ಶನಿವಾರಸAತೆ, ಫೆ. ೧೯: ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಹುಲುಸೆ ಗ್ರಾಮದಲ್ಲಿ ನೀರಿಲ್ಲದ ಕೆರೆಯ ಹೂಳು ತೆಗೆಸಿ, ಜಲ ಬರುವಂತೆ ಮಾಡಿರುವುದು ಸಂತೋಷದಾಯಕವಾಗಿದೆ ಎಂದು ಕೊಡ್ಲಿಪೇಟೆ ಕಲ್ಲುಮಠದ ಮಹಾಂತಸ್ವಾಮೀಜಿ ಅಭಿಪ್ರಾಯ ವ್ಯಕ್ತಪಡಿಸಿದರು.
ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಶನಿವಾರಸಂತೆ-ಕೊಡ್ಲಿಪೇಟೆ ವಲಯ ಪ್ರಗತಿಬಂಧು ಸ್ವಸಹಾಯ ಸಂಘಗಳ ಒಕ್ಕೂಟಗಳು, ಗ್ರಾಮ ಪಂಚಾಯಿತಿ ಹಂಡ್ಲಿ ಹುಲುಸೆ ಕೆರೆ ಅಭಿವೃದ್ಧಿ ಸಮಿತಿ ಸಹಯೋಗದಲ್ಲಿ ೮೬೫ ನೇ ಮತ್ತು ನಮ್ಮೂರು ನಮ್ಮ ಕೆರೆಗೆ ಬಾಗಿನ ಅರ್ಪಣೆ ಕೆರೆ ಹಸ್ತಾಂತರ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಬೀಸುವ ಗಾಳಿ, ಫಲವತ್ತಾದ ಮಣ್ಣು ಹಾಗೂ ಮನುಷ್ಯ-ಪ್ರಾಣಿಗಳಿಗೆ ಭೂಮಿ ಆಶ್ರಯ ತಾಣ. ಇಂತಹ ಭೂಮಿಯಲ್ಲಿ ಸರ್ಕಾರ ಮಾಡಲಾಗದ ಕೆಲಸವನ್ನು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮಾಡುತ್ತಿದೆ.ಸಮಾಜಕ್ಕೆ, ಭೂಮಿಗೆ ಒಳಿತು ಮಾಡುವ ಮೂಲಕ ಹಾಗೂ ಮನುಷ್ಯರನ್ನು ವ್ಯಸನ ಮುಕ್ತರಾಗಿ ಮಾಡುವಲ್ಲಿ ಧರ್ಮಾಧಿಕಾರಿ ಕುಟುಂಬದವರು ಯೋಜನೆ ಮೂಲಕ ಮಾಡುತ್ತಿದ್ದಾರೆ. ಸರ್ಕಾರ ವೈಜ್ಞಾನಿಕವಾಗಿ ಬೇರೆ ಗ್ರಹಗಳತ್ತ ಹೋಗಲು ಸಾವಿರಾರು ಕೋಟಿ ಖರ್ಚು ಮಾಡುತ್ತಿದೆ. ಆದರೆ, ಭೂಮಿಯಲ್ಲಿ ಜೀವಿಗಳಿಗೆ ಖರ್ಚಿಲ್ಲದೇ ಮುಕ್ತವಾಗಿ ಜೀವಿಸಲು ಸ್ವಚ್ಛ ಗಾಳಿ, ಸಸ್ಯ ಶ್ಯಾಮಲ, ಶುದ್ಧ ನೀರು ಸಿಗುವಂತೆ ಮಾಡಲು ಧರ್ಮಸ್ಥಳ ಯೋಜನೆ ಸಮಾಜಮುಖಿಯಾಗಿ ಶ್ರಮಿಸುತ್ತಿದೆ. ಮನುಷ್ಯ ಪರಪೀಡನೆಗೆ ಯತ್ನಿಸುತ್ತಿದ್ದರೆ ಗೋವು ಹಾಲು, ಜೇನು ಹುಳು ಜೇನುತುಪ್ಪ, ತೆಂಗು ಎಳನೀರು ಕೊಡುತ್ತಾ ಬಹುಪಯೋಗಿಯಾಗಿವೆ. ಗ್ರಾಮದ ಹುಲುಸೆ ಕೆರೆ ಅಭಿವೃದ್ಧಿ ಸಮಿತಿ, ಯುವಕರು, ಗ್ರಾಮಸ್ಥರ ಸಹಕಾರದೊಂದಿಗೆ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕೆರೆಯನ್ನು ಅಭಿವೃದ್ಧಿಪಡಿಸಿರುವುದು ಮಹತ್ವದ ಕಾರ್ಯ ಎಂದರು.
ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸೋಮವಾರಪೇಟೆ ತಾಲೂಕು ಯೋಜನಾಧಿಕಾರಿ ಹನುಮಂತಪ್ಪ ಅಂಗಡಿ ಪ್ರಾಸ್ತಾವಿಕ ನುಡಿಯಾಡಿ, ಮೂಲ ಸೌಲಭ್ಯಗಳಿರುವ ಕೆರೆಯನ್ನು ರೈತರಿಗೆ ಉಪಯುಕ್ತ ಕೆರೆಯಾಗಿ ಅಭಿವೃದ್ಧಿಪಡಿಸಲಾಗಿದೆ. ಸರ್ವೆ ನಂ.೨ ರ ೧.೮೮ ಎಕರೆ ಕೆರೆಯನ್ನು ೨ ಲಕ್ಷ ೮೦ ಸಾವಿರ ರೂಪಾಯಿ ವೆಚ್ಚದಲ್ಲಿ ನಿರ್ಮಾಣವಾಗಿದೆ. ಗ್ರಾಮದ ರೈತರು, ಯುವಕರ ಸಹಕಾರದಿಂದ ಕೆರೆಯ ಹೂಳು ತೆಗೆಸಿ ಹೊಲ-ಗದ್ದೆಗಳಿಗೆ ಹಾಕಲಾಯಿತು.ಗ್ರಾಮದ ರೈತರು ರೂ.೧.೫ ಲಕ್ಷ ವೆಚ್ಚದಲ್ಲಿ ಮಣ್ಣು ಸಾಗಾಟ ಮಾಡಿರುತ್ತಾರೆ.ಗ್ರಾಮದ ೪೭ ಕುಟುಂಬಗಳಿಗೆ, ನೀರಿನ ಸೌಲಭ್ಯ ಒದಗಿಸಿ, ೨೦೦ ಎಕರೆ ಭೂಮಿಗೆ ನೀರುಣಿಸುವ ಕೆರೆಗೆ ನಂತರ ರೈತರಿಗೆ ಗೌರವ ಸಲ್ಲಿಸಬೇಕು. ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಹೊಲಿಗೆ ತರಬೇತಿ, ಹೈನುಗಾರಿಕೆ, ದೇವಸ್ಥಾನಗಳ ಜೀರ್ಣೋದ್ಧಾರದ ಜತೆ ಬ್ಯಾಂಕಿನ ಪ್ರತಿನಿಧಿಯಾಗಿ ಕೆಲಸ ಮಾಡುತ್ತಿದೆ.ಪೂಜಾ ಕಾರ್ಯಕ್ರಮಗಳಿಗೂ ಪೂಜ್ಯ ಧರ್ಮಾಧಿಕಾರಿಯವರು ಅನುದಾನ ನೀಡುತ್ತಿದ್ದಾರೆ ಎಂದರು.
