ಗೋಣಿಕೊಪ್ಪಲು, ಫೆ. ೨೧: ವೀರಾಜಪೇಟೆ ವಿಧಾನಸಭಾ ಕ್ಷೇತ್ರದ ಗ್ರಾ.ಪಂ. ವ್ಯಾಪ್ತಿಯ ನಿವೇಶನ ರಹಿತ ಹಾಗೂ ಹಕ್ಕು ಪತ್ರ ವಂಚಿತರಾಗಿರುವ ಮೂರು ಸಾವಿರ ಕುಟುಂಬಗಳಿಗೆ ಹಕ್ಕುಪತ್ರದೊಂದಿಗೆ ನಿವೇಶನ ಹಾಗೂ ಮನೆ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಬೇಕು ಎಂದು ವೀರಾಜಪೇಟೆ ಕ್ಷೇತ್ರದ ಶಾಸಕ ಮುಖ್ಯಮಂತ್ರಿ ಕಾನೂನು ಸಲಹೆಗಾರ ಎ.ಎಸ್.ಪೊನ್ನಣ್ಣ ಸೂಚನೆ ನೀಡಿದರು.

ಕರ್ನಾಟಕ ಸರ್ಕಾರದ ವಸತಿ ಇಲಾಖೆ ಪ್ರಧಾನ ಕಾರ್ಯದರ್ಶಿ ಡಾ. ಕೆ.ಪಿ. ಮೋಹನ್ ಅವರ ಸಮ್ಮುಖದಲ್ಲಿ ಜಿಲ್ಲಾಧಿಕಾರಿ ಹಾಗೂ ಇತರೆ ಜಿಲ್ಲಾ ಮಟ್ಟದ ಅಧಿಕಾರಿಗಳ ಸಮ್ಮುಖದಲ್ಲಿ ಪೊನ್ನಂಪೇಟೆ ಸಾಮರ್ಥ್ಯಸೌಧದಲ್ಲಿ ನಡೆದ ಪ್ರಗತಿ ಪರಿಶೀಲನಾ ಸಭೆ ನಡೆಸಿದರು.

ಕ್ಷೇತ್ರದಲ್ಲಿ ನಿವೇಶನ, ಹಕ್ಕು ಪತ್ರ ರಹಿತ ಹಾಗೂ ಮನೆ ಇಲ್ಲದ ಅನೇಕ ಕುಟುಂಬಗಳಿದ್ದು ಇಲ್ಲಿಯ ತನಕ ಯಾವುದೇ ಸವಲತ್ತುಗಳು ದೊರೆತಿಲ್ಲ. ಪ್ರತಿ ಬಾರಿಯ ಸಭೆಯಲ್ಲಿ ಕೇವಲ ಅಂಕಿ ಅಂಶಗಳನ್ನು ನೀಡುತ್ತ ಸಮಯ ವ್ಯರ್ಥ ಮಾಡಲಾಗುತ್ತಿದೆ. ಒಂದು ತಿಂಗಳ ಒಳಗೆ ಫಲಾನುಭವಿಗಳಿಗೆ ಯೋಜನೆ ತಲುಪಬೇಕು. ಮುಂದೆ ಸಬೂಬು ಹೇಳಬಾರದು ಎಂದು ಅಧಿಕಾರಿಗಳಿಗೆ ಪೊನ್ನಣ್ಣ ಖಡಕ್ ಸೂಚನೆ ನೀಡಿದರು.

ಸಭೆಯಲ್ಲಿ ಪೊನ್ನಂಪೇಟೆ, ವೀರಾಜಪೇಟೆ ಹಾಗೂ ಮಡಿಕೇರಿಯ ತಾಲೂಕು ಕಾರ್ಯನಿರ್ವಾಹಣ ಅಧಿಕಾರಿಗಳು ತಾಂತ್ರಿಕ ಸಮಸ್ಯೆಗಳ ಬಗ್ಗೆ ಮಾಹಿತಿ ಒದಗಿಸಿದರು.

ಸಭೆಯಲ್ಲಿದ್ದ ವಸತಿ ಇಲಾಖೆಯ ಪ್ರಧಾನ ಕಾರ್ಯದರ್ಶಿ ಮೋಹನ್ ಅವರು ಪರಿಹಾರೋಪಾಯಗಳ ಬಗ್ಗೆ ವಿವರಿಸಿದರು.

