ಮಡಿಕೇರಿ, ಫೆ. ೨೧: ಸಿವಿಲ್ ನ್ಯಾಯಾಧೀಶರ ಪರೀಕ್ಷೆಯಲ್ಲಿ ೧೧ನೇ ರ‍್ಯಾಂಕ್ ಪಡೆದು ಜಿಲ್ಲೆಯ ಮೂಲದ ಕೆ.ಟಿ. ರೋಶ್ನಿ ಅವರು ನ್ಯಾಯಾಧೀಶರಾಗಿ ಆಯ್ಕೆಗೊಂಡಿದ್ದಾರೆ.
ಮೂಲತಃ ಮಡಿಕೇರಿ ಬಳಿಯ ಕನ್ನಂಡಬಾಣೆಯ ನಿವಾಸಿ, ಪ್ರಸ್ತುತ ಬೆಂಗಳೂರಿನ ಯಲಹಂಕ ಬಳಿಯ ನ್ಯಾಯಾಂಗ ಬಡಾವಣೆಯಲ್ಲಿ ನೆಲೆಸಿರುವ ನಿವೃತ್ತ ನ್ಯಾಯಾಧೀಶರೂ ಆಗಿರುವ ಕನ್ನಂಡ ಎಂ ತಮ್ಮಯ್ಯ ಹಾಗೂ ಪ್ರಭಾ ತಮ್ಮಯ್ಯ ಅವರ ಪುತ್ರಿಯಾಗಿರುವ ರೋಶ್ನಿ ಅವರು ೧೧ನೇ ರ‍್ಯಾಂಕ್‌ನೊAದಿಗೆ ತೇರ್ಗಡೆ ಹೊಂದಿ ನ್ಯಾಯಾಧೀಶರಾಗಿ ನಿಯುಕ್ತಿಗೊಳ್ಳಲಿದ್ದಾರೆ. ಪ್ರಾಥಮಿಕ, ಪ್ರೌಢ ಹಾಗೂ ಪಿಯುಸಿ ಶಿಕ್ಷಣವನ್ನು ಕೋರಮಂಗಲದಲ್ಲಿ ಪೂರ್ಣಗೊಳಿಸಿ ಕೊಚ್ಚಿಯ ರಾಷ್ಟಿçÃಯ ಕಾನೂನು ವಿದ್ಯಾಲಯದಲ್ಲಿ ಎಲ್‌ಎಲ್‌ಬಿ, ಎಲ್‌ಎಲ್‌ಎಂ ಪದವಿಯನ್ನು ಪಡೆದುಕೊಂಡರು. ಬೆಂಗಳೂರಿನ ನ್ಯಾಯಾಲಯಗಳಲ್ಲಿ ವಕೀಲರಾಗಿಯೂ ಕಾರ್ಯನಿರ್ವಹಿಸುತ್ತಿದ್ದರು. ಈ ಕುರಿತು ಪ್ರತಿಕ್ರಿಯಿಸಿದ ರೋಶ್ನಿ ಅವರು, ನ್ಯಾಯಾಲಯವೆಂಬುದು ದೇವಾಲಯವಿದ್ದಂತೆ ನ್ಯಾಯಾಧೀಶರಾಗಿ ನ್ಯಾಯದ ಪರ ಪ್ರಾಮಾಣಿಕವಾಗಿ ಕೆಲಸ ಮಾಡುತ್ತೇನೆ ಎಂದು ತಿಳಿಸಿದ್ದಾರೆ. ರೋಶ್ನಿ ಅವರ ಪತಿ ವಿವೇಕ್ ವಾಯುಪಡೆಯ ಲೆಫ್ಟಿನೆಂಟ್ ಕಮಾಂಡರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ.