ಸೋಮವಾರಪೇಟೆ, ಫೆ.೨೨: ಹಿಂದೂ ಧರ್ಮ ರಕ್ಷಣೆಗಾಗಿ ಇಡೀ ಹಿಂದೂ ಸಮಾಜ ಸದಾ ಜಾಗೃತವಿರಬೇಕೆಂದು ಪ್ರಮುಖರು ಕರೆ ನೀಡಿದರು.

ಸೋಮವಾರಪೇಟೆ ಪಟ್ಟಣ ಸಮೀಪದ ಹಾನಗಲ್ಲು, ಗಣಗೂರು ಮಂಡಲ ವ್ಯಾಪ್ತಿಯಲ್ಲಿ ಆಯೋಜನೆಗೊಂಡಿದ್ದ ಹಿಂದೂ ಸಂಗಮ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಪ್ರಮುಖರು, ಧರ್ಮದ ರಕ್ಷಣೆಗಾಗಿ ಸಮಾಜ ಜಾಗೃತವಿರಬೇಕೆಂದು ಕರೆಯಿತ್ತರು.

ಸಮೀಪದ ಹಾನಗಲ್ಲು ಮಂಡಲದ ಹಿಂದೂ ಸಂಗಮ ಆಯೋಜನಾ ಸಮಿತಿ ವತಿಯಿಂದ ಆಯೋಜಿಸಿದ್ದ ಹಿಂದೂ ಸಂಗಮ ಕಾರ್ಯಕ್ರಮದ ಭಾಗವಾಗಿ ಕಲ್ಕಂದೂರಿನ ಕೂಡುರಸ್ತೆಯಿಂದ ಯಡೂರು ಗ್ರಾಮದವರೆಗೆ ಭವ್ಯ ಶೋಭಾಯಾತ್ರೆ ನಡೆಯಿತು.

ಭಾರತ ಮಾತೆಯ ಭಾವಚಿತ್ರವನ್ನು ಅಳವಡಿಸಿದ್ದ ಅಲಂಕೃತ ವಾಹನದೊಂದಿಗೆ ಮೆರವಣಿಗೆ ನಡೆಯಿತು. ಹಾನಗಲ್ಲು ಗಣಪತಿ ದೇವಾಲಯದ ಅರ್ಚಕ ಪ್ರಸಾದ್ ಭಟ್ ನೇತೃತ್ವದಲ್ಲಿ ಗೋ ಪೂಜೆಯನ್ನು ನೆರವೇರಿಸುವ ಮೂಲಕ ಶೋಭಾಯಾತ್ರೆಗೆ ಚಾಲನೆ ನೀಡಲಾಯಿತು.

ಮಹಿಳೆಯರು ಪೂರ್ಣಕುಂಭದೊAದಿಗೆ ಶೋಭಾಯಾತ್ರೆಯಲ್ಲಿ ಭಾಗಿಯಾಗಿದ್ದರೆ, ಮಕ್ಕಳು, ಪುರುಷರು ಕೇಸರಿ ಶಾಲು ಧರಿಸಿ, ಕೇಸರಿ ಧ್ವಜಗಳನ್ನು ಹಿಡಿದು ಹೆಜ್ಜೆ ಹಾಕಿದರು. ಯಡೂರು ಆಟದ ಮೈದಾನದವರೆಗೆ ನಡೆದ ಶೋಭಾಯಾತ್ರೆಯಲ್ಲಿ ನೂರಾರು ಮಂದಿ ಭಾಗಿಯಾಗಿದ್ದರು. ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದ ಶ್ರೀ ಸೋಮನಾಥ ಸ್ವಾಮೀಜಿಗಳು, ಭರತ ಭೂಮಿಯ ಮಾನ ಸಮ್ಮಾನದ ಪ್ರತೀಕವಾಗಿ ಪ್ರತಿ ಹೃದಯಕ್ಕೂ ಹಿಂದೂ ರಾಷ್ಟçದ ಅಸ್ಮಿತೆಯನ್ನು ತಲುಪಿಸುವ ಉದ್ದೇಶದಿಂದ ಆರ್‌ಎಸ್‌ಎಸ್ ಕಾರ್ಯ ನಿರ್ವಹಿಸುತ್ತಿದ್ದು, ಸಂಘಕ್ಕೆ ನೂರು ವರ್ಷ ತುಂಬಿದ ಸಂದರ್ಭ ಇಂತಹ ಕಾರ್ಯಕ್ರಮಗಳನ್ನು ಆಯೋಜನೆ ಮಾಡಲಾಗಿದೆ ಎಂದರು.

