ಮಡಿಕೇರಿ, ಫೆ. ೨೨: ಭಾರತಾಂಬೆಯ ಮಡಿಲನ್ನು ರಕ್ಷಿಸುವಲ್ಲಿ ಹಿಂದೂಗಳು ಒಂದಾಗುವ ಅನಿವಾರ್ಯತೆಯಿದ್ದು, ಬದುಕಿನಲ್ಲಿ ಹಿಂದೂತ್ವದೊAದಿಗೆ ಕೌಟುಂಬಿಕ ಮೌಲ್ಯ, ಸ್ವದೇಶಿ ವಸ್ತುಗಳ ಬಳಕೆ, ಸಾಮರಸ್ಯ, ಪರಿಸರ ರಕ್ಷಣೆ ಹಾಗೂ ನಾಗರಿಕ ಕರ್ತವ್ಯವನ್ನು ಮೈಗೂಡಿಸಿಕೊಳ್ಳುವಂತಾಗಬೇಕೆAದು ಮಂಗಳೂರು ವಿಭಾಗ ಸಹ ವ್ಯವಸ್ಥೆ ಪ್ರಮುಖ್ ಸುದೀರ್ ಹೆಬ್ಬಾರ್ ಕರೆ ನೀಡಿದರು.

ಮೂರ್ನಾಡು ಮಂಡಲ ಹಿಂದೂ ಸಂಗಮ ಆಯೋಜನಾ ಸಮಿತಿ ವತಿಯಿಂದ ಹಮ್ಮಿಕೊಳ್ಳಲಾದ ಹಿಂದೂ ಸಂಗಮ ಕಾರ್ಯಕ್ರಮದಲ್ಲಿ ದಿಕ್ಸೂಚಿ ಭಾಷಣ ಮಾಡಿದ ಅವರು, ಕೌಟುಂಬಿಕ ಮೌಲ್ಯ ಅಧಃಪತನವಾಗುತ್ತಿದೆ. ಸರಳವಾದ ಜೀವನದೊಂದಿಗೆ ಆಡಂಬರಕ್ಕೆ ಕಡಿವಾಣ ಹಾಕುವಂತಾಗಬೇಕು ಎಂದು ಸುದೀರ್ ಹೆಬ್ಬಾರ್ ಹೇಳಿದರು.

ನಮ್ಮ ಮನೆಗೆ ವಿದೇಶಿ ವಸ್ತುಗಳು ಬರದಂತೆ ಪಣತೊಡಬೇಕು. ಎಲ್ಲಾ ಹಿಂದೂಗಳು ಸಹೋದರರಂತೆ ಬದುಕಬೇಕು. ಯಾರು ಜಾತಿಯಿಂದ, ಭಾಷೆಯಿಂದ ಶ್ರೇಷ್ಠವಾಗುವುದಿಲ್ಲ. ನಮ್ಮ ನಡುವಳಿಕೆಯಿಂದ, ಕರ್ಮದಿಂದ, ಸೇವೆಯಿಂದ ಶ್ರೇಷ್ಠರಾಗುತ್ತಾರೆ. ಹಿಂದೂ ಸಮಾಜ ಅತ್ಯಂತ ಶ್ರೇಷ್ಠವಾದದ್ದು. ಈ ಭೂಮಿ, ಮಣ್ಣು, ಪಶು-ಪಕ್ಷಿ, ನೀರು, ಪ್ರಕೃತಿಯಲ್ಲಿ ತಾಯಿಯನ್ನು ಕಾಣುತ್ತೇವೆ. ಅದೇ ರೀತಿ ಭೂಮಾತೆಯೂ ಕೂಡ ಹಸಿರನ್ನು ರಕ್ಷಿಸಿ ಉಸಿರನ್ನು ಉಳಿಸುವಂತಾಗಬೇಕು. ವಿದ್ಯಾವಂತರಾದAತೆ ಶಿಷ್ಟಾಚಾರ ಕಡಿಮೆಯಾಗಿದೆ. ಶಿಷ್ಟಾಚಾರದೊಂದಿಗೆ ಸಮಾಜವನ್ನು ಗೌರವಿಸುವಂತಹ ಕಾರ್ಯ ಹಿಂದೂ ಸಂಸ್ಕೃತಿಯಿAದ ನಡೆಸಬೇಕಾಗಿದೆ ಎಂದರು.

