗಳ ಅವಶ್ಯಕತೆ ಬಹಳಷ್ಟಿದೆ ಎಂದು ಸಾಮಾಜಿಕ ಕಾರ್ಯಕರ್ತ ಸುಳ್ಯದ ನವೀನ್ ಸುಬ್ರಮಣ್ಯ ಅವರು ಅಭಿಪ್ರಾಯಟ್ಟರು.

ಹುದುಗೂರಿನಲ್ಲಿ ನಡೆದ ಹಿಂದೂ ಸಂಗಮ ಉದ್ದೇಶಿಸಿ ಮಾತನಾಡಿದ ಅವರು, ರಾಷ್ಟç ಭಕ್ತಿಯನ್ನು ರೂಢಿಸಿಕೊಳ್ಳುವುದಕ್ಕಿಂತ ವ್ಯಕ್ತಿತ್ವದ ಶ್ರೇಷ್ಠತೆ ಮತ್ತೊಂದಿಲ್ಲ, ಕುಟುಂಬದ ಮೌಲ್ಯವನ್ನು ಕಿರಿಯರ ಮೂಲಕ ಮುಂದಿನ ಜನಾಂಗಕ್ಕೆ ತಿಳಿಸುವುದು ಸಂಸ್ಕಾರಯುತ ಸಮಾಜ ನಿರ್ಮಾಣಕ್ಕೆ ಬುನಾದಿಯಾಗಬಲ್ಲದು ಎಂದರು. ಸಾಮರಸ್ಯದ ಭಾವ ಅಂತರAಗದಿAದ ಹುಟ್ಟಬೇಕು, ಪ್ರಕೃತಿ ರಕ್ಷಣೆ ಮತ್ತು ನಾಗರಿಕ ಶಿಷ್ಟಾಚಾರ ಸದಾ ನಮ್ಮ ಉಸಿರಾಗಬೇಕು, ಇದರ ಮೂಲಕ ಸಮಾಜ ಜಾಗೃತವಾಗಬೇಕಾಗಿದೆ ಎಂದರು. ಪ್ರಮುಖರಾದ ಹೆಚ್.ಎಸ್ ರವಿ ಮಾತನಾಡಿ, ಸಾಮಾಜಿಕ ಸಾಮರಸ್ಯ, ಪರಿಸರ ಸಂರಕ್ಷಣೆ, ಕುಟುಂಬ ಜೀವನ, ಸ್ವದೇಶಿ, ನಾಗರಿಕ ಕರ್ತವ್ಯ ಪ್ರಜ್ಞೆ ಇವುಗಳ ಮೂಲಕ ಜಾಗೃತಿ ಮೂಡಿಸುವುದು ಹಿಂದೂ ಸಂಗಮದ ಉದ್ದೇಶ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗ್ರಾಮದ ಪ್ರಮುಖರಾದ ಐ.ಎಸ್ ಗಣೇಶ್ ವಹಿಸಿದ್ದರು. ಕುಶಾಲನಗರ ಹಿಂದೂ ಸಂಗಮ ಆಯೋಜನಾ ಸಮಿತಿ ಅಧ್ಯಕ್ಷ ದೇವಿಪ್ರಸಾದ್, ಉಪಾಧ್ಯಕ್ಷರುಗಳಾದ ಉಮಾ, ಹೆಚ್.ಎಸ್ ರವಿ, ಸಂಯೋಜಕ ಮಣಿ ಮದಲಾಪುರ, ಭರತ್ ಮಾಚಯ್ಯ, ಕೂಡಿಗೆ ಹಿಂದೂ ಸಂಗಮ ಆಯೋಜಕ ಸಮಿತಿ ಅಧ್ಯಕ್ಷ ಧರ್ಮ, ಸಹ ಸಂಯೋಜಕ ಅನಿಲ್ ಕುಮಾರ್, ಚಂದ್ರಕಾAತ್, ತನ್ಮಯ್ ಸೇರಿದಂತೆ ನೂರಾರು ಕಾರ್ಯಕರ್ತರು ಹಾಜರಿದ್ದರು.

ಕಾರ್ಯಕ್ರಮದ ಅಂಗವಾಗಿ ನೂರಾರು ಕಾರ್ಯಕರ್ತರು ಬೈಕ್ ಜಾಥಾ ಮೂಲಕ ಹುದುಗೂರು, ಮದಲಾಪುರ, ಸೀಗೆಹೊಸೂರು, ಭುವನಗಿರಿ, ಕೂಡಿಗೆಗೆ ಸಾಗಿದರು.