ಮಡಿಕೇರಿ, ಫೆ. ೨೨: ಮೂಲತಃ ಮಡಿಕೇರಿಯವರಾಗಿದ್ದು, ಪ್ರಸ್ತುತ ಲಂಡನ್‌ನಲ್ಲಿ ಕಾರ್ಯನಿರ್ವಹಿಸುತ್ತಿರುವ ಖ್ಯಾತ ಕ್ಯಾನ್ಸರ್ ವೈದ್ಯೆ ಕನ್ನಂಡ ನವಿತಾ ಸೋಮಯ್ಯ ಅವರನ್ನು ಲಂಡನ್‌ನ ಸೈಂಟ್ ಜೇಮ್ಸ್ ಅರಮನೆಯ ರಾಯಲ್ ಸಮಾರಂಭದಲ್ಲಿ ಗೌರವಿಸಲಾಗುತ್ತಿದೆ.

ಕನ್ನಂಡ ಪೊನ್ನಪ್ಪ ಸೋಮಯ್ಯ ಹಾಗೂ ನಿರ್ಮಲಾ ಸೋಮಯ್ಯ (ತಾಮನೆ : ನಾಯಕಂಡ) ಇವರುಗಳ ಪುತ್ರಿಯಾಗಿರುವ ನವಿತಾ ಅವರನ್ನು ಅಂತರರಾಷ್ಟಿçÃಯ ಕ್ಯಾನ್ಸರ್ ಸಂಶೋಧನಾ ಸಂಸ್ಥೆಯ ಪರವಾಗಿ ತಾ. ೨೪ ರಂದು ಲಂಡನ್ ಅರಮನೆಯಲ್ಲಿ ಕಿಂಗ್ಸ್ ಚಾರ್ಲ್ಸ್ III ಹಾಗೂ ರಾಣಿ ಕ್ಲಾಮಿಲ್ಲಾ ಅವರುಗಳು ಗೌರವಿಸುತ್ತಿದ್ದು, ೪ಐದನೇ ಪುಟಕ್ಕೆ

(ಮೊದಲ ಪುಟದಿಂದ) ಶೈಕ್ಷಣಿಕವಾಗಿ ಗಮನಾರ್ಹ ಸಾಧನೆ ಮಾಡಿರುವುದಕ್ಕೆ ಇವರನ್ನು ಆಯ್ಕೆ ಮಾಡಲಾಗಿದೆ. ನವಿತಾ ಅವರು ಪ್ರಮುಖ ಜಾಗತಿಕ ಕೇಂದ್ರಗಳಲ್ಲಿ ತರಬೇತಿ ಹಾಗೂ ಸಂಶೋಧನೆಗಳನ್ನು ಮಾಡಿದ್ದು, ಕ್ಯಾನ್ಸರ್ ತರಬೇತಿ ಮತ್ತು ಸಂಶೋಧನೆ ಮತ್ತು ಆರೈಕೆಯಲ್ಲಿ ವಿಶೇಷ ಪರಿಣತಿ ಹೊಂದಿ ಲಂಡನ್‌ನ ರಾಯಲ್ ಮಾರ್ಸ್ಡೆನ್ ಎನ್‌ಹೆಚ್‌ಎಸ್ ಫೌಂಡೇಷನ್ ಟ್ರಸ್ಟ್ನಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಇವರು ೬೫ ಸಂಶೋಧನಾ ಪ್ರಬಂಧಗಳು ಹಾಗೂ ೬ ಪುಸ್ತಕಗಳನ್ನು ಈ ಕ್ಷೇತ್ರದಲ್ಲಿ ಪ್ರಕಟಿಸಿದ್ದಾರೆ. ಸ್ತನ ಕ್ಯಾನ್ಸರ್ ಸಂಶೋಧನೆಯನ್ನು ಪ್ರತಿನಿಧಿಸುತ್ತಿರುವ ಡಾ. ನವಿತಾ ಅವರು ಗೌರವ ಸ್ವೀಕರಿಸುತ್ತಿರುವ ೮ ವಿಜ್ಞಾನಿಗಳಲ್ಲಿ ಒಬ್ಬರಾಗಿದ್ದಾರೆ.