ಪೊನ್ನAಪೇಟೆ, ಫೆ. ೧೯: ಪೊನ್ನಂಪೇಟೆ ತಾಲೂಕಿನ ಬಲ್ಯಮಂಡೂರು ಪಂಚಾಯಿತಿಗೆ ಒಳಪಡುವ ಆರು ಗ್ರಾಮಗಳಾದ ಕೋಟೂರು, ಬಲ್ಯಮಂಡೂರು, ತೂಚಮಕೇರಿ, ಚಿಕ್ಕಮುಂಡೂರು, ಮುಗುಟಗೇರಿ ಹಾಗೂ ನಡಿಕೇರಿ ಗ್ರಾಮಗಳ ಆಶ್ರಯದಲ್ಲಿ ತಾ. ೨೧ ರಂದು ಹಿಂದೂ ಸಂಗಮ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ.
ಈ ಬಗ್ಗೆ ಕಾರ್ಯಕ್ರಮದ ಆಯೋಜಕರು ಪತ್ರಿಕಾ ಹೇಳಿಕೆ ನೀಡಿದ್ದು, ತಾ. ೨೧ ಬೆಳಿಗ್ಗೆ ೧೦ ಗಂಟೆಗೆ ತೂಚಮಕೇರಿ ಅಂಚೆ ಕಚೇರಿ ಸಮೀಪದಿಂದ ಬೃಹತ್ ಶೋಭಾಯಾತ್ರೆ ಹೊರಟು ಚಿಕ್ಕಮಂಡೂರು ಅಪ್ಪಚ್ಚಕವಿ ಕಾಲೇಜು ಮೈದಾನದಲ್ಲಿ ಸಂಪನ್ನಗೊಳ್ಳಲಿದೆ. ನಂತರ ಬಲ್ಯಮಂಡೂರು ಗ್ರಾಮ ಪಂಚಾಯಿತಿಗೆ ಒಳಪಡುವ ಆರು ಗ್ರಾಮಗಳ ನಡುವೆ ಪುರುಷರಿಗೆ ಹಗ್ಗಜಗ್ಗಾಟ ಹಾಗೂ ಮಹಿಳೆಯರಿಗೆ ವಿಷದ ಚೆಂಡು ಸ್ಪರ್ಧೆ ನಡೆಯಲಿದೆÀೆ.
ಕ್ರೀಡಾಕೂಟದ ನಂತರ ಸಭಾ ಕಾರ್ಯಕ್ರಮ ಪ್ರಾರಂಭಗೊಳ್ಳಲಿದ್ದು, ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬಲ್ಯಮಂಡೂರಿನ ನಿವೃತ್ತ ಸೇನಾನಿ ಮಾಚಿಮಾಡ ಎಂ.ಪ್ರಕಾಶ್ ಅವರು ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಶ್ರೀ ರಾಮಕೃಷ್ಣ ಶಾರದಾಶ್ರಮದ ಅಧ್ಯಕ್ಷ ಪರಹಿತಾನಂದ ಮಹಾರಾಜ್, ನಿವೃತ್ತ ಶಿಕ್ಷಕಿ ಐನಂಡ ಟಿ.ಪುಷ್ಪ, ಬಲ್ಯಮಂಡೂರಿನ ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಚೀರಂಡ ಕಂದಾ ಸುಬ್ಬಯ್ಯ ಭಾಗವಹಿಸಲಿದ್ದಾರೆ. ರಾಷ್ಟಿçÃಯ ಸ್ವಯಂಸೇವಕ ಸಂಘದ ಗ್ರಾಮ ವಿಕಾಸ ಮಂಗಳೂರು ವಿಭಾಗ ಪ್ರಮುಖ್ ಜಿತೇಂದರ್ ದಿಕ್ಸೂಚಿ ಭಾಷಣ ಮಾಡಲಿದ್ದಾರೆ ಎಂದು ತಿಳಿಸಿದರು.