ಗ್ರಾಮ ಸ್ವರಾಜ್ಯದೊಂದಿಗೆ ರಾಮರಾಜ್ಯ ನಿರ್ಮಾಣವಾಗಬೇಕು. ಆದರೆ ಆಧುನಿಕ ವಿಜ್ಞಾನದ ಯುಗದಲ್ಲಿ ಅಧ್ಯಾತ್ಮಿಕತೆಯನ್ನು ಮರೆಯುತ್ತಿದ್ದೇವೆ. ಸಾವಯವ ಕೃಷಿ ಪದ್ದತಿ ದೂರಾಗುತ್ತಿದೆ. ಇದರಿಂದಾಗಿ ಆಯುಷ್ಯಕ್ಕೆ ಗ್ಯಾರಂಟಿ ಇಲ್ಲದಂತಾಗಿದೆ. ಸಾವಯವ ಪದ್ದತಿ ಉಳಿಯಬೇಕಾದರೆ ಭರತ ಭೂಮಿಯ ಯಾವುದೇ ಪ್ರದೇಶದಲ್ಲಿ ಗೋವಿನ ಒಂದು ತೊಟ್ಟು ರಕ್ತ ಬೀಳಬಾರದು ಎಂದು ಅಭಿಪ್ರಾಯಿಸಿದರು.

ಭಾರತ ಸದೃಢವಾಗಿದ್ದರೆ ಮಾತ್ರ ಜಗತ್ತು ಸುಖಿಯಾಗಿರುತ್ತದೆ. ವಸುದೈವ ಕುಟುಂಬಕA ಎಂಬ ಧ್ಯೇಯವನ್ನು ಹಿಂದೂ ಸಮಾಜ ಹೊಂದಿದೆ. ಭಾರತ ಭಾರತವಾಗಿ ಉಳಿಯಬೇಕಾದರೆ ೪ಐದನೇ ಪುಟಕ್ಕೆ

ಹಿಂದೂ ಕೌಟುಂಬಿಕ ಪದ್ದತಿ ಉಳಿಯಬೇಕು. ಹಿಂದೂ ಸಮಾಜದ ಒಗ್ಗಟ್ಟಿಗೆ ಯಾವುದೇ ರಾಜಕೀಯ, ರಾಜಕೀಯ ಪಕ್ಷಗಳ ಮುಖಂಡರು ಧಕ್ಕೆಯಾಗಬಾರದು. ಹಿಂದೂ ಸಮಾಜದ ರಕ್ಷಣೆಗೆ ಕೇವಲ ಸಂಘದ ಸ್ವಯಂ ಸೇವಕರು ಮಾತ್ರವಲ್ಲ; ಇಡೀ ಸಮಾಜ ಕೈಜೋಡಿಸಬೇಕು. ಸನಾತನ ಧರ್ಮದ ಅಪಮಾನವನ್ನು ಯಾರೂ ಸಹಿಸಬಾರದು ಎಂದರು.

ದಿಕ್ಸೂಚಿ ಭಾಷಣ ಮಾಡಿದ ಸಾಮಾಜಿಕ ಕಾರ್ಯಕರ್ತ, ಸುಳ್ಯ ಆಡೂರಿನ ನವೀನ್ ಸುಬ್ರಮಣ್ಯ ಮಾತನಾಡಿ, ಈ ಹಿಂದಿನಿAದಲೂ ಹಿಂದೂ ಸಮಾಜದ ಮೇಲೆ ಹಲವಷ್ಟು ಧಾಳಿಗಳು ನಡೆದಿವೆ. ಧಾರ್ಮಿಕ ಶ್ರದ್ದಾಕೇಂದ್ರಗಳನ್ನು ನಾಶಗೊಳಿಸುವ ಯತ್ನಗಳು ಧರ್ಮದ್ರೋಹಿಗಳಿಂದ ನಡೆದರೂ ಸಹ ಮತ್ತೆ ತಲೆಯೆತ್ತಿ ನಿಂತಿವೆ. ಬಹುತ್ವದಲ್ಲಿ ಹಿಂದುತ್ವ ಬೆಳೆದಿದೆ. ಹಿಂದುತ್ವದ ಜಾತ್ಯಾತೀತತೆಯೇ ನಿಜವಾದ ಸತ್ಯ ಎಂದು ಹೇಳಿದರು.

