ಮಡಿಕೇರಿ, ಫೆ. ೨೦: ಗಾಂಜಾ ಹಾಗೂ ಎಂಡಿಎAಎ ಮಾರಾಟ ಹಾಗೂ ಸೇವನೆ ಪ್ರತ್ಯೇಕ ಪ್ರಕರಣದಲ್ಲಿ ಒಟ್ಟು ಐವರನ್ನು ಬಂಧಿಸುವಲ್ಲಿ ಮಡಿಕೇರಿ ಗ್ರಾಮಾಂತರ ಪೊಲೀಸರು ಯಶಸ್ವಿಯಾಗಿದ್ದಾರೆ.
ಗಾಂಜಾ ಮಾರಾಟ ಹಾಗೂ ಸೇವನೆ ಪ್ರಕರಣದಲ್ಲಿ ಕಿಗ್ಗಾಲು ಗ್ರಾಮದ ಕಾರ್ತಿಕ್ (೨೭), ಬಲಮುರಿಯ ಹೆಚ್.ಜಿ. ಹರ್ಷವರ್ಧನ್ (೨೬) ಹಾಗೂ ಎಂಡಿಎAಎ ಸಾಗಾಟ ಹಾಗೂ ಮಾರಾಟ ಪ್ರಕರಣದಲ್ಲಿ ನೀರುಕೊಲ್ಲಿ ಗ್ರಾಮದ ಸಾಜೀರ್ (೩೯), ಶಾರುಖ್ (೨೮), ಇಬ್ನಿವಳವಾಡಿಯ ನಿಯಾಸ್ (೩೯) ಬಂಧಿತ ಆರೋಪಿಗಳು. ಕಿಗ್ಗಾಲು ಗ್ರಾಮದಲ್ಲಿ ಗಾಂಜಾ ಮಾರಾಟದ ಕುರಿತು ಮಾಹಿತಿ ದೊರೆತ ಹಿನ್ನೆಲೆ ದಾಳಿ ನಡೆಸಿದ ಪೊಲೀಸರು ೨೪೫ ಗ್ರಾಂ ಗಾಂಜಾ ಸಹಿತ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಕಡಗದಾಳುವಿನಲ್ಲಿ ಎಂಡಿಎAಎ ಮಾರಾಟ, ಸೇವನೆ ಪ್ರಕರಣದಲ್ಲಿ ಮೂವರನ್ನು ಬಂಧಿಸಿ ಅವರುಗಳಿಂದ ೨೮.೫೦ ಗ್ರಾಂ ಎಂಡಿಎAಎ ಹಾಗೂ ಒಂದು ಆಟೋ ಹಾಗೂ ಕಾರನ್ನು ವಶಪಡಿಸಿಕೊಂಡಿದ್ದಾರೆ. ಈ ಸಂಬAಧ ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ ಮುಂದಿನ ಕ್ರಮಕೈಗೊಳ್ಳಲಾಗಿದೆ. ಮಡಿಕೇರಿ ಡಿವೈಎಸ್‌ಪಿ ಪಿ.ಎ. ಸೂರಜ್ ನೇತೃತ್ವದ ತನಿಖಾ ತಂಡದಲ್ಲಿ ಮಡಿಕೇರಿ ಗ್ರಾಮಾಂತರ ಇನ್ಸ್ಪೆಕ್ಟರ್ ಹೆಚ್.ವಿ. ಚಂದ್ರಶೇಖರ್, ಪಿಎಸ್‌ಐ ಸುಬ್ರಮಣ್ಯ, ಎಎಸ್‌ಐ ವಸಂತ, ಚರ್ಮಣ, ಮುಖ್ಯ ಪೇದೆ ಪ್ರೇಮ್ ಕುಮಾರ್, ಲೋಕೇಶ್, ಎಂ.ಕೆ. ಮಹೇಶ್, ಪ್ರಸನ್ನ ಕುಮಾರ್, ಉದಯ ಕುಮಾರ್, ಪೇದೆಗಳಾದ ಎಲ್. ಹರೀಶ್, ಮಂಜುನಾಥ್, ರಾಜೇಂದ್ರ, ಸಂತೋಷ್, ಈರಪ್ಪ ವಠಾರ, ಬಿ.ಡಿ. ಮಂಜುನಾಥ್ ಇದ್ದರು.