ಪೊನ್ನಂಪೇಟೆ, ಫೆ. ೨೨: ಪೊನ್ನಂಪೇಟೆಯ ವಕೀಲರಾದ ಹಳ್ಳಿಗಟ್ಟು ಗ್ರಾಮದ ಪೂವಣ್ಣ ಎಂ.ಸಿ., ಧನುಗಾಲ ಗ್ರಾಮದ ಜೀವನ್ ಜಿ.ಎಸ್. ಮತ್ತು ಪೊನ್ನಂಪೇಟೆಯ ಎಂ.ಜಿ. ರಾಕೇಶ್ ಅವರನ್ನು ಪೊನ್ನಂಪೇಟೆ ಕಂದಾಯ ತಾಲೂಕಿಗೆ ಹೆಚ್ಚುವರಿಯಾಗಿ ಸೃಜಸಿರುವ ನೋಟರಿ ಹುದ್ದೆಗಳಿಗೆ ನೇಮಕ ಮಾಡಿ ಕರ್ನಾಟಕ ಸರ್ಕಾರ ಅದಿಸೂಚನೆ ಹೊರಡಿಸಿದೆ.
ನೋಟರಿಗಳ ಅಧಿನಿಯಮ ೧೯೫೨ ಹಾಗೂ ನೋಟರಿ ನಿಯಮಾವಳಿಗಳು ೧೯೫೬ ರ ನಿಯಮ (೮)೧ರಲ್ಲಿ ಪ್ರದತ್ತವಾದ ಅಧಿಕಾರದನ್ವಯ ಕರ್ನಾಟಕ ಸರ್ಕಾರವು ನೋಟರಿಗಳ ಅಧಿನಿಯಮ, ೧೯೫೨ ರ ಮತ್ತು ಅವುಗಳಡಿಯಲ್ಲಿ ರಚಿಸಲಾಗಿರುವ ನಿಯಮಗಳ ರೀತ್ಯ ನೋಟರಿ ವೃತ್ತಿ ಪ್ರಮಾಣಪತ್ರವನ್ನು ನೀಡಲಾದ ದಿನಾಂಕದಿAದ ಜಾರಿಗೆ ಬರುವಂತೆ ೫ ವರ್ಷಗಳ ಅವಧಿಗೆ ಈ ವಕೀಲರುಗಳನ್ನು ನೋಟರಿಯನ್ನಾಗಿ ನೇಮಕ ಮಾಡಿದೆ.