ವೀರಾಜಪೇಟೆ, ಫೆ. ೨೦: ಗಂಡು ಮಕ್ಕಳಿಗೆ ಮಾತ್ರ ಆದ್ಯತೆ ನೀಡದೆ ಹೆಣ್ಣು ಮಕ್ಕಳಿಗೂ ಸಮಾನ ಅವಕಾಶ ಕಲ್ಪಿಸಿ. ಹೆಣ್ಣು ಮಕ್ಕಳನ್ನು ಸಮಾಜ ಕಣ್ಣು ಎಂದು ತಿಳಿದು ಪ್ರೋತ್ಸಾಹಿಸುವಂತಾಗಬೇಕು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ಪ್ರಸನ್ನ ಕುಮಾರ್ ಹೇಳಿದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವೀರಾಜಪೇಟೆ, ಗ್ರಾಮಾಂತರ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಅಶ್ವಿನಿ ಸ್ತಿçà ಶಕ್ತಿ ಸಂಘ ಸಂಯುಕ್ತ ಆಶ್ರಯದಲ್ಲಿ ವೀರಾಜಪೇಟೆ ತಾಲೂಕು ಕೆದಮುಳ್ಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕ್ರಿಶ್ಚಿಯನ್ ಕಾಲೋನಿ ಅಂಗನವಾಡಿ ಕೇಂದ್ರದ ಅವರಣದಲ್ಲಿ ಪೋಷಣ್ ಮಾಸಾಚರಣೆ ಅಂಗವಾಗಿ ಅಪೌಷ್ಟಿಕ ಮುಕ್ತ ಭಾರತ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಹುಟ್ಟುವ ಮಗು ಹೆಣ್ಣಾದರೂ ಲಿಂಗ ತಾರತಮ್ಯ ಮಾಡದೇ ಉತ್ತಮ ಭವಿಷ್ಯ ನಿರ್ಮಾಣ ಮಾಡುವತ್ತ ಪೊಷಕರು ಗಮನಹರಿಸುವಂತಾಗಬೇಕು ಎಂದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಹಾಯಕ ಅಧಿಕಾರಿ ರೀತಾ ಮಾತನಾಡಿ, ಗರ್ಭಿಣಿ ಸ್ತಿçÃಯರು ಹೆಚ್ಚು ಒತ್ತಡದಿಂದ ಬಳಲುತ್ತಿರುವುದು ಕಂಡು ಬರುತ್ತಿದೆ. ಆಹಾರ ಪದ್ಧತಿ ಬದಲಾವಣೆ ಮಾಡದೆ ಹೆಚ್ಚಿನ ಪೋಷಕಾಂಶಗಳು ಹೊಂದಿರುವ ಮಿತ ಆಹಾರ ಸೇವಿಸುವುದು ಉತ್ತಮ. ೬ ವಯಸ್ಸು ಕೆಳಗಿರುವ ಮಕ್ಕಳಲ್ಲಿ ಬೆಳವಣಿಗೆ ಕುಂಠಿತ ಕಂಡಿದೆ. ಕಾರಣ ಮಕ್ಕಳು ಮೊಬೈಲ್ ಮತ್ತು ಟ.ವಿ. ನೋಡುತ್ತಾ ತಮ್ಮ ದಿನಚರಿಯನ್ನು ಮರೆಯುತ್ತಿದ್ದಾರೆ. ರೋಗನಿರೋಧಕ ಆಹಾರ ಪದ್ಧತಿಯನ್ನು ಅನುಸರಿಸಿದಲ್ಲಿ ಅಪೌಷ್ಟಿಕತೆಯನ್ನು ಹೋಗಲಾಡಿಸಲು ಪ್ರಯತ್ನಿಸಬಹುದು ಎಂದರು.
ಕಾರ್ಯಕ್ರಮದಲ್ಲಿ ಇಲಾಖೆಯ ವತಿಯಿಂದ ಬೇಟಿ ಬಚಾವೋ- ಬೇಟಿ ಪಡಾವೋ ಕಾರ್ಯಕ್ರಮದ ಬಗ್ಗೆ ಅರಿವು ಮೂಡಿಸಲಾಯಿತು. ಗ್ರಾಮ ವ್ಯಾಪ್ತಿಯ ಗರ್ಭಿಣಿ ಮಹಿಳೆಯರಿಗೆ ಸೀಮಂತ ಕಾರ್ಯಕ್ರಮ ನಡೆಸಲಾಯಿತು. ಅಂಗನವಾಡಿ ಮಕ್ಕಳಿಗೆ ಅಕ್ಷರಭ್ಯಾಸ ಮಾಡಿಸಲಾಯಿತು.
ಕೆದಮುಳ್ಳೂರು ಗ್ರಾಮ ಪಂಚಾಯಿತಿ ಉಪಾಧÀ್ಯಕ್ಷ ಎಂ.ಎA. ಪರಮೇಶ್ವರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಧಿಕಾರಿ ರೇಣುಕಾ, ಗ್ರಾಮ ಪಂಚಾಯಿತಿ ಸದಸ್ಯರಾದ ಮಾಳೇಟಿರ ಸಾಬ ಮುತ್ತಪ್ಪ, ವೀಣಾ, ಅಂಗನವಾಡಿ ನೌಕರರ ಸಂಘದ ಅಧ್ಯಕ್ಷೆ ಶೀಲಾ ಎ.ಬಿ. ವೇದಿಕೆಯಲ್ಲಿ ಉಪಸ್ಥಿತರಿದ್ದರು.