ಮಡಿಕೇರಿ, ಫೆ. ೨೩: ದಕ್ಷಿಣ ಕೊಡಗಿನ ಗಡಿಭಾಗವಾದ ಮರೆನಾಡು ವಿಭಾಗದಲ್ಲಿ ಇಂದು ಆಯೋಜಿತವಾಗಿದ್ದ ಹಿಂದೂ ಸಂಗಮ ಯಶಸ್ವಿಯಾಗಿ ಜರುಗುವ ಮೂಲಕ ಗಮನ ಸೆಳೆಯಿತು.
ಬಿರುನಾಣಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಐದು ಗ್ರಾಮಗಳ ಹಿಂದೂ ಅಭಿಮಾನಿಗಳು ಉತ್ಸಾಹದಿಂದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಗಡಿ ಪ್ರದೇಶದಲ್ಲಿನ ಕಾರ್ಯಕ್ರಮವನ್ನು ಯಶಸ್ಸುಗೊಳಿಸಿದರು.
ಆರಂಭದಲ್ಲಿ ಬಿರುನಾಣಿ ಪಟ್ಟಣದಲ್ಲಿ ಸಮಾಗಮಗೊಂಡ ನೂರಾರು ಮಂದಿ ಆಕರ್ಷಕವಾಗಿ ತಯಾರಿಸಲಾಗಿದ್ದ ಶ್ರೀ ರಾಮ ರಥಕ್ಕೆ ಪೂಜೆ ಸಲ್ಲಿಸುವುದರೊಂದಿಗೆ ಸುಮಾರು ಒಂದೂವರೆ ಕಿ.ಮೀ. ಅಂತರದಲ್ಲಿರುವ ಮರೆನಾಡು ಕೊಡವ ಸಮಾಜದ ತನಕ ಮೆರವಣಿಗೆ ನಡೆಸಿದರು. ಜೈ ಶ್ರೀ ರಾಮ್, ಹಿಂದೂ ಧರ್ಮದ ಪರವಾದ ಘೋಷಣೆಯೊಂದಿಗೆ ಕೇಸರಿ ಧ್ವಜ, ಶಲ್ಯ ಧರಿಸಿದ್ದ ಪುರುಷರು, ಮಹಿಳೆಯರು, ಮಕ್ಕಳು ಕಾಲ್ನಡಿಗೆಯಲ್ಲಿ ತೆರಳಿದರು. ಚಂಡೆವಾದ್ಯ, ಭುವನೇಶ್ವರಿಯ ಭಾವಚಿತ್ರ, ವೀರಗಾಸೆ, ದುಡಿಕೊಟ್ಟ್ಪಾಟ್, ವಾಲಗ ಸಹಿತವಾಗಿ ವೈಭವಯುತ ಮೆರವಣಿಗೆ ಗಮನ ಸೆಳೆಯಿತು.
ಕಾರ್ಯಕ್ರಮ ಆಯೋಜಿತಗೊಂಡಿದ್ದ ಕೊಡವ ಸಮಾಜದ ಆವರಣದಲ್ಲಿ ಮೆರವಣಿಗೆ ಸಮಾಪನಗೊಂಡಿತು. ಅಲ್ಲಿ ಪುಟ್ಟಮಕ್ಕಳ ನೃತ್ಯ, ಕೋಲಾಟ್, ಕತ್ತಿಯಾಟ್‌ನಂತಹ ಕಾರ್ಯಕ್ರಮಗಳ ಬಳಿಕ ಸಭಾ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.
ಸಂಸ್ಕಾರ ಪರಿಪಾಲನೆ ಅಗತ್ಯ
ಕಾರ್ಯಕ್ರಮದಲ್ಲಿ ದಿಕ್ಸೂಚಿ ಭಾಷಣಕಾರರಾಗಿ ಪಾಲ್ಗೊಂಡಿದ್ದ ಸಂಘದ ಮಂಗಳೂರು ವಿಭಾಗದ ಪ್ರಮುಖ ಸುಬ್ರಮಣ್ಯ ಪರಣೀಕರ್ ಅವರು ಸಂದೇಶ ನೀಡಿ, ದೇಶದಲ್ಲಿ ಇರುವ ಎಲ್ಲರೂ ಹಿಂದೂಗಳಾಗಿದ್ದಾರೆ. ಹಿಂದೂ ಎನ್ನುವುದು ಜೀವನದ ಪದ್ಧತಿಯಾಗಿದೆ. ಜನರು ಯಾವ ರೀತಿ ಬದುಕಬೇಕು. ಸಂಸ್ಕೃತಿ-ಪರAಪರೆಯ ರೀತಿ ನೀತಿಗಳು ಹೇಗೆ ಎಂಬುದನ್ನು ಹಿಂದೂ ಧರ್ಮ ಕಲಿಸುತ್ತದೆ. ಎಲ್ಲರೂ ಒಟ್ಟಿಗೆ ಇರಬೇಕೆಂಬುದು ಧರ್ಮದ ಮೂಲಉದ್ದೇಶ ಎಂದರು. ಹಲವಾರು ವಿಚಾರಗಳ ಬಗ್ಗೆ ಹಿಂದೂ ಸಮಾಜ ಪ್ರಸ್ತುತ ಚಿಂತನೆ ಮಾಡಬೇಕಾಗಿದೆ. ಯುವ ಜನಾಂಗವನ್ನು ಎಚ್ಚರಿಸಬೇಕಾದ ಅಗತ್ಯತೆ ಇದೆ. ಸಂಸ್ಕಾರವನ್ನು ಅರಿತು ಪರಿಪಾಲಿಸುವುದು ಜವಾಬ್ದಾರಿಯಾಗಿದ್ದು, ಸಂಸ್ಕಾರಯುತ ೪ನಾಲ್ಕನೇ ಪುಟಕ್ಕೆ
(ಮೊದಲ ಪುಟದಿಂದ) ಮಕ್ಕಳು ಸಮಾಜದಲ್ಲಿ ಪರಿವರ್ತನೆ ತರಲಿದ್ದಾರೆ ಎಂದು ಅಭಿಪ್ರಾಯಪಟ್ಟರು. ದ್ವೇಷ-ಹಿಂಸೆಯಿAದ ಸಮಾಜ ಪರಿವರ್ತನೆ ಆಗುವುದಿಲ್ಲ. ಹಳ್ಳಿ ಹಳ್ಳಿಗಳಲ್ಲಿ ಜನರು ಒಗ್ಗಟ್ಟಾಗಬೇಕು. ಪ್ರಸ್ತುತ ಭಾರತ ಸ್ವಾಭಿಮಾನಿ ರಾಷ್ಟçವಾಗಿ ರೂಪುಗೊಳ್ಳುತ್ತಿದ್ದು, ಜಗತ್ತು ಭಾರತವನ್ನು ಗಮನಿಸುವಂತಾಗಿದೆ ಎಂದು ಸುಬ್ರಮಣ್ಯ ಪರಣೀಕರ್ ಹೇಳಿದರು.
