ಐಗೂರು, ಫೆ. ೨೦: ರಾಷ್ಟಿçÃಯ ಸ್ವಯಂಸೇವಕ ಸಂಘಕ್ಕೆ ನೂರು ವರ್ಷ ತುಂಬಿದ ಹಿನ್ನೆಲೆ ಐಗೂರು ಮಂಡಲದಲ್ಲಿ ಹಿಂದೂ ಸಂಗಮದ ಕಾರ್ಯಕ್ರಮವನ್ನು ತಾ. ೨೮ ರಂದು ಹಮ್ಮಿಕೊಳ್ಳಲಾಗಿದೆ.
ಈ ಸಂಬAಧ ಪೂರ್ವಭಾವಿ ಸಭೆಯು ಐಗೂರಿನ ಮುತ್ತಪ್ಪ ದೇವಾಲಯದ ಸಭಾಂಗಣದಲ್ಲಿ ನಡೆಯಿತು. ಸಭೆಯಲ್ಲಿ ತಾಲೂಕು ಹಿಂದೂ ಸಂಗಮ ಆಯೋಜನಾ ಸಮಿತಿಯ ಸಂಯೋಜಕರಾದ ಬಿ.ಎ ಭಾಸ್ಕರ್ ಮತ್ತು ಕೊಡಗು ಜಿಲ್ಲಾ ರಾಷ್ಟಿçÃಯ ಸ್ವಯಂ ಸೇವಕ ಸಂಘದ ಜಿಲ್ಲಾ ಬೌದ್ಧಿಕ್ ಪ್ರಮುಖ್ ಬಿ.ವಿ ಸಂತೋಷ್ ಕುಮಾರ್ ಭಾಗವಹಿಸಿದ್ದರು.
ತಾ. ೨೮ ರಂದು ಕಾಜೂರಿನ ಹರಿಹರ ಯುವಕ ಸಂಘದ ಆಶ್ರಯದಲ್ಲಿ ಹಿಂದೂ ಸಂಗಮದ ಸಭೆ ಮತ್ತು ಶೋಭಾಯಾತ್ರೆ ನಡೆಸಲು ಸಭೆಯಲ್ಲಿ ತೀರ್ಮಾನಿಸಲಾಯಿತು. ನೂತನ ಹಿಂದೂ ಸಂಗಮ ಸಮಿತಿಯನ್ನು ರಚಿಸಲಾಯಿತು. ಹಿಂದೂ ಸಂಗಮ ಸಮಿತಿಯ ಅಧ್ಯಕ್ಷರಾಗಿ ಬಾರನ ಪ್ರಮೋದ್, ಕಾರ್ಯದರ್ಶಿ ಯಡವಾರೆಯ ಜಯಕುಮಾರ್, ಸಹ ಕಾರ್ಯದರ್ಶಿ ಶರತ್, ಖಜಾಂಚಿ ಅವಿಲಾಶ್ ಕಾಜೂರು ಆಯ್ಕೆಯಾದರು. ಬೂತ್ ಮಟ್ಟದ ಉಪಾಧ್ಯಕ್ಷರುಗಳಾಗಿ ಶಶಿಕುಮಾರ್, ಶೇಖರ, ಕಿಬ್ರಿ ಮಹೇಶ್ ಮತ್ತು ಗೋವಿಂದ ಅವರನ್ನು ಆಯ್ಕೆ ಮಾಡಲಾಯಿತು.
ಸಲಹಾ ಸಮಿತಿಗೆ ಟಿ.ಆರ್ ವಿಜಯಕುಮಾರ್, ಎಂ.ಎ ಪ್ರಭಾಕರ, ಸಿ.ಎಸ್ ಮಹೇಶ್, ಭಾಸ್ಕರ ಟಿ.ಕೆ. ಮತ್ತು ಸಜಿ ಭರತ್ ಅವರನ್ನು ಆಯ್ಕೆ ಮಾಡಲಾಯಿತು. ಮಹಿಳಾ ಸದಸ್ಯರುಗಳಾಗಿ ಸಿ.ಎಸ್ ಪದ್ಮಾವತಿ, ಸುಜಾತ ಬಾಲಕೃಷ್ಣ, ಅನಿತಾ ಮಾಧವ ಮತ್ತು ಶೋಭಾ ಹರೀಶ್ ಅವರನ್ನು ಆಯ್ಕೆ ಮಾಡಲಾಯಿತು.