ಕೇಸರಿ ಕಂಡರೆ ಕೆಲ ರಾಜಕಾರಣಿಗಳ ಕಣ್ಣು ಕೆಂಪಾಗುತ್ತದೆ. ಭಾರತ ಮಾತೆಯ ಭಾವಚಿತ್ರವನ್ನು ಕಂಡರೆ, ಭಗವಾಧ್ವಜ ಹಿಡಿದರೆ ಆರ್.ಎಸ್.ಎಸ್. ಸಿದ್ಧಾಂತ ಎಂದು ಹಲವರು ಹೇಳುತ್ತಾರೆ. ಆರ್.ಎಸ್.ಎಸ್. ಹುಟ್ಟುವುದಕ್ಕೂ ಮುನ್ನವೇ ಕೇಸರಿ, ಭಾರತಮಾತೆ ಇತ್ತು. ಭಾರತ ಹಿಂದೆ ಏನಾಗಿತ್ತೋ ಅದನ್ನು ನೆನಪು ಮಾಡಿಕೊಡುವ ಕೆಲಸವನ್ನಷ್ಟೇ ಸಂಘ ಮಾಡುತ್ತಿದೆ ಎಂದರು.

ಧರ್ಮದ ನೆಲೆಗಟ್ಟಿನಲ್ಲಿ ಸಂಸ್ಕೃತಿಯನ್ನು ಉಳಿಸುವ ಚೈತನ್ಯ ಭಾರತದಲ್ಲಿ ಜಾಗೃತವಿದೆ. ಈ ನೆಲವನ್ನು ಮಾತೃಭೂಮಿಯನ್ನಾಗಿ ಆರಾಧಿಸುವ ಸಂಸ್ಕೃತಿ ನಮ್ಮದು. ಮಾತೃಭೂಮಿಯನ್ನು ಉಳಿಸುವ ಸಂಕಲ್ಪ ನಮ್ಮೆಲ್ಲರಿಗೂ ಇರಬೇಕು. ಕ್ಷಾತ್ರ ಪರಂಪರೆಯ ಇತಿಹಾಸ ಈ ನೆಲದ ಸಂಸ್ಕೃತಿಯನ್ನು ಉಳಿಸುವಲ್ಲಿ ಪಾತ್ರ ವಹಿಸಿದೆ. ಭಾರತದ ಜ್ಞಾನ ಪರಂಪರೆಯನ್ನು ವಿಶ್ವ ಸ್ವೀಕರಿಸುತ್ತಿದೆ ಎಂದ ಅವರು, ಹಿಂದೂಗಳೆಲ್ಲರೂ ಒಂದೇ ಎನ್ನುವ ಮನೋಭಾವ ಸಂಘದ್ದು. ಹೀಗಾಗಿ ಹಿಂದೂ ಸಮಾಜದಲ್ಲಿ ಜಾತೀಯತೆ ದೂರಾಗಬೇಕು ಎಂದು ಕರೆ ನೀಡಿದರು.

ಮುಖ್ಯ ಅತಿಥಿಯಾಗಿದ್ದ ಸಾಹಿತಿ ಜಲಾP Áಳಪ್ಪ ಮಾತನಾಡಿ, ಹಿಂದೂಗಳ ತವರು ಭಾರತ. ಸತ್ಯ, ಧರ್ಮ, ನ್ಯಾಯ-ನೀತಿ ಸನಾತನ ಧರ್ಮದ ಅಸ್ಮಿತೆ. ಧರ್ಮದ ಮೇಲಿನ ದೌರ್ಜನ್ಯ ನೋಡಿಕೊಂಡು ಸುಮ್ಮನಿರುವುದು ನಿಜವಾದ ಸಾವು ಎಂದು ದಾರ್ಶನಿಕರು ಹೇಳಿದ್ದಾರೆ. ಈ ನಿಟ್ಟಿನಲ್ಲಿ ಧಾರ್ಮಿಕತೆಯ ಮೇಲಿನ ಧಾಳಿಗಳಿಗೆ ಕಡಿವಾಣ ಹಾಕಬೇಕು. ಹಿಂದೂ ಆಚರಣೆಗಳು ನಿರಾತಂಕ ಹಾಗೂ ನಿರಂತರವಾಗಿರಬೇಕು. ಮಕ್ಕಳಿಗೆ ಧರ್ಮದ ಜ್ಞಾನ ನೀಡಬೇಕು. ಉತ್ತಮ ಸಂಸ್ಕಾರ ಕಲಿಸಬೇಕು. ಪೋಷಕರೂ ಸಹ ಮಕ್ಕಳ ಬೆಳವಣಿಗೆಯ ಬಗ್ಗೆ ಗಮನ ಹರಿಸಬೇಕು. ರಾಷ್ಟಾçಭಿಮಾನ ಮೂಡಿಸಿಕೊಂಡರೆ ಮಾತ್ರ ನಿಜವಾದ ಹಿಂದೂಗಳಾಗಿ ಉಳಿಯುತ್ತೇವೆ ಎಂದು ಅಭಿಪ್ರಾಯಿಸಿದರು.