ಹಿAದೂ ಸಂಗಮ ಸಮಾರಂಭದ ದಿವ್ಯ ಸಾನಿಧ್ಯವನ್ನು ಮುಳ್ಳೂರು ಬಸವಪಟ್ಟಣ ತೋಟಂದಾರ್ಯ ಮಠದ ಶ್ರೀ ಸ್ವತಂತ್ರ ಬಸವಲಿಂಗ ಶಿವಯೋಗಿಗಳು ವಹಿಸಿದ್ದರು. ಅಧ್ಯಕ್ಷತೆಯನ್ನು ಮೂರ್ನಾಡು ಹಿಂದೂ ಸಂಗಮ ಆಯೋಜನಾ ಸಮಿತಿ ಅಧ್ಯಕ್ಷ ಚೆಟ್ಟಿಮಾಡ ಜಯಂತ್ ಕುಮಾರ್ ವಹಿಸಿದ್ದರು. ನಿವೃತ್ತ ಮುಖ್ಯ ಶಿಕ್ಷಕಿ ಕೆ.ವಿ. ಕುಸುಮ ಶ್ರೀಪತಿ ಉಪಸ್ಥಿತರಿದ್ದರು. ಸಮಾಜ ಸೇವಕ, ಕಾಫಿ ಬೆಳೆಗಾರ ಮುಂಡAಡ ಕುಟ್ಟಪ್ಪ ಪ್ರಾಸ್ತಾವಿಕ ನುಡಿಗಳನ್ನಾಡಿದರು.

ಆರಂಭದಲ್ಲಿ ಭಾರತಾಂಬೆಗೆ ಪುಷ್ಪನಮನ ಸಲ್ಲಿಸಿದ ಬಳಿಕ ರವಿ ಭೂತನಕಾಡು ಪ್ರಾರ್ಥಿಸಿದರು. ಆಯೋಜಕರಾದ ಸಜೀವ್ ಸ್ವಾಗತಿಸಿ, ಈರ ಸುಬ್ಬಯ್ಯ ವಂದಿಸಿದರು. ಕಲ್ಲುಮುಟ್ಲು ಜಶ್ಮಿ ನಿರೂಪಿಸಿದರು. ನಂತರ ದೇಶಭಕ್ತಿಗೀತೆ ಗಾಯನ, ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.