ಈಗಾಗಲೇ ಸರ್ಕಾರದ ಮುಖ್ಯಮಂತ್ರಿಗಳು ನೀಡಿರುವ ರೂ. ೧೦.೫೦ ಕೋಟಿ ಅನುದಾನದಿಂದ ನಿವೇಶನ ರಹಿತ ೧೨೫೦ ಗಿರಿಜನ ಕುಟುಂಬಗಳಿಗೆ ನೂತನ ಬಡಾವಣೆ ನಿರ್ಮಿಸಿ, ಹಕ್ಕು ಪತ್ರ ವಿತರಣೆಗೆ ಕ್ರಮ ಕೈಗೊಳ್ಳಲಾಗುತ್ತಿದೆ. ೫೫೦ ಕುಟುಂಬಕ್ಕೆ ತಕ್ಷಣವೇ ಹಕ್ಕು ಪತ್ರ ವಿತರಿಸಬಹುದು ಎಂದು ಐಟಿಡಿಪಿ ಅಧಿಕಾರಿ ಹೊನ್ನೆಗೌಡ ಸಭೆಯ ಗಮನಕ್ಕೆ ತಂದರು. ಉಳಿದ ಫಲಾನುಭವಿಗಳು ಇನ್ನೂ ಕೂಡ ಅಗತ್ಯ ದಾಖಲಾತಿ ಸಲ್ಲಿಸದೇ ಇರುವ ಕಾರಣ ಸಮಸ್ಯೆ ಆಗುತ್ತಿದೆ ಎಂದರು.

ಈ ವೇಳೆ ಗಿರಿಜನರಿಗೆ ಜಾತಿ ದೃಢೀಕರಣ, ೪ಐದನೇ ಪುಟಕ್ಕೆ

(ಮೊದಲ ಪುಟದಿಂದ) ಆಧಾರ್ ಕಾರ್ಡ್, ರೇಷನ್ ಕಾರ್ಡ್ ಸರಿಯಾಗಿ ಮಾಡಿಕೊಳ್ಳದೇ ಇರುವುದರಿಂದ ಸಮಸ್ಯೆಗೆ ಕಾರಣವಾಗಿದೆ ಎಂದರು.

ಜಿಲ್ಲಾಧಿಕಾರಿಗಳು ವಿಶೇಷ ಅಭಿಯಾನ ಆರಂಭಿಸಿ, ದಾಖಲೆ ಪಡೆಯಲು ಗಿರಿಜನರಿಗೆ ಅವಕಾಶ ಮಾಡಿಕೊಡಲು ಶಾಸಕ ಪೊನ್ನಣ್ಣ ಸೂಚನೆ ನೀಡಿದರು.

ಈ ವೇಳೆ ಸಭೆಯಲ್ಲಿದ್ದ ಜಿಲ್ಲಾಧಿಕಾರಿ ಎಸ್.ಜೆ. ಸೋಮಶೇಖರ್ ವಿಶೇಷ ಆಂದೋಲನ ನಡೆಸಿ ಗಿರಿಜನರಿಗೆ ದಾಖಲಾತಿ ಪಡೆಯಲು ಅವಕಾಶ ಮಾಡಿಕೊಡುತ್ತದೆ ಎಂದು ತಿಳಿಸಿದರು. ಮನೆ ನಿರ್ಮಾಣ, ಹಕ್ಕು ಪತ್ರ ವಿತರಣೆ ಹಾಗೂ ನಿವೇಶನ ಹಂಚಿಕೆ ಮಾಡಲು ಮುಂದಿನ ಬಜೆಟ್ ಅಧಿವೇಶನ ಮುಗಿದ ಬಳಿಕ ಮುಖ್ಯಮಂತ್ರಿಗಳು ಕ್ಷೇತ್ರಕ್ಕೆ ಆಗಮಿಸಲಿದ್ದಾರೆ. ಅಷ್ಟರಲ್ಲಿ ಸಮರ್ಪಕವಾಗಿ ವ್ಯವಸ್ಥೆ ಮಾಡಿಕೊಳ್ಳಬೇಕು. ಯಾವುದೇ ತಾಂತ್ರಿಕ ಸಮಸ್ಯೆ ಇದ್ದರೂ ತಕ್ಷಣ ಬಗೆಹರಿಸಲು ಬೆಂಗಳೂರಿನಿAದ ಅಧಿಕಾರಿಗಳ ತಂಡ ಇಲ್ಲಿಗೆ ಬಂದಿದೆ. ಇವರ ಬಳಿ ಚರ್ಚಿಸಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ನಿರ್ದೇಶನ ನೀಡಿದರು.

ನಿವೇಶನ ಸಮತಟ್ಟು ಮಾಡುವ ಸಂದರ್ಭದಲ್ಲಿ ಅರಣ್ಯ ಇಲಾಖೆಯ ಅಧಿಕಾರಿಗಳು ಸಕಾಲದಲ್ಲಿ ಸ್ಪಂದನ ನೀಡುತ್ತಿಲ್ಲ. ಇದರಿಂದ ಬಡಾವಣೆ ನಿರ್ಮಾಣಕ್ಕೆ ಸಮಸ್ಯೆ ಆಗುತ್ತಿದೆ ಎಂದು ಪಿಡಿಓಗಳು ಶಾಸಕರ ಗಮನ ಸೆಳೆದರು.

ಈ ವೇಳೆ ಸಭೆಯಲ್ಲಿದ್ದ ವೀರಾಜಪೇಟೆ ಡಿಎಫ್‌ಒ ಜಗನ್ನಾಥ್, ಹೊಸ ಬಡಾವಣೆಯಲ್ಲಿ ಮರ ತೆಗೆಯುವ ಕೆಲಸ ಅರಣ್ಯ ಇಲಾಖೆ ಕೈಗೊಂಡಿದೆ. ನಮ್ಮ ಇಲಾಖೆಯ ವತಿಯಿಂದ ಯಾವುದೇ ನಿಧಾನಗತಿ ಆಗುತ್ತಿಲ್ಲ. ಯಾವುದೇ ಕಡತ ಬಾಕಿ ಇದ್ದರೂ ಎರಡು ದಿನಗಳ ಒಳಗೆ ಸರಿ ಮಾಡುವುದಾಗಿ ಹೇಳಿದರು.

ಗೋಣಿಕೊಪ್ಪ ಪೌರ ಕಾರ್ಮಿಕ ವಸತಿ ಸಮಸ್ಯೆ ಬಗ್ಗೆ ಪಿಡಿಓ ತಿಮ್ಮಯ್ಯ ಅವರನ್ನು ಶಾಸಕರು ಪ್ರಶ್ನಿಸಿದರು.

ಮನೆ ನಿರ್ಮಾಣಕ್ಕೆ ಸಂಬAಧಿಸಿದAತೆ ಹಿರಿಯ ಅಧಿಕಾರಿಗಳ ಸಲಹೆ ಪಡೆದರು. ಈ ವೇಳೆ ಉತ್ತರಿಸಿದ ಪ್ರಧಾನ ಕಾರ್ಯದರ್ಶಿ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಪೌರ ಕಾರ್ಮಿಕರಿಗೆ ಮನೆ ನಿರ್ಮಿಸಲು ಸಾಧ್ಯವಿಲ್ಲ. ಬದಲಾಗಿ ಪಟ್ಟಣ ಪಂಚಾಯಿತಿ ಆದಲ್ಲಿ ಇದಕ್ಕೆ ಅನುದಾನ ಒದಗಿಸಬಹುದು ಎರಡು ಅಂತಸ್ತಿನಲ್ಲಿ ೨೨ ಮನೆ ನಿರ್ಮಾಣಕ್ಕೆ ಅವಕಾಶ ಇದೆ ಎಂದು ಮಾಹಿತಿ ನೀಡಿದರು.

ನಿವೇಶನ ರಹಿತರಿಗೆ ನಿವೇಶನ ನೀಡುವ ಸಂದರ್ಭದಲ್ಲಿ ಒಂದು ಪಂಚಾಯಿತಿಯಲ್ಲಿ ಪಲಾನುಭವಿಗಳ ಕೊರತೆ ಕಂಡು ಬಂದಲ್ಲಿ ಮತ್ತೊಂದು ಪಂಚಾಯಿತಿಯಿAದ ಫಲಾನುಭವಿಗಳನ್ನು ಆಯ್ಕೆ ಮಾಡಿ ನಿವೇಶನ ನೀಡಲು ಅಧಿಕಾರಿಗಳು ಇಒಗಳಿಗೆ ಪೊನ್ನಣ್ಣ ನಿರ್ದೇಶನ ನೀಡಿದರು. ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಆನಂದ್ ಪ್ರಕಾಶ್ ಮೀನಾ ಮಾತನಾಡಿ, ಜಿ.ಪಂ.ವ್ಯಾಪ್ತಿಯಲ್ಲಿ ನಿವೇಶನ ಹಕ್ಕುಪತ್ರ ನೀಡಲು ಬಾಕಿ ಇರುವ ಸುಮಾರು ೬೨೨ ಅರ್ಜಿಗಳನ್ನು ವಿಲೇವಾರಿ ಮಾಡಲಾಗುವುದು ಎಂದರು. ಉಪವಿಭಾಗಾಧಿಕಾರಿ ನಿತಿನ್ ಚಕ್ಕಿ, ಉಪ ಅರಣ್ಯ ಸಂರಕ್ಷಣಾಧಿಕಾರಿ ಅಭಿಷೇಕ್ ಸೇರಿದಂತೆ ಇನ್ನಿತರ ಇಲಾಖೆ ಅಧಿಕಾರಿಗಳು ಹಾಜರಿದ್ದರು.