ಚೆಟ್ಟಳ್ಳಿ, ಫೆ. ೨೨: ಹಿಂದೂ ಸಂಗಮ ಕಾರ್ಯಕ್ರಮ ಚೆಟ್ಟಳ್ಳಿಯಲ್ಲಿ ಅದ್ದೂರಿಯಾಗಿ ನೆರವೇರಿತು. ಅಪಾರ ಜನಸ್ತೋಮದ ನಡುವೆ ನಡೆದ ಶೋಭಾಯಾತ್ರೆ ಜನಮನ ಸೆಳೆಯುವಲ್ಲಿ ಯಶಸ್ವಿಯಾಯಿತು. ಚೇರಳ, ಶ್ರೀಮಂಗಲ, ಕೂಡ್ಲೂರು ಚೆಟ್ಟಳ್ಳಿ ಸೇರಿದಂತೆ ಸುತ್ತಮುತ್ತಲ ಗ್ರಾಮಗಳಿಂದ ಆಗಮಿಸಿದ ೧೫೦೦ಕ್ಕೂ ಅಧಿಕ ಜನರು ಭವ್ಯ ಶೋಭಾಯಾತ್ರೆ ಮತ್ತು ಧಾರ್ಮಿಕ ಸಭೆಯಲ್ಲಿ ಭಾಗವಹಿಸಿದರು.

ಶೋಭಾಯಾತ್ರೆಯು ವ್ಯಾಲಿ ಪ್ಲೇ ಶಾಲೆಯ ಮುಂಭಾಗದಿAದ ಆರಂಭಗೊAಡು ವಿವಿಧ ಸಾಂಸ್ಕೃತಿಕ ಪ್ರದರ್ಶನದೊಂದಿಗೆ ಚೆಟ್ಟಳ್ಳಿ ಪ್ರೌಢಶಾಲಾ ಮೈದಾನದವರೆಗೆ ಸಾಗಿತು. ಪಟ್ಟಣದ ಪ್ರಮುಖ ಬೀದಿಗಳಲ್ಲಿ ಕೇಸರಿ ಧ್ವಜಗಳ ಹಾರಾಟ, ಧಾರ್ಮಿಕ ಘೋಷಣೆಗಳನ್ನು ಮೊಳಗಿಸುತ್ತ ಶಿಸ್ತುಬದ್ಧವಾಗಿ ಸಾಗಿದ ಮೆರವಣಿಗೆ ಸಾರ್ವಜನಿಕರ ಗಮನ ಸೆಳೆಯಿತು.

ಮಹಿಳೆಯರ ಪೂರ್ಣ ಕುಂಭ ಸ್ವಾಗತ, ನೆಲ್ಲಿಹುದಿಕೇರಿಯಶ್ರೀ ಮೂಕಾಂಬಿಕಾ ಭಜನೆ ಕುಣಿತ ತಂಡ, ಉಡೋತ್ ಮೊಟ್ಟೆಯ ತಂಡದಿAದ ಭಜನೆ ಕುಣಿತ, ಶಬರೀಶ್ ತಂಡದಿAದ ಚಂಡೆಮೇಳ ತಂಡ, ಹುಲಿ ವೇಷ, ಮಂಗಳೂರು ತಂಡದವರಿAದ ಆಕರ್ಷಕ ಸಾಂಸ್ಕೃತಿಕ ಪ್ರದರ್ಶನ, ಗೊಂಬೆ ಕುಣಿತ, ಬುಡಕಟ್ಟು ಸಾಂಪ್ರದಾಯಿಕ ಕುಣಿತ ಜೊತೆಗೆ ವಿಷ್ಣು ಹಾಗೂ ವೀರಾಂಜನೇಯ ಮೂರ್ತಿಗಳ ಟ್ಯಾಬ್ಲೋ ಶೋಭಾಯಾತ್ರೆಗೆ ಮೆರುಗು ನೀಡಿತು.

