ಗೋಣಿಕೊಪ್ಪಲು, ಫೆ. ೨೨: ಗೋಣಿಕೊಪ್ಪ ಮಂಡಲ ಹಿಂದೂ ಸಂಗಮ ಆಯೋಜನಾ ಸಮಿತಿಯ ವತಿಯಿಂದ ಏರ್ಪಡಿಸಲಾಗಿದ್ದ ಹಿಂದು ಸಂಗಮದ ಬೃಹತ್ ಶೋಭಾಯಾತ್ರೆಯಲ್ಲಿ ಹಿಂದೂ ಬಾಂಧವರು ಶಿಸ್ತುಬದ್ಧ ಹೆಜ್ಜೆಗಳನ್ನು ಹಾಕುತ್ತ ಮೆರವಣಿಗೆಗೆ ಮೆರುಗು ನೀಡಿದರು.
ಆರ್‌ಎಂಸಿ ಆವರಣದಲ್ಲಿ ಶೋಭಾಯಾತ್ರೆಗೆ ಪ್ರಮುಖರಾದ ಸಿ.ಕೆ.ಬೋಪಣ್ಣ, ಚೆಕ್ಕೇರ ಮನು ಕಾವೇರಪ್ಪ, ಎಂ.ಎA.ಸುಬ್ರಮಣಿ, ಸುರೇಶ್ ರೈ, ಕಿಲನ್ ಗಣಪತಿ, ನೆಲ್ಲಿರ ಚಲನ್, ಕೊಣಿಯಂಡ ಬೋಜಮ್ಮ ಮತ್ತಿತರ ಗಣ್ಯರು ಪುಷ್ಪಾರ್ಚನೆ ಮಾಡುವ ಚಾಲನೆ ನೀಡಿದರು.
ಶೋಭಾಯಾತ್ರೆ ಮುಖ್ಯರಸ್ತೆಯ ಮೂಲಕ ಸಾಗಿ ಉಮಾಮಹೇಶ್ವರಿ ದೇವಾಲಯದ ಸಮೀಪದ ರಸ್ತೆಯ ಮೂಲಕ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮೈದಾನಕ್ಕೆ ಸಮಾಗಮಗೊಂಡಿತು.
ಶೋಭಾಯಾತ್ರೆಯಲ್ಲಿ ವಿವಿಧ ಕಲಾ ತಂಡಗಳು, ಮಹಿಳೆಯರ ಚಂಡೆ ವಾದ್ಯ, ಯುವತಿರ ನೃತ್ಯ ಪ್ರದರ್ಶನ ರಂಗು ತಂದಿತು. ಕಳಸ ಹೊತ್ತ ಮಹಿಳೆಯರು, ಛದ್ಮ ವೇಷ ತೊಟ್ಟ ಪುಟಾಣಿಗಳು ಶೋಭಾಯಾತ್ರೆಗೆ ಮೆರುಗು ನೀಡಿದರು.
ಸಭಾ ಕಾರ್ಯಕ್ರಮದ ಮುನ್ನಾ ಕೊಡವ ಸಾಂಪ್ರದಾಯಿಕ ಶೈಲಿಯ ಉಮ್ಮತ್ತಾಟ್, ಬೊಳಕಾಟ್ ನೃತ್ಯ ಪ್ರದರ್ಶನ ಮೂಡಿ ಬಂತು. ೪ಐದನೇ ಪುಟಕ್ಕೆ
(ಮೊದಲ ಪುಟದಿಂದ) ಉದ್ಯಮಿ ಎಂ.ಪಿ. ಪ್ರಮೋದ್ ಕಾಮತ್ ಅಧ್ಯಕ್ಷತೆಯಲ್ಲಿ ಜರುಗಿದ ಸಭಾ ಕಾರ್ಯಕ್ರಮದಲ್ಲಿ ದಿಕ್ಸೂಚಿ ಭಾಷಣಕಾರರಾಗಿ ಆಗಮಿಸಿದ್ದ ಮನೋಹರ್ ಮಠದ್ ಮಾತನಾಡಿ, ಹಿಂದೂ ಸಂಗಮ ಕಾರ್ಯಕ್ರಮ ಆಚರಣೆ ಯಾವುದೇ ಧರ್ಮದ ವಿರುದ್ಧ ಅಲ್ಲ, ನಮ್ಮ ಹಿಂದೂಗಳ ಒಗ್ಗಟ್ಟಿನ ಪ್ರತಿಕ, ಹಿಂದೂಗಳು ನಮ್ಮ ಧರ್ಮದ ಆಚಾರ ಜೀವನದಲ್ಲಿ ಅಳವಡಿಸಿಕೊಳ್ಳುವ ಮೂಲಕ ನಮ್ಮ ಧರ್ಮದ ರಕ್ಷಣೆಗೆ ಮುಂದಾಗಬೇಕು. ಸ್ವದೇಶಿ ವಸ್ತುಗಳನ್ನು ಬಳಸಿ, ದೇಶದ ಪಾವಿತ್ರö್ಯತೆಯನ್ನು ಉಳಿಸಬೇಕು ಎಂದು ಕರೆ ನೀಡಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಬೆಂಜಾAಡ ರಶ್ಮಿ ಮಾತನಾಡಿ, ಸೀತಾ ಮಾತೆ ನಮಗೆ ಆದರ್ಶವಾಗಿದ್ದಾರೆ. ಮಹಿಳೆಯರಲ್ಲಿ ಜಾಗ್ರತೆ ಹೆಚ್ಚಾಗಬೇಕು, ತಮ್ಮ ಮಕ್ಕಳನ್ನು ಲವ್ ಜಿಹಾದ್, ಮತಾಂತರದಿAದ ರಕ್ಷಿಸಬೇಕು. ತಪ್ಪುದಾರಿ ಹಿಡಿಯದಂತೆ ಪೋಷಕರು ಎಚ್ಚರಿಕೆ ವಹಿಸಬೇಕು. ಗೋಮಾತೆಯ ರಕ್ಷಣೆ ಮಹಿಳೆಯರಿಂದ ಆಗಬೇಕು ಎಂದರು. ಅರ್ಚಕ ಮಹೇಶ್ ಭಟ್ ಮಾತನಾಡಿದರು. ವೇದಿಕೆಯಲ್ಲಿ ಪ್ರಮುಖರಾದ ಗುಮ್ಮಟಿರ ಕಿಲನ್ ಗಣಪತಿ, ಸುರೇಶ್ ರೈ, ಸುಬ್ರಮಣಿ ಸೇರಿದಂತೆ ಇನ್ನಿತರರು ಉಪಸ್ಥಿತಿತರಿದ್ದರು.