ಮಡಿಕೇರಿ, ಫೆ. ೨೨: ರಾಷ್ಟಿçÃಯ ಆಯುಷ್ ಅಭಿಯಾನದ ಯೋಜನೆಯಡಿ ೨೦೨೫-೨೬ನೇ ಸಾಲಿನ ಮೊಬೈಲ್ ಮೆಡಿಕಲ್ ಯುನಿಟ್ ಕಾರ್ಯಕ್ರಮಕ್ಕೆ ಗುತ್ತಿಗೆ ಆಯುರ್ವೇದ ವೈದ್ಯರ ಹುದ್ದೆಯ ನೇಮಕಾತಿ ಸಂಬAಧ ತಾತ್ಕಾಲಿಕ ಆಯ್ಕೆ ಪಟ್ಟಿಯನ್ನು ಕಚೇರಿ ಸೂಚನಾ ಫಲಕದಲ್ಲಿ ಪ್ರಕಟಿಸಲಾಗಿದೆ.

ತಾತ್ಕಾಲಿಕ ಆಯ್ಕೆ ಪಟ್ಟಿ ಕುರಿತಂತೆ ಆಕ್ಷೇಪಗಳಿದ್ದಲ್ಲಿ ತಾ. ೨೭ ರ ಸಂಜೆ ೪ ಗಂಟೆಯೊಳಗೆ ಲಿಖಿತದಲ್ಲಿ ಪೂರಕ ದಾಖಲಾತಿಗಳೊಂದಿಗೆ ಜಿಲ್ಲಾ ಆಯುಷ್ ಅಧಿಕಾರಿ, ಜಿಲ್ಲಾ ಆಯುಷ್ ಇಲಾಖೆ, ಮಹದೇವಪೇಟೆ, ಮಡಿಕೇರಿ, ಕೊಡಗು ಜಿಲ್ಲೆ ಇವರಿಗೆ ಮನವಿಯ ಮೂಲಕ ಸಲ್ಲಿಸಬಹುದಾಗಿದೆ. ಈ ಅವಧಿಯ ನಂತರ ಸ್ವೀಕೃತವಾದ ಆಕ್ಷೇಪಣೆಗಳನ್ನು ತಿರಸ್ಕರಿಸಲಾಗುವುದು ಎಂದು ಜಿಲ್ಲಾ ಆಯುಷ್ ಅಧಿಕಾರಿ ಶೈಲಜಾ ತಿಳಿಸಿದ್ದಾರೆ.