ಹೊದ್ದೂರು, ಫೆ. ೧೯: ಹೊದ್ದೂರು ಗ್ರಾಮದ ಶ್ರೀ ಅಯ್ಯಪ್ಪ ಕಾಲೋನಿಯ ದೇವಸ್ಥಾನದಲ್ಲಿ ತಾ. ೨೦ ರಂದು (ಇಂದು) ಕಲ್ಲುರ್ಟಿ ಕಲ್ಕುಡ ಮತ್ತು ಪಂಜುರ್ಲಿ ದೈವದ ನೇಮೋತ್ಸವ ನಡೆಯಲಿದೆ.
ತಾ. ೨೦ ರ ಬೆಳಿಗ್ಗೆ ೬ಗಂಟೆಗೆ ಸ್ಥಳ ಶುದ್ಧಿಕರಣ ೭ ಗಂಟೆಗೆ ಗಣಪತಿ ಹೋಮ. ೮ ಗಂಟೆಗೆ ದೈವದ ವಿಶೆಷ ಪೂಜೆ. ಮತ್ತು ದೈವದ ದರ್ಶನ ಸೇವೆ ಇರುತ್ತದೆ. ಸಂಜೆ ೭ ಗಂಟೆಗೆ ಶ್ರೀ ಸತ್ಯ ದೇವತೆ ಪಾಷಾಣಮೂರ್ತಿ ಮತ್ತು ಪರಿವಾರ ದೈವಗಳ ಬಂಡಾರ ತೆಗೆಯುವುದು. ೮ ಗಂಟೆಗೆ ಅನ್ನದಾನ, ರಾತ್ರಿ ೯ ಗಂಟೆಯಿAದ ಬೆಳಿಗ್ಗೆವರೆಗೆ ದೈವದ ನೇಮ ನಡುವಲಿ ನಡೆಯಲಿದೆ ಎಂದು ದೈವಸ್ಥಾನದ ದೈವದರ್ಶಿಗಳಾದ ನಿರಂಜನ್ ಗೋಪಾಲ್ ತಿಳಿಸಿದ್ದಾರೆ.