ಸಾಮರಸ್ಯ, ಸಂವಿಧಾನದ ಪರಿಪಾಲನೆ, ನಾಗರಿಕ ಶಿಷ್ಟಾಚಾರದ ಪಾಲನೆ, ಪ್ರಕೃತಿಯ ರಕ್ಷಣೆಗೆ ಒತ್ತು ನೀಡಲೂ ಅವರು ಕರೆ ನೀಡಿದರು.
ಮುಖ್ಯ ಅತಿಥಿಗಳಾಗಿದ್ದ ಮರೆನಾಡು ಪ್ರೌಢಶಾಲೆಯ ನಿವೃತ್ತ ಮುಖ್ಯ ಶಿಕ್ಷಕಿ ಕಟ್ಟೇರ ಸುಶೀಲ ಅಚ್ಚಪ್ಪ ಅವರು ಮಾತನಾಡಿ, ಹಿಂದೂ ಎಂಬುದು ಸನಾತನ ಧರ್ಮವಾಗಿದೆ. ಇದು ಕೇವಲ ಆಚರಣೆಯಲ್ಲ. ಜೀವನದ ಪದ್ಧತಿಯಾಗಿದೆ. ಇದರ ನಾಶಕ್ಕೆ ಹಿಂದಿನಿAದಲೂ ಹಲವು ಪ್ರಯತ್ನ ನಡೆದಿದ್ದರೂ ಭದ್ರಬುನಾದಿ ಹೊಂದಿರುವ ಇದನ್ನು ಅಲುಗಾಡಿಸಲು ಸಾಧ್ಯವಾಗದು ಎಂದರು.
ಮತ್ತೋರ್ವ ಅತಿಥಿ ನಿವೃತ್ತ ಕ್ಯಾಪ್ಟನ್ ಮಲ್ಲೇಂಗಡ ಪೂಣಚ್ಚ ಅವರು ದೇಶದ ಸುಭದ್ರತೆ, ಹಿಂದೂ ಧರ್ಮದ ಕುರಿತು ಅನಿಸಿಕೆ ವ್ಯಕ್ತಪಡಿಸಿದರು.
ವೇದಿಕೆಯಲ್ಲಿ ಹಿಂದೂ ಸಂಗಮ ಕಾರ್ಯಕ್ರಮ ಆಯೋಜನಾ ಸಮಿತಿಯ ಪ್ರಮುಖರಾದ ತೀತಮಾಡ ರಘು ಗಣಪತಿ, ಸಂಚಾಲಕ ಅಣ್ಣಳಮಾಡ ರಾಯ್ ಚಿಣ್ಣಪ್ಪ ಉಪಸ್ಥಿತರಿದ್ದರು. ಪ್ರಾಸ್ತಾವಿಕವಾಗಿ ಮಾತನಾಡಿದ ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಹಾಗೂ ಹಿಂದೂ ಸಂಗಮ ಆಯೋಜನಾ ಸಮಿತಿಯ ಪ್ರಮುಖ ನೆಲ್ಲೀರ ಚಲನ್ ಹಿಂದೂ ಸಂಗಮ ದೇಶದ ಎಲ್ಲೆಡೆ ನಡೆಯುತ್ತಿದ್ದು, ಕೊಡಗಿನ ಎಲ್ಲಾ ಮಂಡಲಗಳಲ್ಲೂ ನಡೆಯುತ್ತಿದೆ. ಇದು ಯಾವುದೇ ಧರ್ಮ-ವ್ಯಕ್ತಿಗಳ ವಿರುದ್ಧ ಅಲ್ಲ ಎಂದರು.
ಸಮಿತಿ ಪ್ರಮುಖ ಮೀದೇರಿರ ಹರೀಶ್ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ವಂದೇ ಮಾತರಂ ಗೀತೆಯೊಂದಿಗೆ ಕಾರ್ಯಕ್ರಮ ಮುಕ್ತಾಯಗೊಂಡಿತು. ನೆರೆದಿದ್ದವರಿಗೆ ಅಪರಾಹ್ನ ಭೋಜನ ವ್ಯವಸ್ಥೆ ಕಲ್ಪಿಸಲಾಗಿತ್ತು.