ಮಡಿಕೇರಿ, ಫೆ. ೨೧: ಪ್ರಸ್ತುತ ಜಿಲ್ಲೆಯ ಹಲವಾರು ಭಾಗಗಳಲ್ಲಿ ಹಿಂದೂ ಸಂಗಮ ಕಾರ್ಯಕ್ರಮ ಜರುಗುತ್ತಿದ್ದು, ಬಹುತೇಕ ಕಡೆಗಳಲ್ಲಿ ಶಾಂತಿಯುತವಾದ ಆಯೋಜನೆ ಕಂಡುಬAದಿತ್ತು. ಇದರಂತೆ ದಕ್ಷಿಣ ಕೊಡಗಿನ ಗಡಿಭಾಗವಾದ ಬಿರುನಾಣಿಯಲ್ಲಿ ತಾ. ೨೩ರ ಸೋಮವಾರದಂದು ಹಿಂದೂ ಸಂಗಮಕ್ಕೆ ಸಿದ್ಧತೆ ನಡೆದಿತ್ತು. ಆದರೆ, ಕೆಲವು ಕಿಡಿಗೇಡಿಗಳು ನಡೆಸಿದ ದುಷ್ಕೃತ್ಯ ಈ ವಿಭಾಗದಲ್ಲಿ ಒಂದಷ್ಟು ಪ್ರಕ್ಷÄಬ್ಧತೆ ಉಂಟುಮಾಡಿದೆ.
ಹಿAದೂ ಸಂಗಮಕ್ಕೆ ಸಿದ್ಧತೆಯಾಗಿ ಬಿರುನಾಣಿ ಪಟ್ಟಣದಿಂದ ಸುಮಾರು ಒಂದೂವರೆ ಕಿ.ಮೀ. ದೂರದಲ್ಲಿನ ಕೊಡವ ಸಮಾಜದ ತನಕ ಬಂಟಿAಗ್ಸ್ ಹಾಗೂ ಫ್ಲೆಕ್ಸ್ಗಳನ್ನು ಆಯೋಜಕ ಸಮಿತಿ ಪ್ರಮುಖರು ಅಳವಡಿಸಿದ್ದರು.
ಶುಕ್ರವಾರ ತಡರಾತ್ರಿ ೧೨ ಗಂಟೆ ಸುಮಾರಿಗೆ ವಾಹನದಲ್ಲಿ ಆಗಮಿಸಿದ್ದ ಇಬ್ಬರು ಇದನ್ನು ತೆರವು ಮಾಡಿ ಅಪಹರಿಸಿದ ಘಟನೆ ನಡೆದಿದೆ. ಇಂದು ಬೆಳಿಗ್ಗೆ ಈ ವಿಚಾರ ಬೆಳಕಿಗೆ ಬಂದಿದ್ದು, ಹಿಂದೂ ಬೆಂಬಲಿಗರು ಜಮಾಯಿಸಿ ಈ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿ ಕೃತ್ಯ ನಡೆಸಿದವರ ವಿರುದ್ಧ ಸೂಕ್ತ ಕ್ರಮಕ್ಕೆ ಆಗ್ರಹಿಸಿದ್ದಾರೆ. ಬಿರುನಾಣಿ ಪಟ್ಟಣದಲ್ಲಿನ ಸಿಸಿಟಿವಿ ದೃಶ್ಯದಂತೆ ಇಬ್ಬರು ಈ ಕೃತ್ಯ ನಡೆಸಿರುವುದು ಬಯಲಾಗಿದೆ.
ಇದರಂತೆ ಆಯೋಜಕ ಸಮಿತಿ ಮೂಲಕ ಶ್ರೀಮಂಗಲ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ. ಸಂಚಾಲಕ ಅಣ್ಣಳಮಾಡ ರಾಯ್ ಚಿಣ್ಣಪ್ಪ ಅವರು ನೀಡಿರುವ ದೂರಿನಂತೆ ಇಬ್ಬರ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಸ್ಥಳೀಯರೇ ಆಗಿರುವ ಕುಪ್ಪಣಮಾಡ ಪ್ರೀತಂ ಹಾಗೂ ಕುಪ್ಪಣಮಾಡ ರಾಬಿನ್ ಎಂಬಿಬ್ಬರು ಈ ಕೃತ್ಯವೆಸಗಿರುವ ಬಗ್ಗೆ ಪುಕಾರಾಗಿದ್ದು, ಪ್ರಕರಣ ದಾಖಲಾಗಿದೆ. ಇಬ್ಬರ ಬಂಧನಕ್ಕೆ ಆಯೋಜಕ ಸಮಿತಿ ಒತ್ತಾಯಿಸಿದೆ.
ಪ್ರಕರಣವನ್ನು ಹಲವಾರು ಮಂದಿ ಖಂಡಿಸಿದ್ದು, ಈ ಬಗ್ಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಎಲ್ಲೆಡೆ ಸಾಮರಸ್ಯದಿಂದ ಕಾರ್ಯಕ್ರಮ ಜರುಗುತ್ತಿರುವ ವೇಳೆ ಗ್ರಾಮ ವ್ಯಾಪ್ತಿಯಲ್ಲಿ ಶಾಂತಿ ಕದಡುವ ಪ್ರಯತ್ನ ಇದಾಗಿದೆ ಎಂದು ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಹಾಗೂ ಸ್ಥಳೀಯರು ಆಗಿರುವ ನೆಲ್ಲೀರ ಚಲನ್ ಖಂಡನೆ ವ್ಯಕ್ತಪಡಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಶ್ರೀಮಂಗಲ ಪೊಲೀಸರು ತನಿಖೆಯೊಂದಿಗೆ ಆರೋಪಿಗಳ ಬಂಧನಕ್ಕೆ ಕ್ರಮವಹಿಸಿದ್ದಾರೆ. ನಿನ್ನೆ ಸಂಜೆಯ ಬಳಿಕ ಆಯೋಜಕ ಸಮಿತಿಯವರು ಬಿರುನಾಣಿ ಪಟ್ಟಣದಿಂದ ಕೊಡವ ಸಮಾಜದ ತನಕ ಬಂಟಿAಗ್ಸ್, ಫ್ಲೆಕ್ಸ್ಗಳ ಮೂಲಕ ಸಿದ್ಧತೆ ನಡೆಸಿದ್ದರು. ಇದೀಗ ಈ ಘಟನೆ ಈ ವಿಭಾಗದಲ್ಲಿ ತೀವ್ರ ಚರ್ಚೆಗೆ ಎಡೆಯಾಗಿದೆ. ಸ್ಥಳಕ್ಕೆ ಶ್ರೀಮಂಗಲ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.