ಶ್ರೀಮಂಗಲ, ಫೆ. ೨೨: ವೀರಾಜಪೇಟೆ ಶಾಸಕ ಹಾಗೂ ಮುಖ್ಯಮಂತ್ರಿ ಕಾನೂನು ಸಲಹೆಗಾರ ಎ.ಎಸ್ ಪೊನ್ನಣ್ಣ ಹುದಿಕೇರಿಯಲ್ಲಿ ಶಾಸಕರ ಅನುದಾನದಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ಆಟೋ ರಿಕ್ಷಾ ನಿಲ್ದಾಣವನ್ನು ಉದ್ಘಾಟಿಸಿದರು.

ಈ ಸಂದರ್ಭ ಹುದಿಕೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸಾರ್ವಜನಿಕರು ಮತ್ತು ಆಟೋ ಚಾಲಕರ ಸಂಘದಿAದ ಶಾಸಕ ಪೊನ್ನಣ್ಣ ಅವರನ್ನು ಸನ್ಮಾನಿಸಲಾಯಿತು. ಈ ಸಂದರ್ಭ ಶಾಸಕರು ಸಾರ್ವಜನಿಕರಿಂದ ಕುಂದು ಕೊರತೆಯನ್ನು ಆಲಿಸಿದರು

ಈ ಸಂದರ್ಭ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮೀದೇರಿರ ನವೀನ್, ವಲಯ ಅಧ್ಯಕ್ಷ ಚಂಗುಲAಡ ಸೂರಜ್, ಡಿಸಿಸಿ ಸದಸ್ಯ ಪೆಮ್ಮಂಡ ರಾಜ ಕುಶಾಲಪ್ಪ, ಪ್ರಮುಖರಾದ ಚೆಕ್ಕೇರ ವಾಸು ಕುಟ್ಟಪ್ಪ, ಜಿಮ್ಮಿ ಕಾಟಿಮಾಡ ಅಣ್ಣಯ್ಯ, ಚೆಕ್ಕೇರ ಸುಧೀರ್, ಪಕ್ಷದ ಮುಖಂಡರಾದ ಅಜ್ಜಿಕುಟ್ಟಿರ ಗಿರೀಶ್, ಪಮ್ಮು, ನೊರೇರ ಮನೋಹರ್, ರಮೇಶ್, ಬಿಪಿನ್, ರೋನಿ, ಮದನ್ ಮಂದಣ್ಣ, ಕಿಸು, ಹುದಿಕೇರಿ ವಲಯ ಯುವ ಘಟಕದ ಅಧ್ಯಕ್ಷ ರೀಕ್ಷಿತ್ ಕಾರ್ಯಪ್ಪ, ಮೌನ, ಮಂಜು ದೇವಯ್ಯ, ಬಾನಂಗಡ ಅರುಣ್, ಆಟೋ ಚಾಲಕ ಮಾಲೀಕರ ಸಂಘದ ದರ್ಶನ್ ಹಾಗೂ ಪ್ರಮುಖರು ಉಪಸ್ಥಿತರಿದ್ದರು.