ಅಧ್ಯಕ್ಷತೆ ವಹಿಸಿದ್ದ ಹಿರಿಯ ಸ್ವಯಂ ಸೇವಕ ಕೆ.ಎಸ್. ಅಪ್ಪಯ್ಯ ಮಾತನಾಡಿ, ಹಿಂದೂ ಸಂಸ್ಕೃತಿಗೆ ಸಾವಿರಾರು ವರ್ಷಗಳ ಇತಿಹಾಸ ಇದೆ. ಧರ್ಮ-ಸಂಸ್ಕೃತಿಯ ಉಳಿವಿಗೆ ಎಲ್ಲರೂ ಸದಾ ಜಾಗೃತರಿರಬೇಕು ಎಂದು ತಿಳಿಸಿದರು.

ವೇದಿಕೆಯಲ್ಲಿ ಹಿಂದೂ ಸಂಗಮ ಆಯೋಜನಾ ಸಮಿತಿಯ ತಾಲೂಕು ಅಧ್ಯಕ್ಷ ಕೆ.ಟಿ. ಸನತ್, ಗೌರವಾಧ್ಯಕ್ಷ ಎಸ್.ಎನ್. ಸೀತಾರಾಮ್, ಹಾನಗಲ್ಲು ಮಂಡಲ ಅಧ್ಯಕ್ಷ ಬಿ.ಜೆ. ದೀಪಕ್ ಇದ್ದರು. ಯಡೂರು ರವಿ, ಕಲ್ಕಂದೂರು ನಾಗರಾಜ್, ಹಾನಗಲ್ಲು ಕೃಷ್ಣಪ್ಪ, ಶಾರದಾ ಪುರುಷೋತ್ತಮ್ ಅವರುಗಳು ಕಾರ್ಯಕ್ರಮ ನಿರ್ವಹಿಸಿದರು.

ಕ್ರಿಯೇಟಿವ್ ಅಕಾಡೆಮಿ ಶಾಲೆಯ ಶಿವಾತ್ಮಿಕ, ಹಂಸಿನಿ, ಪ್ರಣೀತ ಹಾಗೂ ತಂಡದಿAದ ಭಗವದ್ಗೀತೆ ಪಠಣ, ಹಾನಗಲ್ಲು ಪ್ರಸಾದ್ ಅವರಿಂದ ವೇದ ಘೋಷ ನಡೆಯಿತು.

ಗಣಗೂರು ಮಂಡಲ

ಗಣಗೂರು ಮಂಡಲ ಹಿಂದೂ ಸಂಗಮ ಆಯೋಜನಾ ಸಮಿತಿ ವತಿಯಿಂದ ಹಿಂದೂ ಸಂಗಮ ಕಾರ್ಯಕ್ರಮ ಅದ್ದೂರಿಯಾಗಿ ನಡೆಯಿತು. ಗೋಣಿಮರೂರು ಬಸವೇಶ್ವರ ದೇವಸ್ಥಾನದಿಂದ ಗ್ರಾಮ ಪಂಚಾಯಿತಿ ಆವರಣದವರೆಗೆ ಶೋಭಾಯಾತ್ರೆ ನಡೆಯಿತು.

ಭಾರತಮಾತೆಯ ಭಾವಚಿತ್ರದ ಅಲಂಕೃತ ವಾಹನ, ವೀರಗಾಸೆ, ಕಳಸ ಹೊತ್ತ ಮಹಿಳೆಯರು ಹಾಗೂ ನೂರಾರು ಹಿಂದೂ ಬಾಂಧವರು ವಾದ್ಯಗೋಷ್ಠಿಯೊಂದಿಗೆ ಶೋಭಾಯಾತ್ರೆಯಲ್ಲಿ ಭಾಗಿಯಾಗಿದ್ದರು.