ಮನಸೂರೆಗೊಂಡ ಶೋಭಾಯಾತ್ರೆ

ಮೂರ್ನಾಡಿನಲ್ಲಿ ಹಿಂದೂ ಸಂಗಮ ಶೋಭಾಯಾತ್ರೆ ನೆರೆದಿದ್ದವರ ಮನಸೂರೆಗೊಂಡಿತು. ಮೂರ್ನಾಡು ವಿದ್ಯಾಸಂಸ್ಥೆಯ ಮೈದಾನದಲ್ಲಿ ಗೋಪೂಜೆ ನೆರವೇರಿಸಿ ಶಂಖನಾದದೊAದಿಗೆ ಶೋಭಾಯಾತ್ರೆ ಆರಂಭಗೊAಡಿತು. ಕೇಸರಿ ಬಾವುಟಗಳನ್ನು ಹಿಡಿದ ಯುವಕರು ಬೈಕ್‌ನಲ್ಲಿ ಮುಂದಡಿಯಿಟ್ಟರೆ, ಕಲಶಹೊತ್ತ ಮಹಿಳೆಯರು, ಭಾರತಾಂಬೆಯ ಭಾವಚಿತ್ರ, ರಾಮ, ಸೀತೆ, ಲಕ್ಷö್ಮಣ, ಶಿವಾಜಿಯ ಸ್ತಬ್ಧಚಿತ್ರ, ಕೇರಳದ ಚಂಡೆ-ಮದ್ದಳೆ, ಗೊಂಬೆ ಕುಣಿತ, ವೀರಾಜಪೇಟೆ ನಾಟ್ಯಾಂಜಲಿ ತಂಡದ ಭಜನಾ ನೃತ್ಯ, ಕುಡಿಯರ ಮಹಿಳಾ ತಂಡದ ದುಡಿಕೊಟ್ಟ್ ಪಾಟ್, ನಾಗರಹೊಳೆ ನಾಣಚಿಗದ್ದೆ ಹಾಡಿ ಗಿರಿಜನ ಸಮಗ್ರ ಕಲಾ ಸಂಸ್ಥೆ, ಜೇನು ಕುರುಬರ ಕಾಡುಮಕ್ಕಳ ಕುಣಿತ, ಕೊಣನೂರು ಅನ್ನಪೂರ್ಣೇಶ್ವರಿ ರಥದಲ್ಲಿ ಅಶ್ವಮೇಧ ಚಿತ್ರ, ಹುಣಸೂರು ಜೈ ಮಹಾಕಾಳಿ ತಂಡದ ನಗಾರಿ ತಮಟೆ, ಸಿದ್ದಾಪುರ ಮಾಲ್ದಾರೆಯ ಬೊಂಬೆ ಕುಣಿತ, ಸಾಂಪ್ರದಾಯಿಕ ಕೊಡಗಿನ ವಾಲಗ, ವಿವಿಧ ಛದ್ಮವೇಷದೊಂದಿಗೆ ಮಕ್ಕಳು ನೆರೆದಿದ್ದವರ ಮನಸೂರೆಗೊಂಡಿತು. ಪಟ್ಟಣದ ಉದ್ದಗಲಕ್ಕೂ ಕೇಸರಿ ಬಾವುಟಗಳು, ಬಂಟಿAಗ್ಸ್ಗಳು ರಾರಾಜಿಸುತ್ತಿದ್ದವು. ಶೋಭಾಯಾತ್ರೆಯ ಮುಕ್ತಾಯ ಹಂತದಲ್ಲಿ ಆಯೋಜಕರು ಭಾಗವಹಿಸಿದವರಿಗೆ ಕುಡಿಯಲು ಮಜ್ಜಿಗೆ, ನೀರು, ತಂಪು ಪಾನೀಯಗಳನ್ನು ನೀಡಿದರು.

ಶೋಭಾಯಾತ್ರೆಯು ಮುಖ್ಯ ರಸ್ತೆಯ ಒಂದೇ ಬದಿಯಲ್ಲಿ ಶಿಸ್ತುಬದ್ಧವಾಗಿ ನಡೆಸಲಾಗಿದ್ದು, ರಸ್ತೆಯಲ್ಲಿ ತೆರಳುವ ವಾಹನಗಳಿಗೆ ಯಾವುದೇ ತೊಂದರೆಯಾಗದAತೆ ಪೊಲೀಸರೊಂದಿಗೆ ಆಯೋಜಕರು ಕೈಜೋಡಿಸಿದ್ದು ನಾಗರಿಕರ ಪ್ರಶಂಸೆಗೆ ಪಾತ್ರವಾಯಿತು.

ಮಡಿಕೇರಿ ಡಿವೈಎಸ್‌ಪಿ ಸೂರಜ್ ನೇತೃತ್ವದಲ್ಲಿ ವೃತ್ತ ನಿರೀಕ್ಷಕ ಡಿ.ಕೆ. ರಾಜು, ಸಬ್ ಇನ್ಸ್ಪೆಕ್ಟರ್ ರಾಘವೇಂದ್ರ ಹಾಗೂ ಸಿಬ್ಬಂದಿವರ್ಗದಿAದ ಸೂಕ್ತ ಬಂದೋಬಸ್ತನ್ನು ಕಲ್ಪಿಸಲಾಗಿತ್ತು. - ಸಾಬ ಸುಬ್ರಮಣಿ.