ಕೆರೆ ಅಭಿವೃದ್ಧಿ ಸಮಿತಿ ಸಮಿತಿ ಅಧ್ಯಕ್ಷ ಭರತ್ ಹುಲುಸೆ ಅಧ್ಯಕ್ಷತೆ ವಹಿಸಿ ಮಾತನಾಡಿ, ಕೆರೆ ಅಭಿವೃದ್ಧಿಪಡಿಸಿದ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಹರಿಕಾರ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆಯವರಿಗೆ ಹಾಗೂ ಅಧಿಕಾರಿಗಳಿಗೆ ಕೃತಜ್ಞತೆ ಸಲ್ಲಿಸಿ, ಮುಂದೆ ಕೆರೆ ಸ್ವಚ್ಛತೆ ಗ್ರಾಮಸ್ಥರ ಕರ್ತವ್ಯ ಎಂದರು. ಕಾರ್ಯಕ್ರಮದಲ್ಲಿ ಕೆರೆ ಅಭಿವೃದ್ಧಿ ಸಮಿತಿ ಸಮಿತಿ ಅಧ್ಯಕ್ಷ ಭರತ್ ಅವರು ಹಂಡ್ಲಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಅಂಜನಾದೇವಿಯವರಿಗೆ ಕೆರೆ ಹಸ್ತಾಂತರಿಸಿದರು. ಸಮಿತಿ ಉಪಾಧ್ಯಕ್ಷೆ ಅಚಿತಾ, ಗ್ರಾಮ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಎಚ್.ಎಸ್.ಅಶೋಕ್, ಸದಸ್ಯ ವೀರೇಂದ್ರ ಕುಮಾರ್, ಧರ್ಮಸ್ಥಳ ಗ್ರಾಮಾಭಿವೃದ್ಧಿ ಕೃಷಿ ಯೋಜನಾಧಿಕಾರಿ ಹರೀಶ್ ಕುಮಾರ್, ಕೊಡ್ಲಿಪೇಟೆ ವಲಯ ಮೇಲ್ವಿಚಾರಕ ರಾಜಣ್ಣ, ಶನಿವಾರಸಂತೆ ವಲಯ ಮೇಲ್ವಿಚಾರಕಿ ಜಯಶ್ರೀ, ಜನ ಜಾಗೃತಿ ಸಮಿತಿ ಸದಸ್ಯರಾದ ಪೂರ್ಣಿಮಾ ಕಿರಣ್, ಭಗವಾನ್, ಸೇವಾಪ್ರತಿನಿಧಿ ಭಾಗ್ಯಾ, ಶೋಭಾ, ಎಂಜಿನಿಯರ್ ಉಡುಪಿ ಪ್ರದೀಪ್, ಗ್ರಾಮ ಮುಖಂಡ ಪುಟ್ಟಪ್ಪ, ಪುರೋಹಿತರಾದ ಸಾಲಿಮಠ್ ಹಾಜರಿದ್ದರು. ಗ್ರಾಮದ ಪದ್ಮಮ್ಮ ಪ್ರಾರ್ಥಿಸಿದರು. ಶನಿವಾರಸಂತೆ ವಲಯ ಮೇಲ್ವಿಚಾರಕಿ ಜಯಶ್ರೀ ಸ್ವಾಗತಿಸಿದರು. ಕೃಷಿ ಯೋಜನಾಧಿಕಾರಿ ಹರೀಶ್ ಕುಮಾರ್ ಕಾರ್ಯಕ್ರಮ ನಿರ್ವಹಿಸಿ, ಮೇಲ್ವಿಚಾರಕ ರಾಜಣ್ಣ ವಂದಿಸಿದರು. ಕಾರ್ಯಕ್ರಮ ಆರಂಭಕ್ಕೆ ಮೊದಲು ಅರ್ಚಕ ಸಾಲಿಮಠ್ ನೇತೃತ್ವದಲ್ಲಿ ಕಳಸ ಪೂಜೆ ಸಲ್ಲಿಸಿದ ನಂತರ ಕೆರೆ ಏರಿಯ ಮೇಲೆ ನಿರ್ಮಿಸಿದ್ದ ಶಿಲಾಫಲಕವನ್ನು ಜನಜಾಗೃತಿ ಸಮಿತಿ ಸದಸ್ಯ ಭಗವಾನ್ ಅನಾವರಣಗೊಳಿಸಿದರು.
ಹಂಡ್ಲಿ ಸರ್ಕಾರಿ ಪ್ರೌಢಶಾಲಾ ವಿದ್ಯಾರ್ಥಿಗಳ ವಾದ್ಯಗೋಷ್ಠಿಯೊಂದಿಗೆ ಅತಿಥಿ ಗಣ್ಯರು ಮೆರವಣಿಗೆಯಲ್ಲಿ ಕೆರೆಯ ಬಳಿ ತೆರಳಿ ಪೂಜೆ ಸಲ್ಲಿಸಿದರು, ಗ್ರಾಮದ ಐವರು ಮುತ್ತೆöÊದೆಯರು ಕೆರೆಗೆ ಆರತಿ ಬೆಳಗಿ, ಬಾಗಿನ ಅರ್ಪಿಸಿದರು. ಕಾರ್ಯಕ್ರಮದಲ್ಲಿ ಗ್ರಾಮಸ್ಥರು ಸಂಭ್ರಮದಿAದ ಪಾಲ್ಗೊಂಡಿದ್ದರು.