ನಂತರ ನಡೆದ ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಮನೆಹಳ್ಳಿ ಮಠದ ಶ್ರೀ ಮಹಾಂತ ಶಿವಲಿಂಗ ಸ್ವಾಮೀಜಿಗಳು, ಮನೆಯಲ್ಲಿ ಉತ್ತಮ ಸಂಸ್ಕೃತಿ ಬೆಳೆಯಬೇಕಾದರೆ ತಾಯಿ ಮುಖ್ಯಪಾತ್ರ ವಹಿಸುತ್ತಾಳೆ. ಕೌಟುಂಬಿಕ ವ್ಯವಸ್ಥೆಯಲ್ಲಿ ತಾಯಿಗೆ ವಿಶೇಷ ಸ್ಥಾನವಿದೆ. ಹೀಗಾಗಿ ಭಾರತವನ್ನು ಮಾತೃಭೂಮಿಯನ್ನಾಗಿ, ಭಾರತ ಮಾತೆಯನ್ನು ಪೂಜಿಸಲಾಗುತ್ತಿದೆ ಎಂದರು.

ಸಹಸ್ರಾರು ಋಷಿಮುನಿಗಳು, ಯೋಗಿಗಳು, ತ್ಯಾಗಿಗಳು, ಸಂತರುಗಳು ಭರತ ಭೂಮಿಯನ್ನು ಪುಣ್ಯಗೊಳಿಸಿ ಮನುಕುಲದ ಒಳಿತಿಗೆ ಸಾಕಷ್ಟು ಶ್ರಮಿಸಿದ್ದಾರೆ. ಅವರುಗಳು ಹಾಕಿಕೊಟ್ಟಿರುವ ಧರ್ಮದ ಹಾದಿಯಲ್ಲಿ ನಾವುಗಳು ಸಾಗಬೇಕಿದೆ. ಈ ನಿಟ್ಟಿನಲ್ಲಿ ರಾಷ್ಟಿçÃಯ ಸ್ವಯಂ ಸೇವಕ ಸಂಘವು ಧರ್ಮ ಜಾಗೃತಿ, ಸೇವಾ ಕಾರ್ಯಗಳ ಮೂಲಕ ೧೦೦ ವರ್ಷಗಳನ್ನು ಪೂರೈಸಿದೆ ಎಂದು ತಿಳಿಸಿದರು. ದಿಕ್ಸೂಚಿ ಭಾಷಣಕಾರರಾಗಿ ಆಗಮಿಸಿದ್ದ ಸಾಮಾಜಿಕ ಕಾರ್ಯಕರ್ತ ಮನೋಹರ್ ಮಾತನಾಡಿ, ಹಿಂದೂ ಸಂಗಮ ಕಾರ್ಯಕ್ರಮ ಆಯೋಜನೆ ಮಾಡುತ್ತಿದ್ದು, ಇದು ಹಿಂದೂಗಳ ಒಗ್ಗಟ್ಟು, ಪರಸ್ಪರ ಸಾಮರಸ್ಯ, ಧಾರ್ಮಿಕ ಜಾಗೃತಿ ಉದ್ದೀಪನಗೊಳಿಸುವ ವೇದಿಕೆಯಾಗಿದೆ.

ರಾಷ್ಟçದ ಒಳಿತಿಗಾಗಿ ಸಂಘವು ಜಾತಿ ಮತ ಪಂಥ ಭೇದ ಬದಿಗಿಟ್ಟು ಒಗ್ಗಟ್ಟಿನಲ್ಲಿ ಹಿಂದೂ ಧರ್ಮದ ಕಾರ್ಯ ಮಾಡುತ್ತಿದೆ ಎಂದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಮುಖರಾದ ಹುಲಿಮನೆ ಮಾದಪ್ಪ ವಹಿಸಿದ್ದರು. ವೇದಿಕೆಯಲ್ಲಿ ಎಂ.ಆರ್. ಪುಟ್ಟಲಕ್ಷಿö್ಮÃ, ಮಂಡಲ ಅಧ್ಯಕ್ಷ ಬಟ್ಯನ ಈರಪ್ಪ ಇದ್ದರು.