ಅಲಂಕೃತ ಮಂಟಪ ಜನಮನ ರಂಜಿಸಿತು. ಚೆಟ್ಟಳ್ಳಿ ಪ್ರೌಢಶಾಲಾ ಮೈದಾನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಅತಿಥಿಗಳು ದೀಪಬೆಳಗಿ ಭಾರತಾಂಬೆಗೆ ಪುಪ್ಪಾರ್ಚನೆ ಮಾಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ದಿಕ್ಸೂಚಿ ಭಾಷಣಕಾರರಾಗಿ ಪಾಲ್ಗೊಂಡ ಸಾಮಾಜಿಕ ಕಾರ್ಯಕರ್ತ ಮಂಡ್ಯದ ಡಾ. ಸುಧಾಕರ ಹೊಸಳ್ಳಿ ಮಾತನಾಡಿ, ಸರ್ವರ ಏಳಿಗೆಯನ್ನು ರಕ್ಷಿಸುವುದೇ ಹಿಂದೂ ಸಮಾಜ. ಹಿಂದೂತ್ವ ಉಳಿದರೆ ಮಾತ್ರ ಭಾರತ ಉಳಿಯಲು ಸಾಧ್ಯ. ಅಸಮಾನತೆಯನ್ನು ನಿರ್ಮೂಲನೆ ಮಾಡಿ ಸಮಸಮಾಜ ನಿರ್ಮಾಣವಾಗಬೇಕೆಂದರು.

ಕೊಡಗು ಗೌಡ ಸಮಾಜ ನಿಕಟ ಪೂರ್ವ ಅಧ್ಯಕ್ಷ ಪೇರಿಯನ ಪಿ. ಜಯಾನಂದ ಮಾತನಾಡಿ, ಹಿಂದೂತ್ವದ ಬಗ್ಗೆ ಪ್ರೀತಿ, ಅಭಿಮಾನ ಬೆಳೆಸಿಕೊಳ್ಳಬೇಕು ಎಂದರು.

ಬೆಳೆಗಾರ ತಿರುಮಲೇಶ್ ಭಟ್ ಮಾತನಾಡಿದರು. ಕಾಫಿ ಬೆಳೆಗಾರರಾದ ಕೊಂಗೇಟಿರ ವೀಣಾ ಅಪ್ಪಣ್ಣ ಅಧ್ಯಕ್ಷತೆ ವಹಿಸಿ ಮಾತನಾಡಿ, ಭಾರತದ ಮಣ್ಣಿನ ಸಂಸ್ಕೃತಿ, ಆಚಾರ ವಿಚಾರವೇ ಹಿಂದೂತ್ವ. ಭಾರತದ ಐಕ್ಯತೆ ರಕ್ಷಣೆ ನಮ್ಮ ಧ್ಯೇಯವಾಗಿದೆ. ಹಿಂದೂತ್ವದ ರಕ್ಷಣೆಗೆ ಪಣತೊಡಬೇಕು. ಎಲ್ಲಾ ಜಾತಿ ಜನಾಂಗ ಒಂದಾಗಿ ಧರ್ಮವನ್ನು ರಕ್ಷಿಸಿದರೆ ಧರ್ಮವು ನಮ್ಮನ್ನು ರಕ್ಷಿಸುತ್ತದೆ ಎಂದರು.

ಹಿಂದೂ ಮಲೆಯಾಳಿ ಸಮಾಜದ ಅಧ್ಯಕ್ಷೆ ಪಿ.ಕೆ.ಲೀಲಾ, ವಿರಾಟ್ ಹಿಂದೂ ಸಂಗಮದ ಆಯೋಜನ ಸಮಿತಿಯ ಸಂಯೋಜಕ ಪೇರಿಯನ ಉದಯಕುಮಾರ್ ವೇದಿಕೆಯಲ್ಲಿದ್ದರು. ಸ್ಥಳೀಯ ಸಂಘಟನೆಗಳು, ವಿವಿಧ ಸಂಘ ಸಂಸ್ಥೆಗಳು, ಹಿಂದೂ ಸಂಘ ಪರಿವಾರದ ಕಾರ್ಯಕರ್ತರು ಹಾಗೂ ನೂರಾರು ಸ್ವಯಂಸೇವಕರು ಶ್ರಮಿಸಿದರು. ಕಾರ್ಯಕ್ರಮದಲ್ಲಿ ಶಿಕ್ಷಕಿ ಉಮಾರಾಣಿ ಸ್ವಾಗತಿಸಿದರು. ಪೇರಿಯನ ಉದಯ ವಂದಿಸಿ, ಬಲ್ಲಾರಂಡ ಕಂಠಿಕಾರ್ಯಪ್ಪ ನಿರೂಪಿಸಿದರು. - ಪುತ್ತರಿರ ಕರುಣ್ ಕಾಳಯ್ಯ